ETV Bharat / entertainment

'ಆತ್ಮೀಯ ದೃಶ್ಯಗಳಲ್ಲಿ ನಟಿಸುವಾಗ ಅನುರಾಗ್​ ಕಶ್ಯಪ್​ ವೈಯಕ್ತಿಕವಾಗಿ ಕಾಳಜಿ ಮಾಡಿದ್ದರು': ಅಮೃತಾ ಸುಭಾಷ್ - ಈಟಿವಿ ಭಾರತ ಕನ್ನಡ

'ಸೇಕ್ರೆಡ್ ಗೇಮ್ಸ್ 2' ನಲ್ಲಿ ಆತ್ಮೀಯ ದೃಶ್ಯಗಳಲ್ಲಿ ನಟಿಸಿದ ಬಗ್ಗೆ ನಟಿ ಅಮೃತಾ ಸುಭಾಷ್ ಬಹಿರಂಗವಾಗಿ ಮಾತನಾಡಿದ್ದಾರೆ.

Amruta Subhash
ಅಮೃತಾ ಸುಭಾಷ್​
author img

By

Published : Jul 6, 2023, 7:59 PM IST

ಇತ್ತೀಚೆಗಷ್ಟೇ 'ಲಸ್ಟ್ ಸ್ಟೋರೀಸ್ 2' ಮತ್ತು ಕೊಂಕಣ ಸೇನ್ ಶರ್ಮಾ ಅವರ 'ದಿ ಮಿರರ್‌'ನಲ್ಲಿ ಕಾಣಿಸಿಕೊಂಡಿರುವ ನಟಿ ಅಮೃತಾ ಸುಭಾಷ್, ಕ್ಯಾಮರಾದಲ್ಲಿ ಇಂಟಿಮೇಟ್ (ಆತ್ಮೀಯ) ದೃಶ್ಯಗಳನ್ನು ಚಿತ್ರೀಕರಿಸುವ ಬಗ್ಗೆ ಮಾತನಾಡಿದ್ದಾರೆ. ನಿರ್ದೇಶಕ ಅನುರಾಗ್​ ಕಶ್ಯಪ್​ ಅವರ 'ಸೇಕ್ರೆಡ್ ಗೇಮ್ಸ್ 2' ನಲ್ಲಿ ಆತ್ಮೀಯ ದೃಶ್ಯಗಳಲ್ಲಿ ನಟಿಸಿದ ಬಗ್ಗೆ ಅವರು ವಿವರಿಸಿದ್ದಾರೆ. ನಿರ್ದೇಶಕರು ಇಡೀ ಸಮಯದ ಬಗ್ಗೆ ಅತ್ಯಂತ ಸಂವೇದನಾಶೀಲರಾಗಿದ್ದರು ಎಂದಿದ್ದಾರೆ.

'ಸೇಕ್ರೆಡ್ ಗೇಮ್ಸ್ 2' ರ ಚಿತ್ರೀಕರಣದ ಸಮಯದಲ್ಲಿ, ನಿರ್ದೇಶಕರು ತಮ್ಮ ತಂಡದವರನ್ನು ಕರೆದು ಅಮೃತಾ ಅವರ ಆತ್ಮೀಯ ದೃಶ್ಯಗಳ ಚಿತ್ರೀಕರಣಕ್ಕೆ ಸಮಯವನ್ನು ನಿಗದಿಪಡಿಸುವ ಸಲುವಾಗಿ ಅವರ ಋತುಸ್ರಾವದ ದಿನಾಂಕವನ್ನು ಕೇಳಿದ್ದರು ಎಂಬುದಾಗಿ ಹೇಳಿದ್ದಾರೆ. "ನಾನು ಸೇಕ್ರೆಡ್ ಗೇಮ್ಸ್ 2 ರಲ್ಲಿ ಅನುರಾಗ್ ಅವರೊಂದಿಗೆ ನನ್ನ ಮೊದಲ ಆತ್ಮೀಯ ದೃಶ್ಯವನ್ನು ಮಾಡಿದ್ದೆ" ಎಂದು ಅಮೃತಾ ಒಪ್ಪಿಕೊಂಡಿದ್ದಾರೆ.

"ಆತ್ಮೀಯ ದೃಶ್ಯಗಳಲ್ಲಿ ನಟಿಸುವಾಗ ಪುರುಷ ಅಥವಾ ಮಹಿಳೆ ಎಂಬ ಪ್ರಶ್ನೆಯೇ ಇರಲಿಲ್ಲ. ಅನುರಾಗ್​ ಕಶ್ಯಪ್​ ಅವರು ಅತ್ಯಂತ ಸಂವೇದನಾಶೀಲರಾಗಿದ್ದರು. ಅವರು ನನ್ನ ಪೀರಿಯಡ್ಸ್​ ಸಮಯವನ್ನು ಕೇಳಿದ್ದರು. ಅಲ್ಲದೇ ಅಂತಹ ದಿನಗಳಲ್ಲಿ ಆತ್ಮೀಯ ದೃಶ್ಯಗಳನ್ನು ನಿಗದಿಪಡಿಸುವುದಿಲ್ಲ ಎಂದಿದ್ದರು. ಹಾಗೂ 'ನಿಮ್ಮ ಅವಧಿಯ ಸಮಯದಲ್ಲಿ ನೀವು ಇಂತಹ ದೃಶ್ಯಗಳನ್ನು ಮಾಡುತ್ತೀರಾ?' ಎಂದು ಬಹಿರಂಗವಾಗಿ ಪ್ರಶ್ನಿಸಿದ್ದರು" ಎಂದು ಸಂದರ್ಶನವೊಂದರಲ್ಲಿ ಅಮೃತಾ ವಿವರಿಸಿದ್ದಾರೆ. ಜೊತೆಗೆ "ಇದು ಗಂಡು ಮತ್ತು ಹೆಣ್ಣು ಎಂಬುದಕ್ಕಿಂತ ಮೀರಿದೆ. ಅವರು ನಿಜವಾಗಿಯೂ ಪರಿಗಣನೆಯುಳ್ಳುವರು" ಎಂದಿದ್ದಾರೆ.

ಇದನ್ನೂ ಓದಿ: Gadar 2: ಬಹುನಿರೀಕ್ಷಿತ 'ಗದರ್​ 2' ಚಿತ್ರದ 'ಮೈನ್​ ನಿಕ್ಲಾ ಗಡ್ಡಿ ಲೇಕೆ' ಹಾಡಿಗೆ ಧ್ವನಿಯಾಗಲಿದ್ದಾರಾ ಅರಿಜಿತ್ ಸಿಂಗ್?

ಕೊಂಕಣ ಸೇನ್ ಶರ್ಮಾ ನಿರ್ದೇಶಿಸಿದ ದಿ ಮಿರರ್​ನಲ್ಲಿ, ಅಮೃತಾ ಮತ್ತು ತಿಲೋತಮಾ ಶೋಮ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದಾಗ್ಯೂ, ನಿರೂಪಣೆಯ ಸಮಯದಲ್ಲಿ ತನ್ನ ಪಾತ್ರವನ್ನು ಗ್ರಹಿಸಲು ಸಾಧ್ಯವಾಗಲಿಲ್ಲ ಎಂದು ಅಮೃತಾ ಹೇಳಿಕೊಂಡಿದ್ದಾರೆ. "ಕೆಲವೊಮ್ಮೆ ನಿಮ್ಮ ಪಾತ್ರಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳದಿರುವುದು ಉತ್ತಮ" ಎಂದು ಅವರು ಹೇಳಿದ್ದಾರೆ.

ಇದಕ್ಕೂ ಮೊದಲು ಆತ್ಮೀಯ ದೃಶ್ಯಗಳ ಬಗ್ಗೆ ನಟಿ ತಮನ್ನಾ ಕೂಡ ಮಾತನಾಡಿದ್ದರು. 'ಅಂತಹ ದೃಶ್ಯಗಳಲ್ಲಿ ಪುರುಷರಿದ್ದರೆ ಚಪ್ಪಾಳೆ, ಸ್ತ್ರೀಗೇಕೆ ಟೀಕೆ' ಎಂದು ಪ್ರಶ್ನಿಸಿದ್ದರು. ಅವರು ನಟಿಸಿರುವ ಲಸ್ಟ್ ಸ್ಟೋರಿಸ್ 2 ಜೂನ್​ 29ರಂದು ತೆರೆ ಕಂಡಿದೆ. ತೀರಾ ಆತ್ಮೀಯ ದೃಶ್ಯಗಳಲ್ಲಿ ಕಾಣಿಸಿಕೊಂಡ ನಟಿ ಟ್ರೋಲ್‌ಗೆ ಗುರಿಯಾಗಿದ್ದಾರೆ. ಈ ಬಗ್ಗೆ ಈಗಾಗಲೇ ಹಲವು ಬಾರಿ ಸ್ಪಷ್ಟನೆ ಕೊಟ್ಟಿರುವ ನಟಿ ಇತ್ತೀಚಿನ ಸಂದರ್ಶನದಲ್ಲಿ ಸ್ತ್ರೀ ದ್ವೇಷದ ಕುರಿತು ಮಾತನಾಡಿದ್ದರು.

"ಸ್ತ್ರೀದ್ವೇಷದಂತಹ ಹೇಳಿಕೆಗಳು, ಟೀಕೆಗಳು ನನ್ನನ್ನು ಗುರಿಮಾಡಿದಾಗ ತಬ್ಬಿಬ್ಬಾದೆ. ಮಹಿಳಾ ನಟರ ನೈತಿಕತೆ ಬಗ್ಗೆ ಪ್ರೇಕ್ಷಕರು ಏಕೆ ತ್ವರಿತವಾಗಿ ಟೀಕಿಸುತ್ತಾರೆ. ತೆರೆ ಮೇಲೆ ಅಂತಹ ದೃಶ್ಯಗಳಲ್ಲಿ ನಟರು ಕಾಣಿಸಿಕೊಂಡರೆ ಸೂಪರ್​ ಸ್ಟಾರ್​ಗಳಾಗುತ್ತಾರೆ, ಅದೇ ನಟಿಯರು ಬಂದರೆ ಟೀಕೆಗೊಳಗಾಗುತ್ತಾರೆ. ಪುರುಷರು ಅಂತಹ ದೃಶ್ಯಗಳಲ್ಲಿ ತೊಡಗಿಸಿಕೊಂಡರೆ ಪ್ರಶಂಸೆ ಮತ್ತು ಚಪ್ಪಾಳೆಗಳನ್ನು ಪಡೆಯುತ್ತಾರೆ. ಆದರೆ, ಮಹಿಳಾ ನಟರು ಕಾಣಿಸಿಕೊಂಡರೆ ಅವರ ಬಗ್ಗೆ ನಕಾರಾತ್ಮಕವಾಗಿ ಮಾತನಾಡುತ್ತಾರೆ. ಅಂತಹ ದೃಶ್ಯಗಳಲ್ಲಿ ನಟಿಸಿದ್ದಾರೆ. ಅಂತಹ ಪರಿಸ್ಥಿತಿ ಏನಿತ್ತು ಎಂಬ ಹೇಳಿಕೆ ನನಗೆ ವಿಚಿತ್ರ ಎನಿಸಿತು" ಎಂದು ಹೇಳಿದ್ದರು.

ಇದನ್ನೂ ಓದಿ: ಪ್ಯಾರೀಸ್​ನ ಐಫೆಲ್ ಟವರ್ ಮುಂದೆ ಮಗಳೊಂದಿಗೆ ಸುಶ್ಮಿತಾ ಸೇನ್​ ಡ್ಯಾನ್ಸ್​; 'ಸೋ ಕ್ಯೂಟ್'​ ಎಂದ ಫ್ಯಾನ್ಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.