ಬಾಲಿವುಡ್ ಲೋಕದ ಬಹುಬೇಡಿಕೆಯ ನಟಿ ದೀಪಿಕಾ ಪಡುಕೋಣೆ. ಅವರ ಹೆಸರು ಕೇಳಿದರೆ ಸಾಕು, ಅಭಿಮಾನಿಗಳ ಹೃದಯ ಜುಮ್ಮೆನ್ನುತ್ತದೆ. ಸೂಪರ್ಸ್ಟಾರ್ ಶಾರುಖ್ ಖಾನ್ ನಟನೆಯ 'ಜವಾನ್' ಚಿತ್ರದಲ್ಲಿ ತಮ್ಮ ಅದ್ಭುತ ನಟನೆಯಿಂದ ಮೋಡಿ ಮಾಡಿದ್ದ ತಾರೆ ಮತ್ತೊಮ್ಮೆ ದೊಡ್ಡ ಪರದೆಯ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ಇವರು ಅತೀ ಶೀಘ್ರದಲ್ಲಿ ನಟ ಹೃತಿಕ್ ರೋಷನ್ ಮತ್ತು ಅನಿಲ್ ಕಪೂರ್ ನಟನೆಯ ಫುಲ್ ಆ್ಯಕ್ಷನ್ ಸಿನಿಮಾ 'ಫೈಟರ್'ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
-
Deepika Padukone on the sets of #Fighter at Phi Beach, Italy 🇮🇹 🥰 pic.twitter.com/jywxzjK7LE
— Team DP Malaysia (@TeamDeepikaMY_) September 28, 2023 " class="align-text-top noRightClick twitterSection" data="
">Deepika Padukone on the sets of #Fighter at Phi Beach, Italy 🇮🇹 🥰 pic.twitter.com/jywxzjK7LE
— Team DP Malaysia (@TeamDeepikaMY_) September 28, 2023Deepika Padukone on the sets of #Fighter at Phi Beach, Italy 🇮🇹 🥰 pic.twitter.com/jywxzjK7LE
— Team DP Malaysia (@TeamDeepikaMY_) September 28, 2023
ಈ ಮಧ್ಯೆ ಚಿತ್ರದ ಶೂಟಿಂಗ್ನಿಂದ ನಟಿಯ ಫೋಟೋಗಳು ವೈರಲ್ ಆಗುತ್ತಿದೆ. ಫೈಟರ್ ಚಿತ್ರೀಕರಣ ಸದ್ಯ ಇಟಲಿಯಲ್ಲಿ ನಡೆಯುತ್ತಿದೆ. ಇಟಲಿಯ ಫೀ ಬೀಚ್ನ ಸಿಇಒ ಮತ್ತು ಸಂಸ್ಥಾಪಕರೊಂದಿಗೆ ದೀಪಿಕಾ ಪಡುಕೋಣೆ ತೆಗೆದ ಸೆಲ್ಫಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಫುಲ್ ಆ್ಯ ಕ್ಷನ್ ಚಿತ್ರದಲ್ಲಿ ದೀಪಿಕಾ ವಿಭಿನ್ನ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಟಲಿಯಲ್ಲಿ ಫೈಟರ್ ಹಾಡಿನ ಚಿತ್ರೀಕರಣದಿಂದ ಫೋಟೋ ವೈರಲ್ ಆಗಿದೆ.
ಮೋಷನ್ ಪೋಸ್ಟರ್ ಅನಾವರಣ: ಈ ವರ್ಷ ಸ್ವಾತಂತ್ರ್ಯೋತ್ಸವದಂದು 'ಫೈಟರ್' ಮೋಷನ್ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್ ಹಂಚಿಕೊಂಡಿದ್ದ ಹೃತಿಕ್ ರೋಷನ್, "ಸ್ಪಿರಿಟ್ ಆಫ್ ಫೈಟರ್, ವಂದೇ ಮಾತರಂ, ಮುಂದಿನ ಗಣರಾಜ್ಯೋತ್ಸವ ಸಂದರ್ಭ ನಿಮ್ಮನ್ನು ಚಿತ್ರಮಂದಿರದಲ್ಲಿ ಭೇಟಿಯಾಗುತ್ತೇನೆ. 2024 ರ ಜನವರಿ 15 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಫೈಟರ್ ಸಿನಿಮಾ ತೆರೆಕಾಣಲಿದೆ'' ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ: ಫೈಟರ್ ಚಿತ್ರತಂಡ ಸೇರಲು ವಿದೇಶಕ್ಕೆ ತೆರಳಿದ ದೀಪಿಕಾ: ಹೃತಿಕ್ ಜೊತೆ ಇದೇ ಮೊದಲ ಬಾರಿ ತೆರೆ ಹಂಚಿಕೆ
ಜನವರಿ 25 ರಂದು ರಿಲೀಸ್: ಫೈಟರ್' ಸಿನಿಮಾ ಭಾರತದ ಮೊದಲ ವೈಮಾನಿಕ ಸಾಹಸಮಯ ಪ್ರೊಜೆಕ್ಟ್ ಎಂದು ಹೇಳಲಾಗಿದ್ದು, ಬಾಲಿವುಡ್ ಸ್ಟಾರ್ ಡೈರೆಕ್ಟರ್ ಸಿದ್ಧಾರ್ಥ್ ಆನಂದ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸ್ಟೈಲಿಶ್ ಐಕಾನ್ ಹೃತಿಕ್ ರೋಷನ್ ಮತ್ತು ಪಠಾಣ್ ಪ್ರತಿಭೆ ದೀಪಿಕಾ ಪಡುಕೋಣೆ ಪ್ರಮುಖ ಪಾತ್ರಗಳನ್ನು ಹಂಚಿಕೊಂಡಿದ್ದಾರೆ. 2024ರ ಜನವರಿ 25 ರಂದು ಸಿನಿಮಾ ಬಿಡುಗಡೆಗೊಳಿಸಲು ಚಿತ್ರತಂಡ ತಯಾರಿ ನಡೆಸಿದೆ. ಸದ್ಯ ಶೂಟಿಂಗ್ ಭರದಿಂದ ಸಾಗುತ್ತಿದೆ.
ವಯಾಕಾಂ 18 ಸ್ಟುಡಿಯೋಸ್, ಮಾರ್ಫ್ಲಿಕ್ಸ್ ಪಿಕ್ಚರ್ಸ್ 'ಫೈಟರ್' ಚಿತ್ರ ನಿರ್ಮಾಣದ ಹೊಣೆ ಹೊತ್ತಿದೆ. ಫೈಟರ್ ಸಿನಿಮಾ ಭಾರತೀಯ ಶಸಸ್ತ್ರ ಪಡೆಗಳ ಶೌರ್ಯ, ತ್ಯಾಗ ಮತ್ತು ಧೇಶಭಕ್ತಿಗೆ ಸೂಚಿಸುವ ಗೌರವ ಎಂದು ಚಿತ್ರತಂಡ ಹೇಳಿಕೊಂಡಿದೆ. ಬ್ಯಾಂಗ್ ಬ್ಯಾಂಗ್ ಸಿನಿಮಾ ನಂತರ ಹೃತಿಕ್ ರೋಷನ್ ಮತ್ತು ಸಿದ್ಧಾರ್ಥ್ ಆನಂದ್ ಕಾಂಬೋದಲ್ಲಿ ಬರುತ್ತಿರುವ ಎರಡನೇ ಚಿತ್ರ. ಈ ವರ್ಷಾರಂಭದಲ್ಲಿ ಧೂಳೆಬ್ಬಿಸಿದ್ದ ಪಠಾಣ್ ನಂತರ ದೀಪಿಕಾ ಪಡುಕೋಣೆ ಮತ್ತು ಸಿದ್ಧಾರ್ಥ್ ಆನಂದ್ ಕಾಂಬಿನೇಶನ್ನಲ್ಲಿ ಬರುತ್ತಿರುವ 2ನೇ ಸಿನಿಮಾ ಇದಾಗಿದೆ.
ಇದನ್ನೂ ಓದಿ: 'ಜವಾನ್'ನಲ್ಲಿ ದೀಪಿಕಾ ಪಡುಕೋಣೆ ಪಾತ್ರಕ್ಕೆ ಹೆಚ್ಚು ಒತ್ತು; ಬಾಲಿವುಡ್‌ನಿಂದ ಮುನಿಸಿಕೊಂಡರೇ ನಯನತಾರಾ?