ಅನಿಮಲ್ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಮತ್ತು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರೊಂದಿಗೆ ಬಾಲಿವುಡ್ ನಟ ರಣ್ಬೀರ್ ಕಪೂರ್ ಅವರು ತಮ್ಮ ಮುಂದಿನ ಅನಿಮಲ್ ಸಿನಿಮಾ ಪ್ರಚಾರ ಮಾಡಲು ದಕ್ಷಿಣದ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಅವರ ಜನಪ್ರಿಯ ಕಾರ್ಯಕ್ರಮ 'ಅನ್‌ಸ್ಟಾಪಬಲ್ ವಿತ್ ಎನ್ಬಿಕೆ ಸೀಸನ್ 3'ರಲ್ಲಿ ಭಾಗಿ ಆಗಿ ಆಗಿದ್ದಾರೆ.
- " class="align-text-top noRightClick twitterSection" data="">
ಹೊಸ ಎಪಿಸೋಡ್ನ ಪ್ರೋಮೋ ಅನಾವರಣಗೊಂಡಿದೆ. ವಿಡಿಯೋ ಕುತೂಹಲಕಾರಿ ಕ್ಷಣಗಳನ್ನು ಒಳಗೊಂಡಿದೆ. ಬಾಲಯ್ಯ ಎಂದೂ ಕರೆಯಲ್ಪಡುವ ನಟ ನಂದಮೂರಿ ಬಾಲಕೃಷ್ಣ ಅವರ ಅನ್‌ಸ್ಟಾಪಬಲ್ ವಿತ್ ಎನ್ಬಿಕೆ ಶೋ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಒಟಿಟಿ ಪ್ಲಾಟ್ಫಾರ್ಮ್ 'ಆಹಾ'ದಲ್ಲಿ ಈ ಕಾರ್ಯಕ್ರಮ ಪ್ರಸಾರ ಆಗುತ್ತದೆ. ಮುಂದಿನ ಸಂಚಿಕೆಯಲ್ಲಿ ನಟಿ ರಶ್ಮಿಕಾ ಮಂದಣ್ಣ, ನಟ ರಣ್ಬೀರ್ ಕಪೂರ್, ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಕಾಣಿಸಿಕೊಳ್ಳಲಿದ್ದಾರೆ. ತಮ್ಮ ಮುಂದಿನ ಬಹುನಿರೀಕ್ಷಿತ ಅನಿಮಲ್ ಸಿನಿಮಾವನ್ನು ಪ್ರಚಾರ ಮಾಡಲಿದ್ದಾರೆ. ಪ್ರೋಮೋ ಅನಾವರಣಗೊಂಡಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.
ಪ್ರೋಮೋದಲ್ಲಿ, ರಣ್ಬೀರ್ ಕಪೂರ್ ರಶ್ಮಿಕಾ ಮಂದಣ್ಣ ಅವರ ತಮಾಷೆಯ ಕ್ಷಣಗಳಿವೆ. ಸ್ಕ್ರೀನ್ನಲ್ಲಿ ತಮ್ಮ (ರಣ್ಬೀರ್) ಮತ್ತು ವಿಜಯ್ ದೇವರಕೊಂಡ ಅವರ ಫೋಟೋ ಹಾಕಿ 'ಬೆಟರ್ ಹೀರೋ' ಯಾರೆಂದು ತಿಳಿಸುವಂತೆ ರಣ್ಬೀರ್ ಹೇಳಿದರು. ಇಬ್ಬರಲ್ಲಿ ಓರ್ವರನ್ನು ಆಯ್ಕೆ ಮಾಡುವಂತೆ ತಿಳಿಸಿದರು. ಉತ್ಸಾಹಭರಿತ ಮಾತುಕತೆಯಲ್ಲಿ ತೆಲುಗು ಸೂಪರ್ ಸ್ಟಾರ್ ನಂದಮೂರಿ ಬಾಲಕೃಷ್ಣ ಸಹ ಸೇರಿಕೊಂಡರು. ಪ್ರೋಮೋ, ಕಂಪ್ಲೀಟ್ ಎಂಟರ್ಟೈನ್ಮೆಂಟ್ ಎಪಿಸೋಡ್ ಕೊಡುವ ಭರವಸೆ ನೀಡಿದೆ. ವಿಜಯ್ ದೇವರಕೊಂಡ ಹೆಸರೇಳುತ್ತಿದ್ದಂತೆ ರಶ್ಮಿಕಾ ಮಂದಣ್ಣ ನಾಚಿ ನೀರಾಗಿರುವಂತೆ ತೋರಿದೆ.
ಇದನ್ನೂ ಓದಿ: ಬುರ್ಜ್ ಖಲೀಫಾದಲ್ಲಿ 'ಅನಿಮಲ್' ಸ್ಪೆಷಲ್ ವಿಡಿಯೋ ಪ್ರದರ್ಶನ - ನೋಡಿ
ನಂತರ ರಣ್ಬೀರ್ ಕಪುರ್ ಅವರೂ ತೆಲುಗಿನಲ್ಲಿ ಮಾತನಾಡಿದ್ದಾರೆ. ಬಾಲಕೃಷ್ಣ ಅವರ 2014ರ ಸಿನಿಮಾ ''ಲೆಜೆಂಡ್'' ಡೈಲಾಗ್ಸ್ ಹೊಡೆದಿದಿದ್ದಾರೆ. ನಂತರ ಬಾಲಕೃಷ್ಣರ 2017ರ ಸಿನಿಮಾ 'ಪೈಸಾ ವಸೂಲ್'ನ ಟೈಟಲ್ ಟ್ರ್ಯಾಕ್‌ಗೆ ಮೈ ಕುಣಿಸಿದ್ದಾರೆ. ಕಾರ್ಯಕ್ರಮದಲ್ಲಿ ರಶ್ಮಿಕಾಗೆ ಕರೆಬಂದಿದ್ದು, 'ವಾಟ್ಸ್ ಅಪ್ ರೇ' ಎಂದು ಹೇಳಿದ್ದಾರೆ. ರಶ್ಮಿಕಾ ಮೊಗ ನಾಚಿ ನೀರಾಗಿದ್ದು, ಈ ಕರೆ ವದಂತಿಯ ಗೆಳೆಯ, ಅರ್ಜುನ್ ರೆಡ್ಡಿ ಸ್ಟಾರ್ ವಿಜಯ್ ದೇವರಕೊಂಡ ಎಂದು ಊಹಿಸಲಾಗಿದೆ. ನವೆಂಬರ್ 24 ರಂದು ಒಟಿಟಿ ವೇದಿಕೆ 'ಆಹಾ'ದಲ್ಲಿ ಈ ಎಪಿಸೋಡ್ ಪ್ರಸಾರ ಆಗಲಿದ್ದು, ಪ್ರೇಕ್ಷಕರು ಉತ್ಸುಕರಾಗಿದ್ದಾರೆ.
ಇದನ್ನೂ ಓದಿ: 'ಅನಿಮಲ್'ನ ಹೊಸ ಹಾಡು ಅನಾವರಣ: ರಕ್ತಸಿಕ್ತ ನೋಟದಲ್ಲಿ ರಣ್ಬೀರ್ ಕಪೂರ್