ETV Bharat / entertainment

24x7 'ಬಿಗ್ ಬಾಸ್ OTT 2' ಉಚಿತ ಪ್ರಸಾರ: ದೊಡ್ಮನೆಯೊಳಗಿನ ಯಾವುದೇ ಭಾಗದ ಸೀನ್​ ಲಭ್ಯ - ಬಿಗ್​ ಬಾಸ್​ ಸಾಂಗ್

ಹಿಂದಿ 'ಬಿಗ್ ಬಾಸ್ ಒಟಿಟಿ 2' ಆ್ಯಂಥಮ್​ ಅನಾವರಣಗೊಂಡಿದೆ. ಶೋ 24x7 ಉಚಿತವಾಗಿ ಪ್ರಸಾರಗೊಳ್ಳಲಿದೆ.

Bigg Boss OTT 2
ಬಿಗ್ ಬಾಸ್ OTT 2
author img

By

Published : Jun 9, 2023, 4:50 PM IST

ಬಿಗ್​ ಬಾಸ್​ ಅಪಾರ ಸಂಖ್ಯೆಯ ಪ್ರೇಕ್ಷಕರನ್ನು ಸಂಪಾದಿಸಿರುವ ಜನಪ್ರಿಯ ಕಾರ್ಯಕ್ರಮ. ಬಹುಭಾಷೆಗಳಲ್ಲಿ ಪ್ರಸಾರವಾಗುವ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸೆಲೆಬ್ರಿಟಿಗಳು ತಮ್ಮ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಾರೆ. ಕನ್ನಡದಲ್ಲಿ ಅಭಿನಯ ಚಕ್ರವರ್ತಿ ಸುದೀಪ್​ ಈ ಕಾರ್ಯಕ್ರಮ ನಡೆಸಿಕೊಟ್ಟರೆ, ಹಿಂದಿ ಭಾಷೆಯ ಬಿಗ್​ ಬಾಸ್​ ಶೋ ಅನ್ನು ಬಾಲಿವುಡ್​ ನಟ ಸಲ್ಮಾನ್​ ಖಾನ್​ ನಿರೂಪಣೆಯಲ್ಲಿ ಮೂಡಿಬರುತ್ತದೆ.

ಹಿಂದಿ 'ಬಿಗ್ ಬಾಸ್ OTT 2'ರ ಅಧಿಕೃತ ಗೀತೆ (rap) ಅನಾವರಣಗೊಂಡಿದೆ. ಸಲ್ಮಾನ್ ಖಾನ್ ಮತ್ತು ರಫ್ತಾರ್ ವಿಡಿಯೋದಲ್ಲಿ ರ್‍ಯಾಪ್‌ಗೆ ಡ್ಯಾನ್ಸ್ ಮಾಡುತ್ತಿದ್ದಾರೆ. ಈ ಸೀಸನ್‌ನ ಥೀಮ್‌ ಸಾಂಗ್​ಗೆ ನಟ ಮತ್ತು ರ್‍ಯಾಪರ್​ ಮೈ ಕುಣಿಸಿದ್ದಾರೆ. ಈ ಬಾರಿ ಜನತಾ (ಪ್ರೇಕ್ಷಕರು) ಆಟದ ಸಂಪೂರ್ಣ ನಿಯಂತ್ರಣವನ್ನು ಹೊಂದಿರುತ್ತಾರೆ. ಈ ವಿಷಯ ಹಾಡಿನಲ್ಲಿ ಉಲ್ಲೇಖವಾಗಿದೆ.

ಸಲ್ಮಾನ್ ಖಾನ್ ಹೋಸ್ಟ್ ಮಾಡಲಿರುವ ಬಿಗ್ ಬಾಸ್ ಒಟಿಟಿ 2, ಮಲ್ಟಿ ಕ್ಯಾಮ್ (ಕ್ಯಾಮರಾಗಳು) ಆಕ್ಷನ್‌ನೊಂದಿಗೆ 24x7 ಮನರಂಜನೆಯನ್ನು ಉಚಿತವಾಗಿ ಒದಗಿಸುವ ಭರವಸೆಯನ್ನು ನೀಡಿದೆ. ಕಾರ್ಯಕ್ರಮ ಪ್ರಸಾರಕ್ಕೂ ಮೊದಲು, ಕೆಲ ದಿನಗಳ ಹಿಂದೆ ಜಿಯೋ ಸಿನಿಮಾ ಬಿಗ್​ ಬಾಸ್​​ ಆ್ಯಂಥಮ್​ನ ಕಿರು ತುಣುಕನ್ನು ಬಿಡುಗಡೆ ಮಾಡಿತ್ತು. ಎರಡನೇ ಸೀಸನ್‌ನ ಸ್ಲೋಗನ್ ಅನಾವರಣಗೊಳಿಸಿತ್ತು. Lagi Bachi ಒಟಿಟಿ ಎರಡನೇ ಸೀಸನ್​ನ ಸ್ಲೋಗನ್​​. ಸದ್ಯ ಅನಾವರಣಗೊಂಡಿರುವ ಒಟಿಟಿ ಆ್ಯಂಥಮ್​ನಲ್ಲಿ, ಸಲ್ಮಾನ್ ಖಾನ್ ಮತ್ತು ರಫ್ತಾರ್ ಮೈ ಕುಣಿಸಿದ್ದು, ಇದರಲ್ಲಿ ನಟ "ಇಸ್ ಬಾರ್ ಇತ್ನಿ ಲಗೇಗಿ ಕಿ ಆಪ್ಕಿ ಮದದ್ ಲಗೇಗಿ" ಎಂದು ಹೇಳುವ ಮೂಲಕ ಮುಕ್ತಾಯಗೊಳಿಸಿದ್ದಾರೆ.

ಬಿಗ್​ ಬಾಸ್​ ಒಟಿಟಿ ಎರಡನೇ ಸೀಸನ್​ನಲ್ಲಿ ಆಟದ ಮೇಲಿನ ಅಧಿಕಾರವನ್ನು ಪ್ರೇಕ್ಷಕರೇ ಹೊಂದಿರುತ್ತಾರೆ. ಸ್ಪರ್ಧಿಗಳ ಸಂಪೂರ್ಣ ದಿನಚರಿ ಜಿಯೋ ಸಿನಿಮಾದಲ್ಲಿ ಉಚಿತವಾಗಿ ಲಭ್ಯ ಆಗಲಿದೆ. ವೀಕ್ಷಕರು ಹೌಸ್‌ಮೇಟ್‌ಗಳೊಂದಿಗೆ ಸಂವಹನ ನಡೆಸಬಹುದು. ಅಲ್ಲದೇ ವಾರದ ದಿನಸಿ ವಿತರಿಸುವಿಕೆ, ಸ್ಪಾಟ್ ಎಲಿಮಿನೇಷನ್‌ಗಳು ಮತ್ತು ಟಾಸ್ಕ್​​ ಕುರಿತ ನಿರ್ಧಾರಗಳಂತಹ ವಿಷಯಗಳ ಮೇಲೆ ಪ್ರಭಾವ ಬೀರಬಹುದು.

ಅಷ್ಟೇ ಅಲ್ಲ, ಬಿಗ್ ಬಾಸ್ OTT 2 ಮಲ್ಟಿಕ್ಯಾಮರಾ ಸ್ಟ್ರೀಮಿಂಗ್‌ನೊಂದಿಗೆ ರೋಮಾಂಚನಕಾರಿ ಅನುಭವ ನೀಡುತ್ತದೆ. ವೀಕ್ಷಕರು ದೃಶ್ಯಗಳನ್ನು ಬದಲಾಯಿಸಲು, ತಮಗೆ ಬೇಕಾದ ಸ್ಪರ್ಧಿಯ ಸಂಪೂರ್ಣ ಆಗುಹೋಗುಗಳನ್ನು ವೀಕ್ಷಿಸಲು ಅನುಮತಿಸುತ್ತದೆ. ಮನೆಯ ಒಂದು ಕ್ಷಣವನ್ನು ಸಹ ಮಿಸ್ ಮಾಡಿಕೊಳ್ಳದೇ ಪ್ರೇಕ್ಷಕರು ತಮಗೆ ಬೇಕಾದ ದೃಶ್ಯ ವೀಕ್ಷಿಸಬಹುದು. ಇದಲ್ಲದೇ, ಅಭಿಮಾನಿಗಳು ಸರಿಯಾದ ಸಮಯದಲ್ಲಿ ಮನೆಯ ವಿವಿಧ ಭಾಗಗಳನ್ನು ವೀಕ್ಷಿಸುವ ವೇಳೆ ಲೈವ್ ಚಾಟ್‌ಗಳು ಮತ್ತು ಎಮೋಜಿಗಳ ಮೂಲಕ ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ. ಈ ಪ್ರಯತ್ನ ಸಂವಹನವನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುಲಿದೆ.

ಇದನ್ನೂ ಓದಿ: 'ನಾನು ಸೀತೆಯ ಪಾತ್ರ ಮಾಡಿದಾಗ ಸೀತೆಯಂತೆ ಬದುಕಿದ್ದೆ, ಇಂದಿನ ಕಲಾವಿದರಿಗೆ ಅದು ಕೇವಲ ಪಾತ್ರ': ದೀಪಿಕಾ ಚಿಖ್ಲಿಯಾ

ಈ ಮೂಲಕ ವೀಕ್ಷಕರಿಗೆ 1000+ ಗಂಟೆಗಳ ಲೈವ್ ಪ್ರೋಗ್ರಾಮ್​ ಲಭ್ಯವಾಗಲಿದೆ. ಬಿಗ್ ಬಾಸ್ OTT 2 ಕುರಿತು ಮಾತನಾಡುತ್ತಾ ಸಲ್ಮಾನ್ ಖಾನ್, "ಭಾರತವು ನಿರಂತರ ಮನರಂಜನೆಗಾಗಿ ಹುಡುಕುತ್ತಿದೆ, ಅದನ್ನು ಒದಗಿಸಲು ಬಿಗ್ ಬಾಸ್ OTT ಬರುತ್ತಿದೆ. ಈ ಸೀಸನ್, ನನ್ನಂತೆ, ಕಚ್ಚಾ ಮತ್ತು ಫಿಲ್ಟರ್ ಮಾಡದಂತಿರುತ್ತದೆ. ಇದು ಒಂದು ಉತ್ತಮ ಪಂದ್ಯವಾಗಿದೆ ಎಂದು ಹೇಳಿದ್ದಾರೆ. ಇದೇ ಜೂನ್​ 17ರಿಂದ ಕಾರ್ಯಕ್ರಮ ಪ್ರಸಾರವಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.