ಮುಂಬೈ: ಹಿಂದಿಯ ಬಿಗ್ ಬಾಸ್ ಜೋಡಿ ಕೀತ್ ಸಿಕ್ವೇರಾ ಹಾಗೂ ರೋಚೆಲ್ ರಾವ್ ಸಿಕ್ವೇರಾ ತಮ್ಮ ಮೊದಲ ಮಗುವಿಗೆ ತಂದೆ ತಾಯಿಯಾಗಿದ್ದಾರೆ. ಭಾನುವಾರ ರೋಚೆಲ್ ರಾವ್ ಸಿಕ್ವೇರಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಂಗಳವಾರ ಜೋಡಿ ಈ ಸಂತಸದ ವಿಷಯವನ್ನು ತಮ್ಮ ಸೋಷಿಯಲ್ ಮೀಡಿಯಾ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ವಿಶೇಷ ಪೋಸ್ಟ್ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಇನ್ಸ್ಟಾಗ್ರಾಂ ಪೋಸ್ಟ್ ಹಾಕಿರುವ ರೋಚೆಲ್, "ದೇವರು ನಮಗೆ ನೀಡಬಹುದಾದ ಅತ್ಯಂತ ದೊಡ್ಡ ಆಶೀರ್ವಾದ ಮಾಡಿದ್ದಾನೆ. ಅಕ್ಟೋಬರ್ 1ಕ್ಕೆ ನಮ್ಮ ಪುಟ್ಟ ಮಗಳು, ಬೇಬಿ ಸಿಕ್ವೇರಾ ಜನಿಸಿದಳು. ಈ ಅದ್ಭುತ ಪ್ರಯಾಣದ ಉದ್ದಕ್ಕೂ ನೀವು ನೀಡುತ್ತಿರುವ ಅತಿಯಾದ ಪ್ರೀತಿ ಹಾಗೂ ಬೆಂಬಲಕ್ಕಾಗಿ ಧನ್ಯವಾದಗಳು. ವಿ ಲವ್ಯೂ. ನಾನು ಈ ಮಗುವಿಗಾಗಿ ಪ್ರಾರ್ಥಿಸಿದೆ, ನಾನು ಅವನಿಂದ ಕೇಳಿದ್ದನ್ನು ಭಗವಂತ ನನಗೆ ಕೊಟ್ಟಿದ್ದಾನೆ. ನಾವು ಖುಷಿ ಉತ್ತುಂಗದಲ್ಲಿದ್ದೇವೆ. ಬೇಬಿ ಗರ್ಲ್ ಸಿಕ್ವೇರಾ ಇಲ್ಲಿದ್ದಾಳೆ. 1.10.2023" ಎಂದು ಬರೆದುಕೊಂಡಿದ್ದಾರೆ.
ರೋಚೆಲ್ ರಾವ್ ಸಿಕ್ವೇರಾ ಈ ಪೋಸ್ಟ್ ಹಂಚಿಕೊಂಡ ಬೆನ್ನಲ್ಲೆ ಅಭಿಮಾನಿಗಳು ಜೋಡಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಕಮೆಂಟ್ ಬಾಕ್ಸ್ಗಳಲ್ಲಿ ಶುಭಾಶಯಗಳ ಮಹಾಪೂರವೇ ತುಂಬಿವೆ. ಇನ್ಸ್ಟಾಗ್ರಾಂ ಬಳಕೆದಾರರು "ಓಹ್ ವಾಹ್ ಇದು ಅದ್ಭುತ ವಿಷಯ ಮತ್ತು ಅಭಿನಂದನೆಗಳು, ದೇವರು ನಿಮ್ಮನ್ನು ಆಶೀರ್ವದಿಸಲಿ" ಎಂದಿದ್ದಾರೆ. ಇನ್ನೊಬ್ಬರು, "ಹೃದಯಪೂರ್ವಕ ಅಭಿನಂದನೆಗಳು" ಎಂದು ಬರೆದಿದ್ದಾರೆ. ಮತ್ತೊಬ್ಬರು "ಓಹ್ ಮೈ ಗಾಡ್, ಅಭಿನಂದನೆಗಳು" ಎಂದು ಶುಭ ಹಾರೈಸಿದ್ದಾರೆ.
ಈ ಜೋಡಿ ಆಗಸ್ಟ್ನಲ್ಲಿ ತಾವು ತಂದೆ ತಾಯಿಯಾಗುತ್ತಿರುವುದರ ಬಗ್ಗೆ ಘೋಷಿಸಿದ್ದರು. ಬೇಬಿ ಬಂಪ್ ಫೋಟೋ ಶೂಟ್ ಅನ್ನು ಹೊಂಚಿಕೊಂಡು, ತಂದೆ ತಾಯಿಯಾಗುತ್ತಿದ್ದೇವೆ ಎಂದು ಸಂತಸ ಹಂಚಿಕೊಂಡಿದ್ದರು. ಫೋಟೋದಲ್ಲಿ ಇಬ್ಬರೂ ಗುಲಾಬಿ ಬಣ್ಣದ ಉಡುಪುಗಳಲ್ಲಿ, ಸಮುದ್ರದ ಕಿನಾರೆಯಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದರು.
ಚಿತ್ರದ ಜೊತೆಗೆ "ಎರಡು ಪುಟ್ಟ ಕೈಗಳು, ಎರಡು ಪುಟ್ಟ ಪಾದಗಳು, ಹೆಣ್ಣು ಅಥವಾ ಗಂಡು ಮಗು ಸ್ವಾಗತಿಸಲು, ಇನ್ನು ಕಾಯುವುದು ಸಾಧ್ಯವೇ ಇಲ್ಲ! ಹೌದು ನೀವು ಸರಿಯಾಗಿ ಊಹಿಸಿದ್ದೀರಿ, ನಾವು ಮಗುವಿನ ನಿರೀಕ್ಷೆಯಲ್ಲಿದ್ದೇವೆ. ಈ ಅದ್ಭುತ ಕೊಡುಗೆಗಾಗಿ ದೇವರಿಗೆ ಧನ್ಯವಾದಗಳು. ನಿಮ್ಮೆ ಕೊನೆಯಿಲ್ಲದೇ ಪ್ರೀತಿ ಹಾಗೂ ಬೆಂಬಲಕ್ಕಾಗಿ ನಿಮ್ಮೆಲ್ಲರಿಗೂ ಧನ್ಯವಾದಗಳು. ದಯವಿಟ್ಟು ಈ ಹೊಸ ಪ್ರಯಾಣದಲ್ಲಿ ನಮಗಾಗಿ ಆಶೀರ್ವದಿಸಿ ಹಾಗೂ ಪ್ರಾರ್ಥಿಸಿ. ಕೀತ್ & ರೋಚೆಲ್ + ಒನ್" ಎಂದು ಕ್ಯಾಪ್ಷನ್ ಬರೆದುಕೊಂಡಿದ್ದರು.
ಇದನ್ನೂ ಓದಿ: ರಾಜ್ ಕುಂದ್ರಾ ಜೈಲು ಜೀವನದ ಅನುಭವ ತೆರೆಗೆ; ನಾಯಕನಾಗಿ ಅವರಲ್ಲ, ಮತ್ಯಾರು?