ETV Bharat / entertainment

ಕ್ರಾಂತಿಕಾರಿಯೊಬ್ಬನ ಪ್ರೇಮಕಥೆ ಹೇಳೋದಕ್ಕೆ ರೆಡಿಯಾದ ನೀನಾಸಂ ಸತೀಶ್ - ಓಟಿಟಿ ವೇದಿಕೆಯಲ್ಲಿ ಡಿಯರ್​ ವಿಕ್ರಮ್

ನಟ ಸತೀಶ್​ ನಿನಾಸಂ ಮತ್ತು ನಟಿ ಶ್ರದ್ಧಾ ಶ್ರೀನಾಥ್ ಅಭಿನಯದ ‘ಡಿಯರ್​ ವಿಕ್ರಮ್’ ಸಿನಿಮಾದ ಟೀಸರ್ ಇತ್ತಿಚೆಗಷ್ಟೇ ಬಿಡುಗಡೆಯಾಗಿ ಸಿನಿ ಪ್ರೇಕ್ಷಕರಲ್ಲಿ ಉತ್ತಮ ಅಭಿಪ್ರಾಯ ಹೊಂದಿತ್ತು. ಈ ಸಿನಿಮಾ ಓಟಿಟಿ ವೇದಿಕೆಯಲ್ಲಿ ಜೂನ್​ 30ರಂದು ಬಿಡುಗಡೆಯಾಗುತ್ತಿದೆ..

Dear Vikaram film releasing in voot select OTT flat forum on June 30th
ಕ್ರಾಂತಿಕಾರಿಯೊಬ್ಬನ ಕಥೆ ಹೇಳೋದಿಕ್ಕೆ ರೆಡಿಯಾದ ನೀನಾಸಂ ಸತೀಶ್
author img

By

Published : Jun 24, 2022, 3:37 PM IST

ವಿಭಿನ್ನ ಕಥಾಹಂದರದ ಸಿನಿಮಾಗಳನ್ನು ಮಾಡುತ್ತಾ ಬಂದಿರುವ ನೀನಾಸಂ ಸತೀಶ್ ಅವರ​ ಮತ್ತೊಂಡು ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಈ ಬಾರಿ ‘ಡಿಯರ್​ ವಿಕ್ರಮ್’ ಆಗಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗುತ್ತದೆ.

ಡಿಯರ್​ ವಿಕ್ರಮ್​ ಸಿನಿಮಾದಲ್ಲಿ ಕ್ರಾಂತಿಕಾರಿಯೊಬ್ಬನ ಪ್ರೇಮಕತೆಯನ್ನು ಹೇಳೋದಕ್ಕೆ ಸತೀಶ್ ರೆಡಿಯಾಗಿದ್ದಾರೆ. ಕೆಲದಿನಗಳ ಹಿಂದಷ್ಟೇ ಡಿಯರ್ ವಿಕ್ರಮ್ ಚಿತ್ರದ ಟೀಸರ್ ಬಿಡುಗಡೆಯಾಗಿ ಸಿನಿರಸಿಕರ ಕುತೂಹಲ ಮೂಡಿಸಿತ್ತು. ಈಗ ಬಿಡುಗಡೆಯಾಗಿರುವ ಟ್ರೇಲರ್ ಆ ಕುತೂಹಲವನ್ನು ಇಮ್ಮಡಿಗೊಳಿಸಿದೆ. ಬಿಗಿಯಾದ ಚಿತ್ರಕತೆ ಹಾಗೂ ಮನಮುಟ್ಟುವ ಅಭಿನಯದಿಂದಾಗಿ ಈ ಸಿನಿಮಾ ಪರಿಣಾಮಕಾರಿಯಾಗಿ ಮೂಡಿಬಂದಿದೆ ಎಂದು ಟ್ರೇಲರ್​ ನೋಡಿ ಹೇಳಬಹುದಾಗಿದೆ.

ತಮ್ಮ ಹೊಸ ಸಿನಿಮಾದ ಬಗ್ಗೆ ಉತ್ಸುಕರಾಗಿ ಮಾತಾಡಿದ ನಟ ಸತೀಶ್, ‘ಶ್ರದ್ಧಾ ಶ್ರೀನಾಥ್ ಅವರೊಂದಿಗೆ ಇದು ನನ್ನ ಮೊದಲ ಸಿನಿಮಾ. ವಸಿಷ್ಟ ಸಿಂಹ, ಸೋನು ಗೌಡ, ಅಚ್ಯುತ್ ಕುಮಾರ್ ಮುಂತಾದ ಹಲವು ಹೆಸರಾಂತ ನಟ-ನಟಿಯರು ಚಿತ್ರಕ್ಕೆ ತಮ್ಮ ಪ್ರತಿಭೆಯನ್ನು ಧಾರೆಯೆರೆದಿದ್ದಾರೆ’ ಎಂದರು.

Dear Vikaram film releasing in voot select OTT flat forum on June 30th
ಕ್ರಾಂತಿಕಾರಿಯೊಬ್ಬನ ಕಥೆ ಹೇಳೋದಿಕ್ಕೆ ರೆಡಿಯಾದ ನೀನಾಸಂ ಸತೀಶ್

ನಟಿ ಶ್ರದ್ಧಾ ಶ್ರೀನಾಥ್ ಮಾತನಾಡಿ, ‘ವಾಸ್ತವವನ್ನು ಬಣ್ಣದ ಕನ್ನಡಕದೊಳಗಿನಿಂದ ಮಾತ್ರ ನೋಡಿ ಬೆಳೆದ ಹುಡುಗಿಯ ಪಾತ್ರ ನನ್ನದು. ಈ ಪಾತ್ರವನ್ನು ಎಂದೂ ಮರೆಯೋಕಾಗಲ್ಲ’ ಎಂದು ಅವರು ತಿಳಿಸಿದರು.

ಡಿಯರ್​ ವಿಕ್ರಮ್ ಸಿನಿಮಾದ ನಾಯಕ ಸತೀಶ್​ ಮತ್ತು ನಾಯಕಿ ಶ್ರದ್ಧಾ ಶ್ರೀನಾಥ್

ನಿರ್ದೇಶಕ ಜೇಕಬ್ ವರ್ಗೀಸ್ ತಂಡದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವಿರುವ ಕೆ.ಎಸ್. ನಂದೀಶ್ ‘ಡಿಯರ್ ವಿಕ್ರಮ್’ ಸಿನಿಮಾವನ್ನು ಬರೆದು ನಿರ್ದೇಶಿಸಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ, ಹಾಸನ, ಭಟ್ಕಳ, ಕರ್ನೂಲ್ ಅಲ್ಲದೆ ಮಲೇಶಿಯಾದಲ್ಲೂ ಚಿತ್ರೀಕರಣ ಮಾಡಲಾಗಿದೆ. ಸಿನಿಮಾ ಜೂನ್​ 30ರಂದು ವೂಟ್​ ಸೆಲೆಕ್ಟ್​​ ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ: ತ್ರಿವಿಕ್ರಮನಿಗೆ ಮನಸೋತ ಸಿನಿಮಾ ಪ್ರೇಕ್ಷಕರು.. ವಿಕ್ರಮ್​ಗೆ 'ಭರವಸೆಯ ನಟ' ಎಂದ ಅಭಿಮಾನಿಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.