ETV Bharat / entertainment

ಅಮಿತಾಬ್ ಬಚ್ಚನ್​ಗೆ ಕೋವಿಡ್ ಪಾಸಿಟಿವ್ - ಬಾಲಿವುಡ್ ನಟ ಅಮಿತಾಬ್ ಬಚ್ಚನ್

ಅಮಿತಾಬ್ ಬಚ್ಚನ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಅವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

Amitabh Bachchan
ಅಮಿತಾಬ್ ಬಚ್ಚನ್
author img

By

Published : Aug 24, 2022, 6:47 AM IST

ಮುಂಬೈ (ಮಹಾರಾಷ್ಟ್ರ) ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಅವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ನಾನು ಈಗಷ್ಟೇ ಕೋವಿಡ್ ಸೋಂಕಿಗೆ ಒಳಗಾಗಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ಮತ್ತು ಸುತ್ತಮುತ್ತಲಿನವರು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

  • T 4388 - I have just tested CoViD + positive .. all those that have been in my vicinity and around me, please get yourself checked and tested also .. 🙏

    — Amitabh Bachchan (@SrBachchan) August 23, 2022 " class="align-text-top noRightClick twitterSection" data=" ">

ಅಮಿತಾಬ್ ಬಚ್ಚನ್ ಅವರಿಗೆ ಕೋವಿಡ್​​ ತಗುಲಿರುವುದು ಇದೇ ಮೊದಲಲ್ಲ. ಜು.2020ರಲ್ಲಿ ಅವರಿಗೆ ಮೊದಲ ಬಾರಿಗೆ ಪಾಸಿಟಿವ್​​ ಬಂದಿತ್ತು. ಆ ಸಮಯದಲ್ಲಿ ಅವರು ಸುಮಾರು ಮೂರು ವಾರಗಳ ಕಾಲ ಆಸ್ಪತ್ರೆಯಲ್ಲಿದ್ದರು. ಅವರಷ್ಟೇ ಅಲ್ಲದೇ, ಅವರ ಮಗ ಮತ್ತು ನಟ ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಬಚ್ಚನ್ ಮತ್ತು ಮೊಮ್ಮಗಳು ಆರಾಧ್ಯ ಅವರಿಗೂ ಕೂಡ ಸೋಂಕು ದೃಢಪಟ್ಟಿತ್ತು.

ಅಮಿತಾಬ್ ಬಚ್ಚನ್ ಅಯಾನ್ ಮುಖರ್ಜಿ ಅವರ 'ಬ್ರಹ್ಮಾಸ್ತ್ರ ಭಾಗ ಒಂದು: ಶಿವ' ಚಿತ್ರದಲ್ಲಿ ಆಲಿಯಾ ಭಟ್ ಮತ್ತು ರಣಬೀರ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಸೆ.9 ರಂದು ಬಿಡುಗಡೆಯಾಗಲಿದೆ. 'ಬ್ರಹ್ಮಾಸ್ತ್ರ' ನಂತರ, ಅಮಿತಾಬ್ ಬಚ್ಚನ್ ವಿಕಾಸ್ ಬಹ್ಲ್ ಅವರ 'ಗುಡ್ ಬೈ' ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ನೀನಾ ಗುಪ್ತಾ ಮತ್ತು ಪಾವೈಲ್ ಗುಲಾಟಿ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ನಿರ್ಮಾಪಕರು ಇತ್ತೀಚೆಗೆ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ಈ ಎರಡು ಚಿತ್ರಗಳ ಹೊರತಾಗಿ, ಬಿಗ್-ಬಿ ಅವರು ಪರಿಣಿತಿ ಚೋಪ್ರಾ, ಅನುಪಮ್ ಖೇರ್ ಮತ್ತು ಬೊಮನ್ ಇರಾನಿ ಅವರ ಮುಂಬರುವ ಚಿತ್ರ 'ಉಂಚೈ' ಚಿತ್ರೀಕರಣವನ್ನು ಸಹ ಮುಗಿಸಿದ್ದಾರೆ.

ಇದನ್ನೂ ಓದಿ: ಬಿಗ್​ - ಬಿ ಅವರೊಂದಿಗೆ ರಶ್ಮಿಕಾ ನಟಿಸಿದ ಮೊದಲ ಬಾಲಿವುಡ್​ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.