ಹಿಂದಿ ಚಿತ್ರರಂಗದ ಹಿರಿಯ, ಖ್ಯಾತ ನಟ ಅಮಿತಾಭ್ ಬಚ್ಚನ್ ತಮ್ಮ ಮಗನ ಸಾಧನೆಗೆ ಸಂತಸ, ಹೆಮ್ಮೆ ವ್ಯಕ್ತಪಡಿಸುವುದರಿಂದ ಹಿಂದೆ ಸರಿಯಲ್ಲ. ಇಂಡಿಯನ್ ಸ್ಪೋರ್ಟ್ಸ್ ಹಾನರ್ಸ್ ಸಮಾರಂಭದಲ್ಲಿ ನಟ ಅಭಿಷೇಕ್ ಬಚ್ಚನ್ ಟ್ರೋಫಿ ಸ್ವೀಕರಿಸಿದ ನಂತರ ತಮ್ಮ ಮಗನ ಬಗ್ಗೆ ಹೆಮ್ಮೆ ಪಡಿಸಿರುವ ಅಮಿತಾಭ್ ಬಚ್ಚನ್ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ. ಇದಕ್ಕಾಗಿ ಅವರು ವಿಶೇಷ ವಿಡಿಯೋ ಕೂಡ ಶೇರ್ ಮಾಡಿದ್ದಾರೆ.
ಅಮಿತಾಭ್ ಬಚ್ಚನ್ ಅವರು ಸಾಮಾಜಿಕ ಜಾಲತಾಣದಲ್ಲಿ, ''ನನ್ನ ಹೆಮ್ಮೆ ಅಭಿಷೇಕ್, ನಿನ್ನ ಸಾಧನೆಗಳ ಬಗ್ಗೆ ಹೆಮ್ಮೆ ಇದೆ, ದೊಡ್ಡ ಸಾಧನೆ ಮಾಡಲು ಸದ್ಯ ಸದ್ದಿಲ್ಲದೇ ಹೆಮ್ಮೆ ವ್ಯಕ್ತಪಡಿಸುತ್ತೇನೆ'' ಎಂದು ಬರೆದುಕೊಂಡಿದ್ದಾರೆ. ತಂದೆ ಮಗನ ವಿಶೇಷ ವಿಡಿಯೋ ಕೂಡ ಶೇರ್ ಮಾಡಿದ್ದಾರೆ.
-
T 4597 - my pride Abhishek .. proud of your achievements .. silently, without any noise , to make the loudest noise !!! ❤️ pic.twitter.com/uOcxfmeSYW
— Amitabh Bachchan (@SrBachchan) March 25, 2023 " class="align-text-top noRightClick twitterSection" data="
">T 4597 - my pride Abhishek .. proud of your achievements .. silently, without any noise , to make the loudest noise !!! ❤️ pic.twitter.com/uOcxfmeSYW
— Amitabh Bachchan (@SrBachchan) March 25, 2023T 4597 - my pride Abhishek .. proud of your achievements .. silently, without any noise , to make the loudest noise !!! ❤️ pic.twitter.com/uOcxfmeSYW
— Amitabh Bachchan (@SrBachchan) March 25, 2023
ಇಂಡಿಯನ್ ಸ್ಪೋರ್ಟ್ಸ್ ಆನರ್ಸ್ 2023ರಲ್ಲಿ ಅಭಿಷೇಕ್ ಬಚ್ಚನ್ ಅವರಿಗೆ 'ಕ್ಲಬ್ ಆಫ್ ದ ಇಯರ್' ಟ್ರೋಫಿಯನ್ನು ನೀಡಿ ಗೌರವಿಸಲಾಗಿದೆ. ಈ ಗೌರವದಿಂದಾಗಿ ಜೂನಿಯರ್ ಬಚ್ಚನ್ ಅಭಿಮಾನಿಗಳು, ಬೆಂಬಲಿಗರು ಹಾಗೂ ಕುಟುಂಬ ಸದಸ್ಯರಲ್ಲಿ ಸಂತಸದ ಅಲೆ ಎದ್ದಿದೆ.
ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಈ ಗೌರವದ ಸ್ವೀಕರಿಸಿದ ನಂತರ, ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರು ತಮ್ಮದೇ ಆದ ಶೈಲಿಯಲ್ಲಿ ಮಗನನ್ನು ಹೊಗಳಿರುವ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಅಪ್ಪ - ಮಗನ ಬಾಂಧವ್ಯದ ಕುರಿತಾಗಿದೆ. ಸುಮಾರು 1 ನಿಮಿಷದ ಈ ವಿಡಯೋದಲ್ಲಿ ಚಲನಚಿತ್ರದ ದೃಶ್ಯಗಳು, ಸಿನಿಮಾ ಈವೆಂಟ್ಗಳು, ಕೆಲ ವೈಯಕ್ತಿಕ ಕ್ಷಣಗಳನ್ನು ಸೇರಿಸಲಾಗಿದೆ. ಇದನ್ನು ನೋಡಿದ ಅಭಿಮಾನಿಗಳು ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಸದ್ದು ಮಾಡುತ್ತಿದ್ದು, ಇದಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ.
-
MY pride .. my SON ❤️ https://t.co/pEKushhKJu
— Amitabh Bachchan (@SrBachchan) March 23, 2023 " class="align-text-top noRightClick twitterSection" data="
">MY pride .. my SON ❤️ https://t.co/pEKushhKJu
— Amitabh Bachchan (@SrBachchan) March 23, 2023MY pride .. my SON ❤️ https://t.co/pEKushhKJu
— Amitabh Bachchan (@SrBachchan) March 23, 2023
ಅಮಿತಾಭ್ ಬಚ್ಚನ್ ಪುತ್ರ, ನಟ ಅಮಿತಾಭ್ ಬಚ್ಚನ್ ಅವರು ಜೈಪುರ ಪಿಂಕ್ ಪ್ಯಾಂಥರ್ಸ್ ಕಬಡ್ಡಿ ತಂಡದ ಮಾಲೀಕ. ಕೊನೆಯ ಪ್ರೋ ಕಬಡ್ಡಿ ಸೀಸನ್ನಲ್ಲಿ ಈ ಟೀಮ್ ಗೆಲುವು ಸಾಧಿಸಿದೆ. ಈ ಹಿನ್ನೆಲೆ, ಗುರುವಾರ ಮುಂಬೈನಲ್ಲಿ ನಡೆದ ನಾಲ್ಕನೇ ಆವೃತ್ತಿಯ ಇಂಡಿಯನ್ ಸ್ಪೋರ್ಟ್ಸ್ ಆನರ್ಸ್ 2023ರಲ್ಲಿ 'ಕ್ಲಬ್ ಆಫ್ ದ ಇಯರ್' ಅವಾರ್ಡ್ ಕೊಡಲಾಗಿದೆ. ಪುತ್ರ ಪ್ರಶಸ್ತಿ ಸ್ವೀಕರಿಸಿದ ಹಿನ್ನೆಲೆ ತಂದೆ ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಈ ನಟನ ಹೆಸರು ಹೇಳುತ್ತಿದ್ದಂತೆ ನಾಚಿ ನೀರಾದ ಅನನ್ಯಾ ಪಾಂಡೆ
ಇನ್ನು ಅಮಿತಾಭ್ ಬಚ್ಚನ್ ಅವರು ಚೇತರಿಸಿಕೊಂಡ ನಂತರ ಶೀಘ್ರದಲ್ಲೇ ತಮ್ಮ ಚಿತ್ರದ ಶೂಟಿಂಗ್ ಸೆಟ್ಗೆ ಲಭ್ಯವಾಗಲಿದ್ದಾರೆ. ತಮ್ಮ ಚಿತ್ರವನ್ನು ನಿಗದಿತ ಸಮಯಕ್ಕೆ ಪೂರ್ಣಗೊಳಿಸಲು ಪ್ರಯತ್ನಿಸುತ್ತಾರೆ. ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಆರೋಗ್ಯದ ಕುರಿತು ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಈ ಸಂಕಷ್ಟದ ಸಂದರ್ಭದಲ್ಲಿ ಜನತೆಯ ಪ್ರಾರ್ಥನೆಗೆ ಕೃತಜ್ಞತೆ ಕೂಡ ಸಲ್ಲಿಸಿದ್ದಾರೆ. ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಸಂಪೂರ್ಣ ಚೇತರಿಕೆಗೆ ಕೆಲ ದಿನಗಳು ಬೇಕಾಗಬಹುದು.
-
T 4596 - Abhishek ! my pride
— Amitabh Bachchan (@SrBachchan) March 23, 2023 " class="align-text-top noRightClick twitterSection" data="
FilmFare Best Actor - 'DASVI' ..
Jaipur Pink Panthers , which you own, wins Championship League in Kabaddi ..
And .. now
JPP wins the Virat Kohli Foundation Sports Honours trophy versus other league teams of Football and Cricket !
👏💪
2022-2023
">T 4596 - Abhishek ! my pride
— Amitabh Bachchan (@SrBachchan) March 23, 2023
FilmFare Best Actor - 'DASVI' ..
Jaipur Pink Panthers , which you own, wins Championship League in Kabaddi ..
And .. now
JPP wins the Virat Kohli Foundation Sports Honours trophy versus other league teams of Football and Cricket !
👏💪
2022-2023T 4596 - Abhishek ! my pride
— Amitabh Bachchan (@SrBachchan) March 23, 2023
FilmFare Best Actor - 'DASVI' ..
Jaipur Pink Panthers , which you own, wins Championship League in Kabaddi ..
And .. now
JPP wins the Virat Kohli Foundation Sports Honours trophy versus other league teams of Football and Cricket !
👏💪
2022-2023
ಇದನ್ನೂ ಓದಿ: ನೋವಿನಿಂದ ಚೇತರಿಸಿಕೊಳ್ಳುತ್ತಿರುವ ಅಮಿತಾಭ್ ಬಚ್ಚನ್: ಮತ್ತೆ ಕೆಲಸ ಆರಂಭಿಸಿದ ಬಿಗ್ ಬಿ
ಹೈದರಾಬಾದ್ನಲ್ಲಿ ನಾಗ್ ಅಶ್ವಿನ್ ನಿರ್ದೇಶನದ 'ಪ್ರಾಜೆಕ್ಟ್ ಕೆ' ಶೂಟಿಂಗ್ ಸೆಟ್ನಲ್ಲಿ ಅಮಿತಾಭ್ ಬಚ್ಚನ್ ಗಾಯಗೊಂಡಿದ್ದರು. ಅಂದು ಹೈದರಾಬಾದ್ನ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ವೈದ್ಯರ ಸಲಹೆ ಸೂಚನೆ ಮೇರೆಗೆ ಚಿಕಿತ್ಸೆ, ವಿಶ್ರಾಂತಿ ಪಡೆದರು. ನಿನ್ನೆ ಕೆಲಸ ಆರಂಭಿಸಿರುವುದಾಗಿ ಮಾಹಿತಿ ಹಂಚಿಕೊಂಡಿದ್ದರು. ಸಿನಿಮಾ ಶೂಟಿಂಗ್ ಬಗ್ಗೆ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.