ETV Bharat / entertainment

3 ಗಂಟೆ 12 ನಿಮಿಷವಿರುವ 'ಅವತಾರ್ 2' ಸಿನಿಮಾ ಬಿಡುಗಡೆಗೆ ದಿನಗಣನೆ

'ಅವತಾರ್ 2' ರನ್ ಟೈಮ್ ಬಗ್ಗೆ ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ ಮಾತನಾಡಿ, ಮೂರು ಗಂಟೆಗಳ ಕಾಲ ಪ್ರೇಕ್ಷಕರನ್ನು ಹೊಸ ಲೋಕಕ್ಕೆ ಕೊಂಡೊಯ್ಯುವುದು ಖಚಿತ ಎಂದಿದ್ದಾರೆ.

Avatar 2 movie
ಅವತಾರ್ 2 ಸಿನಿಮಾ
author img

By

Published : Dec 11, 2022, 2:10 PM IST

Updated : Dec 11, 2022, 2:23 PM IST

2009ರಲ್ಲಿ ತೆರೆಕಂಡು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿದ ಚಿತ್ರ 'ಅವತಾರ್​'. ಪರದೆ ಮೇಲೆ ಬರುವ ಒಂದೊಂದು ದೃಶ್ಯವೂ ಕೂಡ ರೋಮಾಂಚನಕಾರಿ. ಇದೀಗ ಅದರ ಮುಂದುವರಿದ ಭಾಗ ಅವತಾರ್​ 2 ಬಿಡುಗಡೆಗೆ ಸಜ್ಜಾಗಿದೆ. ಜಗತ್ತಿನಾದ್ಯಂತ ಸಿನಿಪ್ರೇಮಿಗಳು ಕಾತುರದಿಂದ ಕಾಯುತ್ತಿರುವ 'ಅವತಾರ್ 2' ಡಿಸೆಂಬರ್ 16ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಲಿದೆ.

'ಅವತಾರ್: ದಿ ವೇ ಆಫ್ ವಾಟರ್' ಶೀರ್ಷಿಕೆಯಡಿ ವಿಶ್ವದಾದ್ಯಂತ ಬಿಡುಗಡೆಯಾಗಲಿರುವ ಚಿತ್ರದ ರನ್‌ಟೈಮ್ ಬಗ್ಗೆ ಕುತೂಹಲಕಾರಿ ಚರ್ಚೆ ನಡೆಯುತ್ತಿದೆ. 'ಅವತಾರ್ 2' ಅವಧಿಯು 192 ನಿಮಿಷಗಳು, 10 ಸೆಕೆಂಡುಗಳು. ಅಂದರೆ 3 ಗಂಟೆ 12 ನಿಮಿಷ 10 ಸೆಕೆಂಡುಗಳು. ಇತ್ತೀಚಿನ ದಿನಗಳಲ್ಲಿ ಹೆಚ್ಚು ಅವಧಿಯ ಸಿನಿಮಾಗಳನ್ನು ಪ್ರೇಕ್ಷಕರನ್ನು ತಲುಪುವುದು ತೀರಾ ಅಪರೂಪ. ಒಂದು ವೇಳೆ ಬಂದರೂ ಪ್ರೇಕ್ಷಕನನ್ನು ಅಷ್ಟು ಹೊತ್ತು ಕೂರಿಸಲು ತಕ್ಕ ಕಥೆ, ವಿಶುವಲ್ ಎಫೆಕ್ಟ್ ಇರಬೇಕು. 'ಅವತಾರ್ 2' ರನ್ ಟೈಮ್ ಬಗ್ಗೆ ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೂರು ಗಂಟೆಗಳ ಕಾಲ ಪ್ರೇಕ್ಷಕರನ್ನು ಮತ್ತೊಂದು ಹೊಸ ಲೋಕಕ್ಕೆ ಕೊಂಡೊಯ್ಯುವುದು ಖಚಿತ ಎಂದಿದ್ದಾರೆ.

2009ರಲ್ಲಿ ಬಿಡುಗಡೆಯಾದ ಮೊದಲ 'ಅವತಾರ್' ಚಿತ್ರವು 162 ನಿಮಿಷಗಳ ರನ್ ಸಮಯವನ್ನು ಹೊಂದಿತ್ತು. ಅಂದರೆ 2 ಗಂಟೆ 42 ನಿಮಿಷಗಳು. ಮೊದಲ ಭಾಗಕ್ಕೆ ಹೋಲಿಸಿದರೆ, ಭಾಗ 2 ಸುಮಾರು ಅರ್ಧ ಗಂಟೆ ಹೆಚ್ಚಿದೆ. 'ಅವತಾರ್ 2' ಬುಕ್ಕಿಂಗ್ ಈಗಾಗಲೇ ಆರಂಭವಾಗಿದೆ. ಆಂಗ್ಲ ಭಾಷೆಯ ಜೊತೆಗೆ ಭಾರತೀಯ ಭಾಷೆಗಳಲ್ಲೂ ಚಿತ್ರ ಬಿಡುಗಡೆಯಾಗುತ್ತಿದೆ. 3D IMAX ಮತ್ತು 4D ಅನುಭವದೊಂದಿಗೆ ಚಿತ್ರಮಂದಿರಗಳಲ್ಲಿ ಚಲನಚಿತ್ರವನ್ನು ವೀಕ್ಷಿಸಲು ಟಿಕೆಟ್ ದರ ಸುಮಾರು ರೂ.1000ರ ಆಸುಪಾಸಿನಲ್ಲಿದೆ ಎಂಬುದು ಗಮನಾರ್ಹ.

ಇದನ್ನೂ ಓದಿ: ಅವತಾರ್​ 2 ಬಿಡುಗಡೆಗೆ ಸಜ್ಜು.. ಬೆಂಗಳೂರಿನಲ್ಲಿ ಟಿಕೆಟ್​ ದರ ಕೇಳಿದ್ರೆ ತಲೆ ತಿರುಗುತ್ತೆ

ಜೇಮ್ಸ್ ಕ್ಯಾಮೆರಾನ್ ನಿರ್ದೇಶನದ ಈ ಸಿನಿಮಾದ ಪ್ರತಿ ದೃಶ್ಯ ಕೂಡ ವೀಕ್ಷಕರನ್ನು ಬೇರೆಯದ್ದೇ ಮಾಯಾಲೋಕಕ್ಕೆ ಕೊಂಡೊಯ್ಯುವ ಅನುಭವ ಕೊಟ್ಟಿದ್ದು, ಅದರ ಮುಂದುವರಿದ ಭಾಗ ಇನ್ನೂ ಅತ್ಯದ್ಭುತವಾಗಿರಲಿದೆ ಎನ್ನುವ ನಿರೀಕ್ಷೆ ಸಿನಿಪ್ರಿಯರದ್ದು. ಈ ಚಿತ್ರ ವಿಶ್ವದ ಸಿನಿಮಾ ಇತಿಹಾಸದಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಖ್ಯಾತಿ ಗಳಿಸಿದೆ. ಇನ್ನು, ಅವತಾರ್ ಸಿನಿಮಾದ ಮುಂದುವರಿದ ಕಥೆ ತಿಳಿದುಕೊಳ್ಳಲು ಪ್ರೇಕ್ಷಕರು ಕಾತರರಾಗಿದ್ದು, ಚಿತ್ರ ಬಿಡುಗಡೆಗೆ ಇನ್ನು ನಾಲ್ಕು ದಿನಗಳು ಉಳಿದಿವೆ.

Last Updated : Dec 11, 2022, 2:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.