ETV Bharat / entertainment

500 ಕೋಟಿ ಗಡಿ ದಾಟಿದ 'ಅನಿಮಲ್'​ ಸಿನಿಮಾ: ಕಲೆಕ್ಷನ್​ ಮಾಹಿತಿ ಇಲ್ಲಿದೆ

Animal collection: ಅನಿಮಲ್​ ಸಿನಿಮಾ ಭಾರತದಲ್ಲಿ 300 ಕೋಟಿ ರೂ. ಮತ್ತು ಜಾಗತಿಕವಾಗಿ 500 ಕೋಟಿ ರೂಪಾಯಿ ಗಡಿ ದಾಟಿದೆ.

Animal collection
ಅನಿಮಲ್ ಕಲೆಕ್ಷನ್
author img

By ETV Bharat Karnataka Team

Published : Dec 7, 2023, 11:51 AM IST

Updated : Dec 7, 2023, 12:03 PM IST

ಬಾಲಿವುಡ್ ನಟ ರಣ್​​ಬೀರ್ ಕಪೂರ್ ಮತ್ತು ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ತಮ್ಮ ವೃತ್ತಿಜೀವನದಲ್ಲಿ ದೊಡ್ಡ ಯಶಸ್ಸು ಕಂಡ ಖುಷಿಯಲ್ಲಿದ್ದಾರೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರ ಈಗಾಗಲೇ ಈ ವರ್ಷದಲ್ಲಿ ಅತ್ಯಧಿಕ ಕಲೆಕ್ಷನ್​ ಮಾಡಿದ ನಾಲ್ಕನೇ ಸಿನಿಮಾವಾಗಿ ಹೊರಹೊಮ್ಮಿದೆ. ಕೇವಲ ಆರು ದಿನಗಳಲ್ಲಿ ಭಾರತೀಯ ಬಾಕ್ಸ್​​ ಆಫೀಸ್​ನಲ್ಲಿ 300 ಕೋಟಿ ರೂ. ಮತ್ತು ಜಾಗತಿಕವಾಗಿ 500 ಕೋಟಿ ರೂಪಾಯಿ ಗಡಿ ದಾಟಿ ದಾಖಲೆ ಬರೆದಿದೆ.

  • " class="align-text-top noRightClick twitterSection" data="">

ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಅನಿಮಲ್​​ ತೆರೆಕಂಡ ಒಂದು ವಾರದೊಳಗೆ ಭಾರತೀಯ ಬಾಕ್ಸ್​ ಆಫೀಸ್​​ನಲ್ಲಿ ಸುಮಾರು 312.96 ಕೋಟಿ ರೂಪಾಯಿ ಕಲೆಕ್ಷನ್​ ಮಾಡುವಲ್ಲಿ ಯಶಸ್ಸು ಕಂಡಿದೆ. ಆರನೇ ದಿನ (ಬುಧವಾರ) ಸಿನಿಮಾ 30 ಕೋಟಿ ರೂಪಾಯಿ ಗಳಿಸಿದೆ. ಅನಿಮಲ್ ತೆರೆಕಂಡ ಮೊದಲ ದಿನ 63.8 ಕೋಟಿ ರೂ. ಗಳೊಂದಿಗೆ ತನ್ನ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿತ್ತು. ಮೊದಲ ಭಾನುವಾರ 71.46 ಕೋಟಿ ರೂ. ಗಳಿಸಿತ್ತು. ಮೊದಲ ಸೋಮವಾರ 43.96 ಕೋಟಿ ರೂ. ಗಳಿಸಿತು. ಮಂಗಳವಾರ 37.47 ಕೋಟಿ ರೂ.ಗಳ ವ್ಯವಹಾರ ನಡೆಸಿತ್ತು. ಬುಧವಾರದಂದು ಚಿತ್ರಮಂದಿರಗಳಲ್ಲಿ ಒಟ್ಟಾರೆ ಆಕ್ಯುಪೆನ್ಸಿ ಶೇ.34.88ರಷ್ಟಿದ್ದು, 30 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ.

  • ‘ANIMAL’ IS UNSTOPPABLE…#Animal is 250 NOT OUT… Racing towards ₹ 300 cr…Refuses to slow down on weekdays… Fri 54.75 cr, Sat 58.37 cr, Sun 63.46 cr, Mon 40.06 cr, Tue 34.02 cr. Total: ₹ 250.66 cr. #Hindi version. Nett BOC. #Boxoffice

    FASTEST TO HIT ₹ 250 CR…
    ⭐️ #Jawan:… pic.twitter.com/fGAiCGAGc3

    — taran adarsh (@taran_adarsh) December 6, 2023 " class="align-text-top noRightClick twitterSection" data=" ">

ಜವಾನ್, ಪಠಾಣ್ ಮತ್ತು ಗದರ್ 2 ಸಿನಿಮಾಗಳ ನಂತರ ಅನಿಮಲ್ ಸ್ಥಾನ ಪಡೆದುಕೊಂಡಿದೆ. 2023ರಲ್ಲಿ ಅತಿ ಹೆಚ್ಚು ಕಲೆಕ್ಷನ್​ ಮಾಡಿರುವ ನಾಲ್ಕನೇ ಬಾಲಿವುಡ್​ ಸಿನಿಮಾ 'ಅನಿಮಲ್'. ಶಾರುಖ್ ಖಾನ್ ಅಭಿನಯದ ಜವಾನ್ ಭಾರತದಲ್ಲಿ 643.87 ಕೋಟಿ ರೂಪಾಯಿ ಗಳಿಸಿತ್ತು. ಪಠಾಣ್​​ 543.05 ಕೋಟಿ ರೂ. ಕಲೆಕ್ಷನ್​ ಮಾಡಿತ್ತು. ನಂತರ ಸನ್ನಿ ಡಿಯೋಲ್ ಅವರ ಗದರ್ 2 ಚಿತ್ರ 525.45 ಕೋಟಿ ರೂ.ನ ವ್ಯವಹಾರ ನಡೆಸಿತ್ತು. ಮತ್ತೊಂದೆಡೆ ಸಲ್ಮಾನ್​ ಖಾನ್​ ಅವರ ಟೈಗರ್ 3ರ ಒಟ್ಟು ಕಲೆಕ್ಷನ್​​ 284.05 ಕೋಟಿ ರೂ. ಆಗಿದ್ದು, ಈ ದಾಖಲೆಯನ್ನೂ ಅನಿಮಲ್​​ ಮೀರಿಸಿದೆ. ಡಿಸೆಂಬರ್ 21 ರಂದು ಶಾರುಖ್​ ಖಾನ್​ ಅವರ ಡಂಕಿ ಸಿನಿಮಾ ತೆರೆಕಾಣಲಿದ್ದು, ಅಲ್ಲಿವರೆಗೂ ಅನಿಮಲ್​​ ಪ್ರದರ್ಶನ ಕಾಣುವ ಭರವಸೆ ಇದೆ.

ಇದನ್ನೂ ಓದಿ: 'ಕುಡಿದ ಮತ್ತಿನಲ್ಲಿ ತೂರಾಡಿದ ಸನ್ನಿ ಡಿಯೋಲ್'​​: ಇದು ನಿಜವಲ್ಲ, 'ಸಫರ್' ಸಿನಿಮಾ ಶೂಟಿಂಗ್!

ಅನಿಮಲ್ ಚಿತ್ರ 'ಸಂಜು' ಸಿನಿಮಾದ ದಾಖಲೆ ಪುಡಿಗಟ್ಟುವ ಹಾದಿಯಲ್ಲಿದೆ. ರಣ್​​​ಬೀರ್‌ ಕಪೂರ್​​ ಅಭಿನಯದ ಸಂಜು ಸಿನಿಮಾವನ್ನು ರಾಜ್‌ಕುಮಾರ್ ಹಿರಾನಿ ನಿರ್ದೇಶಿಸಿದ್ದು, 2018ರ ಸೂಪರ್​ ಹಿಟ್​ ಸಿನಿಮಾವಾಗಿ ಹೊರಹೊಮ್ಮಿತ್ತು. ಭಾರತದಲ್ಲಿ 342.53 ಕೋಟಿ ರೂ. ಕಲೆಕ್ಷನ್​ ಮಾಡಿ ದಾಖಲೆ ಬರೆದಿತ್ತು. ಅನಿಮಲ್​ ಇನ್ನು 29.57 ಕೋಟಿ ರೂ. ಕಲೆಕ್ಷನ್​ ಮಾಡಿದ್ರೆ ಸಂಜು ದಾಖಲೆ ಉಡೀಸ್​ ಆಗಲಿದೆ. ಮತ್ತೊಂದೆಡೆ, ಸಂದೀಪ್ ರೆಡ್ಡಿ ವಂಗಾ ಅವರ ಕಬೀರ್ ಸಿಂಗ್​​ ಭಾರತದಲ್ಲಿ 278.24 ಕೋಟಿ ರೂ. ಕಲೆಕ್ಷನ್​ ಮಾಡಿತ್ತು. ಹಾಗಾಗಿ ನಿರ್ದೇಶಕರಿಗೂ ಇದು ದೊಡ್ಡ ಗೆಲುವೇ ಎನ್ನಬಹುದು.

ಇದನ್ನೂ ಓದಿ: ಧಾರ್ಮಿಕ ನಂಬಿಕೆಗಳಿಗಾಗಿ ಪ್ರೀತಿ ತ್ಯಾಗ ಮಾಡಿದ ಆಸಿಮ್ ರಿಯಾಜ್ - ಹಿಮಾಂಶಿ ಖುರಾನಾ!

Last Updated : Dec 7, 2023, 12:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.