ETV Bharat / entertainment

ಮುಂಬೈ ವಿಮಾನ ನಿಲ್ದಾಣದಲ್ಲಿ ಕಂಡ 'ಪರ್ಫೆಕ್ಟ್​ ಕಪಲ್'​; ಅಭಿಮಾನಿಗಳಿಂದ ಪ್ರೀತಿಯ ಸುರಿಮಳೆ - ವಿರಾಟ್​ ಕೊಹ್ಲಿ ಆರ್​ಸಿಬಿ ಅಭಿಮಾನಿಗಳ ಮನಸು

ಸೋಮವಾರ ಬೆಳಗ್ಗೆ ಬೆಂಗಳೂರಿನಿಂದ ಮುಂಬೈಗೆ ಹಾರಿದ ಈ ಪರ್ಫೆಕ್ಟ್​ ಜೋಡಿ, ವಾಣಿಜ್ಯ ನಗರಿಯ ವಿಮಾನ ನಿಲ್ದಾಣದಲ್ಲಿ ಪ್ಯಾಪಾರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ

Anushka Sharma Virat Kohli Perfect couple seen at Mumbai airport; Love from fans

author img

By

Published : May 22, 2023, 3:43 PM IST

ಬೆಂಗಳೂರು: ಬೆಂಗಳೂರಿನಲ್ಲಿ ಐಪಿಎಲ್​ ಮ್ಯಾಚ್​ನಲ್ಲಿ ಶತಕ ಬಾರಿಸುವ ಮೂಲಕ ವಿರಾಟ್​ ಕೊಹ್ಲಿ ಆರ್​ಸಿಬಿ ಅಭಿಮಾನಿಗಳ ಮನಸು ಗೆದ್ದರು. ಬೆಂಗಳೂರಿನಲ್ಲಿ ನಿನ್ನೆ ಅಂದರೆ, ಭಾನುವಾರ ನಡೆದ ಎಲಿಮಿನೇಟರ್​ ಪಂದ್ಯ ವೀಕ್ಷಣೆ ಜೊತೆಗೆ ಆರ್​ಸಿಬಿಯನ್ನು ಬೆಂಬಲಿಸಲು ಬಾಲಿವುಡ್ ನಟಿ ಅನುಷ್ಕಾ ಶರ್ಮ ಕೂಡ ಸಿಲಿಕಾನ್​ ಸಿಟಿಗೆ ಆಗಮಿಸಿದ್ದರು. ಇಂದು ಈ ಜೋಡಿ ಮುಂಬೈಗೆ ಹಾರಿದೆ. ಸೋಮವಾರ ಬೆಳಗ್ಗೆ ಬೆಂಗಳೂರಿನಿಂದ ಮುಂಬೈಗೆ ತೆರಳಿದ ಈ ಪರ್ಫೆಕ್ಟ್​ ಜೋಡಿ, ವಾಣಿಜ್ಯ ನಗರಿಯ ವಿಮಾನ ನಿಲ್ದಾಣದಲ್ಲಿ ಪ್ಯಾಪರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ. ಈ ವೇಳೆ ಪರಸ್ಪರ ಕೈ ಹಿಡಿದು ಸಾಗುತ್ತಿದ್ದ ಈ ಜೋಡಿ ಒಬ್ಬರಿಗೆ ಒಬ್ಬರು ನಗೆ ಬೀರುತ್ತಾ ಕಾರಿನತ್ತ ಹೆಜ್ಜೆ ಹಾಕಿದರು.

ಅನುಷ್ಕಾ ಈ ವೇಳೆ ಕ್ಯಾಶುವಲ್​​ ಡ್ರೆಸ್​ನಲ್ಲಿ ಕಾಣಿಸಿಕೊಂಡರು. ಲೂಲ್​ ವೈಟ್​ ಶರ್ಟ್​​ಗೆ ಡೆನಿಮ್ ಪ್ಯಾಂಟ್​ ಧರಿಸಿ​ ಮತ್ತು ವೈಟ್​​ ಟ್ರೈನರ್​ ಹಾಕಿದ್ದರು. ಕಪ್ಪು ಸನ್​ಗ್ಲಾಸ್​ ಜೊತೆಗೆ ಕಪ್ಪು ಸ್ಲಿಂಗ್​ ಪರ್ಸ್​​ ಅನ್ನು ಕೈಯಲ್ಲಿ ಹಿಡಿದು ಸಾಗಿದರು. ಇನ್ನು ವಿರಾಟ್​​ ಕಂದು ಬಣ್ಣದ ಟೀ ಶರ್ಟ್​​ಗೆ ನೀಲಿ ಬಣ್ಣದ ಟ್ರಶರ್​ ಮತ್ತು ಬಿಳಿ ಬಣ್ಣದ ಶೂ ತೊಟ್ಟಿದ್ದರು.

ಕಾರು ಹತ್ತುವ ಮುನ್ನ ಅಭಿಮಾನಿಗಳೊಂದಿಗೆ ನಟಿ ಅನುಷ್ಕಾ ಫೋಟೋಗೆ ಪೋಸ್​ ಕೂಡ ನೀಡಿದ್ದಾರೆ. ಇನ್ನು ಸದಾ ಒಬ್ಬರಿಗೆ ಒಬ್ಬರು ಬೆಂಬಲವಾಗಿರುವ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿದ್ದರ ಬೆನ್ನಲ್ಲೇ ಅಭಿಮಾನಿಗಳು ಪ್ರೀತಿಯ ಮಳೆಗರೆದಿದ್ದಾರೆ. ಇವರ ಫೋಟೋಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅಭಿಮಾನಿಗಳು, ಪರ್ಫೆಕ್ಟ್​ ಕಪಲ್​ ಎಂದು ಬರೆದಿದ್ದರೆ, ಮತ್ತೊಬ್ಬರು ಸ್ವರ್ಗದಲ್ಲೇ ನಿಶ್ಚಯವಾದ ಜೋಡಿ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ನ ರೋಚಕ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಗುಜರಾತ್​ ಟೈಟನ್​ ವಿರುದ್ಧ ಸೋಲು ಕಂಡಿತು. ಮುಂದಿನ ಹಂತದ ನಿರ್ಣಾಯಕ ಹಂತದ ಈ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ತಮ್ಮ ಶತಕ ಬಾರಿಸಿಸಿದರು. ಈ ವೇಳೆ ನಟಿ ಅನುಷ್ಕಾ ಗಂಡನಿಗೆ ಗಾಳಿಯಲ್ಲಿ ಮುತ್ತನ್ನು ತೇಲಿ ಬಿಟ್ಟರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲೂ ಹರಿದಾಡಿದ್ದು, ಮೆಚ್ಚುಗೆ ಪಡೆದಿದೆ.

ಇನ್ನು ನಟಿ ಅನುಷ್ಕಾ ಶರ್ಮಾ ಬೆಂಗಳೂರು ಪಂದ್ಯದಲ್ಲಿ ಭಾಗಿಯಾಗುವ ಮುನ್ನ ಮುಂಬೈ ವಿಮಾನ ನಿಲ್ದಾಣದಲ್ಲಿ ಕಂಡಾಗ ಅನೇಕ ಮಂದಿ ಆಕೆ ಕೇನ್ಸ್​ ಫಿಲ್ಮ್​ ಫೆಸ್ಟಿವಲ್​ನಲ್ಲಿ ಭಾಗಿಯಾಗುವುದಕ್ಕೆ ಮುಂದಾಗಿದ್ದಾರೆ ಎಂದು ಊಹಿಸಿದ್ದರು. ಈ ಊಹೆಗಳಿಗೆ ಫುಲ್​ಸ್ಟಾಪ್​ ಹಾಕಿದ ನಟಿ ತಮ್ಮ ಇನ್ಸ್​​ಟಾಗ್ರಾಂ ಸ್ಟೋರಿಯಲ್ಲಿ ಬೆಂಗಳೂರಿಗೆ ಹೋಗುತ್ತಿರುವುದನ್ನು ಬಹಿರಂಗ ಪಡಿಸಿದ್ದರು. ಇದೇ ಮೊದಲ ಬಾರಿಗೆ ನಟಿ ಕೇನ್ಸ್​ನ ರೆಡ್​​ ಕಾರ್ಪೆಟ್​ನಲ್ಲಿ ಹೆಜ್ಜೆ ಹಾಕಿದ್ದರು.

ತಮ್ಮ ಕುಟುಂಬ ನಿರ್ವಹಣೆ ನಡುವೆಯೂ ವೃತ್ತಿ ಜೀವನದಲ್ಲಿ ಬ್ಯುಸಿಯಾಗಿರುವ ನಟಿ ಸದ್ಯ, ಕ್ರೀಡಾ ಜೀವನ ಚಿತ್ರವಾಗಿರವ ಚಕ್ಡಾ ಎಕ್ಸ್​ಪ್ರೆಸ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಾಜಿ ಭಾರತೀಯ ಮಹಿಳಾ ಕ್ರಿಕೆಟ್​ ಪಟು ಜೂಲನ್​ ಗೋಸ್ವಾಮಿ ಜೀವನಾಧಾರಿತ ಈ ಕಥೆಯನ್ನು ಪ್ರೊಸಿಟ್​ ರಾಯ್​ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರ ನೇರವಾಗಿ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾಗುತ್ತಿದ್ದು, ಚಿತ್ರದ ಬಿಡುಗಡೆ ದಿನಾಂಕ ಇನ್ನು ಘೋಷಣೆಯಾಗಿಲ್ಲ.

ಇದನ್ನೂ ಓದಿ: ದಾಖಲೆಯ ಶತಕ ಸಿಡಿಸಿದ ಕೊಹ್ಲಿ; ಫ್ಲೈಯಿಂಗ್ ಕಿಸ್‌ ನೀಡಿ ಸಂಭ್ರಮಿಸಿದ ಪತ್ನಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.