ETV Bharat / entertainment

"ಆಲ್​ಮೋಸ್ಟ್​ ಪ್ಯಾರ್​ ವಿಥ್​ ಡಿಜೆ ಮೊಹಬತ್​"ನ ಸಂಗೀತ ಸಂಯೋಜನೆ: ನಾಲ್ಕು ವರ್ಷ ಕೆಲಸ ಮಾಡಿದ ಅಮಿತ್​​ ತ್ರಿವೇದಿ - ಸಂಗೀತ ನಿರ್ದೇಶಕ ಅಮಿತ್​ ತ್ರಿವೇದಿ

ಲಾಕ್​ಡೌನ್​ ಸಮಯವನ್ನು ಬಳಸಿಕೊಂಡು ವಿಧ ವಿಧದ ಐಡಿಯಾ, ವರ್ಷನ್​ಗಳನ್ನು ಬಳಸಿ ಪ್ರಯೋಗ ನಡೆಸಲಾಗಿದ್ದು, ಕಡೆಗೂ ಹೊಸ ಹಾಡಿನ ಹುಟ್ಟಿಗೆ ಕಾರಣರಾಗಿದ್ದೇವೆ.

ಆಲ್​ಮೋಸ್ಟ್​ ಪ್ಯಾರ್​ ವಿಥ್​ ಡಿಜೆ ಮೊಹಬತ್​ನ ಸಂಗೀತಕ್ಕೆ ನಾಲ್ಕು ವರ್ಷ ಕೆಲಸ ಮಾಡಿದ ಅಮಿತ್​​ ತ್ರಿವೇದಿ
amit-trivedi-worked-for-four-years-for-the-music-of-almost-pyaar-with-dj-mohbat
author img

By

Published : Jan 12, 2023, 3:36 PM IST

ಮುಂಬೈ: ಬಾಲಿವುಡ್​ ನಿರ್ದೇಶಕ ಅನುರಾಗ್​ ಕಶ್ಯಪ್ ಅವರ​ ಮ್ಯೂಸಿಕಲ್​ ಲವ್​ಸ್ಟೋರಿ ಸಿನಿಮಾ "ಆಲ್​ಮೋಸ್ಟ್​ ಪ್ಯಾರ್​ ವಿಥ್​ ಡಿಜೆ ಮೊಹಬತ್​" ಮ್ಯೂಸಿಕ್​ ಆಲ್ಬಂಗೆ ಸರಿಸುಮಾರು ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿರುವುದಾಗಿ ಸಂಗೀತ ನಿರ್ದೇಶಕ ಅಮಿತ್​ ತ್ರಿವೇದಿ ತಿಳಿಸಿದ್ದಾರೆ. ಅಮಿತ್​ ತ್ರಿವೇದಿ ಮತ್ತು ಗೀತ ರಚನೆಗಾರ ಶೆಲ್ಲಿ ನಾಲ್ಕು ವರ್ಷಗಳ ಸುದೀರ್ಘ ಕಾಲ ಈ ಅಲ್ಬಂಗೆ ಕಾರ್ಯ ನಿರ್ವಹಿಸಿದ್ದಾರೆ. ಕಡೆಗೂ ಎಲ್ಲರ ಮೂಡ್​ಗೆ ಹೊಂದುವ ಜೊತೆಗೆ ಪ್ರಸ್ತುತ ಸ್ಥಿತಿಗೆ ಅನುಗುಣವಾದ ಆಧುನಿಕ ರೋಮ್ಯಾನ್ಸ್​ ಮತ್ತು ಯುವ ಪ್ರೀತಿಯುಳ್ಳ ಹಾಡುಗಳ ನಿರ್ಮಾಣ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಹಾಡಿನ ರಚನೆ ಪ್ರಕ್ರಿಯೆ ಬಗ್ಗೆ ಯಾವುದೇ ರೀತಿಯ ರಾಜಿಗೂ ತಂಡ ಸಿದ್ದವಿರಲಿಲ್ಲ. ಲಾಕ್​ಡೌನ್​ ಸಮಯವನ್ನು ಬಳಸಿಕೊಂಡು ವಿಧ ವಿಧದ ಐಡಿಯಾ, ವರ್ಷನ್​ಗಳನ್ನು ಬಳಸಿ ಪ್ರಯೋಗ ನಡೆಸಲಾಗಿದ್ದು, ಕಡೆಗೂ ಹೊಸ ಹಾಡಿನ ಹುಟ್ಟಿಗೆ ಕಾರಣರಾಗಿದ್ದೇವೆ. ಗೀತ ರಚನೆಗಾರ ಶೆಲ್ಲಿ, ತಮ್ಮೊಳಗಿನ ಕವಿಯನ್ನು ಹೊರಗೆ ತೆಗೆದಿದ್ದಾರೆ. ಈಗಿನ ಜನರೇಷನ್​ನ ಮನಸ್ಥಿತಿ ಅರಿಯಲು ನನ್ನ ಮಗಳು ಮತ್ತು ಅವರ ಮಗನೊಂದಿಗೆ ಕುಳಿತು ಅವರು ಗೀತರಚನೆ ನಡೆಸಿದ್ದಾರೆ ಎಂದರು.

ನಾಲ್ಕು ವರ್ಷದ ಕಾರ್ಯ: ನಿರ್ದೇಶಕ ಅನುರಾಗ್​ ಕಶ್ಯಪ್​ ಮಾತನಾಡಿ, ನಾನು ಮತ್ತು ಅಮಿತ್​ ತುಂಬಾ ದೀರ್ಘ ಪ್ರಯಾಣ ನಡೆಸಿದೆವು. ನಮ್ಮ ಸ್ನೇಹಕ್ಕೆ ಇದೀಗ 15 ವರ್ಷ. ನಾವು ಯಾವಾಗಲೇ ಒಟ್ಟಿಗೆ ಕಾರ್ಯ ನಿರ್ವಹಿಸಿದಾಗ ಆತ ಮೆರೆಯಲಾಗದಂತಹ ಮೆಲೋಡಿಗಳನ್ನು ನೀಡಿದ್ದಾರೆ. ಅದರಲ್ಲಿ ಒಂದು ಇದಾಗಿದೆ. ಈ ಚಿತ್ರದ ಆಲ್ಬಂಗೆ ಅವರು ತಮ್ಮ ಹೃದಯ ಮತ್ತು ಆತ್ಮವನ್ನು ಅರ್ಪಿಸಿದ್ದಾರೆ. ನನ್ನೊಟ್ಟಿಗಿನ ಪ್ರತಿ ಸಂದರ್ಭದಲ್ಲಿನ ಅವರ ತಾಳ್ಮೆಗೆ ನಾನು ಪ್ರಶಂಸೆ ವ್ಯಕ್ತಪಡಿಸುತ್ತೇನೆ. ಅಮಿತ್​ ಮತ್ತು ಶೆಲ್ಲೆ ಈ ಆಲ್ಬಂ ಸಂಗೀತಕ್ಕೆ ನಾಲ್ಕು ವರ್ಷ ಕೆಲಸ ಮಾಡಿದ್ದಾರೆ. ಇದಕ್ಕೆ ಕಾರಣ ಸಾಹಿತ್ಯ ಎಂಬುದು ಮತ್ತೊಂದು ಲೋಕದ ಕಲ್ಪನೆಯಾಗಿದೆ. ಶೆಲ್ಲಿ ತಮ್ಮೊಳಗಿನ ಕವಿಯನ್ನು ಹೊರ ತೆಗೆದಿದ್ದಾರೆ ಎಂದರು.

ಅಮಿತ್​ ತ್ರಿವೇದಿ ಮಾತನಾಡಿ, ಅನುರಾಗ್​ಗೆ ಸಿನಿಮಾದಲ್ಲಿ ಬೇರೆಯದೆ ಒಂದು ಕಲ್ಪನೆ ಇದೆ. ದೇವ್​ ಡಿ ನನ್ನ ವೃತ್ತಿ ಜೀವನದಲ್ಲೇ ತಿರುವು ನೀಡಿದ ಸಿನಿಮಾ. ಆದರೆ, ನಾವು ಪ್ರತಿ ಸಿನಿಮಾವನ್ನು ಹೊಸ ದೃಷ್ಟಿಯಿಂದ ನೋಡುತ್ತೇವೆ. ನಮ್ಮ ಜೋಡಿ ಹೊಸತನ್ನು ಮಾಡಲು ಬಯಸುತ್ತೇವೆ. ಇದನ್ನೇ ಪ್ರೇಕ್ಷಕರು ಕೂಡ "ಆಲ್​ಮೋಸ್ಟ್​ ಪ್ಯಾರ್​​ ವಿಥ್​ ಡಿಜೆ ಮೊಹಬತ್"​ ಆಲ್ಬಂನಲ್ಲಿ ಕಾಣಬಹುದಾಗಿದೆ.

ಫೆಬ್ರವರಿಗೆ ಚಿತ್ರ ತೆರೆಗೆ: "ಆಲ್​ಮೋಸ್ಟ್​ ಪ್ಯಾರ್​​ ವಿಥ್​ ಡಿಜೆ ಮೊಹಬತ್"​ನಲ್ಲಿ ಆಲಯ ಎಫ್​ ಮತ್ತು ಕರಣ್​ ಮೆಹ್ತಾ ಕಾಣಿಸಿಕೊಂಡಿದ್ದು, ಇದೇ ಇವರ ಚೊಚ್ಚಲ ತೆರೆ ಹಂಚಿಕೆಯಾಗಿದೆ. ಅನುರಾಗ್​ ಕಶ್ಯಪ್​ ಅವರ ಆಧುನಿಕ ಪ್ರೇಮದ ಕಥೆ ಹೊಂದಿರುವ ಈ ಚಿತ್ರ ಫೆಬ್ರವರಿ 3ಕ್ಕೆ ಬಿಡುಗಡೆ ಕಾಣುತ್ತಿದೆ. ಇನ್ನು ಹೊಸ ವರ್ಷದ ಸಂಭ್ರಮಕ್ಕೆ ಚಿತ್ರತಂಡ ಚಿತ್ರದ ದೇಸಿ ವುಮೆನ್​ ಹಾಡನ್ನು ಬಿಡುಗಡೆ ಮಾಡಿತ್ತು. ಈ ಹಾಡು ಎಲ್ಲರಿಂದ ಮೆಚ್ಚುಗೆ ಗಳಿಸಿದೆ.

ಇದನ್ನೂ ಓದಿ: ನಾಟು ನಾಟು ಹಾಡು ಬರೆಯಲು 19 ತಿಂಗಳು ತೆಗೆದುಕೊಂಡೆ: ಗೀತೆ ರಚನೆಕಾರ ಚಂದ್ರಬೋಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.