ETV Bharat / entertainment

'ಬಿಗ್ ಬಾಸ್ ಸೀಸನ್ 10ರಲ್ಲಿ ಬೆಂಕಿ ಬಂತು': ತನಿಷಾಗಾಗಿ ಹಾಡು, ಅಭಿಮಾನಿ ಬಳಗ - ತನಿಷಾ ಕುಪ್ಪಂಡ ಹಾಡು

ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿ ತನಿಷಾ ಕುಪ್ಪಂಡ ಬಗೆಗಿನ ಹಾಡೊಂದು ಅನಾವರಣಗೊಂಡಿದೆ.

Tanisha Kuppanda song
'ಬಿಗ್ ಬಾಸ್ ಸೀಸನ್ 10ರಲ್ಲಿ ಬೆಂಕಿ ಬಂತು ಹಾಡು
author img

By ETV Bharat Karnataka Team

Published : Jan 9, 2024, 7:01 AM IST

ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್'. ಬಹತೇಕ ಫಿನಾಲೆ ತಲುಪಿತೋ ಕಾರ್ಯಕ್ರಮದಲ್ಲಿ ಕೆಲವೇ ಕೆಲ ಮಂದಿ ಬಾಕಿ ಉಳಿದಿದ್ದಾರೆ. ಈ ಪಾಪ್ಯುಲರ್​ ಶೋನಲ್ಲಿ ಭಾಗಿಯಾಗೋ ಪ್ರತಿಯೊಬ್ಬರೂ ತಮ್ಮದೇ ಆದ ಅಭಿಮಾನಿ ಬಳಗ ಸಂಪಾದಿಸಿದ್ದಾರೆ. ಸದ್ಯ ತನಿಷಾ ಅವರ ಹೆಸರು ಸಖತ್​ ಸದ್ದು ಮಾಡುತ್ತಿದೆ. ಅವರಿಗಾಗಿಯೇ 'ಬಿಗ್ ಬಾಸ್ ಸೀಸನ್ 10ರಲ್ಲಿ ಬೆಂಕಿ ಬಂತು' ಎಂಬ ಹಾಡು ರಚನೆಯಾಗಿದೆ.

ಟೈಟಲ್ ನೋಡಿ ಗೊಂದಲಕ್ಕೊಳಗಾಗಬೇಡಿ. ಬಿಗ್ ಬಾಸ್ ಸೀಸನ್ 10ರಲ್ಲಿ ಅದೆಲ್ಲಿ ಬೆಂಕಿ ಬಂತು ಅಂತಾ ಯೋಚನೆ ಮಾಡ್ಬೇಡಿ. ಬೆಂಕಿಯಂತೆ ಪರ್ಫಾಮೆನ್ಸ್ ಕೊಡ್ತಿರುವ ತನಿಷಾ ಕುಪ್ಪಂಡ ಬಗ್ಗೆ ಹಾಡೊಂದು ರಚನೆಯಾಗಿದೆ. ಸದ್ಯ ಕನ್ನಡ ಬಿಗ್ ಬಾಸ್ ಸೀಸನ್ 10ರ ಪ್ರಬಲ ಸ್ಪರ್ಧಿಯಾಗಿರುವ 'ಪೆಂಟಗನ್' ಸುಂದರಿ ಬಗೆಗಿ ಹಾಡೊಂದು ಅನಾವರಣಗೊಂಡಿದೆ.

Tanisha Kuppanda fans
ತನಿಷಾ ಕುಪ್ಪಂಡ ಅಭಿಮಾನಿ ಬಳಗ

ಶಮಂತ್ ನಾಗಾರಾಜ್ ಕ್ಯಾಚಿ ಮ್ಯಾಚಿ ಪದ ಸೇರಿಸಿ ಸಾಹಿತ್ಯ ಬರೆದಿದ್ದಾರೆ. ಶಶಾಂಕ್ ಶೇಷಗಿರಿ ಈ ಜಬರ್ದಸ್ತ್ ಗಾನಬಜಾನಕ್ಕೆ ಧ್ವನಿಯಾಗುವುದರ ಜೊತೆಗೆ ಮ್ಯೂಸಿಕ್ ಕಿಕ್ ಕೊಟ್ಟಿದ್ದಾರೆ. ತನಿಷಾ ಕುಪ್ಪಂಡ ಎನರ್ಜಿ, ಸ್ಟೈಲ್, ಮಾತಿಗೆ ನಿಂತ್ರೆ ಎದುರಾಳಿಗಳಿ ಟಕ್ಕರ್ ಕೊಡುವ ಆಕೆಯ ಗುಣವನ್ನು ವರ್ಣಿಸುವ ಹಾಡು ಇದಾಗಿದೆ. ಈಕೆಯೇ ಬಿಗ್ ಬಾಸ್ ಬೆಂಕಿ ಚೆಂಡು ಎಂಬುದೇ ಹಾಡಿನ ಹೈಲೆಟ್ಸ್. ಈ ಮಸ್ತ್ ಸಿಂಗಿಂಗ್ ಸೆನ್ಸೇಷನ್ ನೋಡಿದವರೆಲ್ಲ ತನಿಷಾ ಗೆಲ್ಲಬೇಕು ಅಂತಾ ಕಾಮೆಂಟ್ ಮಾಡುತ್ತಿದ್ದಾರೆ.

ಮಂಗಳಗೌರಿ ಸೀರಿಯಲ್​ನಲ್ಲಿ ಖಳನಾಯಕಿಯಾಗಿ ಕಾಣಿಸಿಕೊಂಡಿದ್ದ ತನಿಷಾ ಕುಪ್ಪಂಡ, ಆ ನಂತರ 'ಪೆಂಟಗನ್' ಸಿನಿಮಾ ಮೂಲಕ ಬೆಳ್ಳಿಪರದೆಗೂ ಎಂಟ್ರಿ ಕೊಟ್ಟರು. ಬಳಿಕ ಕೋಮಲ್ ಅವರ 'ಉಂಡೆನಾಮ' ಚಿತ್ರದಲ್ಲೂ ಕಾಣಿಸಿಕೊಂಡರು. ಕೆಲ ಪ್ರಾಜೆಕ್ಟ್​ಗಳನ್ನು ಹೊಂದಿರುವ ಈ ಬೋಲ್ಡ್ ಬ್ಯೂಟಿ ಸದ್ಯ ಬಿಗ್ ಬಾಸ್ ಸೀಸನ್ 10ರಲ್ಲಿ ಪ್ರಬಲ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. ದೊಡ್ಮನೆ ಆಟದಲ್ಲಿ ಗೆದ್ದು ಬಾ ತನಿಷಾ ಎಂದು ಅಭಿಮಾನಿಗಳು ಬೆಂಬಲ ನೀಡುತ್ತಿದ್ದಾರೆ.

  • " class="align-text-top noRightClick twitterSection" data="">

ಇದನ್ನೂ ಓದಿ: S/O ಮುತ್ತಣ್ಣ; ಪ್ರಣಂ ದೇವರಾಜ್ ಹೊಸ ಸಿನಿಮಾಗೆ ಸಾಥ್ ಕೊಟ್ಟ ಡೈನಾಮಿಕ್ ಫ್ಯಾಮಿಲಿ

ನಟ ಸುದೀಪ್​ ನಡೆಸಿಕೊಡುವ ಈ ಜನಪ್ರಿಯ ಕಾರ್ಯಕ್ರಮದಲ್ಲಿ ತನಿಷಾ ಕುಪ್ಪಂಡ ಸಖತ್​ ಫೈಟ್​ ಕೊಡುವ ಸ್ಪರ್ಧಿ ಎಂದೇ ಗುರುತಿಸಿಕೊಂಡಿದ್ದಾರೆ. ಸೀಸನ್​ 10ರ ಫಿನಾಲೆಗೆ ಕೆಲವೇ ಕೆಲ ದಿಒನಗಳು ಬಾಕಿ ಉಳಿದಿವೆ. ಹೀಗಿರುವಾಗಿ ಪ್ರತೀ ಸ್ಪರ್ಧಿಗಳ ಅಭಿಮಾನಿಗಳು ತಮ್ಮ ಮೆಚ್ಚಿನ ಸ್ಪರ್ಧಿಗಳು ಗೆಲ್ಲಲಿ ಎಂದು ಹಾರೈಸುತ್ತಿದ್ದಾರೆ. ಸದ್ಯ ಉಳಿದುಕೊಂಡಿರುವ ಎಲ್ಲರೂ ಪ್ರಬಲ ಸ್ಪರ್ಧಿಗಳೇ ಎನ್ನಬಹುದು. ಯಾರು ಬಿಗ್​ ಬಾಸ್​ ಟ್ರೋಫಿಯನ್ನು ತಮ್ಮ ಮನೆಗೆ ಕೊಂಡೊಯ್ಯುತ್ತಾರೆ? ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಬಿಗ್‌ಬಾಸ್ ಮನೆಯಲ್ಲಿ ವಿನಯ್-ಪ್ರತಾಪ್‌ ವಾಗ್ಯುದ್ಧ: ಹೊಸ ಪ್ರೋಮೊ ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.