ETV Bharat / entertainment

'ಉಪಾಧ್ಯಕ್ಷ' ಟೀಸರ್​ ರಿಲೀಸ್​: ನಾನು 'ಹೀರೋ' ಎಂದಾಗ ಜನ ಚುಚ್ಚುಮಾತಿನಿಂದ ನೋಯಿಸಿದ್ದಾರೆ - ಚಿಕ್ಕಣ್ಣ - ಈಟಿವಿ ಭಾರತ ಕನ್ನಡ

ಚಿಕ್ಕಣ್ಣ ನಟನೆಯ 'ಉಪಾಧ್ಯಕ್ಷ' ಸಿನಿಮಾದ ಟೀಸರ್​ ಅನ್ನು ನಟರಾದ ದುನಿಯಾ ವಿಜಯ್​, ನೆನಪಿರಲಿ ಪ್ರೇಮ್​ ಹಾಗೂ ಅಭಿಷೇಕ್​ ಅಂಬರೀಶ್​ ಬಿಡುಗಡೆಗೊಳಿಸಿದರು.

Chikkanna starrer Upadhyaksha movie teaser released
'ಉಪಾಧ್ಯಕ್ಷ' ಟೀಸರ್​ ರಿಲೀಸ್
author img

By ETV Bharat Karnataka Team

Published : Oct 23, 2023, 10:01 AM IST

ಕಾಮಿಡಿ ಶೋಗಳಲ್ಲಿ ಅಭಿನಯಿಸುತ್ತಾ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಬಹುಬೇಡಿಕೆಯ ಹಾಸ್ಯ ನಟನಾಗಿ ಗುರುತಿಸಿಕೊಂಡವರು ಚಿಕ್ಕಣ್ಣ. ಇವರ ನಟನೆಯ ಮುಂಬರುವ ಬಹುನಿರೀಕ್ಷಿತ ಚಿತ್ರ 'ಉಪಾಧ್ಯಕ್ಷ'. ಈ ಸಿನಿಮಾದ ಮೂಲಕ ಚಿಕ್ಕಣ್ಣ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸೈಲೆಂಟ್​ ಆಗಿ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿರುವ 'ಉಪಾಧ್ಯಕ್ಷ' ಚಿತ್ರದ ಟೀಸರ್​ ಬಿಡುಗಡೆಯಾಗಿದೆ.

Chikkanna starrer Upadhyaksha movie teaser released
'ಉಪಾಧ್ಯಕ್ಷ' ಟೀಸರ್​ ರಿಲೀಸ್

ಅನಿಲ್​ ಕುಮಾರ್​ ನಿರ್ದೇಶನದ ಈ ಸಿನಿಮಾದ ಟೀಸರ್​ ಅನ್ನು ಸ್ಯಾಂಡಲ್​ವುಡ್​ ನಟರಾದ ದುನಿಯಾ ವಿಜಯ್​, ನೆನಪಿರಲಿ ಪ್ರೇಮ್​, ಅಭಿಷೇಕ್​ ಅಂಬರೀಶ್​ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಸಾಥ್​ ನೀಡಿದ್ದಾರೆ. ಈ ವೇಳೆ ನಟ ಧನ್ವೀರ್​, ಬಿಗ್​ ಬಾಸ್​ ಖ್ಯಾತಿಯ ಪ್ರಥಮ್​ ಹಾಗೂ ನಟಿ ಅದಿತಿ ಪ್ರಭುದೇವ, ನಿರ್ದೇಶಕರಾದ ಡಾ.ಸೂರಿ, ಮಹೇಶ್​ ಕುಮಾರ್​, ನಟ ಗರುಡ ರಾಮ್​, ಆನಂದ್​ ಆಡಿಯೋ ಶ್ಯಾಮ್​ ಉಪಸ್ಥಿತರಿದ್ದರು.

ಚಿಕ್ಕಣ್ಣ ಮತ್ತು ಮಲೈಕಾ ವಸುಪಾಲ್

ಟೀಸರ್​ ಅನಾವರಣಗೊಂಡ ಬಳಿಕ ಮಾತನಾಡಿದ ನಿರ್ದೇಶಕ ಅನಿಲ್​ ಕುಮಾರ್​, "ಇದು ಹಳ್ಳಿಯಲ್ಲಿ ನಡೆಯುವ ಕಥೆ. ಚಿಕ್ಕಣ್ಣನ‌ ಮ್ಯಾನರಿಸಂಗೆ ತಕ್ಕಂತೆ ಈ ಚಿತ್ರವನ್ನು ಮಾಡಲಾಗಿದೆ. ಅಧ್ಯಕ್ಷ ಸಿನಿಮಾದಲ್ಲಿ ಶರಣ್ ಹಾಗೂ ಚಿಕ್ಕಣ್ಣನ ಕಾಂಬಿನೇಷನ್ ಹಿಟ್ ಆಗಿತ್ತು. ಅದೇ ರೀತಿ ಉಪಾಧ್ಯಕ್ಷ ಚಿತ್ರ ಕೂಡ ಪ್ರೇಕ್ಷಕರಿಗೆ ಇಷ್ಟ ಆಗುತ್ತೆ. ಅಧ್ಯಕ್ಷ ಚಿತ್ರಕ್ಕೂ ಉಪಾಧ್ಯಕ್ಷ ಸಿನಿಮಾಗೂ ಒಂದು ಲಿಂಕ್ ಇದೆ" ಎಂದರು.

ಬಳಿಕ ನಟ ಚಿಕ್ಕಣ್ಣ ಮಾತನಾಡಿ, "ನಾನು ಹದಿಮೂರು ವರ್ಷದಿಂದ ನೋಡಿರದ ಕಷ್ಟವನ್ನು ಉಪಾಧ್ಯಕ್ಷ ಚಿತ್ರದ ನಾಯಕನಾದ ಕ್ಷಣದಿಂದ ನೋಡಿದ್ದೇನೆ. ನಾನು ಈ ಚಿತ್ರದ ನಾಯಕ ಅಂದಕೂಡಲೇ ಸಾಕಷ್ಟು ಜನ ಸಾಕಷ್ಟು ಮಾತನಾಡಿ ಮನಸ್ಸು ನೋಯಿಸಿದ್ದಾರೆ. ಆದರೆ ನಿರ್ಮಾಪಕ ಉಮಾಪತಿ ಅವರು ನನ್ನನ್ನು ಈ ಚಿತ್ರದ ಮೂಲಕ ನಾಯಕನನ್ನಾಗಿ ಮಾಡಿದ್ದಾರೆ. ಅಪಾರ ವೆಚ್ಚದಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಟೀಸರ್ ಬಿಡುಗಡೆ ಆಗಿದೆ. ಸಿನಿಮಾ ಕೂಡ ಎಲ್ಲರಿಗೂ ಇಷ್ಟ ಆಗುತ್ತದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಎಲ್ಲಾ ಭಾಷೆ ಅರ್ಥ ಆಗುತ್ತೆ, ಆದ್ರೆ ಮಾತನಾಡೋಕೆ ಕನ್ನಡ ಬಿಟ್ಟು ಬೇರೆ ಭಾಷೆ ಬರಲ್ಲ: ಹೈದರಾಬಾದ್​ನಲ್ಲಿ ಚಿಕ್ಕಣ್ಣ!

'ಉಪಾಧ್ಯಕ್ಷ' ಸಿನಿಮಾದಲ್ಲಿ ಚಿಕ್ಕಣ್ಣನಿಗೆ ಜೋಡಿಯಾಗಿ 'ಹಿಟ್ಲರ್​ ಕಲ್ಯಾಣ' ಧಾರಾವಾಹಿ ಖ್ಯಾತಿಯ ಮಲೈಕಾ ವಸುಪಾಲ್ ಅಭಿನಯಿಸಿದ್ದಾರೆ. ಕಿರುತೆರೆ ಲೋಕದ ಸುಂದರಿ ಈ ಚಿತ್ರದಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಚಿಕ್ಕಣ್ಣ, ಮಲೈಕಾ ಅಲ್ಲದೇ ರವಿಶಂಕರ್​, ಹಿರಿಯ ನಟ ಕರಿಸುಬ್ಬು, ಕೀರ್ತಿರಾಜ್​ ಜೊತೆಗೆ ಶರಣ್​ ಕೂಡ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಉಮಾಪತಿ ಫಿಲಂಸ್​ ಲಾಂಛನದಲ್ಲಿ ಸ್ಮಿತಾ ಉಮಾಪತಿ 'ಉಪಾಧ್ಯಕ್ಷ' ಸಿನಿಮಾ ನಿರ್ಮಾಣ ಮಾಡಿದ್ದಾರೆ. ಶೇಖರ್​ ಚಂದ್ರ ಕ್ಯಾಮರಾ ವರ್ಕ್​, ಅರ್ಜುನ್​ ಜನ್ಯ ಸಂಗೀತ, ಕೆ.ಎಲ್​ ರಾಜಶೇಖರ್​ ಸಂಭಾಷಣೆ ಚಿತ್ರಕ್ಕಿದೆ. ಸದ್ಯ ಟೀಸರ್​ನಿಂದ ಗಮನ ಸೆಳೆಯುತ್ತಿರುವ 'ಉಪಾಧ್ಯಕ್ಷ' ನವೆಂಬರ್​ ತಿಂಗಳಲ್ಲಿ ತೆರೆ ಕಾಣಲಿದೆ. ಈ ಚಿತ್ರದ ಮೂಲಕ ಮೊದಲ ಬಾರಿಗೆ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿರುವ ಚಿಕ್ಕಣ್ಣನಿಗೆ ಪ್ರೇಕ್ಷಕರು ಕೊಡೋ ಮಾರ್ಕ್ಸ್​ ಎಷ್ಟು ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಉಪಾಧ್ಯಕ್ಷ ಸಿನಿಮಾ‌ ಶೂಟಿಂಗ್ ಅಡ್ಡಕ್ಕೆ ಶಿವಣ್ಣ ಸರ್​​ಪ್ರೈಸ್​ ಭೇಟಿ.. ಚಿಕ್ಕಣ್ಣ, ಸಾಧು ಖುಷ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.