ETV Bharat / entertainment

ಇಂಡಿಯನ್ ಸ್ಪೋರ್ಟ್ಸ್ ಹಾನರ್ಸ್‌ ಸಮಾರಂಭ: ದೀಪ್​ವೀರ್​, ವಿರುಷ್ಕಾ ಭಾಗಿ - ದೀಪಿಕಾ ಪಡುಕೋಣೆ

ಇಂಡಿಯನ್ ಸ್ಪೋರ್ಟ್ಸ್ ಹಾನರ್ಸ್‌ 2023 ಸಮಾರಂಭಕ್ಕೆ ವಿರುಷ್ಕಾ, ದೀಪ್​ವೀರ್​ ಸಾಕ್ಷಿಯಾಗಿದ್ದರು.

Indian Sports Honours 2023
ಇಂಡಿಯನ್ ಸ್ಪೋರ್ಟ್ಸ್ ಹಾನರ್ಸ್‌
author img

By

Published : Mar 24, 2023, 2:08 PM IST

ಬಾಲಿವುಡ್​ ನಟಿ ಅನುಷ್ಕಾ ಶರ್ಮಾ - ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್​ ತಾರಾ ದಂಪತಿ ದೀಪಿಕಾ ಪಡುಕೋಣೆ - ರಣ್​ವೀರ್​ ಸಿಂಗ್​ ದೇಶದ ಅತ್ಯಂತ ಜನಪ್ರಿಯ ಸೆಲೆಬ್ರಿಟಿ ಜೋಡಿಗಳಲ್ಲಿ ಪ್ರಮುಖರು. ಗುರುವಾರ ಮುಂಬೈನಲ್ಲಿ ನಡೆದ ನಾಲ್ಕನೇ ಆವೃತ್ತಿಯ ಇಂಡಿಯನ್ ಸ್ಪೋರ್ಟ್ಸ್ ಹಾನರ್ಸ್‌ ಸಮಾಂಭಕ್ಕೆ ಈ ಜೋಡಿಗಳು ಸಾಕ್ಷಿಯಾಗಿವೆ. ಅಲ್ಲದೇ, ಅಜಯ್ ದೇವಗನ್, ಅಭಿಷೇಕ್ ಬಚ್ಚನ್, ಅಂಗದ್ ಬೇಡಿ, ನೇಹಾ ಧೂಪಿಯಾ, ರಿಯಾ ಚಕ್ರವರ್ತಿ ಸೇರಿದಂತೆ ಹಲವು ಸೆಲೆಬ್ರಿಟಿಗಳು ಕಾಣಿಸಿಕೊಂಡಿದ್ದಾರೆ.

ರೆಡ್ ಕಾರ್ಪೆಟ್ ಮೇಲೆ ವಿರುಷ್ಕಾ ಜೋಡಿ ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಒಟ್ಟಿಗೆ ಪೋಸ್ ನೀಡಿದ್ದಾರೆ. ಪಠಾಣ್​​ ನಟಿ ದೀಪಿಕಾ ಪಡುಕೋಣೆ ತಮ್ಮ ತಂದೆ, ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಮತ್ತು ಪತಿ, ನಟ ರಣ್​​​ವೀರ್ ಸಿಂಗ್ ಅವರೊಂದಿಗೆ ಪಾಪರಾಜಿಗಳ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಈ ಎರಡೂ ಜೋಡಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ, ಮೆಚ್ಚುಗೆ ಸಂಪಾದಿಸಿದೆ.

ದೀಪ್​ವೀರ್​​,​ ಪ್ರಕಾಶ್ ಪಡುಕೋಣೆ ಬ್ಲ್ಯಾಕ್​​ ಡ್ರೆಸ್ ಕೋಡ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಪ್ರಕಾಶ್ ಪಡುಕೋಣೆ ವಿಶ್ವದ ನಂಬರ್ 1 ಬ್ಯಾಡ್ಮಿಂಟನ್ ಆಟಗಾರ. 1980ರಲ್ಲಿ, ಪ್ರಕಾಶ್ ಪಡುಕೋಣೆ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಗೆದ್ದ ಮೊದಲ ಭಾರತೀಯ ಆಟಗಾರ. ರಣ್​​ವೀರ್ ಮತ್ತು ದೀಪಿಕಾ ತಮ್ಮ ತಂದೆಯೊಂದಿಗೆ ಪಾಪರಾಜಿಗಳಿಗೆ ಪೋಸ್ ನೀಡಿದರು. ರಣ್​​​ವೀರ್ ಸಿಂಗ್ ಮತ್ತು ಪ್ರಕಾಶ್ ಪಡುಕೋಣೆ ಇಬ್ಬರೂ ಕಪ್ಪು ಸೂಟ್ ಧರಿಸಿದ್ದರೆ, ದೀಪಿಕಾ ಕಪ್ಪು ಸೀರೆಯಲ್ಲಿ ಮಿಂಚಿದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿರಾಟ್ ಮತ್ತು ಅನುಷ್ಕಾ ಸಖತ್​ ಗ್ಲಾಮರಸ್ ಆಗಿ ಅಭಿಮಾನಿಗಳ ಗಮನ ಸೆಳೆದರು. ವಿರಾಟ್ ಬ್ಲ್ಯಾಕ್​​ ಸೂಟ್‌ನಲ್ಲಿ ಸಖತ್​ ಸ್ಟೈಲಿಶ್ ಆಗಿ​ ಕಾಣಿಸಿಕೊಂಡರೆ, ಅನುಷ್ಕಾ ಶರ್ಮಾ ಆಫ್ ಶೋಲ್ಡರ್ ವೈಲೆಟ್ ಕಲರ್​ ಗೌನ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದರು. ವಜ್ರದ ಕಿವಿಯೋಲೆಗಳು ಮತ್ತು ಉಂಗುರ ಧರಿಸಿ ಸೌಂದರ್ಯ ಹೆಚ್ಚಿಸಿಕೊಂಡಿದ್ದರು. ಈ ಜೋಡಿ ಕೂಡ ಪಾಪರಾಜಿಗಳ ಕ್ಯಾಮರಾಗಳಿಗೆ ಪೋಸ್ ನೀಡಿದರು. ಅನುಷ್ಕಾ ಶರ್ಮಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಚಿತ್ರಗಳನ್ನು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಇದನ್ನೂ ಓದಿ: ಹೃದಯಾಘಾತದ ಬಳಿಕ ಮೊದಲ ಬಾರಿಗೆ ಮುಂಬೈನಲ್ಲಿ ಕಾಣಿಸಿಕೊಂಡ ಮಾಜಿ ವಿಶ್ವಸುಂದರಿ

ದೀಪ್​ವೀರ್​ ದಂಪತಿಯ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ವೇದಿಕೆ ಸೃಷ್ಟಿಸಿದೆ. ಅವರ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ. ಅವರು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆ, ರಣ್​​ವೀರ್ ಮೊದಲು ಕಾರಿನಿಂದ ಇಳಿದರು, ನಂತರ ದೀಪಿಕಾ ಹೊರಬಂದರು. ರಣ್​ವೀರ್​, ದೀಪಿಕಾರಿಗೆ ತಮ್ಮ ಕೈ ನೀಡಿದ್ದು, ಅವರು ತಮ್ಮ ಸೀರೆ ಹಿಡಿಯಲು ಆದ್ಯತೆ ನೀಡಿರು. ಈ ಹಿನ್ನೆಲೆ, ಪತಿಯನ್ನು ನಿರ್ಲಕ್ಷಿಸಿರುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಹುಟ್ಟಿಕೊಂಡಿದೆ. ಕೆಲ ನೆಟ್ಟಿಗರು ದೀಪಿಕಾ ಅವರ ವಿರೋಧವಾಗಿ ಮಾತನಾಡಿದರೆ, ಹಲವರು ಅವರ ಬೆಂಬಲಕ್ಕೆ ಬಂದಿದ್ದಾರೆ.

ಇದನ್ನೂ ಓದಿ: ಬಣ್ಣದ ಜಗತ್ತಿನಿಂದ ರಾಜಕೀಯದ ರಣರಂಗಕ್ಕೆ ಧುಮುಕಿದ ಸೆಲೆಬ್ರಿಟಿಗಳಿವರು: ನೆಲೆ ಕಂಡವರೆಷ್ಟು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.