ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಡೆಸಿಕೊಡುವ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಓಟಿಟಿ 2 ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಫೈನಲ್ ಹತ್ತಿರ ಬರುತ್ತಿದ್ದಂತೆ, ಸ್ಪರ್ಧೆಯು ಹೆಚ್ಚು ಕಠಿಣವಾಗುತ್ತಿದೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ ಬಿಬಿ ಹೋಟೆಲ್ ಚಾಲೆಂಜ್ ನಡೆಯುತ್ತಿದ್ದು, ದೊಡ್ಮನೆಯ ಸದಸ್ಯರು ಅಂತಿಮವಾಗಿ 45 ದಿನಗಳ ನಂತರ ತಮ್ಮ ಕುಟುಂಬ ಸದಸ್ಯರನ್ನು ಭೇಟಿಯಾಗಿದ್ದಾರೆ. ಈ ಅವಕಾಶವನ್ನು ಪಡೆದುಕೊಂಡು ಅವರು ಸಂತಸಗೊಂಡಿದ್ದಾರೆ.
ಅತಿಥಿಯಾಗಿ ಆಗಮಿಸಿದ ಜಿಯಾ ಶಂಕರ್ ತಾಯಿ: ಜಿಯಾ ಶಂಕರ್ ಅವರ ತಾಯಿ ಸುರೇಖಾ ಅವರು ಬುಧವಾರ ಬಿಬಿ ಮನೆಗೆ ಪ್ರವೇಶಿಸಿದ ಮೊದಲ ಅತಿಥಿಯಾಗಿದ್ದರು. ಜಿಯಾ ತಮ್ಮ ತಾಯಿಯನ್ನು ಕಂಡೊಡನೆ ಕಣ್ಣೀರು ಹಾಕಿದರು. ಆದರೆ ಸುರೇಖಾ ಅವರು ಮಗಳನ್ನು ಗಟ್ಟಿಯಾಗಿರಲು ಹೇಳಿದರು. ಜಿಯಾ ಅವರ ತಾಯಿ ಜಡ್ ಹದಿದ್ ಅವರನ್ನು ಮಾತನಾಡಿಸಿದರು ಮತ್ತು ಅವರಿಗೆ ಮುದ್ದಾದ ಮಗಳಿದ್ದಾರೆ ಎಂದು ತಿಳಿಸಿದರು. ಅದಕ್ಕೆ ಜಡ್ ಹದಿದ್ ಅವರು ಜಿಯಾ ಅವರು ಒಳ್ಳೆಯ ವ್ಯಕ್ತಿ ಎಂದು ಹೇಳಿದರು.
ಬಳಿಕ ಸುರೇಖಾ ಅವರಿಗೆ ಬಿಗ್ ಬಾಸ್ ಮನೆಯಿಂದ ಹೊರಹೋಗುವಂತೆ ಸೂಚಿಸಿದರು. ಜಿಯಾ ಜೊತೆಗೆ ಅವರು ಇಷ್ಟಪಡುವ ಬೇರೆ ಸ್ಪರ್ಧಿಗೆ ಸ್ಟಾರ್ ಪ್ರಶಸ್ತಿ ನೀಡಿ ಎಂದು ಹೇಳಿದರು. ಸುರೇಖಾ ಅವರು ಈ ವೇಳೆ ಎಲ್ಲರಿಗೂ ಶುಭಹಾರೈಸಿದರು. ಪೂಜಾ ಅವರಿಗೆ ಸ್ಟಾರ್ ಪ್ರಶಸ್ತಿಯನ್ನು ನೀಡಿದರು. ಅವರು ಇದಕ್ಕೆ ಅರ್ಹ ಸ್ಪರ್ಧಿ ಎಂದರು. ಜಿಯಾ ಅವರ ತಾಯಿ ಅವಿನಾಶ್ ಬದಲಿಗೆ ಪೂಜಾಗೆ ಸ್ಟಾರ್ ನೀಡಿದ್ದು ತಪ್ಪು ಎನ್ನುವಂತೆ ಅಭಿಷೇಕ್ ಮತ್ತು ಎಲ್ವಿಶ್ ಮಾತನಾಡಿಕೊಂಡರು. ನಂತರ ಅಭಿಷೇಕ್ ಅವರು ಜಿಯಾ ಅವರಲ್ಲಿ ನಿಮ್ಮ ತಾಯಿ ನನಗೆ ಅಥವಾ ಅವಿನಾಶ್ಗೆ ಸ್ಟಾರ್ ಕೊಡಬಹುದೆಂದು ನಾನು ಭಾವಿಸಿದ್ದೆ ಎಂದು ಹೇಳಿದರು.
ಬಿಬಿ ಮನೆಗೆ ಮಹೇಶ್ ಭಟ್ ಎಂಟ್ರಿ: ಅದಕ್ಕೂ ಮೊದಲು ಬಿಗ್ ಬಾಸ್ ಮನೆಗೆ ಬಾಲಿವುಡ್ನ ಹಿರಿಯ, ಪ್ರಸಿದ್ಧ ಚಿತ್ರ ನಿರ್ಮಾಪಕ, ನಿರ್ದೇಶಕ ಮಹೇಶ್ ಭಟ್ ತಮ್ಮ ಪುತ್ರಿ ಪೂಜಾ ಭಟ್ ಅವರನ್ನು ಭೇಟಿ ಮಾಡಲು ಬಿಗ್ ಬಾಸ್ ಮನೆಗೆ ಆಗಮಿಸಿದ್ದರು. ಮಹೇಶ್ ಅವರನ್ನು ಕಂಡು ಪೂಜಾ ಭಾವುಕರಾಗಿದ್ದರು. ಪೂಜಾ ಅವರ ಜನ್ಮಕಥೆಯನ್ನು ಬಿಬಿ ಮನೆಯವರಿಗೆ ಮಹೇಶ್ ಭಟ್ ವಿವರಿಸಿದರು. ಜೊತೆಗೆ ಮಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಪೂಜಾ ಚಿಕ್ಕವಳಿದ್ದಾಗ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಮನೆಯನ್ನು ನಿರ್ವಹಿಸುತ್ತಿದ್ದೆ ಎಂದು ನೆನಪಿಸಿಕೊಂಡರು. ಬಳಿಕ ಮಹೇಶ್ ಅವರಿಗೆ ಬಿಗ್ ಬಾಸ್ ಮನೆಯಿಂದ ಹೊರಹೋಗುವಂತೆ ಸೂಚಿಸಿದರು. ಎಲ್ಲರಿಗೂ ಶುಭ ಹಾರೈಸಿದ ಅವರು, ಬಾಬಿಕಾ ಧುರ್ವೆ ಅವರಿಗೆ ಸ್ಟಾರ್ ಪ್ರಶಸ್ತಿಯನ್ನು ನೀಡಿದರು.
ಬಿಗ್ ಬಾಸ್ ಓಟಿಟಿ 2 ರ 47 ಸಂಚಿಕೆಯಲ್ಲಿ ಬಿಬಿ ಹೋಟೆಲ್ ಟಾಸ್ಕ್ ಪೂರ್ಣಗೊಂಡಿದೆ. ಪೂಜಾ ಭಟ್ ಅವರು ಮೂರು ಸ್ಟಾರ್ಗಳನ್ನು ಸ್ವೀಕರಿಸಿದರೆ, ಅಭಿಷೇಕ್ ಮಲ್ಹಾನ್ ಎರಡು ಸ್ಟಾರ್ಗಳನ್ನು ಪಡೆದಿದ್ದಾರೆ. ಹೀಗಾಗಿ ಅಂತಿಮ ನಾಯಕತ್ವ ಟಾಸ್ಕ್ನಲ್ಲಿ ಇಬ್ಬರು ಸ್ಪರ್ಧಿಸುತ್ತಾರೆ. ಟಾಸ್ಕ್‌ನ ವಿಜೇತರು ನಂತರ ಬಿಗ್ ಬಾಸ್ OTT 2 ಫೈನಲ್‌ಗೆ ಮುನ್ನಡೆಯುತ್ತಾರೆ.
ಇದನ್ನೂ ಓದಿ: 'ಮತ್ತೆ ಅಭಿಮಾನಿಗಳಿಗಾಗಿ ಮಾತ್ರ ಹಿಂತಿರುಗುತ್ತೇನೆ': ನಟ ಸಲ್ಮಾನ್ ಖಾನ್ ಹೀಗೆ ಅಂದಿದ್ದು ಯಾಕೆ ಗೊತ್ತಾ?