ETV Bharat / entertainment

ವೀಕೆಂಡ್​ ವಿತ್​ ರಮೇಶ್​: ಸಾಧಕರ ಕುರ್ಚಿ ಏರಿದ ಡಿಸಿಎಂ ಡಿಕೆಶಿ: ಸಿಎಂ ಸಿದ್ದರಾಮಯ್ಯ ಹೀಗಂದ್ರು! - Weekend with Ramesh show

ಅಂತಿಮ ಘಟ್ಟ ತಲುಪಿರುವ ವೀಕೆಂಡ್​ ವಿತ್​ ರಮೇಶ್​ ಶೋನ ಈ ವಾರದ ಅತಿಥಿಯಾಗಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​​ ಆಗಮಿಸಲಿದ್ದಾರೆ

DCM DK shivakumar in Weekend with Ramesh
ವೀಕೆಂಡ್​ ವಿತ್​ ರಮೇಶ್ ಶೋನಲ್ಲಿ ಡಿಕೆಶಿ
author img

By

Published : Jun 6, 2023, 2:23 PM IST

Updated : Jun 6, 2023, 2:47 PM IST

'ವೀಕೆಂಡ್​ ವಿತ್​ ರಮೇಶ್​' ಅಪಾರ ಸಂಖ್ಯೆಯ ವೀಕ್ಷಕರನ್ನು ಸಂಪಾದಿಸಿರುವ ಕನ್ನಡದ ಜನಪ್ರಿಯ ಕಾರ್ಯಕ್ರಮ. ಕನ್ನಡಿಗರ ಮನೆಗೆದ್ದಿರುವ ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರು ಬಂದು ತಮ್ಮ ಸಾಧನೆಯ ಪುಟಗಳನ್ನು ಪ್ರೇಕ್ಷಕರ ಮುಂದೆ ತೆರೆದಿಡುತ್ತಾರೆ.

'ವೀಕೆಂಡ್​ ವಿತ್​ ರಮೇಶ್​' ಸೀಸನ್​ 5 ಕೊನೆಯ ಹಂತ ತಲುಪಿದ್ದು, ಅಂತಿಮ ವಾರ ಯಾರು ಬರಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿತ್ತು. ಈ ವಾರ ರಾಜ್ಯದ ನೂತನ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​​ ಸಾಧಕರ ಕುರ್ಚಿ ಏರಲಿದ್ದಾರೆ. ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಕೆಶಿ ಅವರ ಕಾರ್ಯಕ್ರಮ ವೀಕ್ಷಿಸಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.

'ವೀಕೆಂಡ್​ ವಿತ್​ ರಮೇಶ್​' ಶೋನ ಈ ವಾರದ ಪ್ರೋಮೋ ರಿಲೀಸ್​ ಆಗಿದೆ. ಸೋಷಿಯಲ್​ ಮೀಡಿಯಾಗಳಲ್ಲೂ ಪ್ರೋಮೋ ರಿಲೀಸ್​ ಮಾಡಿರುವ ಜೀ ವಾಹಿನಿ, ''ರಾಜ್ಯ ಕಂಡ ಪ್ರಚಂಡ ರಾಜಕಾರಣಿ, ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್ ಅವರ ಬದುಕಿನ ಜರ್ನಿ ಅನಾವರಣ! ವೀಕೆಂಡ್ ವಿತ್ ರಮೇಶ್ 5 ಗ್ರ್ಯಾಂಡ್​ ಫಿನಾಲೆ ಶನಿವಾರ ಮತ್ತು ಭಾನುವಾರ ರಾತ್ರಿ ‌9ಕ್ಕೆ'' ಎಂದು ಬರೆದುಕೊಂಡಿದೆ. ಶಿವಕುಮಾರ್​ ಅವ್ರು ಒಳ್ಳೆಯ ಆಡಳಿತಗಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಣಗಾನ ಮಾಡಿರೋದು ಜನರ ಗಮನ ಸೆಳೆಯುತ್ತಿದೆ.

ಪ್ರೋಮೋ ರಿಲೀಸ್​ ಮಾಡುವ ಮುನ್ನ ಬ್ಲರ್​ ಇಮೇಜ್​ ಶೇರ್ ಮಾಡಿದ್ದ ಜೀ ಕನ್ನಡ, 'ಈ ವೀಕೆಂಡ್‌ನ ಅಚ್ಚರಿಯ ಅತಿಥಿ ಯಾರು ಗೆಸ್​ ಮಾಡಿ? ವೀಕೆಂಡ್ ವಿತ್ ರಮೇಶ್ 5' ಎಂದು ಬರೆದುಕೊಂಡಿತ್ತು. ಆ ವೇಳೆ, ಹೆಚ್ಚಿನವರು ಡಿ.ಕೆ ಶಿವಕುಮಾರ್ ಹೆಸರನ್ನೇ ಉಲ್ಲೇಖಿಸಿದ್ದರು. ಇದಕ್ಕೂ ಮುನ್ನ ​​'ವೀಕೆಂಡ್​ ವಿತ್​ ರಮೇಶ್​' ಸೀಸನ್​ 5 ಕೊನೆಯ ಅತಿಥಿ ಆಗಿ ಡಿಕೆಶಿ ಅವರೇ ಆಗಮಿಸಲಿದ್ದಾರೆ ಎಂದು ಹಲವರು ಊಹಿಸಿದ್ದರು. ಸದ್ಯ ಅದು ನಿಜವಾಗಿದೆ. ಸಾಧಕರ ಸೀಟ್​ನಲ್ಲಿ ಕುಳಿತು ತಮ್ಮ ಜೀವಮಾನದ ಸಾಧನೆ ಬಗ್ಗೆ ಮಾತನಾಡಲಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​​ ಬಗ್ಗೆ ಮತ್ತು ಈ ಕಾರ್ಯಕ್ರಮದ ಬಗ್ಗೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರೋಮೋ ರಿಲೀಸ್​ ಆದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಪ್ರತಿಕ್ರಿಯೆ ಕೊಡಲು ಶುರು ಹಚ್ಚಿಕೊಂಡಿದ್ದಾರೆ. ಹಲವರು ಮೆಚ್ಚಿನ ಜನನಾಯಕ ಆಗಮಿಸುತ್ತಿರುವುದರ ಕುರಿತು ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಆದಿಪುರುಷ್ ಪ್ರೀ ರಿಲೀಸ್: ತಿರುಮಲ ವೆಂಕಟೇಶ್ವರನ ದರ್ಶನ ಪಡೆದ ಪ್ರಭಾಸ್​ - ಫೋಟೋಗಳಿಲ್ಲಿವೆ ನೋಡಿ

'ವೀಕೆಂಡ್​ ವಿತ್​ ರಮೇಶ್​' ಸೀಸನ್​ 5ರಲ್ಲಿ ಈವರೆಗೆ ನಟಿ ರಮ್ಯಾ, ನೃತ್ಯ ನಿರ್ದೇಶಕ ಪ್ರಭುದೇವ, ಜಯದೇವ ಸಂಸ್ಥೆಯ ಡಾ.ಸಿ.ಎನ್​ ಮಂಜುನಾಥ್, ಹಿರಿಯ ಕಲಾವಿದ ದತ್ತಣ್ಣ, ನಟ​​ರಾಕ್ಷಸ ಖ್ಯಾತಿಯ ಡಾಲಿ ಧನಂಜಯ್, ನಟ ಅವಿನಾಶ್​, ನಟ ಮಂಡ್ಯ ರಮೇಶ್​​, ನಟ ಸಿಹಿಕಹಿ ಚಂದ್ರು, ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ , ನೆನಪಿರಲಿ ಪ್ರೇಮ್​, ನೃತ್ಯ ಸಾಧಕ ಚಿನ್ನಿ ಪ್ರಕಾಶ್​, ಥಟ್​ ಅಂತ ಹೇಳಿ ಖ್ಯಾತಿಯ ನಾ. ಸೋಮೇಶ್ವರ ಅವರು ಅತಿಥಿಗಳಾಗಿ ಆಗಮಿಸಿದ್ದಾರೆ. ಮಾರ್ಚ್​ 25ರಿಂದ ಕಾರ್ಯಕ್ರಮ ಪ್ರತೀ ಶನಿವಾರ ಭಾನುವಾರ ರಾತ್ರಿ 9ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದೆ. ಈ ವಾರ ಐದನೇ ಸೀಸನ್​ನ ಗ್ರ್ಯಾಂಡ್​ ಫಿನಾಲೆ.

ಇದನ್ನೂ ಓದಿ: ಪೋಷಕರಾಗಲಿರುವ ಸ್ವರಾ ಭಾಸ್ಕರ್ - ಫಹಾದ್ ಅಹ್ಮದ್: ಬೇಬಿ ಬಂಪ್ ಫೋಟೋ ಹಂಚಿಕೊಂಡ ನಟಿ

Last Updated : Jun 6, 2023, 2:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.