ETV Bharat / entertainment

ಈ ವರ್ಷ ಸಿನಿಸುಗ್ಗಿ! ಕನ್ನಡ, ತೆಲುಗು, ತಮಿಳಲ್ಲಿ ಸಾಲುಗಟ್ಟಿ ನಿಂತಿವೆ ಬಿಗ್​ ಬಜೆಟ್ ಸಿನಿಮಾಗಳು

author img

By

Published : Feb 1, 2023, 5:37 PM IST

ಈ ವರ್ಷ ಯಾವೆಲ್ಲಾ ಪ್ಯಾನ್​ ಇಂಡಿಯಾ, ಬಿಗ್​ ಬಜೆಟ್,​ ಬಹು ನಿರೀಕ್ಷಿತ ಸಿನಿಮಾಗಳು ಬಿಡುಗಡೆ ಆಗಲಿವೆ ಅನ್ನೋದನ್ನು ತಿಳಿಯೋಣ ಬನ್ನಿ.

Big Budget Movies 2023
2023 ಸಿನಿಸುಗ್ಗಿ

ಕಳೆದ ಕೆಲವು ವರ್ಷಗಳಿಂದ ಭಾರತೀಯ ಮನೋರಂಜನಾ ಉದ್ಯಮ ಹಲವು ಏಳುಬೀಳುಗಳಿಂದ ಕೂಡಿತ್ತಾದರೂ, ಪ್ರೇಕ್ಷಕರನ್ನು ತಲುಪುವಲ್ಲಿ ಕೆಲವು ಸಿನಿಮಾಗಳು ಯಶಸ್ವಿಯಾಗಿವೆ. ಪ್ರಸ್ತುತ ಕಾಲಘಟ್ಟದಲ್ಲಿ ಸಿನಿಮಾಪ್ರಿಯರ ಅಭಿರುಚಿ ಬದಲಾಗುತ್ತಿದೆ. ಹೊಸದನ್ನು, ಉತ್ತಮ ಕಥೆಯನ್ನು ಪ್ರೇಕ್ಷಕರು ಬಯಸುತ್ತಾರೆಂಬ ವಿಚಾರ ಚಿತ್ರರಂಗದವರಿಗೆ ಮನದಟ್ಟಾಗಿದೆ. ಹಾಗಂತ ಮೇಕಿಂಗ್​ ವಿಚಾರವನ್ನು ಮರೆಯುವಂತಿಲ್ಲ. ಉತ್ತಮ ಕಥಾಹಂದರವುಳ್ಳ ಚಿತ್ರಗಳನ್ನು ಪ್ರೇಕ್ಷಕರಿಗೆ ತಲುಪಿಸಲು ಭಾರತೀಯ ಚಿತ್ರರಂಗ ಪೂರ್ಣ ಪ್ರಮಾಣದಲ್ಲಿ ಶ್ರಮಿಸುತ್ತಿದೆ. ಈ ವರ್ಷ ಯಾವೆಲ್ಲಾ ಸಿನಿಮಾ ಬಿಡುಗಡೆ ಆಗಲಿದೆ ಅನ್ನೋದನ್ನು ನೋಡೋಣ.

ಸಿನಿಮಾ, ಟಿವಿ ಕಾರ್ಯಕ್ರಮ ಹಾಗೂ ಸಿನಿಮಾ ತಾರೆಯರ ಅಧಿಕೃತ ಮಾಹಿತಿ ತಾಣವೆನಿಸಿಕೊಂಡಿರುವ ಇಂಟರ್​ನೆಟ್​ ಮೂವಿ ಡೇಟಾಬೇಸ್​ (ಐಎಂಡಿಬಿ) 2023 ಸಾಲಿನ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯನ್ನು ಕೆಲವು ದಿನಗಳ ಹಿಂದೆ ಬಿಡುಗಡೆ ಮಾಡಿತ್ತು. 20 ಚಿತ್ರಗಳ ಈ ಪಟ್ಟಿಯಲ್ಲಿ ಕನ್ನಡದಿಂದ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಸುದೀಪ್​ ಅಭಿನಯಿಸಿರುವ ಪ್ಯಾನ್​ ಇಂಡಿಯಾ ಚಿತ್ರ 'ಕಬ್ಜ' ಕೂಡ ಇದೆ. ಕೆಜಿಎಫ್​ 2, ಕಾಂತಾರ ಸಿನಿಮಾ ಬಳಿಕ ಇಡೀ ಭಾರತೀಯ ಚಿತ್ರರಂಗದ ಕಣ್ಣು ಸ್ಯಾಂಡಲ್​ವುಡ್​ ಮೇಲೆ ನೆಟ್ಟಿದ್ದು, ಅತ್ಯುತ್ತಮ ಚಿತ್ರಗಳನ್ನು ಕೊಡಲು ಕನ್ನಡ ಚಿತ್ರರಂಗ ಸಜ್ಜಾಗಿದೆ. ಈ ಪಟ್ಟಿಯಲ್ಲಿದ್ದ ಪಠಾಣ್ (250 ಕೋಟಿ ರೂ. ಬಂಡವಾಳ)​​ ಸಿನಿಮಾ ಜಗತ್ತಿನಾದ್ಯಂತ ಸದ್ದು ಮಾಡುತ್ತಿದ್ದು, ಉಳಿದ ಸಿನಿಮಾಗಳು ಬಿಡುಗಡೆಗೆ ತಯಾರಿ ನಡೆಸಿವೆ.

ಕಬ್ಜ ಸಿನಿಮಾ: ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಅಭಿನಯ ಚಕ್ರವರ್ತಿ ಸುದೀಪ್ ನಟನೆಯ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ಕಬ್ಜ. ಸ್ವಾತಂತ್ರ್ಯ ಹೋರಾಟಗಾರ ಅಮರೇಶ್ವರನ ಮಗ ಅರ್ಕೇಶ್ವರ 1960-1984ರ ಅವಧಿಯಲ್ಲಿ ಭಾರತದಲ್ಲಿ ಭೂಗತ ಜಗತ್ತಿನ ರಾಜನಾಗುತ್ತಾನೆ ಮತ್ತು ಭಾರತೀಯ ಇತಿಹಾಸದಲ್ಲಿ ತನ್ನ ಛಾಪು ಮೂಡಿಸುತ್ತಾನೆ. ಇಂಥದ್ದೊಂದು ಕಥೆ ಇರುವ ಹೈ ವೋಲ್ಟೇಜ್ ಚಿತ್ರವಾಗಿರೋ ಕಬ್ಜ, ಆರ್.ಚಂದ್ರು ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ. ಅದ್ಧೂರಿ ಮೆಕಿಂಗ್​ ಇರುವ ಕಬ್ಜ ಬಿಡುಗಡೆಗೆ ಪ್ರೇಕ್ಷಕರು ಕಾಯುತ್ತಿದ್ದಾರೆ.

Big Budget Movies 2023
ಐಎಂಡಿಬಿ ಬಿಡುಗಡೆ ಮಾಡಿದ ಬಹುನಿರೀಕ್ಷಿತ ಚಿತ್ರಗಳ ಪಟ್ಟಿ

ಕಿಸಿ ಕಾ ಭಾಯ್ ಕಿಸಿ ಕಿ ಜಾನ್: ಬಾಲಿವುಡ್​ ಸೂಪರ್​ ಸ್ಟಾರ್​​ ಸಲ್ಮಾನ್ ಖಾನ್ ನಟನೆಯ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾ ಈ ವರ್ಷದ ಈದ್ (12 ಏಪ್ರಿಲ್ 2023) ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವನ್ನು 90 ಕೋಟಿ ರೂಪಾಯಿಗಳಲ್ಲಿ ನಿರ್ಮಾಣ ಮಾಡಲಾಗಿದೆ.

ಜವಾನ್​: ಪಠಾಣ್ ಯಶಸ್ಸಿನ ಖುಷಿಯಲ್ಲಿರುವ ಶಾರುಖ್ ಖಾನ್ ಅವರ ಮುಂದಿನ ಚಿತ್ರ ಜವಾನ್. ಮೊದಲ ಬಾರಿಗೆ ಶಾರುಖ್ ಖಾನ್ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಿರ್ದೇಶಕ ಅಟ್ಲೀ ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ. 200 ಕೋಟಿ ರೂ. ವೆಚ್ಚದ ಈ ಚಿತ್ರ ಇದೇ ಜೂನ್ 2ರಂದು ಬಿಡುಗಡೆಯಾಗಲಿದೆ.

ಡುಂಕಿ: ಶಾರುಖ್ ಖಾನ್ ಅವರ ಮುಂದಿನ ಚಿತ್ರ 2023ರ ಕೊನೆಯಲ್ಲಿ ಬಿಡುಗಡೆ ಆಗಲಿದೆ. ರಾಜಕುಮಾರ್​ ಹಿರಾನಿ ನಿರ್ದೇಶನದ ಈ ಸಿನಿಮಾದ ಬಜೆಟ್​ 100 ಕೋಟಿ ರೂಪಾಯಿ ಎಂದು ಹೇಳಲಾಗಿದೆ.

ಬಡೇ ಮಿಯಾನ್ ಚೋಟೆ ಮಿಯಾನ್: ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್, ಜಾನ್ವಿ ಕಪೂರ್ ನಟನೆಯ ಬಡೇ ಮಿಯಾನ್ ಚೋಟೆ ಮಿಯಾನ್ ಚಿತ್ರವನ್ನು ಅಲಿ ಅಬ್ಬಾಸ್ ಜಾಫರ್ ನಿರ್ದೇಶನ ಮಾಡುತ್ತಿದ್ದಾರೆ. 350 ಕೋಟಿ ರೂಪಾಯಿ ವೆಚ್ಚದ ಈ ಚಿತ್ರವು ಡಿಸೆಂಬರ್ 22ರಂದು ಬಿಡುಗಡೆಯಾಗಲಿದೆ. ಈ ಚಿತ್ರ ಶಾರುಖ್​ ಅಭಿನಯದ ಡುಂಕಿಗೆ ಪೈಪೋಟಿ ನೀಡಲಿದೆ.

ಆದಿಪುರುಷ್: ಸೌತ್ ಸೂಪರ್ ಸ್ಟಾರ್ ಪ್ರಭಾಸ್, ಬಾಲಿವುಡ್ ನಟ ಸೈಫ್ ಅಲಿ ಖಾನ್, ಸನ್ನಿ ಸಿಂಗ್ ಮತ್ತು ಕೃತಿ ಸನೂನ್ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ 'ಆದಿಪುರುಷ್' ಕೂಡ ಈ ವರ್ಷ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಓಂ ರಾವುತ್ ನಿರ್ದೇಶಿಸಿದ್ದಾರೆ. ಚಿತ್ರದ ಬಜೆಟ್ 650 ಕೋಟಿ ರೂ. ಇದ್ದು ಚಿತ್ರದ ಕೆಲಸಗಳು ಇನ್ನೂ ನಡೆಯುತ್ತಿವೆ. ಚಿತ್ರ ಜೂನ್ 14 ರಂದು ಬಿಡುಗಡೆಯಾಗಲಿದೆ.

ಅನಿಮಲ್: ರಣ್​​ಬೀರ್ ಕಪೂರ್ ಅಭಿನಯದ 'ಅನಿಮಲ್' ಆಗಸ್ಟ್ 11ರಂದು ಬಿಡುಗಡೆಯಾಗಲಿದೆ. 140 ಕೋಟಿ ರೂಪಾಯಿ ಬಜೆಟ್‌ನಲ್ಲಿ ಚಿತ್ರ ತಯಾರಾಗುತ್ತಿದೆ. ಅನಿಲ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರವನ್ನು 'ಕಬೀರ್ ಸಿಂಗ್' ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸುತ್ತಿದ್ದಾರೆ.

ಗಣ್​​ಪತ್: ಗಣ್​​ಪತ್ ಚಿತ್ರದಲ್ಲಿ ನಟ ಟೈಗರ್ ಶ್ರಾಫ್ ಆ್ಯಕ್ಷನ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ವಿಕಾಸ್ ಬಹಲ್ ನಿರ್ದೇಶಿಸುತ್ತಿದ್ದಾರೆ. ಚಿತ್ರ ನಿರ್ಮಾಣಕ್ಕೆ 200 ಕೋಟಿ ರೂಪಾಯಿ ಬಜೆಟ್‌ ಫಿಕ್ಸ್ ಆಗಿದ್ದು, ಕೃತಿ ಸನೂನ್​​ ಮತ್ತೊಮ್ಮೆ ಚಿತ್ರದ ಮೂಲಕ ಟೈಗರ್ ಶ್ರಾಫ್ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಅಮಿತಾಭ್​ ಬಚ್ಚನ್ ಕೂಡ ಇರಲಿದ್ದು ಇದೇ ವರ್ಷ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಯುತ್ತಿದೆ.

ಟೈಗರ್ 3: ಕತ್ರಿನಾ ಕೈಫ್ ಮತ್ತು ಸಲ್ಮಾನ್ ಖಾನ್ ನಟನೆಯ 'ಟೈಗರ್ 3' ಸಿನಿಮಾ ಏಪ್ರಿಲ್​ 21ರಂದು ಬಿಡುಗಡೆ ಆಗಲಿದೆ. ಮನೀಶ್ ಶರ್ಮಾ ನಿರ್ದೇಶನದ ಈ ಸಿನಿಮಾಗೆ ಯಶ್ ರಾಜ್ ಫಿಲ್ಮ್ಸ್‌ನಿಂದ 225 ಕೋಟಿ ರೂಪಾಯಿ ಬಂಡವಾಳ ಹೂಡಲಾಗಿದೆ.

ಪ್ರೊಜೆಕ್ಟ್​ ಕೆ: ಬಿಗ್​ ಬಜೆಟ್​ ಅಲ್ಲದೇ ಪ್ಯಾನ್​ ಇಂಡಿಯಾ ಸಿನಿಮಾಗಳು ಸಹ ಬಿಡುಗಡೆಗೆ ಸಜ್ಜಾಗಿದೆ. ಪ್ರಭಾಸ್, ದೀಪಿಕಾ ಪಡುಕೋಣೆ ಮತ್ತು ಅಮಿತಾಭ್​ ಬಚ್ಚನ್ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ 'ಪ್ರಾಜೆಕ್ಟ್ ಕೆ' ಈ ವರ್ಷ ಬಿಡುಗಡೆಯಾಗುತ್ತದೆಯೇ ಅಥವಾ ಇಲ್ಲವೇ ಎಂಬುದರ ಖಚಿತ ಮಾಹಿತಿ ಇಲ್ಲ. ಚಿತ್ರತಂಡ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿಲ್ಲ. ಆದರೆ ಚಿತ್ರದ ಕೆಲಸಗಳು ಜೋರಾಗಿ ನಡೆಯುತ್ತಿವೆ. 500 ಕೋಟಿ ಬಜೆಟ್​ನ, ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರ ತೆಲುಗು ಜೊತೆಗೆ ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಸಲಾರ್​: ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರು ಸೌತ್ ಸೂಪರ್ ಸ್ಟಾರ್ ಪ್ರಭಾಸ್ ನಟನೆಯ ‘ಸಲಾರ್’ ಚಿತ್ರಕ್ಕೆ ಬಹಳ ದಿನಗಳಿಂದ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು ಮತ್ತು ಶ್ರುತಿ ಹಾಸನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. 200 ಕೋಟಿ ರೂಪಾಯಿ ಬಜೆಟ್​ನ ಈ ಪ್ಯಾನ್​ ಇಂಡಿಯಾ ಚಿತ್ರ ಸೆಪ್ಟೆಂಬರ್ 28ರಂದು ಬಿಡುಗಡೆಯಾಗಲಿದೆ.

ಪುಷ್ಪ 2: ಸೌತ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅವರು 'ಪುಷ್ಪ - ದಿ ರೈಸ್' ಮೂಲಕ ವಿಶ್ವಾದ್ಯಂತ ಅಬ್ಬರಿಸಿದ್ದು, ಇದೀಗ 'ಪುಷ್ಪ 2: ದಿ ರೂಲ್' ಚಿತ್ರೀಕರಣ ನಡೆಯುತ್ತಿದೆ. ಪುಷ್ಪ ಸೀಕ್ವೆಲ್ 450 ಕೋಟಿ ರೂಪಾಯಿಯಲ್ಲಿ ತಯಾರಾಗುತ್ತಿದ್ದು, ಚಿತ್ರದ ಬಿಡುಗಡೆ ದಿನಾಂಕ ಇನ್ನೂ ಬಹಿರಂಗಪಡಿಸಿಲ್ಲ.

ಪೊನ್ನಿಯಿನ್ ಸೆಲ್ವನ್: ಏಪ್ರಿಲ್ 28 ರಂದು 'ಪೊನ್ನಿಯಿನ್ ಸೆಲ್ವನ್-2' ಬಿಡುಗಡೆ ಆಗಲಿದೆ. ಮೊದಲ ಭಾಗದಿಂದ ಚಿತ್ರ 450 ಕೋಟಿ ಗಳಿಸಿದ್ದು, ನಿರ್ದೇಶಕ ಮಣಿರತ್ನಂ ಅವರ 'ಪೊನ್ನಿಯಿನ್ ಸೆಲ್ವನ್-2' ಅಬ್ಬರಿಸಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

ಇಂಡಿಯನ್​ 2: ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ಕಮಲ್ ಹಾಸನ್ ಅವರು 'ಇಂಡಿಯನ್ 2' ಚಿತ್ರದ ಸಲುವಾಗಿ ಚರ್ಚೆಯಲ್ಲಿದ್ದಾರೆ. 220 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾಗುತ್ತಿರುವ ಚಿತ್ರ ಇದೇ ವರ್ಷ ಬಿಡುಗಡೆಯಾಗಲಿದೆ. ತಮಿಳು ಜೊತೆಗೆ ಹಿಂದಿ, ಮಲಯಾಳಂ, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿಯೂ ಚಿತ್ರ ಬಿಡುಗಡೆಯಾಗಲಿದೆ. ಎಸ್.ಕೆ. ಶಂಕರ್ ನಿರ್ದೇಶನದ ಈ ಚಿತ್ರದಲ್ಲಿ ಕಾಜಲ್ ಅಗರ್ವಾಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಜೈಲರ್: ಜೈಲರ್ ಚಿತ್ರದ ಮೂಲಕ ಸೂಪರ್​ಸ್ಟಾರ್ ರಜನಿಕಾಂತ್ ಅಬ್ಬರಿಸಲಿದ್ದಾರೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಪ್ಯಾನ್ ಇಂಡಿಯಾ ಚಲನ ಚಿತ್ರದಲ್ಲಿ ಶಿವ ರಾಜ್​ಕುಮಾರ್ ಮತ್ತು ರಮ್ಯಾ ಕೃಷ್ಣನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ಏಪ್ರಿಲ್ 14ರಂದು ಬಿಡುಗಡೆಯಾಗಲಿದೆ.

ಈ ವರ್ಷ ತೆರೆ ಕಾಣಲಿರುವ ಕನ್ನಡ ಸಿನಿಮಾಗಳು: ದರ್ಶನ್ ನಟನೆಯ ಕ್ರಾಂತಿ ಸಿನಿಮಾ ಈಗಾಗಲೇ ಬಿಡುಗಡೆ ಆಗಿದ್ದು, ರಿಯಲ್​ ಸ್ಟಾರ್​ ಉಪೇಂದ್ರ ಅಭಿನಯದ ಯುಐ, ಶಿವರಾಜ್​ ಕುಮಾರ್​ ನಟನೆಯ ಘೋಸ್ಟ್, ಕರಟಕ ಧಮನಕ, ರಕ್ಷಿತ್​ ಶೆಟ್ ಅಭಿನಯದ ಸಪ್ತಸಾಗರದಾಚೆ ಎಲ್ಲೋ, ಗಣೇಶ್​​ ಅಭಿನಯದ ಬಾನ ದಾರಿಯಲ್ಲಿ, ದಿನಿಯಾ ವಿಜಯ್​ ಅವರ ಭೀಮ, ರಾಜ್​ ಬಿ ಶೆಟ್ಟಿ ಅವರ ಸ್ವಾತಿ ಮುತ್ತಿನ ಮಳೆ ಹನಿಯೇ, ಧನಂಜಯ್​ ನಟನೆಯ ಉತ್ತರಾಕಾಂಡ, ಹೊಯ್ಸಳ, ಧ್ರುವ ಸರ್ಜಾ ನಟನೆಯ ಕೆಡಿ, ಹೀಗೆ ಹಲವು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿದೆ.

ಇದನ್ನೂ ಓದಿ: ವರನಟ ರಾಜ್ ಕುಮಾರ್ ಆದರ್ಶದ‌ ಹಾದಿಯಲ್ಲಿ ಕಬ್ಜ ನಿರ್ದೇಶಕ ಆರ್ ಚಂದ್ರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.