ETV Bharat / entertainment

"chef ಚಿದಂಬರ "ನಾದ ವಿಷ್ಣುವರ್ಧನ್​ ಅಳಿಯ.. ಅನಿರುದ್ಧ್​ ಹೊಸ ಸಿನಿಮಾಗೆ ಕಿಚ್ಚನ ಸಾಥ್​ - chef ಚಿದಂಬರ

ಅನಿರುದ್ಧ್ ಜತ್ಕಾರ್​ರವರ chef ಚಿದಂಬರ ಚಿತ್ರಕ್ಕೆ ಅಭಿನಯ ಚಕ್ರವರ್ತಿ ಬೆಂಬಲ ಸಿಕ್ಕಿದ್ದು, ಈ ತಿಂಗಳಿನಿಂದ ಚಿತ್ರೀಕರಣ ಪ್ರಾರಂಭವಾಗಲಿವೆ.

Etv Bharat
Etv Bharat
author img

By

Published : Aug 7, 2023, 10:53 AM IST

ಬೆಂಗಳೂರು: ಕಿರುತೆರೆ ಹಾಗೂ ಬೆಳ್ಳಿತೆರೆ ಮೇಲೆ ತನ್ನ ಗಾಂಭೀರ್ಯದ ನಟನೆಯಿಂದ ಮಿಂಚಿದ ನಟ‌ನೆಂದರೆ ಅದು ಅನಿರುದ್ಧ್ ಜತ್ಕಾರ್. ಕೆಲವು ತಿಂಗಳ‌ ಹಿಂದೆ‌ ಮೈಸೂರಿನ ಡಾ. ವಿಷ್ಣುವರ್ಧನ್​ ಸ್ಮಾರಕ ಬಳಿ ಅನಿರುದ್ದ​ ಅಭಿನಯದ ಹೆಸರಿಡದ ಚಿತ್ರ‌ ಸೆಟ್ಟೇರಿತ್ತು. ಆದರೆ, ಟೈಟಲ್ ಏನು ಅಂತಾ ಫೈನಲ್ ಆಗಿರಲಿಲ್ಲ. ಇದೀಗ ಅನಿರುದ್ಧ​ ಹೊಸ ಚಿತ್ರಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾಥ್ ಸಿಕ್ಕಿದೆ. ಅನಿರುದ್ದ ನಟನೆಯ ಈ ಚಿತ್ರದ ಶೀರ್ಷಿಕೆಯನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಡುಗಡೆ ಮಾಡಿ, ಚಿತ್ರಕ್ಕೆ ದೊಡ್ಡ ಯಶಸ್ಸು ಕಾಣಲಿ ಎಂದು ಅನಿರುದ್ಧ​ಗೆ ಹಾರೈಯಿಸಿದ್ದಾರೆ.

ಅನಿರುದ್ಧ್​ ಹೊಸ ಸಿನಿಮಾ ಪೋಸ್ಟರ್​ರೊಂದಿಗೆ ಕಿಚ್ಚ ಸುದೀಪ್​

ಈಗ ಆ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದ್ದು, ಚಿತ್ರಕ್ಕೆ " chef ಚಿದಂಬರ " ಎಂದು ಹೆಸರಿಡಲಾಗಿದೆ. ಅನಿರುದ್ಧ್ ಈ ಚಿತ್ರದಲ್ಲಿ ಶೆಫ್​ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದೇ ತಿಂಗಳ ಹತ್ತರಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಡಾರ್ಕ್ ಕಾಮಿಡಿ ಜಾನರ್​ನ ಈ ಚಿತ್ರದಲ್ಲಿ ಅನಿರುದ್ಧ ಶೆಫ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್ ಸಹ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಐದು ವರ್ಷಗಳ ನಂತರ ಅನಿರುದ್ಧ ಸಿನಿಮಾ ಮಾಡುತ್ತಿದ್ದು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ.

ಈ ಸಿನಿಮಾಕ್ಕೆ ರಾಘು ಚಿತ್ರದ ಖ್ಯಾತಿಯ ನಿರ್ದೇಶಕ ಎಂ. ಆನಂದ ರಾಜ್ ನಿರ್ದೇಶ ಮಾಡುತ್ತಿದ್ದಾರೆ. ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ರೂಪ ಡಿ.ಎನ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ ಬರೆದಿದ್ದು, ಚಿತ್ರಕಥೆ ಹಾಗೂ ಸಂಭಾಷಣೆ ಗಣೇಶ್ ಪರಶುರಾಮ್ ಬರೆದಿದ್ದಾರೆ. ಉದಯಲೀಲ ಛಾಯಾಗ್ರಹಣ, ರಿತ್ವಿಕ್ ಮುರಳಿಧರ್ ಸಂಗೀತ ನಿರ್ದೇಶನ, ವಿಜೇತ್ ಚಂದ್ರ ಸಂಕಲನ, "ವಿಕ್ರಾಂತ್ ರೋಣ" ಖ್ಯಾತಿಯ ಆಶಿಕ್ ಕುಸುಗೊಳ್ಳಿ ಡಿ.ಐ, ನರಸಿಂಹಮೂರ್ತಿ ಸಾಹಸ ನಿರ್ದೇಶನ ಹಾಗೂ ಮಾಧುರಿ ಪರಶುರಾಮ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಅನಿರುದ್ಧ ಅವರಿಗೆ ನಾಯಕಿಯರಾಗಿ ನಿಧಿ ಸುಬ್ಬಯ್ಯ ಹಾಗೂ "ಲವ್ ಮಾಕ್ಟೇಲ್" ಖ್ಯಾತಿಯ ರೆಚೆಲ್ ಡೇವಿಡ್‌ ಅಭಿನಯಿಸುತ್ತಿದ್ದಾರೆ. ಶರತ್ ಲೋಹಿತಾಶ್ವ, ಕೆ.ಎಸ್ ಶ್ರೀಧರ್‌, ಶಿವಮಣಿ ಮುಂತಾದವರು "chef ಚಿದಂಬರ" ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಬಿಡುಗೊಡೆಗೊಂಡಿರುವ ಪೋಸ್ಟರ್​ ವಿಭಿನ್ನ ಕುತೂಹಲ ಹುಟ್ಟಿಸಿದೆ. ಕಥೆ ಕ್ರೈಮ್​ ಥೀಮ್​ ಹೊಂದಿದ್ದು, ಸಸ್ಪೆನ್ಸ್​ಯಾಗಿರಲಿದೆಯಾ, ಇಲ್ಲಾ ಸಖತ್​ ಕಾಮಿಡಿಯಾಗಿರಲಿದೆಯಾ, ರೊಮ್ಯಾಂಟಿಕ್​ ಆಗಿರಲಿದೆಯಾ ಎಂಬ ವಿಭಿನ್ನ ಆಲೋಚನೆಗಳು ಪೋಸ್ಟರ್​ ನೋಡುವ ಪ್ರತಿಯೊಬ್ಬನಿಗೂ ಅನ್ನಿಸುವುದರಲ್ಲಿ ಅನುಮಾನವಿಲ್ಲ. ಕಾರಣ ಪೋಸ್ಟರ್​ ಅಲ್ಲೇನೋ ಅನಿರುದ್ದ chef ಚಿದಂಬರ ತರಾನೆ ಟೇಬಲ್​ ಮೇಲೆ ತರಕಾರಿಗಳನ್ನು ಇಟ್ಟುಕೊಂಡು ಕಾಣಿಸುತ್ತಾರೆ. ಆದರೆ, ಕೈಯಲ್ಲಿ ಇರುವ ಮಾಂಸ ಕೊಚ್ಚುವ ಸೀಳು ಚಾಕು ರಕ್ತದಿಂದ ಕೂಡಿದೆ. ಅನಿರುದ್ದ​ ಬಟ್ಟೆ ಮೇಲೆ ಕೂಡ ಕೊಂಚ ರಕ್ತದ ಹನಿಗಳು ಇವೆ. ಜೊತೆಗೆ ಅನಿರುದ್ಧ ಮುಖದಲ್ಲಿ ಎವಿಲ್ ಸ್ಮೈಲ್​ ಬೀರಿದ್ದಾರೆ. ಒಂದು ಪೋಸ್ಟರ್​ನಿಂದಲೇ ಅಭಿಮಾನಿಗಳಲ್ಲಿ ಚಿತ್ರವನ್ನು ನೋಡುವ ಬಯಕೆ ಹೆಚ್ಚಾಗಿದೆ.

ಇದನ್ನೂ ಓದಿ: ಚಿಯಾನ್​​ ವಿಕ್ರಮ್​ ನಟನೆಯ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ, ವಿಜಯ್​ ಸೇತುಪತಿ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.