ETV Bharat / entertainment

ಅರಸು ಕ್ರಿಯೇಷನ್ಸ್ ವತಿಯಿಂದ ಸುದೀಪ್​ 50ನೇ ಜನ್ಮೋತ್ಸವಕ್ಕೆ ವಿಶೇಷ ಉಡುಗೊರೆ! - ಕಿಚ್ಚ ಸುದೀಪ್​ ಹುಟ್ಟುಹಬ್ಬದ ಉಡುಗೊರೆ

ನಟ ಕಿಚ್ಚ ಸುದೀಪ್ 50ನೇ ವಸಂತಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಅವರ ಹುಟ್ಟುಹಬ್ಬಕ್ಕೆ ಅರಸು ಕ್ರಿಯೇಷನ್ಸ್ ಪ್ರೀತಿಯ ಉಡುಗೊರೆ ನೀಡಿದೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​
author img

By ETV Bharat Karnataka Team

Published : Aug 31, 2023, 10:06 PM IST

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೆಪ್ಟೆಂಬರ್ 2ರಂದು 50ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. 'ಕಿಚ್ಚೋತ್ಸವ'ಕ್ಕೆ ಫ್ಯಾನ್ಸ್ ಸಜ್ಜಾಗಿದ್ದಾರೆ. ಈ ಬಾರಿ ನಂದಿ ಲಿಂಕ್ಸ್ ಗ್ರೌಂಡ್​ನಲ್ಲಿ ನಟ ಅಭಿಮಾನಿಗಳೊಂದಿಗೆ ಬರ್ತ್‌ಡೇ ಆಚರಿಸಿಕೊಳ್ಳಲಿದ್ದಾರೆ. ಜನ್ಮದಿನದ ಅಂಗವಾಗಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹುಟ್ಟುಹಬ್ಬಕ್ಕೆ ಕಿಚ್ಚನ ಗುಣಗಾನ ಮಾಡುವ ಸ್ಪೆಷಲ್ ಹಾಡುಗಳು ಯೂಟ್ಯೂಬ್ ಅಂಗಳ ಪ್ರವೇಶಿಸಿವೆ. ಇದರ ಹೊರತಾಗಿ ಅರಸು ಕ್ರಿಯೇಷನ್ಸ್ ಸುದೀಪ್​ 50ನೇ ಜನ್ಮೋತ್ಸವಕ್ಕೆ ವಿಶೇಷ ಉಡುಗೊರೆ ನೀಡಿದೆ.

ಕಳೆದ ಎರಡು ವರ್ಷಗಳಿಂದ ಕನ್ನಡ ಮಾಧ್ಯಮದ ನಡುವೆ ಕೆಲಸ ಮಾಡುತ್ತಿರುವ ಹರೀಶ್ ಅರಸು ತಮ್ಮದೇ ಅರಸು ಕ್ರಿಯೇಷನ್ಸ್‌ನಡಿ ಸುದೀಪ್ ಹುಟ್ಟಹಬ್ಬಕ್ಕೆ, ಆಕಾಶದ ನಕ್ಷತ್ರಕ್ಕೆ ಕಿಚ್ಚ ಸುದೀಪ್ ಎಂದು ನಾಮಕರಣ ಮಾಡಿದ್ದಾರೆ. ಈ ಜಗತ್ತಿನಲ್ಲಿರುವ ರತ್ನಗಳಲ್ಲಿ ನೀನೇ ಅತ್ಯಮೂಲ್ಯ. ಇಂದು ನಕ್ಷತ್ರ ಹುಟ್ಟಿದ ದಿನವನ್ನು ನಾವು ಆಚರಿಸುತ್ತೇವೆ. ಆದರೆ ಆಕಾಶದಲ್ಲಿ ಅಲ್ಲ, ಭೂಮಿಯಲ್ಲಿ ಎಂಬ ಸಂದೇಶದ ಮೂಲಕ ಮನದುಂಬಿ ಶುಭಾಶಯ ಕೋರಲಾಗಿದೆ.

ಅರಸು ಕ್ರಿಯೇಷನ್ಸ್ ಉಡುಗೊರೆ
ಅರಸು ಕ್ರಿಯೇಷನ್ಸ್ ಉಡುಗೊರೆ

ಸುದೀಪ್ ಬರ್ತ್ ಡೇಗೆ 46ನೇ ಸಿನಿಮಾದ ಟೈಟಲ್ ರಿವೀಲ್ ಆಗಲಿದೆ. ಮಧ್ಯರಾತ್ರಿ 12ಕ್ಕೆ ಶೀರ್ಷಿಕೆ ಘೋಷಣೆಯಾಗಲಿದೆ. ಈ ಮೊದಲು ನಂದಿ ಲಿಂಕ್ಸ್ ಗ್ರೌಂಡ್​ನಲ್ಲಿ ಮಾತ್ರ ಜನ್ಮದಿನ ಆಚರಿಸಿಕೊಳ್ತಾರೆ, ಮನೆ ಬಳಿ ಯಾವುದೇ ಸಂಭ್ರಮ ಇರುವುದಿಲ್ಲ ಎಂದಿದ್ದರು. ಇದೀಗ ಜೆ.ಪಿ.ನಗರದಲ್ಲಿಯೂ ಕಿಚ್ಚೋತ್ಸವ ನಡೆಯಲಿದೆ.

ಹೊಂಬಾಳೆ ಫಿಲ್ಮ್ಸ್‌ ಜೊತೆ ಚಿತ್ರ: ಕೆಜಿಎಫ್ ಚಾಪ್ಟರ್​ 1, 2, ಕಾಂತಾರ, ರಾಜಕುಮಾರ, ಸಲಾರ್ ಸಿನಿಮಾಗಳನ್ನು ನಿರ್ಮಾಣ ಮಾಡುವ ಮೂಲಕ ಹೆಸರು ಮಾಡಿರುವ ಹೊಂಬಾಳೆ ಫಿಲ್ಸ್ಮ್ ಜೊತೆ ಸುದೀಪ್​ ಮುಂದಿನ ಸಿನಿಮಾ ಬಹುತೇಕ ಪಕ್ಕಾ ಆಗಿದೆ. ಅದ್ಭುತ ಮೇಕಿಂಗ್ ಮತ್ತು ಬಿಗ್ ಬಜೆಟ್ ಸಿನಿಮಾಗಳಿಗೆ ಹೆಸರುವಾಸಿಯಾಗಿರುವ ಹೊಂಬಾಳೆ ಫಿಲ್ಸ್ಮ್ ಅಡಿ ಅಭಿನಯ ಚಕ್ರವರ್ತಿಯ ಸಿನಿಮಾ ಸಿದ್ದವಾಗಲಿದೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ 46ನೇ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿದ್ದಾರೆ ಕಿಚ್ಚ. ಹೆಸರಿಡದ ಈ ಚಿತ್ರ ಪ್ಯಾನ್​ ಇಂಡಿಯಾ ಸಿನಿಮಾ ಆಗಿದ್ದು, ಕನ್ನಡ, ತೆಲುಗು, ಮಲಯಾಳಂ ಹಿಂದಿ ತಮಿಳು ಹೀಗೆ ಪಂಚಭಾಷೆಗಳಲ್ಲಿ ಮೂಡಿಬರಲಿದೆ. ಚಿತ್ರದ ಸಣ್ಣ ತುಣುಕನ್ನು ಚಿತ್ರತಂಡ ಈಗಾಗಲೇ ಬಿಡುಗಡೆಗೊಳಿಸಿದೆ. ರಿಲೀಸ್​ ಆಗಿರುವ ಗ್ಲಿಂಪ್ಸ್​ನಲ್ಲಿ ರಕ್ತಸಿಕ್ತ ದೃಶ್ಯದಲ್ಲಿ ಸುದೀಪ್​ ಕಾಣಿಸಿಕೊಂಡಿದ್ದಾರೆ. 'ನಾನು ಮನುಷ್ಯ ಅಲ್ಲ, ರಾಕ್ಷಸ' ಎಂಬ ಡೈಲಾಗ್​ ಗಮನ ಸೆಳೆದಿದೆ. ಕಲೈಪುಲಿ ಎಸ್. ತನು ಚಿತ್ರ ನಿರ್ಮಿಸುತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.