ಬಾಲಿವುಡ್ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟ ಅಕ್ಷಯ್ ಕುಮಾರ್. ವರ್ಷದಲ್ಲಿ ಕನಿಷ್ಟ ಎಂದರೂ ನಾಲ್ಕು- ಐದು ಚಿತ್ರಗಳ ಆಫರ್ ಹೊಂದಿರುವ ನಟ ಇವರಾಗಿದ್ದಾರೆ. ತಮ್ಮ ಬಿಡುವಿರದ ಸಿನಿಮಾ ಶೂಟಿಂಗ್ ನಡುವೆಯೂ ನಟ ಅಕ್ಷಯ್ ಕುಟುಂಬಕ್ಕೆ ಹೆಚ್ಚಿನ ಸಮಯ ಕೊಡುತ್ತಾರೆ. ಬಾಲಿವುಡ್ ನಟಿಯನ್ನೇ ವರಿಸಿರುವ ಅಕ್ಷಯ್ ಕುಮಾರ್ ಅವರ ಜೋಡಿ ಬಾಲಿವುಡ್ನ ಪವರ್ ಕಪಲ್ ಎಂಬ ಖ್ಯಾತಿಯನ್ನು ಪಡೆದಿದೆ. ಸಾಮಾಜಿಕ ಜೀವನದ ಕುರಿತು ಸಾಮಾಜಿಕ ಜಾಲತಾಣದಲ್ಲೂ ಕೂಡ ಆಗ್ಗಿಂದಾಗೆ ಅವರು ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇಂದು ಅವರ ವಿವಾಹ ವಾರ್ಷಿಕೋತ್ಸವ ಹಿನ್ನೆಲೆ ಅವರು ವಿಶೇಷ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಹೆಂಡತಿ ಟ್ವಿಂಕಲ್ ಖನ್ನಾಗೆ ಶುಭ ಕೋರಿದ್ದಾರೆ.
ನಟ ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ವಿವಾಹ ಬಂಧನಕ್ಕೆ ಒಳಗಾಗಿ 22 ವರ್ಷಗಳು ಕಳೆದಿವೆ. ತಮ್ಮ ಈ ಪಯಣದ ಕುರಿತು ಬಾಲಿವುಡ್ನ ಜೋಡಿಗಳು ಪರಸ್ಪರ ಶುಭ ಹಾರೈಸಿಕೊಂಡಿದ್ದಾರೆ. ಬಾಲಿವುಡ್ ಕಿಲಾಡಿ ಹೆಂಡತಿಯೊಟ್ಟಿಗಿನ ಮುದ್ದಾದ ಫೋಟೋವನ್ನು ಹಂಚಿಕೊಳ್ಳುವ ಮೂಲಕ ತಮ್ಮ ಈ ಜೀವನದ ಪಯಣದ ಜೊತೆಗಾರ್ತಿಗೆ ಶುಭ ಹಾರೈಸಿದ್ದಾರೆ. ಇಬ್ಬರು ಅಪರಿಪೂರ್ಣ ವ್ಯಕ್ತಿಗಳು 22 ವರ್ಷಗಳಿಂದ ಜೊತೆಯಾಗುವ ಮೂಲಕ ಪರಿಪೂರ್ಣವಾಗಿದ್ದಾರೆ. ವಾರ್ಷಿಕೋತ್ಸವದ ಶುಭಾಶಯಗಳು ಎಂದು ಎಮೋಜಿ ಮೂಲಕ ಹೆಂಡತಿಗೆ ಶುಭ ಕೋರಿದ್ದಾರೆ ಅಕ್ಷಯ್.
- " class="align-text-top noRightClick twitterSection" data="
">
ಅಕ್ಷಯ್ ಮತ್ತು ಟ್ವಿಂಕಲ್ ಖನ್ನಾ 2001ರ ಜನವರಿ 17ರಂದು ಅಧಿಕೃತವಾಗಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಅವರಿಗೆ ಆರವ್ ಎಂಬ ಮಗ ಮತ್ತು ನಿತಾರಾ ಎಂಬ ಮಗಳಿದ್ದಾಳೆ. ಈ ಇಬ್ಬರು ನಟ ನಟಿಯುರು ಫಿಲ್ಮ್ ಫೇರ್ ಮ್ಯಾಗಜೀನ್ ಶೂಟ್ ವೇಳೆ ಮೊದಲು ಭೇಟಿಯಾಗಿದ್ದರು. ಈ ಫೋಟೋವನ್ನು ಇನ್ನು ಭದ್ರವಾಗಿಟ್ಟುಕೊಂಡಿದ್ದೇನೆ. ತಮ್ಮನ್ನು ಜೊತೆ ಮಾಡಿದ್ದು ಫಿಲ್ಮ್ ಫೇರ್ನ ಆ ಫೋಟೋ ಶೂಟ್ ಎಂದು ಹಳೆಯ ಸಂದರ್ಶನದಲ್ಲಿ ಈ ಜೋಡಿ ತಿಳಿಸಿದ್ದರು. ಅಕ್ಷಯ್ ಮದುವೆಯಾದ ಬಳಿಕ ಮಕ್ಕಳ ಲಾಲನೆ ಪಾಲನೆಯಲ್ಲಿ ತೊಡಗಿದರಿಂದ ನಟಿ ಟ್ವಿಂಕಲ್ ಖನ್ನಾ ನಟನೆಯಿಂದ ದೂರು ಸರಿದರು.
ಶುಭಾಶಯಗಳ ಮಹಾಪೂರ: ಇನ್ನು ತಮ್ಮ ವಿವಾಹ ವಾರ್ಷಿಕೋತ್ಸವದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಕ್ಷಯ್ ಕುಮಾರ್ ಹಂಚಿಕೊಳ್ಳುತ್ತಿದ್ದಂತೆ ಅವರಿಗೆ ಅಭಿಮಾನಿಗಳು ಸೇರಿದಂತೆ ಬಾಲಿವುಡ್ ಮಂದಿ ಶುಭ ಕೋರಿದ್ದಾರೆ. ಅಕ್ಷಯ್ ಕುಮಾರ್ ಜೊತೆ 'ಬಡೆ ಮಿಯನ್ ಚೋಟೆ ಮಿಯನ್' ಸಿನಿಮಾದಲ್ಲಿ ನಟಿಸುತ್ತಿರುವ ಟೈಗರ್ ಶ್ರಾಫ್ ವಿವಾಹ ವಾರ್ಷಿಕೋತ್ಸವ ಶುಭ ಕೋರಿದ್ದಾರೆ. ಇನ್ನು ನಟ ರಿತೇಶ್ ದೇಶ್ ಮುಖ ಇಬ್ಬರಿಗೂ ಉತ್ತಮ ಆರೋಗ್ಯ, ಖುಷಿ ಮತ್ತು ಪ್ರೀತಿ ಹೆಚ್ಚಲಿ ಎಂದು ಶುಭ ಕೋರಿದ್ದಾರೆ. ಇನ್ನು ನಟಿ ಸೋನಾಕ್ಷಿ ಸಿನ್ಹಾ ಕೂಡ ಇಬ್ಬರಿಗೂ ವಿವಾಹದ ಶುಭ ಹಾರೈಕೆ ಎಂದು ತಿಳಿಸಿದ್ದಾರೆ.
ಹಾಸ್ಯ ಭರಿತ ಪೋಸ್ಟ್ ಹಂಚಿಕೊಂಡ ನಟಿ: ಇನ್ನು ವಿವಾಹ ವಾರ್ಷಿಕೋತ್ಸವಕ್ಕೂ ಹಿಮದಿನ ರಾತ್ರಿ ಟ್ವಿಂಕಲ್ ಖನ್ನ ಗಂಡ ಅಕ್ಷಯ್ ಕುಮಾರ್ ಕುರಿತು ಫೋಟೋವನ್ನು ಹಂಚಿಕೊಂಡಿದ್ದರು. ಇಬ್ಬರಲ್ಲಿ ಅನೇಕ ಭಿನ್ನಾಭಿಪ್ರಾಯಗಳು ಇರುತ್ತವೆ. ಈ ಮನುಷ್ಯನಿಂದ ನನ್ನನ್ನು ರಕ್ಷಿಸಿ ಎಂಬ ಹಾಸ್ಯಭರಿತ ಸಂದೇಶದ ಮೂಲಕ ತಮ್ಮಿಬ್ಬರ ಜೋಡಿ ಫೋಟೋವನ್ನು ಹಂಚಿಕೊಂಡು ಗಮನ ಸೆಳೆದಿದ್ದರು ಟ್ವಿಂಕಲ್.
ಇದನ್ನೂ ಓದಿ: ನಟಿ ಐಶ್ವರ್ಯಾ ರೈಗೆ ಕಂದಾಯ ಇಲಾಖೆಯಿಂದ ನೋಟಿಸ್ ಜಾರಿ