ETV Bharat / entertainment

ದಿಲ್​ದಾರ್​ಗೆ ಕ್ರೇಜಿಸ್ಟಾರ್​ ಶುಭ ಹಾರೈಕೆ: ಶ್ರೇಯಸ್​ ಹೊಸ ಚಿತ್ರಕ್ಕೆ ಕಿಕ್​ ಸ್ಟಾರ್ಟ್​​ - ದಿಲ್​ ದಾರ್​ ಮುಹೂರ್ತ ಸಮಾರಂಭ

ಶ್ರೇಯಸ್​ ಮಂಜು, ನಟಿ ಪ್ರಿಯಾಂಕಾ ಅಭಿನಯದ ದಿಲ್​ದಾರ್​ ಸಿನಿಮಾದ ಮುಹೂರ್ತ ನಡೆದಿದ್ದು, ಶೂಟಿಂಗ್​ಗೆ ಚಾಲನೆ ನೀಡಲಾಗಿದೆ.

ದಿಲ್​ದಾರ್​ಗೆ ಕ್ರೇಜಿಸ್ಟಾರ್​ ಶುಭ ಹಾರೈಕೆ
ದಿಲ್​ದಾರ್​ಗೆ ಕ್ರೇಜಿಸ್ಟಾರ್​ ಶುಭ ಹಾರೈಕೆ
author img

By

Published : Apr 1, 2023, 5:32 PM IST

ಪಡ್ಡೆ ಹುಲಿ ಮೂಲಕ ಭರ್ಜರಿ ಯಶಸ್ಸು ಪಡೆದ ನಿರ್ಮಾಪಕ ಕೆ ಮಂಜು ಅವರ ಮಗ ಶ್ರೇಯಸ್​ ಇದೀಗ ದಿಲ್​ ದಾರ್​ ಆಗಲು ಹೊರಟ್ಟಿದ್ದಾರೆ. ಈ ದಿಲ್​ ದಾರ್​ ಮುಹೂರ್ತ ಸಮಾರಂಭ ಬೆಂಗಳೂರಿನ ಶ್ರೀಕಂಠೇಶ್ವರ ದೇಗುಲದಲ್ಲಿ ಅದ್ಧೂರಿಯಾಗಿ ನೆರವೇರಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾಗೆ ಕ್ಲಾಪ್ ಮಾಡಿ ಟೈಟಲ್ ಅನಾವರಣ ಮಾಡಿದರು. ನಾಗತಿಹಳ್ಳಿ ಚಂದ್ರಶೇಖರ್ ಕ್ಯಾಮರಾಗೆ ಚಾಲನೆ ನೀಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದರು. ಇನ್ನು ದಿಲ್​ ದಾರ್​ ಟೈಟಲ್ ರಿವೀಲ್ ಮಾಡಿ ಮಾತಾನಾಡಿದ ಕ್ರೇಜಿಸ್ಟಾರ್ ರವಿಚಂದ್ರನ್, ಸಿನಿಮಾ ಮಾಡಬೇಕು ಅಂದರೆ ದಿಲ್ ಬೇಕು. ನಟ ಶ್ರೇಯಸ್ ಮಂಜು ಹಾಗೂ ಇಡೀ ಚಿತ್ರತಂಡಕ್ಕೆ ಶುಭಾಶಯ ತಿಳಿಸಿದರು.

ಇನ್ನು ಈ ಚಿತ್ರವನ್ನು ಮಧು ಗೌಡ ಅವರು ನಿರ್ದೇಶನ ಮಾಡುತ್ತಿದ್ದು, ಈ ಕುರಿತು ಮಾತನಾಡಿರುವ ಅವರು, ಈ ಸಿನಿಮಾ ಕೇವಲ ನನ್ನಿಂದ ಅಲ್ಲ. ನನ್ನ ತಂಡದ ಸಪೋರ್ಟ್ ನಿಂದ ಸಾಧ್ಯವಾಗಿದೆ. ಕತೆ ಸಿದ್ದಪಡಿಸಿ ದಿಲ್ ದಾರ್ ಟೈಟಲ್ ಫಿಕ್ಸ್ ಮಾಡಿದಾಗ, ಯಾರು ಚಿತ್ರದ ದಿಲ್ ದಾರ್ ಅಂತ ಯೋಜಿಸಿದಾಗ ಶ್ರೇಯಸ್ ಮಂಜು ನೆನಪಾದರು. ಚಿತ್ರದ ನಿರ್ಮಾಪಕ ಸಂತೋಷ್ ಮಾತನಾಡಿ, ನಿರ್ದೇಶಕ ಮಧು ಅವರು ನನ್ನ ಬಳಿ ಕತೆ ಹೇಳಿದಾಗ ತುಂಬಾ ಇಷ್ಟ ಆಯ್ತು. ಅದಕ್ಕೆ ಒಪ್ಪಿಕೊಂಡೆ ಎಂದರು.

ಇನ್ನು ನಟಿ ಪ್ರಿಯಾಂಕ ಮಾತನಾಡಿ, ಈ ಹಿಂದೆ ಅದ್ಧೂರಿ ಲವರ್ಸ್ ಹಾಗೂ ಬ್ಯಾಡ್ ಮ್ಯಾನರ್ಸ್ ಚಿತ್ರದಲ್ಲಿ ಅಭಿನಯಿಸಿದ್ದೆ. ಈಗ ಈ ಸಿನಿಮಾದಲ್ಲಿ ನಟಿಸುತ್ತೇನೆ. ನಿಮ್ಮ ಆಶೀರ್ವಾದ ನನ್ನ ಮೇಲೆ ಇರಬೇಕು ಎಂದು ತಿಳಿಸಿದರು.

ನಟ ಶ್ರೇಯಸ್ ಮಂಜು ಮಾತನಾಡಿ, ರವಿಚಂದ್ರನ್ ಸರ್ ನನಗೆ ತುಂಬಾ ಕಾನ್ಫಿಡೆನ್ಸ್ ಕೊಟ್ಟಿದ್ದಾರೆ. ನನ್ನ ಚಿತ್ರಕ್ಕೆ ಶುಭಕೋರಲು ಬಂದ ಎಲ್ಲಾ ನಿರ್ದೇಶಕರಿಗೂ ಧನ್ಯವಾದ ತಿಳಿಸುತ್ತೇನೆ. ಪ್ರತಿಯೊಬ್ಬ ಡೈರೆಕ್ಟರ್ ಹತ್ತಿರ ಒಂದೊಂದು ಟಿಪ್ಸ್ ತೆಗೆದುಕೊಳ್ಳುವೆ. ರಾಕಿಂಗ್ ಸ್ಟಾರ್ ಯಶ್ ಅವರು ನನಗೆ ತುಂಬಾ ಸಪೋರ್ಟ್ ಕೊಟ್ಟಿದ್ದಾರೆ. ಈ ಅವಕಾಶವನ್ನು ನನಗೆ ಕೊಟ್ಟಿದ್ದಕ್ಕೆ ನಿರ್ದೇಶಕ ಮಧ ಅವರಿಗೆ ಧನ್ಯವಾದ. ದಿಲ್ ದಾರ್ ಚಿತ್ರ ಕಾಲೇಜ್ ಸ್ಟೋರಿ ಆಗಿದೆ. ನಾಳೆಯಿಂದ ಶೂಟಿಂಗ್ ರಿಹರ್ಸಲ್ ಮಾಡುತ್ತಿದ್ದೇವೆ ಎಂದರು.

ಏಷ್ಯಾನೆಟ್ ಮೂವೀ ಬ್ಯಾನರ್ ನಟಿ ಆರ್ ಸಂತೋಷ್ ಕುಮಾರ್(ಎಸ್ ವಿಟಿ) ಚಿತ್ರ ನಿರ್ಮಾಣ ಮಾಡ್ತಿದ್ದು, ಅರ್ಜುನ್ ಜನ್ಯ ಸಂಗೀತ, ಗಗನ್ ಗೌಡ ಛಾಯಾಗ್ರಹಣ, ರವಿವರ್ಮಾ ಸಾಹಸ, ರಾಜೇಶ್ ಸಾಲುಂಡಿ ಸಂಭಾಷಣೆ ಚಿತ್ರಕ್ಕಿದೆ. ದುರ್ಗ, ನೀಲಿ ಸೀರಿಯಲ್ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವವಿರುವ ಮಧು ಗೌಡ ಗಂಗೂರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ.

ಮಾಸ್ ಎಂಟರ್ ಟೈನರ್ ಹಾಗೂ ಕಾಲೇಜ್ ಲವ್ ಸ್ಟೋರಿಯಾಗಿದ್ದು, ಕಾಲೇಜು ವಿದ್ಯಾರ್ಥಿಗಳ ಪಾತ್ರದಲ್ಲಿ ಶ್ರೇಯಸ್​ ನಟಿಸುತ್ತಿದ್ದಾರೆ. ಪ್ರಿಯಾಂಕಾ ಅವರು ಬಬ್ಲಿ ಪಾತ್ರದಲ್ಲಿ ನಟಿಸಿದ್ದು, ಇಬ್ಬರ ನಡುವಿನ ಸ್ನೇಹ, ಪ್ರೀತಿಯ ಕಥೆಯನ್ನು ಈ ಚಿತ್ರ ಹೊಂದಿದೆ. ಜೊತೆಗೆ ಒಂದೆರಡು ಆ್ಯಕ್ಷನ್​ ಸೀನ್​ಗಳು ಕೂಡ ಇದ್ದು, ಇದೊಂದು ಸಂಪೂರ್ಣ ಮನರಂಜನೆಯ ಚಿತ್ರವಾಗಿದೆ

ಇದನ್ನೂ ಓದಿ: ಪಡ್ಡೆ ಹುಲಿ ನಾಯಕ ಶ್ರೇಯಸ್​ ಹೊಸ ಸಿನಿಮಾಗೆ ಪ್ರಿಯಾಂಕಾ ನಾಯಕಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.