ETV Bharat / entertainment

Rajeev Sen- Charu Asopa: ವಿಚ್ಛೇದನ ಪಡೆದ್ರಾ ಸುಷ್ಮಿತಾ ಸೇನ್‌ ಸಹೋದರ ರಾಜೀವ್ ಸೇನ್- ಚಾರು ಅಸೋಪಾ? ನಟನ ಇನ್​ಸ್ಟಾ ಸ್ಟೋರಿ ಹೇಳಿದ್ದೇನು? - etv bharat kannada

ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್​ ಸಹೋದರ, ನಟ ರಾಜೀವ್​ ಸೇನ್​ ಮತ್ತು ನಟಿ ಚಾರು ಅಸೋಪಾ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ ಎನ್ನಲಾಗುತ್ತಿದೆ.

Rajeev Sen and Charu Asopa
ರಾಜೀವ್ ಸೇನ್- ಚಾರು ಅಸೋಪಾ
author img

By

Published : Jun 9, 2023, 3:31 PM IST

ಹಿಂದಿ ಕಿರುತೆರೆ ನಟಿ, ರೂಪದರ್ಶಿ ಚಾರು ಅಸೋಪಾ ಮತ್ತು ನಟ ರಾಜೀವ್​ ಸೇನ್​ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆಯೇ? ಎಂಬುದು ಸದ್ಯ ಅವರಿಬ್ಬರ ಅಭಿಮಾನಿಗಳಿಗೆ ಕಾಡುತ್ತಿರುವ ಬಹುದೊಡ್ಡ ಪ್ರಶ್ನೆ. ಇದಕ್ಕೆ ಉತ್ತರವೆನ್ನುವಂತೆ ರಾಜೀವ್​ ಅವರ ಇತ್ತೀಚೆಗಿನ ಇನ್​ಸ್ಟಾ ಸ್ಟೋರಿ ಸುಳಿವು ನೀಡಿದೆ. ಗುರುವಾರ ರಾಜೀವ್​ ಗೊಂದಲಕ್ಕೀಡು ಮಾಡುವ ಪೋಸ್ಟ್​ವೊಂದನ್ನು ಹಾಕಿದ್ದಾರೆ.

ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, ರಾಜೀವ್ ತಮ್ಮ ಪತ್ನಿ ಚಾರು ಅಸೋಪಾ ಅವರೊಂದಿಗಿನ ಹಳೆಯ ಸಂತೋಷದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಆ ಪೋಸ್ಟ್​ಗೆ, "ಯಾವುದೇ ಗುಡ್ ಬೈಗಳು ಇಲ್ಲ! ಒಬ್ಬರನ್ನೊಬ್ಬರು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದ ಇಬ್ಬರು ವ್ಯಕ್ತಿಗಳು. ಪ್ರೀತಿ ಉಳಿಯುತ್ತದೆ. ನಾವು ಯಾವಾಗಲೂ ನಮ್ಮ ಮಗಳಿಗೆ ಅಪ್ಪ ಮತ್ತು ಅಮ್ಮ ಆಗಿ ಉಳಿಯುತ್ತೇವೆ" ಎಂದು ಕ್ಯಾಪ್ಶನ್​ ಬರೆದಿದ್ದಾರೆ.

Rajeev Sen and Charu Asopa
ನಟ ರಾಜೀವ್​ ಸೇನ್​ ಇನ್​ಸ್ಟಾ ಸ್ಟೋರಿ

ಕೆಲವೊಂದು ವರದಿಗಳನ್ನು ನಂಬುವುದಾದರೆ ರಾಜೀವ್ ಸೇನ್​ ಮತ್ತು ಚಾರು ಅಸೋಪಾ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ. ಅವರಿಬ್ಬರು 2019 ರಲ್ಲಿ ಮದುವೆಯಾದರು. ಕೆಲವು ಸಮಯದ ನಂತರ ಅವರಿಬ್ಬರ ವಿಚ್ಛೇದನ ವರದಿಗಳು ಹರಡಲು ಪ್ರಾರಂಭಿಸಿದವು. ಕಳೆದ ವರ್ಷ ನವೆಂಬರ್‌ನಲ್ಲಿ ಅವರಿಬ್ಬರು ಮಗಳು ಜಿಯಾನಾಗೆ ಪೋಷಕರಾದರು.

ಚಾರು ಮತ್ತು ರಾಜೀವ್​ ವಿಚ್ಛೇದನದ ವದಂತಿ ಹುಟ್ಟಿಕೊಳ್ಳಲು ಸೋಷಿಯಲ್​ ಮೀಡಿಯಾ ಕಾರಣವಾಯಿತು. ಮೊದಲಿಗೆ ಚಾರು ತಮ್ಮ ಪತಿಯೊಂದಿಗಿನ ಎಲ್ಲಾ ಪೋಸ್ಟ್​ಗಳನ್ನು ಅಳಿಸಿ ಹಾಕಿದರು. ಸೆಪ್ಟೆಂಬರ್ 2022 ರಲ್ಲಿ, ಗಣೇಶ ಚತುರ್ಥಿ ಆಚರಣೆಗಳಿಂದ ರಾಜೀವ್ ಮತ್ತು ಅವರ ಮಗಳು ಜಿಯಾನಾ ಒಳಗೊಂಡ ಕುಟುಂಬದ ಚಿತ್ರವನ್ನು ಚಾರು ಪೋಸ್ಟ್​ ಮಾಡಿದ್ದರು. ಜೊತೆಗೆ ತಾವಿಬ್ಬರು ಬೇರೆಯಾಗುತ್ತಿರುವುದಾಗಿ ಅದೇ ವೇಳೆ ಘೋಷಿಸಿದ್ದರು.

ಇದನ್ನೂ ಓದಿ: Google Doodle: ಇಂದು ಫೇಮಸ್​ ಡ್ಯಾನ್ಸರ್​ ವಿಲ್ಲಿ ನಿಂಜಾ ಬರ್ತಡೇ.. ಡೂಡಲ್​ ವಿಡಿಯೋ ಮೂಲಕ ಗೌರವ ಸಲ್ಲಿಸಿದ ಗೂಗಲ್​

"ಮದುವೆ ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ. ಆದರೆ ಅದನ್ನು ಉಳಿಸಿಕೊಳ್ಳುವುದು ನಮಗೆ ಬಿಟ್ಟಿದ್ದು. ಹೌದು, ನಾವು ನಮ್ಮ ಮದುವೆ ಎಂಬ ಬಂಧವನ್ನು ಇಲ್ಲಿಗೆ ಕೊನೆಗೊಳಿಸುತ್ತಿದ್ದೇವೆ. ನಾವು ಈಗ ಕೊನೆಯ ಹಂತಕ್ಕೆ ಬಂದಿದ್ದೇವೆ. ವಿಚ್ಛೇದನವು ನಾವು ಪರಿಗಣಿಸುತ್ತಿರುವ ಒಂದು ಆಯ್ಕೆಯಾಗಿದೆ ಮತ್ತು ನಾವು ಅದನ್ನು ನಿರಾಕರಿಸುವುದಿಲ್ಲ" ಎಂದು ಹೇಳಿದ್ದರು.

"ನಾವು ನಮ್ಮ ಮದುವೆಯನ್ನು ಉತ್ತಮವಾಗಿ ಇರಿಸಿಕೊಳ್ಳಲು ನಿರ್ಧರಿಸಿದ್ದೇವೆ. ಈಗಾಗಲೇ ನಾವಿಬ್ಬರೂ ಸುಂದರ ಮಗಳು ಜಿಯಾನಾಳಿಗೆ ಪೋಷಕರಾಗಿದ್ದೇವೆ. ಅವಳಿಗೆ ಅತ್ಯುತ್ತಮವಾದದ್ದನ್ನೇ ನೀಡಲು ಬಯಸುತ್ತೇವೆ. ಅವಳ ಪಾಲನೆ ಮತ್ತು ಖುಷಿಯೇ ನಮಗೆ ಮೊದಲ ಆದ್ಯತೆ. ನಮ್ಮಿಬ್ಬರನ್ನು ಜೋಡಿಯಾಗಿ ಪ್ರೀತಿಸಿದ, ಬೆಂಬಲಿಸಿದ ಮತ್ತು ಎಂದಿಗೂ ಬಿಟ್ಟುಕೊಡದ ನನ್ನ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಜಿಯಾನಾಳನ್ನು ತುಂಬಾ ಪ್ರೀತಿಯಿಂದ ಆಶೀರ್ವದಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು" ಎಂದು ಫೋಟೋಗೆ ಉದ್ದನೆಯ ಕ್ಯಾಪ್ಶನ್ ನೀಡಿ ತಮ್ಮಿಬ್ಬರ ಸಂಬಂಧ ಕೊನೆಗೊಳಿಸುತ್ತಿರುವುದಾಗಿ ತಿಳಿಸಿದ್ದರು.​ ಏತನ್ಮಧ್ಯೆ, ರಾಜೀವ್ ಸೇನ್ ಇತ್ತೀಚೆಗೆ ತಮ್ಮದೇ ನಿರ್ಮಾಣದ 'ಹಸ್ರತ್' ಕಿರುಚಿತ್ರದಲ್ಲಿ ಕಾಣಿಸಿಕೊಂಡರು. ರಾಜೀವ್ ಸೇನ್ ಮಾಜಿ ಭುವನ ಸುಂದರಿ, ನಟಿ ಸುಶ್ಮಿತಾ ಸೇನ್​ ಸಹೋದರ.

ಇದನ್ನೂ ಓದಿ: ಇನ್​ಸ್ಟಾಗ್ರಾಮ್​ ಪೋಸ್ಟ್​ಗಳನ್ನೆಲ್ಲ ಡಿಲೀಟ್​ ಮಾಡಿದ ಕಾಜೋಲ್​: ಬ್ರೇಕ್​​ ಬೇಕೆಂದ ನಟಿ, ಅಭಿಮಾನಿಗಳಲ್ಲಿ ಆತಂಕ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.