ETV Bharat / entertainment

'ಬ್ಯಾಡ್ ಬಾಯ್ಸ್' ಜೊತೆ 'ಭೀಮ'ನ ಎಂಟ್ರಿ; ದುನಿಯಾ ವಿಜಯ್​ ಸಿನಿಮಾ ಮೇಲೆ ಹೆಚ್ಚಿದ ನಿರೀಕ್ಷೆ

'ಭೀಮ' ಸಿನಿಮಾದ 'ಬ್ಯಾಡ್ ಬಾಯ್ಸ್' ಹಾಡು ಯೂಟ್ಯೂಬ್​ನಲ್ಲಿ ಬಿಡುಗಡೆಯಾಗಿದ್ದು, 4 ಮಿಲಿಯನ್​ಗೂ ಹೆಚ್ಚು ಜನರು ನೋಡಿ ಮೆಚ್ಚಿಕೊಂಡಿದ್ದಾರೆ.

author img

By ETV Bharat Karnataka Team

Published : Sep 22, 2023, 2:00 PM IST

beema movie bad boys song released
'ಬ್ಯಾಡ್ ಬಾಯ್ಸ್' ಜೊತೆ 'ಭೀಮ'ನ ಎಂಟ್ರಿ; ದುನಿಯಾ ವಿಜಯ್​ ಸಿನಿಮಾ ಮೇಲೆ ಹೆಚ್ಚಿದ ನಿರೀಕ್ಷೆ

ಕನ್ನಡ ಚಿತ್ರರಂಗದಲ್ಲಿ ಶೀರ್ಷಿಕೆಯಿಂದಲೇ ದೊಡ್ಡ ಮಟ್ಟದ ಕ್ರೇಜ್ ಹುಟ್ಟಿಸಿರುವ ಸಿನಿಮಾ 'ಭೀಮ'. ಇದು ಈ ವರ್ಷದ ಬಹುನಿರೀಕ್ಷಿತ ಚಿತ್ರವಾಗಿದ್ದು, ಸಾಕಷ್ಟು ವಿಚಾರಗಳಿಗೆ ಗಮನ ಸೆಳೆಯುತ್ತಿದೆ. 'ಸಲಗ' ಚಿತ್ರದ ಬಳಿಕ ದುನಿಯಾ ವಿಜಯ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮತ್ತೊಂದು ಮಾಸ್ ಕಮರ್ಷಿಯಲ್ ಎಂಟರ್​ಟೈನರ್​ ಸಿನಿಮಾವಿದು.

ಸದ್ಯ ಗಣೇಶ ಹಬ್ಬಕ್ಕೆ ಬಿಡುಗಡೆ ಆದ 'ಭೀಮ' ಸಿನಿಮಾದ 'ಬ್ಯಾಡ್ ಬಾಯ್ಸ್' ಹಾಡು ಯೂಟ್ಯೂಬ್​ನಲ್ಲಿ ಹವಾ ಸೃಷ್ಟಿಸಿದ್ದು, 4 ಮಿಲಿಯನ್ ಜನ ನೋಡಿ ಮೆಚ್ಚಿಕೊಂಡಿದ್ದಾರೆ‌. ಆಲ್ ಮೋಸ್ಟ್ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಸಿನಿಮಾದ ಮೊದಲ ಹಾಡಿಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ದುನಿಯಾ ವಿಜಯ್ ಈ ಹಾಡಿನ ಬಗ್ಗೆ ಮಾತನಾಡಿದ್ದಾರೆ.

ಭೀಮ ಚಿತ್ರದ ಮೊದಲ ಹಾಡು ದೊಡ್ಡ ಮಟ್ಟದಲ್ಲಿ ರೀಚ್ ಆಗಿರುವುದಕ್ಕೆ ದುನಿಯಾ ವಿಜಯ್ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಿದೆ. 'ಭೀಮ' ಸಮಾಜದಲ್ಲಿ ನಮ್ಮ ಅಕ್ಕ ಪಕ್ಕದ ಏರಿಯಾಗಳಲ್ಲಿ ನಡೆಯುವ ರೌಡಿಸಂ ಕಥೆಯನ್ನು ಒಳಗೊಂಡಿದೆ. ಸದ್ಯ ಬಿಡುಗಡೆ ಆಗಿರುವ ಬ್ಯಾಡ್ ಬಾಯ್ಸ್ ಹಾಡು ಏರಿಯಾಗಳಲ್ಲಿ ಇರುವ ಹುಡುಗರಿಗೆ, ಕಾಲೇಜು ಹುಡುಗರಿಗೆ ಇಷ್ಟ ಆಗಿದೆ. ಗಣೇಶ ಹಬ್ಬದಲ್ಲಿ ಈ ಹಾಡನ್ನು ಹಾಕಿ ಸಂಭ್ರಮಿಸುತ್ತಿದ್ದಾರೆ ಎಂದು ದುನಿಯಾ ವಿಜಯ್ ಸಂತಸ ಹಂಚಿಕೊಂಡರು.

ಸದ್ಯಕ್ಕೆ ರಿಲೀಸ್ ಆಗಿರುವ ಭೀಮ ಚಿತ್ರದ ಬ್ಯಾಡ್ ಬಾಯ್ಸ್ ಹಾಡಿನ ಆರಂಭದಲ್ಲಿ ದುನಿಯಾ ವಿಜಯ್ ಮಾತುಗಳು ಬರುತ್ತವೆ. ದುನಿಯಾ ವಿಜಯ್ ಈ ಹಾಡಿನ ಮೂಲಕ ತಮ್ಮ ಪಾತ್ರದ ಖದರ್ ತೋರಿಸಿದ್ದಾರೆ. 'ಭೀಮ'ನ ಪರಿಚಯಿಸುವ ರೀತಿಯಲ್ಲಿಯೇ ಈ ಹಾಡು ಮೂಡಿಬಂದಿದೆ. ಇದನ್ನು ನೋಡ್ತಾ ಹೋದ್ರೆ, ದುನಿಯಾ ವಿಜಯ್ ಇಲ್ಲೂ ಒಂದು ಭೂಗತ ಜಗತ್ತಿನ ಕಥೆ ಹೇಳುತ್ತಿದ್ದಾರೆ ಅನಿಸುತ್ತಿದೆ.

ರ್ಯಾಪ್​ ಶೈಲಿಯಲ್ಲಿ ಮೂಡಿಬಂದಿರುವ ಈ ಬ್ಯಾಡ್​ ಬಾಯ್ಸ್​ ಹಾಡಿಗೆ ರ್ಯಾಪರ್​ಗಳಾದ ನಾಗಾರ್ಜುನ್ ಶರ್ಮಾ, ರಾಹುಲ್ ಡಿಟ್ಟೋ, ಎಂ.ಸಿ.ಬಿಜ್ಜು ಗೀತೆ ರಚನೆ ಮಾಡಿದ್ದಾರೆ. ಇದೇ ರಾಹುಲ್ ಮತ್ತು ಎಂ.ಸಿ.ಬಿಜ್ಜು ಹಾಡಿಗೆ ಧ್ವನಿಯಾಗಿದ್ದಾರೆ. ಸದ್ಯ ಈ ಹಾಡು ಟ್ರೆಂಡ್​ನಲ್ಲಿದೆ. ಈ ಚಿತ್ರಕ್ಕೆ ಡೈಲಾಗ್ ರೈಟರ್ ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ಶಿವ ಸೇನಾ ಕ್ಯಾಮರಾ ವರ್ಕ್ ಮಾಡಿದ್ದಾರೆ. ಕೃಷ್ಣ ಸಾರ್ಥಕ್, ಜಗದೀಶ್ ಗೌಡ ಜಂಟಿಯಾಗಿ ನಿರ್ಮಿಸಿದ್ದಾರೆ. ಸದ್ಯದಲ್ಲೇ ಭೀಮ ಚಿತ್ರದ ಎರಡನೇ ಹಾಡು ಕೂಡ ಬಿಡುಗಡೆಯಾಗಲಿದೆ.

ದೀಪಾವಳಿ ಸಂದರ್ಭ ಸಿನಿಮಾ‌ ರಿಲೀಸ್?! ದುನಿಯಾ ವಿಜಯ್ ನಿರ್ದೇಶಿಸಿ, ಬಣ್ಣ ಹಚ್ಚಿರೋ ಭೀಮ ಸಿನಿಮಾ ಕೆಲಸಗಳು‌ ಕೊನೆಯ ಹಂತ ತಲುಪಿದೆ. ಚಿತ್ರತಂಡ ಸಿನಿಮಾ ರಿಲೀಸ್​ಗೆ ಸಿದ್ಧತೆ ನಡೆಸುತ್ತಿದೆ. ಭೀಮ ನೈಜ ಘಟನೆ ಆಧಾರಿತ ಕಥೆಯಾಗಿದ್ದು, ಮಾಸ್ ಎಂಟರ್​ಟೈನ್ಮೆಂಟ್​ ಸಿನಿಮಾ. ಆಲ್ ಮೋಸ್ಟ್ ಚಿತ್ರೀಕರಣ ಮುಗಿಸಿ, ಎಡಿಟಿಂಗ್ ರೂಮ್​ನಲ್ಲಿ ನಟ ಹಾಗೂ ನಿರ್ದೇಶಕ ವಿಜಯ್ ಬ್ಯುಸಿಯಾಗಿದ್ದಾರೆ‌. ತಮ್ಮ ಈ ಚಿತ್ರವನ್ನು ನವೆಂಬರ್‌ನಲ್ಲಿ ತೆರೆಗೆ ತರಲು ಸಜ್ಜಾಗಿದ್ದಾರೆ. ನವೆಂಬರ್ ತಿಂಗಳ ದೀಪಾವಳಿ ಸಂದರ್ಭ ಸಿನಿಮಾ‌ ರಿಲೀಸ್ ಮಾಡಬೇಕು ಅನ್ನೋ ನಿರ್ಧಾರಕ್ಕೆ ಚಿತ್ರ ತಂಡದವರು ಬಂದಿದ್ದಾರೆ.

ಇದನ್ನೂ ಓದಿ: ದುನಿಯಾ ವಿಜಯ್ ಅಭಿಮಾನಿಗಳೇ ರೆಡಿಯಾಗಿ - 'ಭೀಮ'ನ ದರ್ಶನಕ್ಕೆ‌ ಮುಹೂರ್ತ ಫಿಕ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.