ETV Bharat / entertainment

ರಜನಿಕಾಂತ್ ಆಶೀರ್ವಾದದೊಂದಿಗೆ.. ಮೈಸೂರಿನಲ್ಲಿ 'ಚಂದ್ರಮುಖಿ-2' ಚಿತ್ರದ ಶೂಟಿಂಗ್​ ಆರಂಭಿಸಿದ ನಟ - Chandramukhi 2 shooting begins in Mysore

ನಟ ರಾಘವ್​ ಲಾರೆನ್ಸ್ 'ಚಂದ್ರಮುಖಿ-2' ಚಿತ್ರವನ್ನು ಮಾಡುತ್ತಿದ್ದು, ಸೂಪರ್​ ಸ್ಟಾರ್​ ರಜನಿಕಾಂತ್ ಆಶೀರ್ವಾದದೊಂದಿಗೆ ಮೈಸೂರಿನಲ್ಲಿ ಶೂಟಿಂಗ್ ಆರಂಭಿಸಿದ್ಧಾರೆ.

chandramukhi-2-shooting-begins-in-mysore-says-raghava-lawrence
ರಜನಿಕಾಂತ್ ಆಶೀರ್ವಾದದೊಂದಿಗೆ...ಮೈಸೂರಿನಲ್ಲಿ 'ಚಂದ್ರಮುಖಿ-2' ಚಿತ್ರದ ಶೂಟಿಂಗ್​ ಆರಂಭಿಸಿದ ನಟ
author img

By

Published : Jul 15, 2022, 10:54 PM IST

Updated : Jul 16, 2022, 2:42 PM IST

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ್ದ 'ಚಂದ್ರಮುಖಿ' ಚಿತ್ರದ ಸೀಕ್ವೆಲ್ ಬರುತ್ತಿದೆ. ತಮಿಳು ಮತ್ತು ತೆಲುಗಿನಲ್ಲಿ ಸೂಪರ್​ ಸ್ಟಾರ್​ ರಜನಿಕಾಂತ್ ಅಭಿನಯಿಸಿದ್ದರೆ, ಕನ್ನಡದ 'ಆಪ್ತಮಿತ್ರ' ಚಿತ್ರದಲ್ಲಿ ಸಾಹಸಸಿಂಹ ದಿ.ಡಾ.ವಿಷ್ಣುವರ್ಧನ ಮಾಡಿದ್ದರು. ಇದೀಗ 'ಚಂದ್ರಮುಖಿ-2' ಚಿತ್ರದಲ್ಲಿ ರಜನಿಕಾಂತ್ ಬದಲಿಗೆ ರಾಘವ್​ ಲಾರೆನ್ಸ್ ಮಾಡುತ್ತಿದ್ದಾರೆ. ಶುಕ್ರವಾರದಿಂದ ಮೈಸೂರಿನಲ್ಲಿ ಚಿತ್ರದ ಶೂಟಿಂಗ್ ಕೂಡ ಆರಂಭವಾಗಿದೆ.

ಹೌದು, ಈ ಬಗ್ಗೆ ಖುದ್ದು ನಟ ರಾಘವ್​ ಲಾರೆನ್ಸ್ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೇ, ಚಿತ್ರದ ಶೂಟಿಂಗ್​ ಆರಂಭಕ್ಕೂ ಮುನ್ನ ರಜನಿಕಾಂತ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿರುವ ಬಗ್ಗೆ ಲಾರೆನ್ಸ್​ ಟ್ವಿಟರ್​ ಮೂಲಕ ಬಹಿರಂಗ ಪಡಿಸಿದ್ದಾರೆ.

‘ಹಾಯ್ ಫ್ರೆಂಡ್ಸ್ ಮತ್ತು ಫ್ಯಾನ್ಸ್, ಇಂದು ನನ್ನ ತಲೈವರ್ ಮತ್ತು ಗುರು ರಜನಿಕಾಂತ್ ಆಶೀರ್ವಾದದೊಂದಿಗೆ ಮೈಸೂರಿನಲ್ಲಿ 'ಚಂದ್ರಮುಖಿ-2 ಶೂಟಿಂಗ್ ಪ್ರಾರಂಭವಾಗಿದೆ. ನನಗೆ ನಿಮ್ಮೆಲ್ಲರ ಹಾರೈಕೆಗಳ ಬೇಕು' ಎಂದು ಲಾರೆನ್ಸ್​ ಟ್ವೀಟ್​ ಮಾಡಿದ್ದು, ರಜನಿಕಾಂತ್ ಅವರ ಆಶೀರ್ವಾದ ಪಡೆದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಈ ಚಿತ್ರವನ್ನು ಪಿ.ವಾಸು ನಿರ್ದೇಶಿಸುತ್ತಿದ್ದು, ರಜನಿಕಾಂತ್​ ಚಿತ್ರದಲ್ಲಿ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ವಡಿವೇಲು ಮತ್ತೊಂದು ಪ್ರಮುಖ ಪಾತ್ರದಲ್ಲಿಅಭಿನಯಿಸಲಿದ್ದಾರೆ. ಚಿತ್ರಕ್ಕೆ ಎಂಎಂ ಕೀರವಾಣಿ ಸಂಗೀತ ಇರಲಿದೆ.

ಇದನ್ನೂ ಓದಿ: ಡಾ. ರಾಜ್ ಕುಮಾರ್ - ಪೃಥ್ವಿ ರಾಜ್ ಕಪೂರ್ ರಂತಹ ದಿಗ್ಗಜ ನಟರಿಗೆ ಮೇಕಪ್ ಮಾಡಿದ ಕೇಶವಣ್ಣ ನಿಧನ

Last Updated : Jul 16, 2022, 2:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.