ETV Bharat / entertainment

ಮತ್ತೆ ಮುನ್ನೆಲೆಗೆ ಬಂದ ಅಪ್ಪು ಪಪ್ಪು ಖ್ಯಾತಿಯ ಸ್ನೇಹಿತ್ ಕಿರಿಕ್.. ದೂರು - ಪ್ರತಿದೂರು ದಾಖಲು! - ಮಹಾಲಕ್ಷ್ಮಿ ಲೇಔಟ್ ಪೊಲೀಸ್​ ಠಾಣೆ

ಅಪ್ಪು- ಪಪ್ಪು ಖ್ಯಾತಿಯ ಸ್ನೇಹಿತ್​ ಮತ್ತೆ ಸುದ್ದಿಯಾಗಿದ್ದಾರೆ. ಸ್ನೇಹಿತ್​ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದ್ದು, ಠಾಣೆಯಲ್ಲಿ ದೂರು-ಪ್ರತಿ ದೂರು ದಾಖಲಾಗಿವೆ.

sandalwood famous producer son  complaint register against producer son  complaint register against Snehith  ಖ್ಯಾತ ನಿರ್ಮಾಪಕರ ಪುತ್ರನ ವಿರುದ್ಧ ದೂರು ದಾಖಲು  ಅಪ್ಪು ಪಪ್ಪು ಖ್ಯಾತಿಯ ಸ್ನೇಹಿತ್ ಮತ್ತೆ ಸುದ್ದಿ  ಸ್ನೇಹಿತ್​ ವಿರುದ್ಧ ಗಂಭೀರ ಆರೋಪ  ಸ್ಯಾಂಡಲ್​ವುಡ್​ ನಿರ್ಮಾಪಕ ಸೌಂದರ್ಯ ಜಗದೀಶ್  ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರ  ಅಪ್ಪು ಪಪ್ಪು ಸಿನಿಮಾ ಖ್ಯಾತಿಯ ಸ್ನೇಹಿತ್  ಮಹಾಲಕ್ಷ್ಮಿ ಲೇಔಟ್ ಪೊಲೀಸ್​ ಠಾಣೆ
ದೂರು-ಪ್ರತಿದೂರು ದಾಖಲು
author img

By

Published : Sep 30, 2022, 11:41 AM IST

Updated : Sep 30, 2022, 11:54 AM IST

ಬೆಂಗಳೂರು: ಸ್ಯಾಂಡಲ್​ವುಡ್​ ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರ, ಅಪ್ಪು-ಪಪ್ಪು ಸಿನಿಮಾ ಖ್ಯಾತಿಯ ಸ್ನೇಹಿತ್ ವಿರುದ್ಧ ಮತ್ತೊಮ್ಮೆ ಗಂಭೀರ ಆರೋಪ ಕೇಳಿಬಂದಿದ್ದು, ಮಹಾಲಕ್ಷ್ಮಿ ಲೇಔಟ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ನೇಹಿತ್ ಮತ್ತು ಆತನ ಎದುರು ಮನೆಯ ರಜತ್ ಗೌಡ ಫ್ಯಾಮಿಲಿಯ ಜಗಳ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಈಗ ಪೊಲೀಸ್​ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ. ಜಾತಿ ನಿಂದನೆ ಮಾಡಿ, ಕೊಲೆ ಬೆದರಿಕೆ ಹಾಕಿರುವುದಾಗಿ ರಜತ್ ಗೌಡ ಮತ್ತು ಆತನ ತಮ್ಮನ ವಿರುದ್ಧ ಸ್ನೇಹಿತ್ ಕಾರು ಚಾಲಕ ರಕ್ಷಿತ್​ನಿಂದ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದರ ಬೆನ್ನಲ್ಲೇ ಎದುರು ಮನೆಯ ರಜತ್ ಫ್ಯಾಮಿಲಿಯಿಂದಲೂ ದೂರು ದಾಖಲಾಗಿದೆ. ಜಾಗ್ವಾರ್ ಕಾರಿನಲ್ಲಿ ಬಂದ ಸ್ನೇಹಿತ್ ಮತ್ತು ಆತನ ಕಾರು ಚಾಲಕ ರಕ್ಷಿತ್​ ನನ್ನನ್ನು ನಡುರಸ್ತೆಯಲ್ಲಿ ಅಡ್ಡಗಟ್ಟಿದ್ದಾರೆ. ಬಳಿಕ ನನ್ನ ಪತ್ನಿಗೆ ನಿಂದಿಸಿದ್ದಾರೆ. ಅಷ್ಟೇ ಅಲ್ಲ ಮನೆ ಕೆಲಸದವರಿಗೆ ಅತ್ಯಾಚಾರದ ಬೆದರಿಕೆ ಹಾಕಿದ್ದಾರೆ ಎಂದು ರಜತ್​ ಗೌಡ ಆರೋಪಿಸಿ ದೂರು ದಾಖಲಿಸಿದ್ದಾರೆ. ಸದ್ಯ ಎಫ್ಐಆರ್ ದಾಖಲಿಸಿಕೊಂಡಿರುವ ಮಹಾಲಕ್ಷ್ಮಿ ಲೇಔಟ್ ಪೊಲೀಸರು ತನಿಖೆ‌ ನಡೆಸುತ್ತಿದ್ದಾರೆ.

ಓದಿ: ಮನೆ ಕೆಲಸದವಳ ಮೇಲೆ ಸ್ಯಾಂಡಲ್​ವುಡ್​ ಖ್ಯಾತ ನಿರ್ಮಾಪಕರ ಪುತ್ರನಿಂದ ಹಲ್ಲೆ: ಆರೋಪಿಗಳು ಪರಾರಿ

Last Updated : Sep 30, 2022, 11:54 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.