ETV Bharat / entertainment

ಧರ್ಮಣ್ಣಗೀಗ 'ರಾಜಯೋಗ'.. ನಾಯಕನಾಗಿ ಬಡ್ತಿ ಪಡೆದ ಹಾಸ್ಯನಟ - actor dharmanna

ಹಾಸ್ಯನಟನಾಗಿ ಕನ್ನಡಿಗರ ಮನ ಗೆದ್ದಿರುವ ಧರ್ಮಣ್ಣ ರಾಜಯೋಗ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ.

comedian dharmanna in rajayoga movie
ರಾಜಯೋಗ ಸಿನಿಮಾದಲ್ಲಿ ಹಾಸ್ಯನಟ ಧರ್ಮಣ್ಣ
author img

By

Published : Mar 14, 2023, 1:00 PM IST

ಪ್ರತಿಭೆಯ ಜೊತೆಗೆ ಅದೃಷ್ಟ, ಯೋಗವೂ ಮುಖ್ಯ. ಹಾಕಿದ ಪರಿಶ್ರಮಕ್ಕೆ ತಕ್ಕ ಹಾಗೆ ಅದೃಷ್ಟ ಲಕ್ಷ್ಮೀ ಒಲಿಯಿತೆಂದರೆ ಮುಟ್ಟಿದ್ದೆಲ್ಲವೂ ಚಿನ್ನ. ಈ ಮಾತಿಗೆ ಪೂರಕವೆಂಬಂತೆ, ಈಗಾಗಲೇ ಸಾಕಷ್ಟು ಚಿತ್ರಗಳಲ್ಲಿ ತನ್ನದೇ ಕಾಮಿಡಿ ಮ್ಯಾನರಿಸಂನಿಂದ ಕನ್ನಡಿಗರ ಮನ ಗೆದ್ದಿರುವ ಹಾಸ್ಯ ನಟ ಧರ್ಮಣ್ಣ ಬಿಗ್ ಸ್ಕ್ರೀನ್​​ನಲ್ಲಿ ನಾಯಕ ನಟನಾಗಿ ಮಿಂಚಲು ರೆಡಿಯಾಗಿದ್ದಾರೆ. ರಾಜಯೋಗ ಈ ಚಿತ್ರದ ಟೈಟಲ್​.

ರಾಜಯೋಗ ಫಸ್ಟ್ ಲುಕ್ ಬಿಡುಗಡೆ: ಈಗಾಗಲೇ ಒಂದು ಹಂತದ ಚಿತ್ರೀಕರಣ ಪೂರ್ಣಗೊಳಿಸಿರುವ ಈ ಚಿತ್ರದ ಫಸ್ಟ್ ಲುಕ್ ಅನಾವರಣ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಲಿಂಗರಾಜ ಉಚ್ಚಂಗಿದುರ್ಗ ಅವರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಕನ್ನಡ ಗೊತ್ತಿಲ್ಲ ಸಿನಿಮಾ ನಿರ್ಮಿಸಿದ ಕುಮಾರ ಕಂಠೀರವ, ದೀಕ್ಷಿತ್ ಕೃಷ್ಣ, ಪ್ರಭು ಚಿಕ್ಕನಾಯ್ಕನಹಳ್ಳಿ, ಲಿಂಗರಾಜು ಕೆ ಎನ್, ಅರ್ಜುನ್ ಅಣತಿ ಅಲ್ಲದೇ ಧರ್ಮಣ್ಣ ಅವರ ಸಹೋದರ ಹೊನ್ನಪ್ಪ ಕಡೂರು ಸೇರಿದಂತೆ ಆರು ನಿರ್ಮಾಪಕರು ಸೇರಿ ಈ ರಾಜಯೋಗ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

comedian dharmanna in rajayoga movie
ರಾಜಯೋಗ ಸಿನಿಮಾದಲ್ಲಿ ಹಾಸ್ಯನಟ ಧರ್ಮಣ್ಣ

'ಎಲ್ಲರಿಗೂ ರಾಜಯೋಗ ಬಂದೇ ಬರುತ್ತದೆ': ನಿರ್ದೇಶಕ ಲಿಂಗರಾಜು ಮಾತನಾಡಿ, ಹಿಂದೆ ವಿಜಯಪ್ರಸಾದ್ ಜೊತೆ ಸಿಲ್ಲಿ ಲಲ್ಲಿ ಸೀರಿಯಲ್‌ಗೆ ಅಸಿಸ್ಟೆಂಟ್ ಡೈರೆಕ್ಟರ್​ ಆಗುವ ಮೂಲಕ ಇಂಡಸ್ಟ್ರಿಗೆ ಬಂದೆ. ಇದು ನನ್ನ ನಿರ್ದೇಶನದ ಮೊದಲ ಸಿನಿಮಾ. ಈ ಸಿನಿಮಾ ಪ್ರಾರಂಭವಾಗಲು ಕಾರಣ ದೀಕ್ಷಿತ್ ಕೃಷ್ಣ, ಧರ್ಮಣ್ಣ. ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಎಲ್ಲರಿಗೂ ಒಂದಲ್ಲ ಒಂದು ದಿನ ರಾಜಯೋಗ ಬಂದೇ ಬರುತ್ತದೆ ಎನ್ನುವುದೇ ಈ ಚಿತ್ರದ ಕಾನ್ಸೆಪ್ಟ್. ಗ್ರಾಮೀಣ ಭಾಗದಲ್ಲಿ ನಡೆಯುವ ಕಥೆ ಇದು ಎಂದು ತಿಳಿಸಿದರು.

comedian dharmanna in rajayoga movie
ರಾಜಯೋಗ ಸಿನಿಮಾದಲ್ಲಿ ಹಾಸ್ಯನಟ ಧರ್ಮಣ್ಣ

ಧರ್ಮಣ್ಣ ಅವರನ್ನು ರಾಮ ರಾಮ ರೇ ಚಿತ್ರದಲ್ಲಿ ನೋಡಿದ್ದೆ. ಅವರ ಅಭಿನಯ ಇಷ್ಟವಾಗಿತ್ತು. ಹಾಗಾಗಿ ಈ ಚಿತ್ರದ ಮೂಲಕ ಅವರನ್ನು ಹೀರೋ ಮಾಡಿದ್ದೇನೆ. ತಂದೆ, ಪತ್ನಿ, ಚಿಕ್ಕಪ್ಪ ದೊಡ್ಡಪ್ಪ ಹೀಗೆ ಎಲ್ಲಾ ಪಾತ್ರಗಳು ಅವರ ಸುತ್ತ ಬರುತ್ತವೆ. ತಂದೆ ಮಗನ ಸುತ್ತ ನಡೆಯುವ ಕಥೆ. ಜೋತಿಷ್ಯ ಸುಳ್ಳಲ್ಲ, ಅದನ್ನು ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ, ಅಂಥದೇ ಕಥೆಯನ್ನು ನಮ್ಮ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಚಿತ್ರದ ಕೊನೆಯಲ್ಲಿ ಮಗ ತಂದೆಗೆ ಬುದ್ಧಿ ಕಲಿಸುವ ಕಥೆಯಿದೆ. ಚಿತ್ರದಲ್ಲಿ ಒಂದು ಸೀರಿಯಸ್ ವಿಷಯವನ್ನು ಹಾಸ್ಯದ ಮೂಲಕ ಹೇಳಲು ಪ್ರಯತ್ನಿಸಲಾಗಿದೆ‌ ಎಂದರು‌.

ಇದನ್ನೂ ಓದಿ: ಆರ್​ಆರ್​ಆರ್ ಸಿನಿಮಾ ಬಹಿಷ್ಕರಿಸಲು ಹೇಳಿದ್ದ ಬಿಜೆಪಿ ಧರ್ಮಾಂಧರು ಈಗ ಎಲ್ಲಿದ್ದಾರೆ?: ಪ್ರಕಾಶ್ ರಾಜ್

ಬಳಿಕ ನಾಯಕ ನಟ ಧರ್ಮಣ್ಣ ಮಾತನಾಡಿ, ನನ್ನ ಪಾತ್ರದಲ್ಲಿ ಕಾಮಿಡಿ, ಎಮೋಷನ್ ಎಲ್ಲಾ ಇದೆ. ಈ ರೀತಿಯ ಪಾತ್ರವನ್ನು ಹಿಂದೆಂದೂ ಮಾಡಿಲ್ಲ. ಗ್ರಾಮೀಣ ಭಾಗದಲ್ಲಿ ನಡೆಯುವ ಕಥೆಯನ್ನು ಲಿಂಗರಾಜು ಅವರು ಮಾಡಿಕೊಂಡಿದ್ದಾರೆ. ಇಲ್ಲಿ ಎಲ್ಲ ಪಾತ್ರಗಳಿಗೂ ಸಮಾನ ಅವಕಾಶವಿದೆ. ನನ್ನನ್ನು ನಂಬಿ ಇಂಥ ದೊಡ್ಡ ಪಾತ್ರವನ್ನು ಕೊಟ್ಟಿದ್ದಾರೆ ಎಂದು ಹೇಳಿದರು. ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿರುವ ನಿರೀಕ್ಷಾ ರಾವ್ ಮಾತನಾಡಿ, ಮೂಢನಂಬಿಕೆ, ನಂಬಿಕೆಗಳ ಮಧ್ಯೆ ನಡೆಯುವ ಕಥೆ. ನನ್ನದು ಕುಟುಂಬವೊಂದರ ಗೃಹಿಣಿ ಪಾತ್ರ ಎಂದು ಹೇಳಿಕೊಂಡರು.

ಇದನ್ನೂ ಓದಿ: ವಿಶ್ವಾದ್ಯಂತ RRR​ ನಾಯಕರ ಕ್ರೇಜ್: ಜೂ.ಎನ್​ಟಿಆರ್​ ನಂ.1, ಎರಡನೇ ಸ್ಥಾನದಲ್ಲಿ ರಾಮ್​ಚರಣ್​

ಈ ಚಿತ್ರದಲ್ಲಿ 6 ಹಾಡುಗಳಿದ್ದು, ಅಕ್ಷಯ್ ರಿಶಭ್ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಷ್ಣುಪ್ರಸಾದ್ ಕ್ಯಾಮರಾವರ್ಕ್ ನಿಭಾಯಿಸಿದ್ದಾರೆ. ಬಿ.ಎಸ್. ಕೆಂಪರಾಜು ಅವರ ಸಂಕಲನ ಈ ಚಿತ್ರಕ್ಕಿದೆ. ನಾಗೇಂದ್ರ ಶಾ ನಾಯಕನ ತಂದೆ ಪಾತ್ರ ನಿರ್ವಹಿಸಿದ್ದು, ಕೃಷ್ಣ ಮೂರ್ತಿ ಕವುತಾರ್ ಜನರನ್ನು ದಾರಿ ತಪ್ಪಿಸುವ ಜೋತಿಷಿಯ ಪಾತ್ರ ಮಾಡಿದ್ದಾರೆ. ಶ್ರೀನಿವಾಸ ಗೌಡ್ರು, ಉಷಾ ರವಿಶಂಕರ್, ಮಹಾಂತೇಶ ಹಿರೇಮಠ್ ಉಳಿದ ಪಾತ್ರವರ್ಗದಲ್ಲಿದ್ದಾರೆ. ಸದ್ಯ ಪೋಸ್ಟರ್ ಹಾಗೂ ಟೈಟಲ್​ನಿಂದ ಗಮನ ಸೆಳೆಯುತ್ತಿರೋ ಈ ಚಿತ್ರ ಧರ್ಮಣ್ಣನಿಗೆ ರಾಜಯೋಗ ತಂದು ಕೊಡುತ್ತಾ ಅನ್ನೋದು ಶೀಘ್ರದಲ್ಲೇ ಗೊತ್ತಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.