ETV Bharat / entertainment

ಮೆಗಾಸ್ಟಾರ್​ ಚಿರಂಜೀವಿ ಜನ್ಮದಿನ: 157ನೇ ಚಿತ್ರದ ಅಧಿಕೃತ ಘೋಷಣೆ, ಪೋಸ್ಟರ್​ ರಿಲೀಸ್​ - ಈಟಿವಿ ಭಾರತ ಕನ್ನಡ

Megastar Chiranjeevi Birthday: ಇಂದು ಮೆಗಾಸ್ಟಾರ್​ ಚಿರಂಜೀವಿ ಜನ್ಮದಿನ. ಈ ಹಿನ್ನೆಲೆ ನಟನ 157ನೇ ಚಿತ್ರದ ಪೋಸ್ಟರ್​ ಬಿಡುಗಡೆಯಾಗಿದೆ.

Megastar Chiranjeevi Birthday
ಮೆಗಾಸ್ಟಾರ್​ ಚಿರಂಜೀವಿ
author img

By ETV Bharat Karnataka Team

Published : Aug 22, 2023, 12:11 PM IST

ಟಾಲಿವುಡ್​ ಖ್ಯಾತ ನಟ, ಮೆಗಾಸ್ಟಾರ್​ ಚಿರಂಜೀವಿಗೆ ಇಂದು ಜನ್ಮದಿನದ ಸಂಭ್ರಮ. 68ನೇ ವಸಂತಕ್ಕೆ ಕಾಲಿಟ್ಟ ಸ್ಟಾರ್​ಗೆ ನಟರು, ಗಣ್ಯರು ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಚಿರಂಜೀವಿ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಅಭಿಮಾನಿಗಳ ಮನದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಚಿತ್ರರಂಗ ಅಷ್ಟೇ ಅಲ್ಲ, ರಾಜಕೀಯಕ್ಕೂ ಅದ್ಧೂರಿಯಾಗಿ ಎಂಟ್ರಿ ಕೊಟ್ಟು ಚುನಾವಣಾ ಕಣದಲ್ಲಿ ಸೋಲು - ಗೆಲುವು ಕಂಡು ನಾಯಕನಾಗಿ ಹೊರಹೊಮ್ಮಿದ್ದಾರೆ.

ಮೆಗಾಸ್ಟಾರ್​ 157ನೇ ಸಿನಿಮಾ: ಚಿರಂಜೀವಿ ಅವರ ಹುಟ್ಟುಹಬ್ಬದ ಹಿನ್ನೆಲೆ ಅವರ 157ನೇ ಚಿತ್ರದ ಅಧಿಕೃತ ಘೋಷಣೆಯಾಗಿದೆ. ನಿರ್ಮಾಣ ಸಂಸ್ಥೆ ಯುವಿ ಕ್ರಿಯೇಷನ್ಸ್​ ಮಾಹಿತಿ ನೀಡಿದೆ. ಹೆಸರಿಡದ ಚಿತ್ರದ ಬಗ್ಗೆ ಮಾಹಿತಿ ನೀಡಲು ಇನ್​ಸ್ಟಾ ವೇದಿಕೆ ಬಳಸಿಕೊಂಡಿದೆ. ಲಕ್ಷಾಂತರ ಅಭಿಮಾನಿಗಳ ದೇವರು ಚಿರಂಜೀವಿ ತೆಲುಗು ಚಿತ್ರ ನಿರ್ಮಾಣ ಸಂಸ್ಥೆ ಯುವಿ ಕ್ರಿಯೇಷನ್ಸ್​ ಜೊತೆ ಕೈ ಜೋಡಿಸಿದೆ. ಇಂದು ನಟನ ಬರ್ತ್​ಡೇ ಹಿನ್ನಲೆ 157 ಚಿತ್ರದ ಪೋಸ್ಟರ್​ ಬಿಡುಗಡೆಯಾಗಿದೆ. ಈ ಮೂಲಕ ಮೆಗಾಸ್ಟಾರ್​ಗೆ ಬರ್ತ್​ಡೇ ಶುಭಾಶಯ ತಿಳಿಸಿದೆ.

ಬಿಂಬಿಸಾರ ಖ್ಯಾತಿಯ ಮಲ್ಲಿಡಿ ವಸಿಷ್ಠ ಕಥೆ ಬರೆದು ಚಿತ್ರ ನಿರ್ದೇಶಿಸುತ್ತಿದ್ದಾರೆ. ಆಸ್ಕರ್​ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎಂಎಂ ಕೀರವಾಣಿ ಸಂಗೀತ ನೀಡಲಿದ್ದಾರೆ. ಈಗಾಗಲೇ ಭೋಲಾ ಶಂಕರ್​ ಸೇರಿದಂತೆ ಸಾಲು ಸಾಲು ಫ್ಲಾಪ್​ ಸಿನಿಮಾಗಳನ್ನು ನೀಡಿರುವ ಚಿರಂಜೀವಿ ಅವರಿಗೆ ಈ ಸಿನಿಮಾ ಹಿಟ್​ ನೀಡಲಿದೆಯಾ ಎಂಬುದನ್ನು ಕಾದುನೋಡಬೇಕಿದೆ. ಪ್ರೇಕ್ಷಕರು ಕೂಡ ಮೆಗಾಸ್ಟಾರ್​ ಮುಂದಿನ ಸಿನಿಮಾದ ಬಗ್ಗೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: 'ಭೋಲಾಶಂಕರ್​​' ಉತ್ತಮ ಪ್ರದರ್ಶನ: ಸೌತ್​ನಲ್ಲೀಗ 'ಜೈಲರ್​'ನದ್ದೇ ಹವಾ

ಟಾಲಿವುಡ್​ ಚಿತ್ರರಂಗದಲ್ಲಿ ಚಿರಂಜೀವಿ ಅವರ ಡ್ಯಾನ್ಸ್​ಗೆ ಸಪರೇಟ್​ ಫಾನ್ಸ್​ ಪಾಲೋವರ್ಸ್​ ಇದ್ದಾರೆ. ಡ್ಯಾನ್ಸ್​ಗೆ ಕ್ರೇಜ್​ ತಂದುಕೊಟ್ಟ ಸ್ಟಾರ್​ ಯಾರಾದರೂ ಇದ್ದರೆ ಅದು ಚಿರು ಮಾತ್ರ. ಅವರು ಕೇವಲ ಕುಣಿಯುವುದು ಮಾತ್ರವಲ್ಲ, ಅವರ ಒಂದೊಂದು ಸ್ಟೆಪ್​ ಕೂಡ ಸಖತ್​ ಆಗಿರುತ್ತದೆ. ಅದೇ ಚಿರು ಅವರನ್ನು ಇತರ ನಟರಿಗಿಂತ ಭಿನ್ನವಾಗಿರುವಂತೆ ಮಾಡಿದೆ. ಇವರ ಹಲವು ಐಕಾನಿಕ್​ ಸ್ಟೆಪ್​ಗಳು ಟ್ರೆಂಡಿಂಗ್​ ಅಂತಲೇ ಹೇಳಬಹುದು. 'ನಾಡಕ ಮಿತ್ಸಿನ ನವರಾತ್ರಿ', 'ದೈದೈ ದಮ'ದಲ್ಲಿನ ಇವರ ಹೆಜ್ಜೆಗಳು ಸಿನಿ ಪ್ರೇಮಿಗಳ ಮನದಲ್ಲಿ ಸದಾ ನೆನಪಾಗಿ ಉಳಿದಿದೆ.

ಭೋಲಾ ಶಂಕರ್​ ಹಿನ್ನಡೆ: ಆಗಸ್ಟ್​ 11 ರಂದು ತೆರೆಕಂಡ ಚಿರಂಜೀವಿ ನಟನೆಯ 'ಭೋಲಾ ಶಂಕರ್​' ಸಿನಿಮಾ ಚಿತ್ರಮಂದಿರಗಳಲ್ಲಿ ಸೋಲು ಕಂಡಿತು. ಆರಂಭಿಕ ದಿನಗಳಲ್ಲಿ 16 ಕೋಟಿ ರೂಪಾಯಿ ಗಳಿಸಿದ್ದ ಚಿತ್ರ ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯುವಲ್ಲಿ ವಿಫಲವಾಯಿತು. ಭಾರಿ ನಿರೀಕ್ಷೆಯೊಂದಿಗೆ ಬಿಡುಗಡೆಯಾದ ಸಿನಿಮಾ ಅವರ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿತು. ನಂತರದ ದಿನಗಳಲ್ಲಿ ಬಾಕ್ಸ್​ ಆಫೀಸ್​ನಲ್ಲಿ ಚಿತ್ರದ ಗಳಿಕೆ ಕುಸಿಯಿತು. ಈವರೆಗೆ ಚಿತ್ರವು ಕೇವಲ 29.85 ಕೋಟಿ ರೂಪಾಯಿ ಗಳಿಸಿದೆ.

ಇದನ್ನೂ ಓದಿ: ಇಂದು ಚಿರಂಜೀವಿ ನಟನೆಯ 'ಭೋಲಾ ಶಂಕರ್' ರಿಲೀಸ್​: ಟ್ವಿಟರ್​ನಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆ ಹೀಗಿತ್ತು ನೋಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.