ETV Bharat / entertainment

ರಿಲೀಸ್​ಗೂ ಮೊದಲೇ ಡಿಮ್ಯಾಂಡ್ ಸೃಷ್ಟಿಸಿಕೊಂಡ ಬಿ ಸಿ ಪಾಟೀಲ್.. ಗರಡಿ ಆಡಿಯೋ ಕೋಟಿಗೆ ಮಾರಾಟ!

ಗರಡಿ ಚಿತ್ರದ ಆಡಿಯೋ ರೈಟ್ಸ್​ ಸರಿಗಮಪ ಸಂಸ್ಥೆಗೆ ಕೋಟಿಗೆ ಮಾರಾಟವಾಗಿದ್ದು, ಚಿತ್ರ ಬಿಡುಗಡೆಗೂ ಮೊದಲೇ ಡಬ್ಬಿಂಗ್​ ಹಾಗೂ ರಿಮೇಕ್​ ರೈಟ್ಸ್​ಗೂ ಬೇಡಿಕೆ ಬರುತ್ತಿದೆ.

Garadi movie shooting scenes
ಗರಡಿ ಚಿತ್ರದ ಶೂಟಿಂಗ್​ ದೃಶ್ಯಗಳು
author img

By

Published : Jan 9, 2023, 7:07 PM IST

'ಗರಡಿ' ಮೈಸೂರು ಹಾಗೂ ಉತ್ತರ ಕರ್ನಾಟಕದ ಭಾಗದಲ್ಲಿ ಹೆಚ್ಚು ಕೇಳಿ ಬರುವ ಹೆಸರು. ಈ ಹೆಸರಿನ ಮೇಲೆ ಸ್ಯಾಂಡಲ್​ವುಡ್​ನಲ್ಲಿ ಚಿತ್ರ ಬರ್ತಾ ಇರೋದು ಗೊತ್ತಿರುವ ವಿಚಾರ. ಯೋಗರಾಜ್ ಭಟ್ ನಿರ್ದೇಶನದ ಬಿ.ಸಿ ಪಾಟೀಲ್ ಹಾಗೂ ಯಶಸ್ ಸೂರ್ಯ ಅಭಿನಯದ ಗರಡಿ ಸಿನಿಮಾ ಸೈಲೆಂಟ್ ಆಗಿ ಚಿತ್ರೀಕರಣ ಮುಗಿಸಿ ಬಿಡುಗಡೆ ಸಜ್ಜಾಗಿದೆ. ಇತ್ತೀಚೆಗೆ ರಾಮುಹಳ್ಳಿಯ ಜಿ ವಿ ಅಯ್ಯರ್ ಸ್ಟುಡಿಯೋದಲ್ಲಿ ‌ಗರಡಿಮನೆ ಸೆಟ್ ಹಾಕಿ ಗರಡಿ ಚಿತ್ರದ ಚಿತ್ರೀಕರಣ ಮಾಡಲಾಗಿದೆ.

Garadi movie shooting scenes
ಗರಡಿ ಚಿತ್ರದ ಶೂಟಿಂಗ್​ ದೃಶ್ಯಗಳು

ಗರಡಿ ಮನೆ ಸೆಟ್​ನಲ್ಲಿ ಚಿತ್ರೀಕರಣ: ಅಲ್ಲಿ ಕೆಲವು ದಿನಗಳ ಚಿತ್ರೀಕರಣ ನಡೆಸುವುದರೊಂದಿಗೆ ಗರಡಿ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರದ ಬಗ್ಗೆ ಚಿತ್ರತಂಡ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಗರಡಿ ಸಿನಿಮಾದ ಸೂತ್ರಧಾರ ಯೋಗರಾಜ್ ಭಟ್ ಮಾತನಾಡಿ, ಸುಮಾರು ಎಪ್ಪತ್ತು ದಿನಗಳ ಚಿತ್ರೀಕರಣದ ನಂತರ ಇಂದು 'ಗರಡಿ' ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಜಿ ವಿ ಅಯ್ಯರ್​ ಸ್ಟುಡಿಯೋದಲ್ಲಿ ನಿರ್ಮಿಸಲಾಗಿದ್ದ 'ಗರಡಿ' ಮನೆ ಸೆಟ್​ನಲ್ಲಿ ಚಿತ್ರೀಕರಣ ಮಾಡಿದ್ದೇವೆ.

ಸಿನಿಮಾದ ವಿಶೇಷ ಎಂದರೆ, ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಅವರು ನಾಯಕನ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಶಸ್ ಸೂರ್ಯ, ಸೋನಾಲ್ ‍ಮೊಂತೆರೊ, ಬಿ.ಸಿ. ಪಾಟೀಲ್, ರವಿಶಂಕರ್, ಸುಜಯ್ ಬೇಲೂರು, ರಘು, ಧರ್ಮಣ್ಣ, ಚೆಲುವರಾಜ್, ಪೃಥ್ವಿ ಮುಂತಾದವರು ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಚಿತ್ರದಲ್ಲಿ ಅಭಿನಯಿಸುವುದರೊಂದಿಗೆ ಚಿತ್ರಕ್ಕೆ ಬಂಡವಾಳವನ್ನೂ ಹೂಡಿರುವ ನಿರ್ಮಾಪಕ ಬಿ.ಸಿ. ಪಾಟೀಲ್ ಅವರಿಗೆ ವಿಶೇಷ ಧನ್ಯವಾದಗಳು. 'ಗರಡಿ' ಸಿನಿಮಾ ಹಳೇ ಮೈಸೂರು ಭಾಗದಲ್ಲಿ ನಡೆಯುವ ಕಥೆ. ದೇಸೀ ಕ್ರೀಡೆಗೆ ಒತ್ತು ನೀಡುವ ಸಲುವಾಗಿ ಈ ವಿಭಿನ್ನ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎಂದರು.

Garadi movie shooting scenes
ಗರಡಿ ಚಿತ್ರದ ಶೂಟಿಂಗ್​ ದೃಶ್ಯಗಳು

ಚಿತ್ರೀಕರಣ ಮುಕ್ತಾಯ: ಬಿ.ಸಿ ಪಾಟೀಲ್ ಮಾತನಾಡಿ, ಗರಡಿ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರ ಚೆನ್ನಾಗಿ ಬಂದಿದೆ. ಚಿತ್ರದ ಆಡಿಯೋ ಹಕ್ಕು ಸರಿಗಮಪ‌ ಸಂಸ್ಥೆಗೆ ಒಂದು ಕೋಟಿಗೆ ಮಾರಾಟವಾಗಿದೆ. ಡಬ್ಬಿಂಗ್, ರಿಮೇಕ್ ರೈಟ್ಸ್​ಗೂ ಸಾಕಷ್ಟು ಬೇಡಿಕೆ ಇದೆ. ನಮ್ಮ ಸಂಸ್ಥೆಯ ನಿರ್ಮಾಣ ಮಾಡಿರುವ ಹದಿನಾರನೇ ಚಿತ್ರ ಇದು. ಈ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ ಎಂದರು.

ಇನ್ನು ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿರುವ ಯಶಸ್ ಸೂರ್ಯ ಮಾತನಾಡಿ, ನಾನು ಪೈಲ್ವಾನ್ ಪಾತ್ರದಲ್ಲಿ‌ ಕಾಣಿಸಿಕೊಂಡಿದ್ದೇನೆ. ಇದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೆ. ಅನುಭವಿ ಕಲಾವಿದರೊಂದಿಗೆ ‌ನಟಿಸಿರುವ ಖುಷಿಯಿದೆ ಎಂದರು. ಯಶಸ್ ಸೂರ್ಯ ಜೋಡಿಯಾಗಿ ಸೋನಾಲ್ ಮೊಂತೆರೊ ಸ್ಕ್ರೀನ್ ಶೇರ್ ಮಾಡಿದ್ದಾರೆ.

Pressmeet of Film team
ಚಿತ್ರತಂಡದಿಂದ ಸುದ್ದಿಗೋಷ್ಠಿ

ನಟ ಆರ್ಮುಗಂ ರವಿಶಂಕರ್ ಮಾತನಾಡಿ, ಈ ಚಿತ್ರದಲ್ಲಿ ಅಭಿನಯಿಸಿರುವುದು ಖುಷಿಯಾಗಿದೆ. ಯೋಗರಾಜ್ ಭಟ್ ಹಾಗೂ ಬಿ.ಸಿ. ಪಾಟೀಲ್ ಅವರ ಜೊತೆ ಇದು ನನ್ನ ಮೊದಲ ಚಿತ್ರ ಎಂದರು. ಬಳಿಕ ನಟ ಸುಜಯ್ ಬೇಲೂರ್ ಸಹ ತಮ್ಮ ಪಾತ್ರ ಪರಿಚಯ ಮಾಡಿಕೊಂಡರು. ಕಲಾವಿದರಾದ ರಘು, ಧರ್ಮಣ್ಣ, ಚೆಲುವರಾಜ್, ಪೃಥ್ವಿ ಹಾಗೂ ಕಥೆ ಬರೆದಿರುವ ವಿಕಾಸ್ 'ಗರಡಿ' ಚಿತ್ರದ ಕುರಿತು ಮಾತನಾಡಿದರು.

ನಟ ಹಾಗೂ ಶಾಸಕ ಬಿ.ಸಿ. ಪಾಟೀಲ್ ಅವರ ಪತ್ನಿ ವನಜಾ ಪಾಟೀಲ್ ಹಾಗೂ ಪುತ್ರಿ ಸೃಷ್ಟಿ ಪಾಟೀಲ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಗರಡಿ ಚಿತ್ರದ ಪ್ರೊಡಕ್ಷನ್ ನೋಡಿಕೊಳ್ಳುತ್ತಿರುವ ಸೃಷ್ಟಿ ಪಾಟೀಲ್ ಚಿತ್ರೀಕರಣ ಸರಾಗವಾಗಿ ಮುಗಿದಿದೆ ಎಂದರು. ಬಿಡುಗಡೆಗೂ ಮೊದಲೇ ಡಬ್ಬಿಂಗ್ ರೈಟ್ಸ್ ಬಗ್ಗೆ ಮಾತುಕತೆ ಆಗಿರುವ ಗರಡಿ ಸಿನಿಮಾ ಫೆಬ್ರವರಿ ಕೊನೆ ಅಥವಾ ಮಾರ್ಚ್ ಮೊದಲ ವಾರದಲ್ಲಿ ಚಿತ್ರ ತೆರೆಗೆ ಬರಲಿದೆ.

ಇದನ್ನೂ ಓದಿ: ಬಾದಾಮಿಯಲ್ಲಿ ನಿರ್ದೇಶಕ ಯೋಗರಾಜ್ ಭಟ್ಟರ 'ಗರಡಿ' ಸಿನಿಮಾ ಚಿತ್ರೀಕರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.