2023ರ ಬಹು ನಿರೀಕ್ಷಿತ ಚಿತ್ರಗಳಲ್ಲೊಂದಾದ 'ಅನಿಮಲ್' ಬಿಡುಗಡೆಗೆ ಸಜ್ಜಾಗಿದೆ. ಡಿಸೆಂಬರ್‌ನ ಮೊದಲ ದಿನ ಚಿತ್ರ ತೆರೆಗಪ್ಪಳಿಸಲಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಚಿತ್ರದಲ್ಲಿ ರಣ್ಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್, ಬಾಬಿ ಡಿಯೋಲ್, ತ್ರಿಪ್ತಿ ಡಿಮ್ರಿ ನಟಿಸಿದ್ದಾರೆ. ಅನಿಮಲ್ ಬಿಡುಗಡೆ ದಿನಾಂಕ ಹತ್ತಿರ ಬರುತ್ತಿದ್ದಂತೆ ಚಿತ್ರ ತಂಡದಿಂದ ಬಿರುಸಿನ ಪ್ರಚಾರ ನಡೆಯುತ್ತಿದೆ.
- " class="align-text-top noRightClick twitterSection" data="">
ಅರ್ಜನ್ ವೈಲಿ ಸಾಂಗ್ ರಿಲೀಸ್: ದುಬೈನ ಐಕಾನಿಕ್ ಕಟ್ಟಡ ಬುರ್ಜ್ ಖಲೀಫಾದಲ್ಲಿ ಅನಿಮಲ್ನ 60 ಸೆಕೆಂಡುಗಳ ಸ್ಪೆಷಲ್ ವಿಡಿಯೋ ಅನಾವರಣಗೊಳಿಸುವ ಮೂಲಕ ಗಮನ ಸೆಳೆದಿರುವ ಚಿತ್ರತಂಡ ಇಂದು ಚಿತ್ರದ ಹೊಸ ಹಾಡನ್ನು ಬಿಡುಗಡೆಗೊಳಿಸಿದೆ. ಈಗಾಗಲೇ ಅಭಿಮಾನಿಗಳಲ್ಲಿ ಸಿನಿಮಾ ಕುತೂಹಲ ಮೂಡಿಸಿದೆ. ಚಿತ್ರ ತಯಾರಕರು ಈಗಾಗಲೇ ಪಾಪಾ ಮೇರಿ ಜಾನ್, ಹುವಾ ಮೈನ್ ಮತ್ತು ಸತ್ರಂಗ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ. ಇಂದು (ನವೆಂಬರ್ 18) ಅರ್ಜನ್ ವೈಲಿ (ArjanVailly) ಎಂಬ ಮತ್ತೊಂದು ಹಾಡು ಅನಾವರಣಗೊಳಿಸಿದ್ದಾರೆ.
ಅನಿಮಲ್ ಚಿತ್ರದ ಹೊಸ ಆಡಿಯೋ ಟ್ರ್ಯಾಕ್ ಅರ್ಜನ್ ವೈಲಿ ಸಖತ್ ಬೀಟ್‌ಗಳಿಂದ ಕೇಳುಗರ ಗಮನ ಸೆಳೆದಿದೆ. ಮನನ್ ಭಾರದ್ವಾಜ್ ಮತ್ತು ಭೂಪಿಂದರ್ ಬಬ್ಬಲ್ ಅವರಂತಹ ಪ್ರತಿಭಾವಂತ ಕಲಾವಿದರ ಶ್ರಮದ ಫಲವೇ ಅರ್ಜನ್ ವೈಲಿ. ಮನನ್ ಭಾರದ್ವಾಜ್ ಅವರು ನಿರ್ಮಾಪಕರ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ. ಚಿತ್ರದ ಅಫೀಶಿಯಲ್ ಮ್ಯೂಸಿಕ್ ಪಾರ್ಟ್ನರ್ ಟಿ-ಸಿರೀಸ್ ಈ ಹಾಡನ್ನು ಪ್ರಚಾರ ಮಾಡುತ್ತಿದೆ. ಇನ್ಸ್ಟಾದಲ್ಲಿ ಪೋಸ್ಟ್ ಮಾಡಿರುವ ಟಿ-ಸಿರೀಸ್, ''ನೀವು ಕೇಳಿಕೊಂಡ್ರಿ, ನಮಗೆ ಕೇಳಿಸಿತು, ಅರ್ಜನ್ ವೈಲಿ ಹಾಡು ಅನಾವರಣ'' ಎಂದು ಬರೆದಿದ್ದಾರೆ. ಹಾಡಿನಲ್ಲಿ ನಾಯಕ ನಟ ರಣ್ಬೀರ್ ಕಪೂರ್ ರಕ್ತಸಿಕ್ತ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಭುವನ ಸುಂದರಿ ಸ್ಪರ್ಧೆ 2023: ಭಾರತ ಪ್ರತಿನಿಧಿಸುತ್ತಿರುವ ಶ್ವೇತಾ ಶಾರ್ದಾ ಆಕರ್ಷಕ ಫೋಟೋಗಳಿಲ್ಲಿವೆ
ಸಂದೀಪ್ ವಂಗಾ ರೆಡ್ಡಿ ನಿರ್ದೇಶನದ ಅನಿಮಲ್ ಚಿತ್ರದ ಕಥೆ ಭೂಗತ ಜಗತ್ತಿನ, ಅದರಲ್ಲಿರುವ ತಂದೆ ಮಗನ ಸಂಬಂಧದಲ್ಲಿನ ಅಂತರದ ಸುತ್ತ ಸುತ್ತುತ್ತದೆ. ಪ್ರೇಮ್ ಕಹಾನಿ ಕೂಡ ಇದೆ. ಈ ಮೊದಲು ಚಿತ್ರವನ್ನು ಆಗಸ್ಟ್ 11 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಪೋಸ್ಟ್ ಪ್ರೊಡಕ್ಷನ್ ಕೆಲಸ ಬಾಕಿ ಇರುವ ಕಾರಣ, ಬಿಡುಗಡೆ ದಿನಾಂಕವನ್ನು ಮುಂದೂಡಲಾಯಿತು. ಡಿಸೆಂಬರ್ 1 ರಂದು ಸಿನಿಮಾ ಬಿಡುಗಡೆ ಆಗಲಿದ್ದು, ಪ್ರಚಾರ ಜೋರಾಗಿದೆ.
ಇದನ್ನೂ ಓದಿ: ಬುರ್ಜ್ ಖಲೀಫಾದಲ್ಲಿ 'ಅನಿಮಲ್' ಸ್ಪೆಷಲ್ ವಿಡಿಯೋ ಪ್ರದರ್ಶನ - ನೋಡಿ
ಪ್ರಣಯ್ ರೆಡ್ಡಿ ವಂಗಾ ಅವರ ಭದ್ರಕಾಳಿ ಪಿಕ್ಚರ್ಸ್, ಮುರಾದ್ ಖೇತಾನಿಯವರ ಸಿನಿ1 ಸ್ಟುಡಿಯೋಸ್, ಭೂಷಣ್ ಕುಮಾರ್ ಮತ್ತು ಕ್ರಿಶನ್ ಕುಮಾರ್ ಅವರ ಟಿ-ಸೀರೀಸ್ ಸಹಯೋಗದಲ್ಲಿ ಚಿತ್ರ ನಿರ್ಮಾಣಗೊಂಡಿದೆ. ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಅನಿಮಲ್ ತೆರೆಕಾಣಲಿದೆ. ಚಿತ್ರದ ಪ್ರಮೋಶನ್ ಭಾಗವಾಗಿ ಬಿಡುಗಡೆ ಆಗಿರುವ 60 ಸೆಕೆಂಡುಗಳ ಸ್ಪೆಷಲ್ ವಿಡಿಯೋ ಕೂಡ ಸಿನಿಪ್ರಿಯರ ಗಮನ ಸೆಳೆದಿದೆ.