ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್ ನಂತರ ಇದೀಗ ಬಾಲಿವುಡ್ ನಟಿ ಕಾಜೋಲ್ ಅವರ ಡೀಪ್ಫೇಕ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಕ್ಯಾಮರಾ ಮುಂದೆ ಬಟ್ಟೆ ಬದಲಾಯಿಸುತ್ತಿರುವ ಮಹಿಳೆಯೊಬ್ಬರ ಮುಖಕ್ಕೆ ಕಾಜೋಲ್ ಅವರ ಮುಖವನ್ನು ಎಡಿಟ್ ಮಾಡಲಾಗಿದೆ. ವೈರಲ್ ಆಗಿರುವ ವಿಡಿಯೋವನ್ನು ಫ್ಯಾಕ್ಟ್ ಚೆಕ್ ಮಾಡಿಸಿದ್ದು, ಅಸಲಿ ಮಹಿಳೆಯನ್ನು ಬ್ರಿಟಿಷ್ ಸೋಷಿಯಲ್ ಮೀಡಿಯಾ ಪ್ರಭಾವಿ ರೋಸಿ ಬ್ರೀನ್ ಎಂದು ಗುರುತಿಸಲಾಗಿದೆ.
-
yes this is a strong case for legal https://t.co/wHJl7PSYPN
— Amitabh Bachchan (@SrBachchan) November 5, 2023 " class="align-text-top noRightClick twitterSection" data="
">yes this is a strong case for legal https://t.co/wHJl7PSYPN
— Amitabh Bachchan (@SrBachchan) November 5, 2023yes this is a strong case for legal https://t.co/wHJl7PSYPN
— Amitabh Bachchan (@SrBachchan) November 5, 2023
ರೋಸಿ ಬ್ರೀನ್ ಅವರು 2023ರ ಜೂನ್ 5ರಂದು 'ಗೆಟ್ ರೆಡಿ ವಿತ್ ಮಿ' (GRWM) ಟ್ರೆಂಡ್ನ ಭಾಗವಾಗಿ ಟಿಕ್ ಟಾಕ್ನಲ್ಲಿ ತಮ್ಮ ವಿಡಿಯೋವನ್ನು ಹಂಚಿಕೊಂಡಿದ್ದರು. ಸದ್ಯ ಅದೇ ವಿಡಿಯೋಗೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಎಐ) ಬಳಸಿ, ರೋಸಿಯ ಮುಖಕ್ಕೆ ಕಾಜೋಲ್ ಅವರ ಮುಖವನ್ನು ಎಡಿಟ್ ಮಾಡಲಾಗಿದೆ. ಖ್ಯಾತ ಬಾಲಿವುಡ್ ನಟಿ ಕ್ಯಾಮರಾ ಮುಂದೆ ಬಟ್ಟೆ ಬದಲಾಯಿಸುತ್ತಿರುವಂತೆ ಬಿಂಬಿಸಲಾದ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅವರ ಬಗ್ಗೆ ಅಭಿಮಾನಿಗಳಿಗೆ ತಪ್ಪು ಕಲ್ಪನೆ ಮೂಡುವಂತೆ ಮಾಡಿದೆ.
ಇತ್ತೀಚೆಗೆ ವೈರಲ್ ಆದ ರಶ್ಮಿಕಾ ಮಂದಣ್ಣ ಅವರ ಡೀಪ್ಫೇಕ್ ವಿಡಿಯೋ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್, ಕೀರ್ತಿ ಸುರೇಶ್, ಮೃಣಾಲ್ ಠಾಕೂರ್, ಇಶಾನ್ ಖಟ್ಟರ್, ನಾಗ ಚೈತನ್ಯ ಸೇರಿದಂತೆ ಅನೇಕ ತಾರೆಯರು ಆಗ್ರಹಿಸಿದ್ದರು. ರಶ್ಮಿಕಾ ಅವರ ವದಂತಿ ಗೆಳೆಯ ವಿಜಯ್ ದೇವರಕೊಂಡ ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಇದೀಗ ಕಾಜೋಲ್ ಅವರ ವಿಡಿಯೋ ಕೂಡ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಡೀಪ್ಫೇಕ್ ಕಂಟೆಂಟ್ ವಿರುದ್ಧ ಕ್ರಮ: ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ರಶ್ಮಿಕಾ ಮಂದಣ್ಣ
ಈ ಮಧ್ಯೆ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದಂತೆ ರಶ್ಮಿಕಾ ಮಂದಣ್ಣ ಅವರ ಡೀಪ್ಫೇಕ್ ವಿಡಿಯೋಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಬಿಹಾರದ 19 ವರ್ಷದ ಯುವಕನನ್ನು ವಿಚಾರಣೆ ನಡೆಸಿದ್ದಾರೆ. ಈತನೇ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ಶೇರ್ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
ರಶ್ಮಿಕಾ ವೈರಲ್ ವಿಡಿಯೋದಲ್ಲೇನಿದೆ?: ಯುವತಿ ಒಬ್ಬರು ಲಿಫ್ಟ್ನೊಳಗೆ ಬರುವ ದೃಶ್ಯ ಈ ವೈರಲ್ ವಿಡಿಯೋದಲ್ಲಿದೆ. ಬ್ಲ್ಯಾಕ್ ಹಾಟ್ ಡ್ರೆಸ್ನಲ್ಲಿ ಆಕೆ ಕಾಣಿಸಿಕೊಂಡಿದ್ದಾರೆ. ಅಸಲಿಗೆ ಈ ವಿಡಿಯೋದಲ್ಲಿರುವವರು ಆಂಗ್ಲೋ ಇಂಡಿಯನ್ ಯುವತಿ ಝರಾ ಪಟೇಲ್. ಕೃತಕ ಬುದ್ಧಿಮತ್ತೆ ಬಳಸಿ ರಶ್ಮಿಕಾ ಮಂದಣ್ಣರಂತೆ ಕಾಣುವಂತೆ ಮಾಡಿದ್ದರು. ಕಳೆದ ತಿಂಗಳು ವೈರಲ್ ಹೊರಬಂತಾದರೂ ಇತ್ತೀಚೆಗೆ ಈ ಸುದ್ದಿ ಹೆಚ್ಚು ಮಹತ್ವ ಪಡೆದುಕೊಂಡಿತು. ರಶ್ಮಿಕಾ ಮಂದಣ್ಣ, ಯುವತಿ ಝರಾ ಪಟೇಲ್ ಸೇರಿದಂತೆ ಗಣ್ಯರು ಪ್ರತಿಕ್ರಿಯಿಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದರು.
ಇದನ್ನೂ ಓದಿ: ಡೀಪ್ಫೇಕ್ ವಿವಾದ: ಸೋಷಿಯಲ್ ಮೀಡಿಯಾ ಸಂಸ್ಥೆಗಳೊಂದಿಗೆ ಸಭೆ ನಡೆಸಲು ನಿರ್ಧರಿಸಿದ ಕೇಂದ್ರ ಸರ್ಕಾರ