ಈ ವರ್ಷ ತೆರೆಕಂಡ ಎಸ್.ಎಸ್.ರಾಜಮೌಳಿ ನಿರ್ದೇಶನದ ಆರ್ಆರ್ಆರ್, ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 2, ಅಯಾನ್ ಮುಖರ್ಜಿ ಕಲ್ಪನೆಯ ಬ್ರಹ್ಮಾಸ್ತ್ರ ಬಾಕ್ಸ್ ಆಫೀಸ್ನಲ್ಲಿ ಕೊಳ್ಳೆ ಹೊಡೆದ ಚಿತ್ರಗಳು. ನಟರಿಗೆ ಅಷ್ಟೇ ಅಲ್ಲ, ಸಿನಿಮಾಕ್ಕಾಗಿಯೂ ಹಣದ ಹೊಳೆ ಹರಿಸಿದ ಈ ಚಿತ್ರಗಳು ನಿರ್ಮಾಪಕರಿಗೂ ಭರ್ಜರಿ ಗೆಲುವು ತಂದು ಕೊಟ್ಟಿವೆ.
ಅಯಾನ್ ಮುಖರ್ಜಿ ಅಭಿನಯದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ 'ಬ್ರಹ್ಮಾಸ್ತ್ರ' ಬಿಡುಗಡೆಯಾಗಿ ವಾರ ಕಳೆದಿದ್ದು ಬಾಕ್ಸ್ ಆಫೀಸ್ನಲ್ಲಿ ಮುನ್ನುಗ್ಗುತ್ತಿದೆ. ವಾರಾಂತ್ಯದವರೆಗೂ ಉತ್ತಮ ಪ್ರದರ್ಶನ ನೀಡುತ್ತಿದ್ದ ಸಿನಿಮಾ ನಂತರದಲ್ಲಿ ಕಲೆಕ್ಷನ್ ಮಾಡುವುದರಲ್ಲಿ ಕೊಂಚ ಹಿಂದೆ ಬಿತ್ತು. ಆದರೆ, ಬಾಕಿ ಚಿತ್ರಗಳಿಗೆ ಪೈಪೋಟಿ ನೀಡಿದ್ದು ಮಾತ್ರ ಸುಳ್ಳಲ್ಲ.
ಬ್ರಹ್ಮಾಸ್ತ್ರ ಚಿತ್ರದ ಗಳಿಕೆ: ಆರ್ಆರ್ಆರ್, ಕೆಜಿಎಫ್ 2, ಬ್ರಹ್ಮಾಸ್ತ್ರ ಈ ವರ್ಷದ ಬಿಗ್ ಬಜೆಟ್ ಚಿತ್ರಗಳಾಗಿದ್ದು ತೆರೆಕಂಡ ವಾರದಲ್ಲಿ ಯಾವ ಚಿತ್ರ ಎಷ್ಟು ಹಣ ಗಳಿಸಿತು ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ. ಹೀಗಾಗಿ, ಈ ಮೂರು ಚಿತ್ರಗಳನ್ನು ತುಲನೆ ಮಾಡಲಾಗುತ್ತಿದೆ. ಸಿನಿಮಾ ಮಾರುಕಟ್ಟೆ ತಜ್ಞರುಗಳ ಪ್ರಕಾರ 'ಬ್ರಹ್ಮಾಸ್ತ್ರಂ' ವಾರಾಂತ್ಯದಲ್ಲಿ ಒಟ್ಟು 205 ಕೋಟಿ ರೂ. ಕಲೆಕ್ಷನ್ (ಭಾರತ - 141 ಕೋಟಿ, ಸಾಗರೋತ್ತರ - ರೂ. 64 ಕೋಟಿ) ಮಾಡಿದೆಯಂತೆ.
KGIF2 ಮತ್ತು RRR ಗಳಿಕೆ ಎಷ್ಟು?: ಯಶ್ ನಾಯಕನಾಗಿ ಪ್ರಶಾಂತ್ ನೀಲ್ ನಿರ್ದೇಶನದ ಬ್ಲಾಕ್ ಬಸ್ಟರ್ ಚಿತ್ರ 'ಕೆಜಿಎಫ್ 2' ಬಿಡುಗಡೆಯಾದ ಮೊದಲ ವಾರದಲ್ಲಿ ಎಲ್ಲ ಭಾಷೆಗಳಲ್ಲಿ 193 ಕೋಟಿ ರೂ. (ಭಾರತ + ಸಾಗರೋತ್ತರ) ಕಲೆಕ್ಷನ್ ಮಾಡಿದೆ. ಮೊದಲ (ಕೆಜೆಎಫ್ 1) ಭಾಗಕ್ಕೆ ಹೋಲಿಸಿದರೆ ಎರಡನೇ (ಕೆಜೆಎಫ್ 2) ಭಾಗ ಕಲೆಕ್ಷನ್ ವಿಚಾರದಲ್ಲಿ ಸಖತ್ ಸದ್ದು ಮಾಡಿತು. ಸ್ಯಾಂಡಲ್ವುಡ್ ಚಿತ್ರವೊಂದು ಈ ಪ್ರಮಾಣದಲ್ಲಿ ಹಣ ಗಳಿಕೆ ಮಾಡಿದ್ದು ಇದೇ ಮೊದಲು.
ಅದರಂತೆ, ಮಲ್ಟಿಸ್ಟಾರರ್ ಆರ್ಆರ್ಆರ್ ಚಿತ್ರ ಕೂಡ ದಾಖಲೆ ಬರೆಯಿತು. ಇದು ಎಪಿಕ್ ಆ್ಯಕ್ಷನ್ ಡ್ರಾಮಾವಾಗಿದ್ದು, ಎನ್‌ಟಿಆರ್ ಮತ್ತು ರಾಮಚರಣ್ ನಟಿಸಿದ್ದಾರೆ. ‘ಬಾಹುಬಲಿ’ ನಂತರ ರಾಜಮೌಳಿ ಅವರ ಸಿನಿಮಾ ಇದಾಗಿದ್ದು ಹಾಗೂ ಇಬ್ಬರು ಸ್ಟಾರ್ ಹೀರೋಗಳು ನಟಿಸುತ್ತಿರುವುದರಿಂದ ಮೊದಲಿನಿಂದಲೂ ಈ ಚಿತ್ರಕ್ಕೆ ಉತ್ತಮ ನಿರೀಕ್ಷೆ ಇತ್ತು.
ತೆಲುಗು ಹೊರತಾಗಿ ಇದು ಪ್ಯಾನ್ ಇಂಡಿಯಾ ಚಲನಚಿತ್ರವಾಗಿ ಇತರ ಭಾಷೆಗಳಲ್ಲಿ ಬಿಡುಗಡೆಯಾಯಿತು. ಟ್ರೇಡ್ ಮೂಲಗಳ ಅಂದಾಜಿನ ಪ್ರಕಾರ, ಹಿಂದಿ ಅವತರಣಿಕೆ ಮಾತ್ರ ದೇಶಾದ್ಯಂತ ಮೊದಲ ವಾರಾಂತ್ಯದಲ್ಲಿ ರೂ.75.57 ಕೋಟಿ ಕಲೆಕ್ಷನ್ ಮಾಡಿದ್ದು, ಒಟ್ಟು 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ.
ಇದನ್ನೂ ಓದಿ: 8 ಗಂಟೆ ತನಿಖೆ ಎದುರಿಸಿದ ನಟಿ ಜಾಕ್ವೆಲಿನ್ ಫರ್ನಾಂಡಿಸ್: ಇಂದು ನೋರಾ ಫತೇಹಿ ವಿಚಾರಣೆ