ETV Bharat / entertainment

ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಅರುಣ್ ರಾಮ್ ಗೌಡ-ಅಯೋಧ್ಯೆಯಲ್ಲಿ ಫಸ್ಟ್ ಗಿಂಪ್ಸ್ ಅನಾವರಣ - Arun Ram Gowda movies

ನಟ ಅರುಣ್ ರಾಮ್ ಗೌಡ ಜನ್ಮದಿನ ಹಿನ್ನೆಲೆ ಅವರ ಮುಂದಿನ ಚಿತ್ರದ ಫಸ್ಟ್ ಗಿಂಪ್ಸ್ ಅನಾವರಣಗೊಂಡಿದೆ.

Arun Ram Gowda birthday
ಅರುಣ್ ರಾಮ್ ಗೌಡ ಜನ್ಮದಿನ
author img

By

Published : Jul 7, 2023, 4:00 PM IST

ಮುದ್ದು ಮನಸೆ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ‌ ಕೊಟ್ಟ ನಟ ಅರುಣ್ ರಾಮ್ ಗೌಡ. ಈ ಸಿನಿಮಾ ಬಳಿಕ‌ 3 ಗಂಟೆ 30 ದಿನ 30 ಸೆಕೆಂಡ್, ಪತಿ ಬೇಕು.ಕಾಮ್ ಹಾಗೂ ಪುನೀತ್ ರಾಜ್​​ಕುಮಾರ್ ಅಭಿನಯದ ಯುವರತ್ನ ಚಿತ್ರಗಳಲ್ಲಿ ಅಭಿನಯಿಸಿ ಗಮನ ಸೆಳದಿರೋ ನಟ ಅರುಣ್ ರಾಮ್ ಗೌಡ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ನಟ ಅರುಣ್ ರಾಮ್ ಗೌಡ ಅಭಿನಯದ ಹೆಸರಿಡದ ಚಿತ್ರದ ಫಸ್ಟ್ ಗ್ಲಿಂಪ್ಸ್ ಅನ್ನು ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಬಿಡುಗಡೆ ಮಾಡುವ ಮೂಲಕ ಚಿತ್ರರಂಡ ಗಮನ ಸೆಳೆದಿದೆ.

Arun Ram Gowda in Pan India movie
ಅಯೋಧ್ಯೆಯಲ್ಲಿ ಸಿನಿಮಾದ ಫಸ್ಟ್ ಗಿಂಪ್ಸ್ ಅನಾವರಣ

ನಿರ್ದೇಶನದ ಜೊತೆಗೆ ನಟನೆ: ಕೆಲ ವರ್ಷಗಳ ಬಳಿಕ ಅರುಣ್ ರಾಮ್ ಗೌಡ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ರೀ ಎಂಟ್ರಿ ಕೊಡುತ್ತಿದ್ದಾರೆ. ಅರುಣ್ ರಾಮ್ ಗೌಡ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಪ್ರಮುಖ ಪಾತ್ರದಲ್ಲೂ ನಟಿಸುತ್ತಿದ್ದಾರೆ.

Arun Ram Gowda in Pan India movie
ಅಪ್ಪು ಜೊತೆ ಅರುಣ್ ರಾಮ್ ಗೌಡ

ಅರುಣ್​ ನಿರ್ದೇಶನದ ಮೊದಲ ಚಿತ್ರ: ಈ ಬಗ್ಗೆ ಮಾತನಾಡಿರೋ ನಟ ಅರಣ್ ರಾಮ್​​ ಗೌಡ, ಇದೊಂದು ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ. ಅಷ್ಟೇ ಅಲ್ಲ ಇದು ನನ್ನ ನಿರ್ದೇಶನದ ಮೊದಲ ಚಿತ್ರ. ಜೊತೆಗೆ ಪ್ರಮುಖ ಪಾತ್ರದಲ್ಲೂ ನಟಿಸುತ್ತಿದ್ದೇನೆ. ಈ ಚಿತ್ರದ ನಾಯಕಿ, ವಿಲನ್ ಸೇರಿದಂತೆ ಎಲ್ಲ ಕಲಾವಿದರು ಹಾಗೂ ತಂತ್ರಜ್ಞರು ಸಾಕಷ್ಟು ಜನಪ್ರಿಯರಾಗಿರುವವರೇ ಇರುತ್ತಾರೆ. ನನ್ನ ಹುಟ್ಟುಹಬ್ಬದ ಈ ದಿನ ಅಯೋಧ್ಯೆಯಲ್ಲಿ ಈ ಚಿತ್ರದ ಫಸ್ಟ್ ಗ್ಲಿಂಪ್ಸ್ ಬಿಡುಗಡೆ ಮಾಡಿ, ಶ್ರೀರಾಮನ ಆಶೀರ್ವಾದ ಪಡೆದುಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ: Rishab Shetty Birthday: ಅಭಿಮಾನಿಗಳೊಂದಿಗೆ ಇಂದು 'ಕಾಡುಬೆಟ್ಟು ಶಿವ'ನ ಜನ್ಮದಿನ - ಡಿವೈನ್​ ಸ್ಟಾರ್ ರಿಷಬ್‌ ಶೆಟ್ಟಿ ಮುಂದಿನ ಸಿನಿಮಾಗಳಿವು..

ಅರುಣ್ ರಾಮ್ ಗೌಡ ಪೋಸ್ಟ್: ಇನ್​ಸ್ಟಾಗ್ರಾಮ್​ನಲ್ಲಿ ಸಿನಿಮಾದ ಫಸ್ಟ್ ಗಿಂಪ್ಸ್ ಶೇರ್​ ಮಾಡಿರುವ ನಟ ಅರುಣ್ ರಾಮ್ ಗೌಡ, ''ಜೈ ಸಿಯಾರಾಮ್, ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ನನ್ನ ಜನ್ಮದಿನದಂದು ನನ್ನ ಮೊದಲ ನಿರ್ದೇಶನದ ಚಿತ್ರದ ಫಸ್ಟ್ ಗ್ಲಿಂಪ್ಸ್​​ ಅನ್ನು ಹಂಚಿಕೊಳ್ಳಲು ಸಂತೋಷವಾಗಿದೆ. ಈ ಚಿತ್ರದಲ್ಲಿ ನಾನು ದೊಡ್ಡ ತಾರಾಬಳಗದ ಜೊತೆಗೆ ನಾಯಕನಾಗಿ ನಟಿಸಲಿದ್ದೇನೆ.

ಈ ಸಿನಿಮಾ ನನ್ನ ದಶಕದ ಕನಸು ಮತ್ತು ಸ್ಕ್ರಿಪ್ಟ್ ನಿಮ್ಮೆಲ್ಲರನ್ನೂ ರಂಜಿಸಲು ಚೆನ್ನಾಗಿ ಮೂಡಿಬಂದಿದೆ. ಚಿತ್ರವು ದೊಡ್ಡ ಮಟ್ಟದಲ್ಲಿ ಮೂಡಿ ಬರಲಿದೆ ಮತ್ತು ನಿಮ್ಮೆಲ್ಲರನ್ನು ನಿರಾಶೆಗೊಳಿಸುವುದಿಲ್ಲ. ನಮ್ಮ ಈ ಚಲನಚಿತ್ರವು 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ನಿಮ್ಮ ಆಶೀರ್ವಾದ ಸದಾ ನನ್ನ ಮೇಲೆ ಇರಲಿ. ಜೈ ಶ್ರೀ ರಾಮ್'' ಎಂದು ಬರೆದುಕೊಂಡಿದ್ದಾರೆ. ಪ್ಯಾನ್​ ಇಂಡಿಯಾ ಸಿನಿಮಾಗಳು ಟ್ರೆಂಡ್​ ಆಗುತ್ತಿವೆ. ಬಹುಸಮಯದ ನಂತರ ಕಮ್​ ಬ್ಯಾಕ್​ ಮಾಡಿರುವ ನಟ ಅರುಣ್ ರಾಮ್ ಗೌಡ ಅವರ ಈ ಸಿನಿಮಾ ಎಷ್ಟರ ಮಟ್ಟಿಗೆ ಗೆಲುವು ಕಾಣಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತೀಯ ಸಿನಿಮಾ: ಅಮೆರಿಕದಲ್ಲಿ ಪ್ರಾಜೆಕ್ಟ್ ಕೆ ಟ್ರೇಲರ್ ಲಾಂಚ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.