ETV Bharat / entertainment

ಜುಲೈ 15ರಂದು ರಾಜ್ಯಾದ್ಯಂತ 'ಬೆಂಕಿ' ಬಿಡುಗಡೆ

author img

By

Published : Jul 5, 2022, 11:50 AM IST

ಎ.ಆರ್. ಶಾನ್ ನಿರ್ದೇಶನದ ಬೆಂಕಿ ಚಿತ್ರ ಬಿಡುಗಡೆಗೆ ಸಿದ್ಧ-ಜುಲೈ 15ರಂದು ಮುಹೂರ್ತ- ಚಿತ್ರದ ನಾಯಕ ನಟ ಅನೀಶ್ ಹೇಳಿಕೆ

benki film
ಬೆಂಕಿ ಚಿತ್ರ

ಶಿವಮೊಗ್ಗ: ಎ.ಆರ್. ಶಾನ್ ನಿರ್ದೇಶನದ ಬೆಂಕಿ ಚಿತ್ರ ಜುಲೈ 15 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಾಯಕ ನಟ ಅನೀಶ್ ಹೇಳಿದರು. ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು ಅಣ್ಣ-ತಂಗಿಯ ಸಂಬಂಧವನ್ನು ಹೇಳುವ ಹಳ್ಳಿಯ ಸೊಗಡು ಹೊಂದಿರುವ, ಕುಟುಂಬ ಕಲ್ಪನೆ ಚಿತ್ರ ಇದಾಗಿದ್ದು, ಜುಲೈ 15 ರಂದು ಬಿಡುಗಡೆಯಾಗಲಿದೆ. ಶಿವಮೊಗ್ಗದ ಜನ ಈ ಸಿನಿಮಾ ನೋಡುವ ಮೂಲಕ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.

ಈ ಚಿತ್ರದಲ್ಲಿ ನಾಯಕಿಯಾಗಿ ಸಂಪದ ಅಭಿನಯಿಸಿದ್ದು, ಶ್ರುತಿ ಪಾಟೀಲ್ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮುಖ್ಯ ಪಾತ್ರಗಳಲ್ಲಿ ಅಚ್ಯುತಕುಮಾರ್, ಉಗ್ರಂ ಮಂಜು, ಹುಲಿ ಕಾರ್ತಿಕ್ ಸೇರಿದಂತೆ ಹಲವರು ಅಭಿನಯಿಸಿದ್ದು, ಕೆ.ವಿ. ರವಿಕುಮಾರ್ ಚಿತ್ರದ ನಿರ್ಮಾಪಕರಾಗಿದ್ದಾರೆ. ಚಿತ್ರಕ್ಕೆ ಆನಂದ್ ರಾಜ್ ವಿಕ್ರಂ ಸಂಗೀತ ನೀಡಿದ್ದಾರೆ.

ಮಂಡ್ಯ, ಮೈಸೂರು, ಕೊಳ್ಳೇಗಾಲ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ. ಹಳ್ಳಿಯ ಪರಿಸರವನ್ನು ಇಟ್ಟುಕೊಂಡು ಈ ಚಿತ್ರದ ಕಥೆಯನ್ನು ಹೆಣೆದಿದ್ದು, ತಾಂತ್ರಿಕ ಅಂಶಗಳು ಚಿತ್ರಕ್ಕೆ ಪೂರಕವಾಗಿವೆ. ಶಿವಮೊಗ್ಗದ ಜನತೆ ನಮ್ಮ ಚಿತ್ರಗಳನ್ನು ಸಂತೋಷದಿಂದ ಸ್ವಾಗತಿಸುತ್ತಾರೆ. ಹಾಗೆಯೇ ಈ ಚಿತ್ರವನ್ನು ಚಿತ್ರಮಂದಿರಕ್ಕೆ ಬಂದು ನೋಡಬೇಕು ಎಂದು ನಾಯಕ ನಟ ಅನೀಶ್ ಮನವಿ ಮಾಡಿದರು.

ಇದನ್ನೂ ಓದಿ:ಖ್ಯಾತ ಬಂಗಾಳಿ ನಿರ್ದೇಶಕ ತರುಣ್ ಮಜುಂದಾರ್ ನಿಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.