ETV Bharat / entertainment

'ಒಳ್ಳೆತನ ಯಾವಾಗಲೂ ಮೇಲುಗೈ ಸಾಧಿಸುತ್ತದೆ' - ಕಿಂಗ್​ ಖಾನ್ - ದೀಪಿಕಾ ಬಗ್ಗೆ ಶಾರುಖ್ ಮಾತು

ನವೆಂಬರ್​ 2ರಂದು 57ನೇ ಹುಟ್ಟುಹಬ್ಬ ಆಚರಿಸಿಕೊಂಡ ಅವರು ಮೂರು ದಿನಗಳ ನಂತರ ಟ್ವಿಟರ್‌ನಲ್ಲಿ ಅಭಿಮಾನಿಗಳು ಮತ್ತು ಫಾಲೋವರ್​ಗಳಿಗಾಗಿ ತಮ್ಮ ಜನಪ್ರಿಯ #AskSRK ಸೆಷನ್ ಅನ್ನು ನಡೆಸಿದರು. ಶಾರುಖ್ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.

shah rukh khan birthday
ಶಾರುಖ್ ಖಾನ್ ಜನ್ಮದಿನ
author img

By

Published : Nov 5, 2022, 7:35 PM IST

''ಒಳ್ಳೆಯತನದ ಮೇಲಿನ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳದಿರುವುದೇ ಜೀವನದ ಎಲ್ಲ ಸಮಸ್ಯೆಗಳಿಗೆ ಪರಿಹಾರ'' ಎಂದು ಸೂಪರ್ ಸ್ಟಾರ್ ಶಾರುಖ್ ಖಾನ್ ಹೇಳಿದ್ದಾರೆ.

ನವೆಂಬರ್​ 2ರಂದು 57ನೇ ಹುಟ್ಟುಹಬ್ಬ ಆಚರಿಸಿಕೊಂಡ ಅವರು ಮೂರು ದಿನಗಳ ನಂತರ ಟ್ವಿಟರ್‌ನಲ್ಲಿಂದು ಅಭಿಮಾನಿಗಳು ಮತ್ತು ಫಾಲೋವರ್​ಗಳಿಗಾಗಿ ತಮ್ಮ ಜನಪ್ರಿಯ #AskSRK ಸೆಷನ್ ಅನ್ನು ನಡೆಸಿದರು. ಶಾರುಖ್ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಇದರಲ್ಲಿ ಅವರ ಹೊಸ ಚಿತ್ರ ಪಠಾಣ್ ಮತ್ತು ಇತರ ವಿಷಯಗಳು ಸೇರಿವೆ.

shah rukh khan birthday
ಶಾರುಖ್ ಕುಟುಂಬ

ಯುಎಸ್​ನ ಅಭಿಮಾನಿಯೊಬ್ಬರು ಶಾರುಖ್​ಗೆ ಇಲ್ಲಿಯವರೆಗೆ ಎದುರಿಸಿದ ಸಮಸ್ಯೆಗಳನ್ನು ಜಯಿಸಲು ಪ್ರೇರೇಪಿಸುವ ಅಂಶಗಳ ಬಗ್ಗೆ ಕೇಳಿದಾಗ, ಒಳ್ಳೆತನದ ಮೇಲೆ ನಂಬಿಕೆ ಇಡಬೇಕು. ಒಳ್ಳೆಯತನವು ಯಾವಾಗಲೂ ಮೇಲುಗೈ ಸಾಧಿಸುತ್ತದೆ ಎಂದು ಉತ್ತರಿಸಿದರು.

ಇಷ್ಟವಿಲ್ಲದ ಅಥವಾ ಬೇಸರವನ್ನುಂಟುಮಾಡುವ ಕೆಲಸವನ್ನು ನೀವು ಹೇಗೆ ಮಾಡುತ್ತೀರಿ ಎಂದು ಶಾರುಖ್​ಗೆ ಪ್ರಶ್ನಿಸಿದಾಗ, "ನಾನು ಆ ಕೆಲಸಕ್ಕೆ ಸಿದ್ಧನಾಗುತ್ತೇನೆ, ತಯಾರಿ ಮಾಡಿಕೊಂಡು ಸಾಧ್ಯವಾದಷ್ಟು ಬೇಗ ಅದನ್ನು ಮುಗಿಸುತ್ತೇನೆ" ಎಂದು ಹೇಳಿದರು.

shah rukh khan birthday
ಶಾರುಖ್ ದಂಪತಿ

ನವೆಂಬರ್ 2 ರಂದು 57ನೇ ಹುಟ್ಟುಹಬ್ಬ ವರ್ಷಕ್ಕೆ ಕಾಲಿಟ್ಟ ನಟ, ''ತಮ್ಮ ಹುಟ್ಟುಹಬ್ಬದಂದು ಮುಂಬೈನಲ್ಲಿರುವ ಬಂಗಲೆಯ ಹೊರಗೆ ಸೇರಿದ್ದ ಸಾಕಷ್ಟು ಅಭಿಮಾನಿಗಳನ್ನು ನೋಡುವುದು ಅದ್ಭುತ. ಕೋವಿಡ್ ನಿರ್ಬಂಧಗಳಿಂದಾಗಿ ಕಳೆದ ಬಾರಿ ಅಭಿಮಾನಿಗಳನ್ನು ನೋಡಲು ಸಾಧ್ಯವಾಗಿರಲಿಲ್ಲ. ಇದೀಗ ಸಾಕಷ್ಟು ಸಂಖ್ಯೆಯ ಜನರು ಭೇಟಿ ನನ್ನನ್ನು ಮಾಡಲು ಬರುವುದನ್ನು ನೋಡಲು ನಿಜವಾಗಿಯೂ ಸಂತೋಷವಾಗಿದೆ" ಎಂದು ಹೇಳಿದರು.

ಶಾರುಖ್ ಮಧ್ಯರಾತ್ರಿ ತಮ್ಮ ಮನೆಯ ಬಾಲ್ಕನಿಯಲ್ಲಿ ಕಿರಿಯ ಮಗ ಅಬ್ರಾಮ್‌ನೊಂದಿಗೆ ಕಾಣಿಸಿಕೊಂಡಿದ್ದರು. ''ಅವನು (ಪುತ್ರ) ನನ್ನ ಅಭಿಮಾನಿಗಳನ್ನು ನೋಡಲು ಉತ್ಸುಕನಾಗಿದ್ದನು. ಅವನು ನಮ್ಮ ಪ್ರೀತಿಯ ಮಗು (kindly child) ಮತ್ತು ತುಂಬಾ ಜನರು ನನಗೆ ಹಲೋ ಹೇಳಲು ಬರುತ್ತಾರೆ ಎಂದು ಸಂತಸಪಟ್ಟನು ಎಂದು ಅಭಿಮಾನಿಗಳ ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಹೇಳಿದರು.

ಶಾರುಖ್, ಅಕ್ಷಯ್ ಕುಮಾರ್ ಮತ್ತು ಸಲ್ಮಾನ್ ಖಾನ್ ಬಗ್ಗೆ ಹೆಚ್ಚು ಮಾತನಾಡಿದರು. ಸಲ್ಮಾನ್ ಅವರನ್ನು ಅದ್ಭುತ ಮತ್ತು ತುಂಬಾ ಕರುಣಾಮಯಿ ಎಂದು ವರ್ಣಿಸಿದರೆ, ಅಕ್ಷಯ್ ಅದ್ಭುತ ಸ್ನೇಹಿತ ಎಂದು ಬಣ್ಣಿಸಿದರು. ಅಕ್ಷಯ್ ಅವರು "ಕಠಿಣ ಕೆಲಸ ಮಾಡುವ ವ್ಯಕ್ತಿ'' ಎಂದು ಹೊಗಳಿದರು.

shah rukh khan birthday
ಶಾರುಖ್

ಶಾರುಖ್ ಅವರು ನಾಲ್ಕು ವರ್ಷಗಳ ನಂತರ ಪಠಾಣ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಕೊನೆಯ ಬಾರಿಗೆ 2018ರಲ್ಲಿ ಆನಂದ್ ಎಲ್ ರೈ ನಿರ್ದೇಶನದ "ಝೀರೋ" ನಲ್ಲಿ ಕಾಣಿಸಿಕೊಂಡಿದ್ದರು. ಸಿದ್ಧಾರ್ಥ್ ಆನಂದ್ ನಿರ್ದೇಶನದ ಪಠಾನ್‌ನಲ್ಲಿ ಕೆಲಸ ಮಾಡಿದ್ದು ನನಗೆ ಒಂದು ಉತ್ತಮ ಅನುಭವ ಎಂದು ಹೇಳಿದರು.

ಕೋವಿಡ್ ಹಿನ್ನೆಲೆ ಚಲನಚಿತ್ರವನ್ನು ಕೆಲ ಭಾಗಗಳಾಗಿ ಹಮತ ಹಂತವಾಗಿ ಚಿತ್ರೀಕರಿಸಲಾಗಿದೆ. ನನ್ನ ಎಲ್ಲ ಸ್ನೇಹಿತರೊಂದಿಗೆ ಕೆಲಸ ಮಾಡಿದ್ದು ನಿಜವಾಗಿಯೂ ಸಂತೋಷಕರ ವಿಷಯ. ಪಠಾನ್ ಸಹ-ನಟರಾದ ಜಾನ್ ಅಬ್ರಹಾಂ ಮತ್ತು ದೀಪಿಕಾ ಪಡುಕೋಣೆ ಬಗ್ಗೆಯೂ ಹೊಗಳಿದರು.

ಜಾನ್ ಅಬ್ರಹಾಂ ಅವರೊಂದಿಗೆ ಕೆಲಸ ಮಾಡಿದ್ದು ಸಂತೋಷ ಕೊಟ್ಟಿದೆ. ಅತ್ಯಂತ ಸೌಮ್ಯ ಮತ್ತು ಉತ್ತಮ ನಡತೆಯ ವ್ಯಕ್ತಿ ಎಂದು ಅವರು ಹೇಳಿದರು. ಓಂ ಶಾಂತಿ ಓಂ, ಹ್ಯಾಪಿ ನ್ಯೂ ಇಯರ್ ಮತ್ತು ಚೆನ್ನೈ ಎಕ್ಸ್‌ಪ್ರೆಸ್ ಚಿತ್ರಗಳ ತನ್ನ ಸಹ ನಟಿ ದೀಪಿಕಾ ಬಗ್ಗೆ ಮಾತನಾಡುತ್ತಾ, "ನಟಿಯಾಗಿ ಅವರ ಅದ್ಭುತ ಸಾಮರ್ಥ್ಯಗಳ ಹೊರತಾಗಿ ಅವರ ಶಾಂತತೆಯ ಸ್ವಭಾವ ಅದ್ಭುತವಾಗಿದೆ ಎಂದರು.

ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಪಠಾನ್ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ 2023ರ ಜನವರಿ 25 ರಂದು ಬಿಡುಗಡೆಯಾಗಲಿದೆ. ಪ್ಯಾನ್ ಇಂಡಿಯಾ ಚಿತ್ರ 'ಜವಾನ್' ಜೂನ್ 2, 2023 ರಂದು ಬಿಡುಗಡೆಯಾಗಲಿದೆ. ತಾಪ್ಸಿ ಪನ್ನು ಅವರೊಮದಿಗೆ ನಟಿಸಿರುವ ದುಂಕಿ ಡಿಸೆಂಬರ್ 2023ರಲ್ಲಿ ಬಿಡುಗಡೆಯಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.