ETV Bharat / entertainment

IND vs NZ: ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾದ ಸೆಲೆಬ್ರಿಟಿಗಳಿವರು - ವಿಕ್ಕಿ ಕೌಶಲ್

India vs New Zealand: ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹೈವೋಲ್ಟೇಜ್ ಪಂದ್ಯಕ್ಕೆ ಹಲವು ಸಿನಿಮಾ ನಟರು ಸಾಕ್ಷಿಯಾಗಿದ್ದಾರೆ.

celebrities who attended the India vs New Zealand match
ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾದ ಸೆಲೆಬ್ರಿಟಿಗಳಿವರು
author img

By ETV Bharat Karnataka Team

Published : Nov 15, 2023, 7:50 PM IST

Updated : Nov 15, 2023, 8:16 PM IST

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್​ ನಡುವೆ ಹೈವೋಲ್ಟೇಜ್​ ಪಂದ್ಯ ನಡೆಯುತ್ತಿದೆ. ವಿಶ್ವಕಪ್​ 2023ರ ಮೊದಲ ಸೆಮಿಫೈನಲ್​​ ಪಂದ್ಯದಲ್ಲಿ ಇಂಡಿಯನ್​ ಕ್ರಿಕೆಟ್​ ಟೀಮ್ ರನ್​​ಗಳ ಮಹಾಪೂರವನ್ನೇ ಹರಿಸಿದೆ. ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ರೋಹಿತ್​ ಶರ್ಮಾ ನೇತೃತ್ವದ ತಂಡ 50 ಓವರ್​ಗಳಲ್ಲಿ 397 ರನ್​ ಗಳಿಸಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಸಿನಿಮಾ ಸೆಲೆಬ್ರಿಟಿಗಳು ಸಾಕ್ಷಿಯಾಗಿದ್ದು, ಸೋಷಿಯಲ್​ ಮೀಡಿಯಾದಲ್ಲಿ ತಾರೆಯರ ಫೋಟೋ, ವಿಡಿಯೋಗಳು ಸಖತ್​ ಸದ್ದು ಮಾಡುತ್ತಿವೆ.

ಮುಂಬೈನ ಪ್ರಸಿದ್ಧ ವಾಂಖೆಡೆ ಸ್ಟೇಡಿಯಂನಲ್ಲಿ ವಿಶ್ವಕಪ್‌ನ ಮೊದಲ ಸೆಮಿಫೈನಲ್ ಹಣಾಹಣಿಯಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಹೈವೋಲ್ಟೇಜ್ ಪಂದ್ಯ ಏರ್ಪಟ್ಟಿದೆ. ಪಂದ್ಯದಲ್ಲಿ ಬಾಲಿವುಡ್​​​ ತಾರೆಯರಾದ ಅನುಷ್ಕಾ ಶರ್ಮಾ, ರಣ್​​​​ಬೀರ್ ಕಪೂರ್, ಕಿಯಾರಾ ಅಡ್ವಾಣಿ, ಸಿದ್ಧಾರ್ಥ್ ಮಲ್ಹೋತ್ರಾ, ಜಾನ್ ಅಬ್ರಹಾಂ, ವಿಕ್ಕಿ ಕೌಶಲ್, ಶಾಹಿದ್​ ಕಪೂರ್​​ ಸೇರಿದಂತೆ ಹಲವು ಸೆಲೆಬ್ರಿಟಿಗಳು ಕಾಣಿಸಿಕೊಂಡಿದ್ದಾರೆ.

ಪಂದ್ಯ ಪ್ರಾರಂಭವಾಗುವ ಮೊದಲೇ ಅನಿಮಲ್​ ಸಿನಿಮಾ ಬಿಡುಗಡೆಗೆ ಸಜ್ಜಾಗಿರುವ ರಣ್​​​ಬೀರ್ ಕಪೂರ್ ಭಾರತಕ್ಕೆ ತಮ್ಮ ಬೆಂಬಲ ಸೂಚಿಸಲು ಆಗಮಿಸಿದರು. ಬಾಲಿವುಡ್​ ಲವ್ ಬರ್ಡ್ಸ್ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಕೂಡ ಕ್ರೀಡಾಂಗಣದಲ್ಲಿ ಉಪಸ್ಥಿತರಿದ್ದಾರೆ. ಜಾನ್ ಅಬ್ರಹಾಂ ಜೊತೆಗೆ ಈ ಜೋಡಿ ಕಂಡು ಬಂದಿದ್ದು, ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ವರ್ಸಸ್ ನ್ಯೂಜಿಲೆಂಡ್ ಪಂದ್ಯವನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ. ರಣ್​ಬೀರ್​ ಕಪೂರ್ ಇಂಡಿಯನ್ ಕ್ರಿಕೆಟ್ ಜೆರ್ಸಿ ಧರಿಸಿದ್ದು, ಎಲ್ಲರೂ ಒಂದೇ ಫ್ರೇಮ್​ನಲ್ಲಿ ಕಂಡುಬಂದರು. ತಾರಾ ದಂಪತಿ ಕಿಯಾರಾ ಮತ್ತು ಸಿದ್ಧಾರ್ಥ್ ಮ್ಯಾಚಿಂಗ್​​ ವೈಟ್​ ಡ್ರೆಸ್​ನಲ್ಲಿ ಕಾಣಿಸಿಕೊಂಡಿದ್ದಾರೆ. ನಟ ಜಾನ್ ಅಬ್ರಹಾಂ ಬ್ಲ್ಯಾಕ್​ ಟೀ ಶರ್ಟ್​ನಲ್ಲಿ ಸಖತ್​ ಹ್ಯಾಡ್ಸಂ ಆಗಿ ಕಾಣಿಸಿಕೊಂಡರು.

ಇದನ್ನೂ ಓದಿ: ಯುರೋಪ್‌ನಲ್ಲಿ 5ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ದೀಪ್​ವೀರ್​: ರಾಮ್ ಲೀಲಾ ಸಿನಿಮಾಗೆ 10 ವರ್ಷ

ವಿರುಷ್ಕಾ ಫ್ಲೈಯಿಂಗ್​ ಕಿಸ್ ವಿಡಿಯೋ: ಇನ್ನು, ವಿರುಷ್ಕಾ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದೆ. ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಅಭಿನೇತ್ರಿ ಅನುಷ್ಕಾ ಶರ್ಮಾ ಎಂದಿನಂತೆ ಪತಿ ವಿರಾಟ್​ ಕೊಹ್ಲಿ ಅವರನ್ನು ಹುರಿದುಂಬಿಸಲು ಸ್ಟೇಡಿಯಂನಲ್ಲಿ ಹಾಜರಿದ್ದಾರೆ. ವಿರಾಟ್​ ಕೊಹ್ಲಿ 50ನೇ ಶತಕ ಗಳಿಸಿ ಕ್ರಿಕೆಟ್​​ ದಿಗ್ಗಜ ಸಚಿನ್​ ತೆಂಡೂಲ್ಕರ್​​ ರೆಕಾರ್ಡ್​ ಬ್ರೇಕ್​ ಮಾಡಿದ್ದಾರೆ. ವಿರಾಟ್​ ಕೊಹ್ಲಿ ಆಟದ ಸಂದರ್ಭ ಪತ್ನಿ ಅನುಷ್ಕಾ ಶರ್ಮಾ ಅವರ ಪ್ರಾರ್ಥನೆ, ಸಂತಸದ ಕ್ಷಣ ಎಲ್ಲವೂ ಕ್ಯಾಮರಾದಲ್ಲಿ ಸೆರೆಯಾಗಿದೆ. ಪದೇ ಪದೇ ಕೈ ಮುಗಿದು ಪ್ರಾರ್ಥಿಸಿಕೊಳ್ಳುತ್ತಿದ್ದ ಅನುಷ್ಕಾ ಶರ್ಮಾ ಅವರು, ವಿರಾಟ್​ ಕೊಹ್ಲಿ 50ನೇ ಶತಕ ದಾಖಲಿಸುತ್ತಿದ್ದಂತೆ ಮುತ್ತಿನ ಮಳೆ ಸುರಿಸಿದ್ದಾರೆ. ಸ್ಟೇಡಿಯಂನಲ್ಲಿ ವಿರಾಟ್​ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಪರಸ್ಪರ ಫ್ಲೈಯಿಂಗ್​ ಕಿಸ್ ಮಾಡಿದ್ದು, ವೈರಲ್​​ ವಿಡಿಯೋಗಳು ಅಭಿಮಾನಿಗಳ ಹೃದಯ ಕದ್ದಿದೆ.

  • #WATCH | Tamil Nadu: Actor Rajinikanth leaves from Chennai airport to witness the World Cup semi-finals scheduled to be played at Wankhede Stadium in Mumbai.

    "I am going to see the match..," says Actor Rajinikanth pic.twitter.com/yWg1WpRHXX

    — ANI (@ANI) November 14, 2023 " class="align-text-top noRightClick twitterSection" data=" ">

ಇದನ್ನೂ ಓದಿ: ತೆಂಡೂಲ್ಕರ್ ದಾಖಲೆ ಪುಡಿಗಟ್ಟಿದ 'ವಿರಾಟ': ಕೊಹ್ಲಿಗೆ ಪತ್ನಿಯಿಂದ ಮುತ್ತಿನ ಸುರಿಮಳೆ ವಿರುಷ್ಕಾ ವಿಡಿಯೋ

Last Updated : Nov 15, 2023, 8:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.