ETV Bharat / entertainment

ಕ್ಯಾನ್ಸ್ ಚಲನಚಿತ್ರೋತ್ಸವ 2023: ನಕಲಿ ರಕ್ತವನ್ನು ಸುರಿದುಕೊಂಡು ಉಕ್ರೇನಿಯನ್ ಬ್ಲಾಗರ್ ಪ್ರತಿಭಟನೆ

ಉಕ್ರೇನಿಯನ್ ಬ್ಲಾಗರ್​ರೊಬ್ಬರು ಉಕ್ರೇನ್ ಮೇಲೆ ರಷ್ಯಾದ ದಾಳಿಯನ್ನು ಖಂಡಿಸಿ ಕ್ಯಾನ್ಸ್ ಚಲನಚಿತ್ರೋತ್ಸವದಲ್ಲಿ ನಕಲಿ ರಕ್ತವನ್ನು ಸುರಿದುಕೊಂಡು ಪ್ರತಿಭಟನೆ ನಡೆಸಿದ್ದಾರೆ.

author img

By

Published : May 23, 2023, 4:20 PM IST

cannes-2023-blogger-pours-fake-blood-on-herself-while-dressed-in-ukrainian-colo
ಕ್ಯಾನ್ಸ್ ಚಲನಚಿತ್ರೋತ್ಸವ 2023: ನಕಲಿ ರಕ್ತವನ್ನು ಸುರಿದುಕೊಂಡು ಉಕ್ರೇನಿಯನ್ ಬ್ಲಾಗರ್ ಪ್ರತಿಭಟನೆ

ಕ್ಯಾನ್ಸ್(ಫ್ರಾನ್ಸ್): ಕ್ಯಾನ್ಸ್ ಚಲನಚಿತ್ರೋತ್ಸವ 2023 ರಲ್ಲಿ ಫ್ರೆಂಚ್ ಚಲನಚಿತ್ರ ನಿರ್ಮಾಪಕ ಜಸ್ಟ್ ಫಿಲಿಪ್ಪಾಟ್ ನಿರ್ದೇಶನದ 'ಆ್ಯಸಿಡೆ' ಚಿತ್ರದ ಪ್ರದರ್ಶನದ ವೇಳೆ ಉಕ್ರೇನ್ ಬ್ಲಾಗರ್ ಇಲೋನಾ ಚೆರ್ನೊಬೆ ಉಕ್ರೇನ್ ಮೇಲೆ ರಷ್ಯಾದ ದಾಳಿಯನ್ನು ಖಂಡಿಸಿ ಪ್ರತಿಭಟನೆ ನಡೆಸಿರುವ ಘಟನೆ ಭಾನುವಾರ ನಡೆದಿದೆ. ಉಕ್ರೇನ್ ಧ್ವಜದ ಬಣ್ಣಗಳಾದ ನೀಲಿ ಮತ್ತು ಹಳದಿ ಬಣ್ಣದ ಉಡುಪು ಧರಿಸಿದ್ದ ಇಲೋನಾ ಚೆರ್ನೊಬೆ ರೆಡ್​ ಕಾರ್ಪೆಟ್ ಮೆಟ್ಟಿಲುಗಳ ಮೇಲೆ ನಿಂತು ತನ್ನ ಮೇಲೆ ನಕಲಿ ರಕ್ತವನ್ನು ಸುರಿದುಕೊಂಡು ಕುತೂಹಲ ಸೃಷ್ಟಿಸಿದರು. ಇದರಿಂದ ತಕ್ಷಣ ಎತ್ತೆಚ್ಚುಕೊಂಡ ಭದ್ರತಾ ಸಿಬ್ಬಂದಿ ಅವರನ್ನು ಹಿಡಿದು ಮೆಟ್ಟಿಲುಗಳಿಂದ ಕೆಳಗಿಳಿಸಿದರು.

ಸದ್ಯ ಈ ಘಟನೆಯ ಹಲವಾರು ಫೋಟೋಗಳು ಮತ್ತು ವಿಡಿಯೋಗಳು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ವಿಡಿಯೋದಲ್ಲಿ, ಇಲೋನಾ ಚೆರ್ನೊಬೆ ಕೆಂಪು ಬಣ್ಣದ ಎರಡು ಕ್ಯಾಪ್ಸುಲ್‌ಗಳನ್ನು ಹೊರತೆಗೆಯುವುದನ್ನು ಕಾಣಬಹುದು. ಅದನ್ನು ತನ್ನ ಮೇಲೆ ಸುರಿಯುವ ಮೊದಲು, ಆಕೆ ಕ್ಯಾಮೆರಾಗಳಿಗಾಗಿ ಕಡೆ ತಿರುಗಿ ಮುಗುಳ್ನಕ್ಕು ತನ್ನ ಮೈ ಮೇಲೆ ನಕಲಿ ರಕ್ತವನ್ನು ಸುರಿದುಕೊಂಡಿದ್ದಾರೆ. ಈ ವೇಳೆ ಭದ್ರತಾ ಸಿಬ್ಬಂದಿ ಕೂಡಲೇ ಅವರನ್ನು ಮೆಟ್ಟಿಲುಗಳಿಂದ ಕೆಳಗಿಳಿಸಿ ಕಾರ್ಯಕ್ರಮದಿಂದ ಹೊರಗೆ ಕರೆದೊಯ್ದಿದ್ದಾರೆ.

ಈ ಘಟನೆಯ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಕೂಡಲೇ, ಸಾವಿರಾರು ಅಭಿಮಾನಿಗಳು ಕಾಮೆಂಟ್ ವಿಭಾಗದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. "ಆ ಮಹಿಳೆ ಒಳ್ಳೆಯವರು" ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು, "ಆಕೆ ಸರಿಯಾಗಿಯೇ ಮಾಡಿದ್ದಾಳೆ!" ಎಂದು ಕಾಮೆಂಟ್ ಬರೆದಿದ್ದಾರೆ. ಮತ್ತೆ ಕೆಲವರು "ಅವಳು ಅದ್ಭುತವಾಗಿ ಕಾಣುತ್ತಿದ್ದಾಳೆ ! " ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

  • A woman wearing a dress the color of the Ukrainian flag at the Cannes Film Festival spilled fake blood on her to draw attention to the Russian invasion of Ukraine pic.twitter.com/VOap2CSnas

    — Vega (@Vega12991453) May 22, 2023 " class="align-text-top noRightClick twitterSection" data=" ">

ಫೆಬ್ರವರಿ 24, 2022 ರಂದು ಪ್ರಾರಂಭವಾದ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಲಕ್ಷಾಂತರ ಅಮಾಯಕರು ತಮ್ಮ ಜೀವಗಳನ್ನು ಕಳೆದುಕೊಂಡಿದ್ದರು. ಉಭಯ ದೇಶಗಳ ನಡುವೆ ಯುದ್ಧವು ಇಂದಿಗೂ ಮುಂದುವರೆಯುತ್ತಲೇ ಇದೆ. ಉಕ್ರೇನ್​ನಲ್ಲಿ ಸಮಗ್ರ, ನ್ಯಾಯಯುತ ಮತ್ತು ಶಾಶ್ವತ ಶಾಂತಿಯನ್ನು ಸ್ಥಾಪಿಸಲು, ಜಪಾನ್​ನ ಹಿರೋಶಿಮಾದಲ್ಲಿ ಇತ್ತೀಚೆಗೆ ನಡೆದ ಶೃಂಗಸಭೆಯಲ್ಲಿ ಜಿ7 ಸದಸ್ಯರು ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಆಕ್ರಮಣವನ್ನು ನಿಲ್ಲಿಸುವಂತೆ ಮತ್ತು ತಕ್ಷಣವೇ ಸಂಪೂರ್ಣವಾಗಿ ಹಾಗೂ ಬೇಷರತ್ತಾಗಿ ಉಕ್ರೇನ್​ನ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಪ್ರದೇಶದಿಂದ ತನ್ನ ಸೈನ್ಯವನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಒತ್ತಾಯಿಸಿದರು.

ಇನ್ನು, ಫ್ರಾನ್ಸ್‌ನ ಕ್ಯಾನೆಸ್ ನಗರದ ಕರಾವಳಿ ಪ್ರದೇಶವಾದ ಫ್ರೆಂಚ್ ರಿವೇರಿಯಾದಲ್ಲಿ 76ನೇ ಕ್ಯಾನ್ಸ್ ಚಲನಚಿತ್ರೋತ್ಸ ನಡೆಯುತ್ತಿದೆ. ಚಲನಚಿತ್ರೋತ್ಸದಲ್ಲಿ ಭಾರತದಿಂದ ಸಾರಾ ಅಲಿ ಖಾನ್, ಮೃಣಾಲ್ ಠಾಕೂರ್, ಮೌನಿ ರಾಯ್ ಮತ್ತು ಸನ್ನಿ ಲಿಯೋನ್ ಸೇರಿದಂತೆ ಬಾಲಿವುಡ್‌ನ ಅನೇಕ ನಟಿಯರು ಪಾಲ್ಗೂಂಡಿದ್ದಾರೆ. ಬಾಲಿವುಡ್‌ನ 'ಬೇಬಿ ಡಾಲ್' ಸನ್ನಿ ಲಿಯೋನ್, ನಿರ್ದೇಶಕ ಅನುರಾಗ್ ಕಶ್ಯಪ್ ಮತ್ತು ನಟ ರಾಹುಲ್ ಭಟ್ ಅವರೊಂದಿಗೆ ತನ್ನ 'ಕೆನಡಿ' ಚಿತ್ರದ ಪ್ರದರ್ಶನಕ್ಕಾಗಿ ಕೇನ್ಸ್‌ಗೆ ಆಗಮಿಸಿದ್ದು, ಈ ವೇಳೆ ಸನ್ನಿ ಫ್ರೆಂಚ್ ರಿವೇರಿಯಾ ಸಿಟಿಯ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಹಸಿರು ಕಟ್ ಔಟ್ ಗೌನ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:ಆರ್​ಆರ್​ಆರ್​ ಸಿನಿಮಾದ ಬ್ರಿಟಿಷ್​ ಅಧಿಕಾರಿ ರೇ ಸ್ಟೀವನ್​ಸನ್​ ನಿಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.