ನಟ ಶಿವರಾಜ್ ಕುಮಾರ್ ಅಭಿನಯದ, ನಟ ಉಪೇಂದ್ರ ನಿರ್ದೇಶನದ ಮಾಸ್ಟರ್ ಪೀಸ್ ಸಿನಿಮಾ ಓಂ. ಈ ಸಿನಿಮಾದಿಂದ ಸಾಕಷ್ಟು ಕಲಾವಿದರು ಬೆಳಕಿಗೆ ಬಂದರು. ಅದರಲ್ಲಿ ಡಾನ್ ರೈ ಪಾತ್ರ ಮಾಡಿ ರಾತ್ರೋರಾತ್ರಿ ಖ್ಯಾತಿ ಪಡೆದ ನಟ ಹರೀಶ್ ರೈ. ಆ ಸಿನಿಮಾ ಮೂಲಕ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ಖಳ ನಟರಾಗಿ ಸಿಲ್ವರ್ ಸ್ಕ್ರೀನ್ ಮೇಲೆ ಅಬ್ಬರಿಸಿದ್ದಾರೆ. ಯಶ್ ಅಭಿನಯದ ಕೆಜಿಎಫ್ ಸಿನಿಮಾದಲ್ಲಿ ರಾಕಿ ಭಾಯ್ ಪ್ರೀತಿಯ ಚಾಚ ಹರೀಶ್ ರೈಗೆ ಕ್ಯಾನ್ಸರ್ ತಗುಲಿದ್ದು, ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ.
ಆರೋಗ್ಯ ಸರಿಪಡಿಸಿಕೊಳ್ಳಲು ಹಣಕಾಸಿನ ಅವಶ್ಯಕತೆ ಇದೆ. ಈ ಬಗ್ಗೆ ಈಟಿವಿ ಭಾರತ ಜೊತೆ ಮಾತನಾಡಿರೋ ಖಳನಾಯಕ ಹರೀಶ್ ರೈ, ತಾವು ಅನಾರೋಗ್ಯದಿಂದ ಬಳಲುತ್ತಿದ್ದು, ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಹರೀಶ್ ರೈ ಹೇಳುವಂತೆ, ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಥೈರಾಯ್ಡ್ ಮುಂದೆ ಕ್ಯಾನ್ಸರ್ ಆಗಿ ಬದಲಾಗಿದೆ. ಸದ್ಯ ಆಪರೇಷನ್ ಮಾಡಿಸಿದ್ದಾರೆ. ಆದರೆ ಶ್ವಾಸಕೋಶಕ್ಕೆ ತೊಂದರೆ ಆಗಿದೆ. ಸೂಕ್ತ ಚಿಕಿತ್ಸೆ ಪಡೆಯಲು ಆರ್ಥಿಕ ಸಮಸ್ಯೆ ಎದುರಾಗಿದೆ ಅಂತಾ ತಿಳಿದ್ದಾರೆ. ಈಗಾಗಲೇ ಚಿತ್ರರಂಗದ ನಟರು, ನಿರ್ಮಾಪಕರು ಸಹಾಯ ಮಾಡುವುದಾಗಿ ಭರವಸೆ ಕೊಟ್ಟಿದ್ದಾರೆ. ಸದ್ಯ ಹರೀಶ್ ಅವರ ಆರೋಗ್ಯ ಸ್ಥಿತಿ ಸ್ವಲ್ಪ ಸುಧಾರಿಸಿದೆ. ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದಿಂದ ಹರೀಶ್ ರೈಗೆ ಹೆಚ್ಚಿನ ಹಣಕಾಸಿನ ಸಹಾಯ ಮಾಡಬೇಕಿದೆ.
ಇದನ್ನೂ ಓದಿ: ಸೋನಾಲಿ ಫೋಗಟ್ ಸಾವು-ಸಹಾಯಕರು ಅತ್ಯಾಚಾರವೆಸಗಿ ಕೊಲೆಗೈದಿದ್ದಾರೆ: ಕುಟುಂಬಸ್ಥರ ಆರೋಪ