ETV Bharat / entertainment

ಅನನ್ಯಾ ಪಾಂಡೆ ಡೇಟಿಂಗ್​ ಕುರಿತು ಬಾಯ್ಬಿಟ್ಟ ತಾಯಿ ಭಾವನಾ ಪಾಂಡೆ!

ಆದಿತ್ಯ ರಾಯ್​ ಕಪೂರ್​ ಜೊತೆಗೆ ಅನನ್ಯಾ ಪಾಂಡೆ ಡೇಟಿಂಗ್​ ಕುರಿತು ತಾಯಿ ಭಾವನಾ ಮುಕ್ತವಾಗಿ ಮಾತನಾಡಿದ್ದಾರೆ.

author img

By

Published : Apr 11, 2023, 3:49 PM IST

Bhavna Pandey's mother is open about Ananya Pandey's dating!

ಹೈದರಾಬಾದ್​: ಬಾಲಿವುಡ್​ ನಟಿ ಅನನ್ಯಾ ಪಾಂಡೆ ಮತ್ತು ನಟ ಆದಿತ್ಯ ರಾಯ್​ ಕಪೂರ್​ ಡೇಟಿಂಗ್​ ನಡೆಸುತ್ತಿದ್ದಾರೆ ಎಂಬ ಸುದ್ದಿ ಬಿಟೌನ್​ ಗಲ್ಲಿಗಳಲ್ಲಿ ಸದ್ದು ಮಾಡುತ್ತಿದೆ. ಫ್ಯಾಷನ್​ ವೀಕ್​ನಲ್ಲಿ ಜೊತೆಯಾಗಿ ಕಾಣಿಸಿಕೊಂಡ ಈ ಜೋಡಿ ಅನೇಕ ಬಾರಿ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ಈ ವದಂತಿಗೆ ಪುಷ್ಟಿ ನೀಡುತ್ತಿದ್ದಾರೆ. ಆದರೆ, ಈ ಬಗ್ಗೆ ಇಬ್ಬರೂ ಇದುವರೆಗೂ ಯಾವುದೇ ಹೇಳಿಕೆ ನೀಡದೇ, ಇದು ಕೇವಲ ಗಾಳಿ ಸುದ್ದಿ ಎನ್ನುತ್ತಿದ್ದಾರೆ. ಈ ನಡುವೆ ಅನನ್ಯಾ ಪಾಂಡೆ, ತಾಯಿ ಭಾವನ ಪಾಂಡೆ ಮಗಳ ಕುರಿತು ಈ ಗಾಳಿ ಸುದ್ದಿಗಳು ಮತ್ತು ಆಕೆಯ ಸಂಬಂಧಗಳ ಕುರಿತು ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ.

ಈ ಕುರಿತು ಮಾತನಾಡಿರುವ ನಟ ಚಂಕಿ ಪಾಂಡೆ ಹೆಂಡತಿ ಭಾವನ, ಅನನ್ಯಾ ಇನ್ನು ಏಕಾಂಗಿ, ಈ ರೀತಿ ಬಾಲಿವುಡ್​ನ ನಟರೊಂದಿಗೆ ಓಡಾಡಿದಾಕ್ಷಣ ಸಂಬಂಧ ಇದೆ ಎನ್ನುವ ಗಾಳಿ ಸುದ್ದಿಗಳು ಈ ಉದ್ಯಮದಲ್ಲಿ ಸಾಮಾನ್ಯ. ಈಗಾಗಲೇ ಎಲ್ಲವನ್ನು ಸ್ವೀಕರಿಸಿದ್ದೀಯಾ. ಒಳ್ಳೆಯದು ಅಥವಾ ಕೆಟ್ಟದ್ದು ಎಲ್ಲವೂ ನಟನೆಯ ಅಗತ್ಯ ಭಾಗವಾಗಿರುತ್ತದೆ. ಅವರು, ನೆಗೆಟಿವ್​ ಹೊರತಾಗಿ ಅನೇಕರ ಪ್ರೀತಿ ಮತ್ತು ಪ್ರಶಂಸೆಯನ್ನು ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು ಸಕಾರಾತ್ಮಕ ಅಂಶಗಳಿಗೆ ಮಾತ್ರ ಗಮನ ಹರಿಸುತ್ತೇನೆ ಎಂದಿದ್ದಾರೆ

ಕೌಟುಂಬಿಕ ಹಿನ್ನೆಲೆ ಹೊಂದಿದ್ದರೂ ನಟಿ ಅನನ್ಯಾ ಪಾಂಡೆ ತಮ್ಮ ಸಿನಿ ಜೀವನದಲ್ಲಿ ಅನೇಕ ಏರಿಳಿತ ಕಂಡಿದ್ದು, ಅವರ ಕುಟುಂಬ ಬೆಂಬಲವಾಗಿ ನಿಂತಿದೆ. ಇನ್ನು ತಾಯಿಯಾಗಿ ಮಗಳಿಗೆ ಯಾವ ರೀತಿ ಆಕೆಯ ವೃತ್ತಿ ಜೀವನದ ಸೋಲು - ಗೆಲುವು ಕುರಿತು ಮಾತನಾಡಿರುವ ಭಾವನಾ, ನಿನ್ನ ಬಗ್ಗೆ ನೀನು ಕಠಿಣವಾಗಬೇಡ. ನಿನಗೆ ಸಾಧ್ಯವಾಗಿರುವುದನ್ನು ಮಾಡು ಸಾಕು. ಇತರ ಅಂಶಗಳ ಕುರಿತು ಹೆಚ್ಚಿನ ಗಮನ ಹರಿಸಬೇಕಿದೆ ಎಂದಿದ್ದಾರೆ.

ನೈತಿಕವಾಗಿ ಸರಿಯ ಹಾದಿಯಲ್ಲಿ, ವಿನಯತೆ ಮತ್ತು ಗೌರವದಿಂದ ನಡೆದುಕೊಳ್ಳುವಂತೆ ನಾನು ಆಕೆಗೆ ಸಲಹೆ ನೀಡುತ್ತೇನೆ. ಎಷ್ಟೇ ಗೆಲುವು - ಸೋಲು ಕಂಡರೂ ಒಂದೇ ರೀತಿಯ ವರ್ತನೆ ಇರಬೇಕು ಎಂದು ಹೇಳುತ್ತೇನೆ. ಆಕೆಯ ವೃತ್ತಿ ಜೀವನ ಕುರಿತು ನಾನು ಎಂದಿಗೂ ಆಕೆಗೆ ಸಲಹೆ ನೀಡುವುದಿಲ್ಲ. ಕಾರಣ ನಾನು ನಟಿಯಲ್ಲ. ಕೇವಲ ಮಾನವೀಯತೆ ವಿಚಾರದಲ್ಲಿ ಒಳ್ಳೆಯ ಮನುಷ್ಯತ್ವ ಹೊಂದುವ ವಿಚಾರದಲ್ಲಿ ಸರಿಯಾಗಿರುವಂತೆ ಸಲಹೆ ನೀಡಬಲ್ಲೆ ಎಂದಿದ್ದಾರೆ.

ರೂಪದರ್ಶಿಯಾಗಿದ್ದ ಬಣ್ಣದ ಲೋಕ ಪ್ರವೇಶಿಸಿದ್ದ ನಟಿ ಅನನ್ಯಾ ಪಾಂಡೆ ಕರಣ್​ ಜೋಹರ್​ ಅವರ 'ಸ್ಟೂಡೆಂಟ್​ ಆಫ್​​ ದಿ ಇಯರ್​-2' ಚಿತ್ರದ ಮೂಲಕ ಬಾಲಿವುಡ್​ ಪ್ರವೇಶಿಸಿದರು. 'ಪತಿ ಪತ್ನಿ ಔತ್​ ಹೋ', 'ಖಾಲಿ ಪೀಲಿ', 'ಗೆಹ್ರಿಯಾನ್'​ ನಂತಹ ಹಲವು ಸಿನಿಮಾಗಳಲ್ಲಿ ಆಕೆ ನಟಿಸಿದ್ದಾರೆ. ತೆಲುಗಿನಲ್ಲಿ ಪುರಿ ಜಗನ್ನಾಥ್​ ನಿರ್ದೇಶನದ ವಿಜಯ್​ ದೇವರಕೊಂಡ ಅಭಿನಯದ 'ಲೈಗರ್'​ ಸಿನಿಮಾದಲ್ಲಿ ಅವರು ಕಾಣಿಸಿಕೊಂಡರೂ ಈ ಚಿತ್ರ ನಿರೀಕ್ಷಿಸಿದ ಮಟ್ಟದಲ್ಲಿ ಅನನ್ಯಾಗೆ ಗೆಲುವು ತಂದುಕೊಡಲಿಲ್ಲ. ಸದ್ಯ 'ಡ್ರೀಮ್​ ಗರ್ಲ್​​ 2' ಸೇರಿದಂತೆ ಹಲವು ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ.

ಇದನ್ನೂ ಓದಿ: ಕಹಿ ಘಟನೆಗಳಿಂದ ಕಲಿತ ಪಾಠ ಮರೆಯುವುದಿಲ್ಲ: ನಟಿ ಸಮಂತಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.