ಬಾಲಿವುಡ್ ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ಅವರ ಮುಂದಿನ ರಾಮಾಯಣ ಕಥೆ ಹೊಂದಿರುವ ಸಿನಿಮಾದಿಂದ ನಟಿ ಆಲಿಯಾ ಭಟ್ ಹೊರನಡೆದಿದ್ದಾರೆ ಎಂದು ವರದಿಯಾಗಿದೆ. ಮೂಲಗಳು ನೀಡಿದ ಮಾಹಿತಿಯ ಪ್ರಕಾರ, ಚಿತ್ರದಲ್ಲಿ ನಟ ರಣ್ಬೀರ್ ಕಪೂರ್ ಮತ್ತು ಆಲಿಯಾ ಭಟ್ ರಾಮ-ಸೀತೆಯ ಪಾತ್ರದಲ್ಲಿ ಹಾಗೂ ರಾವಣನ ಪಾತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಇತ್ತೀಚೆಗೆ ಈ ಆಫರ್ ಅನ್ನು ಯಶ್ ನಯವಾಗಿ ನಿರಾಕರಿಸಿದ್ದರು. ಇದೀಗ ಆಲಿಯಾ ಭಟ್ ಕೂಡ ಈ ಪ್ರಾಜೆಕ್ಟ್ನಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿದುಬಂದಿದೆ.
ನಿತೇಶ್ ತಿವಾರಿ ಅವರ 'ಬವಾಲ್' ಚಿತ್ರ ಇತ್ತೀಚೆಗೆ ತೆರೆ ಕಂಡಿತ್ತು. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿತ್ತು. ಇದೀಗ ರಾಮಾಯಣ ಮಹಾಕಾವ್ಯ ಹೊಂದಿರುವ ಸಿನಿಮಾ ಮಾಡುತ್ತಿರುವ ಮಾಹಿತಿ ಇದೆ. ಚಿತ್ರದ ಅಧಿಕೃತ ಘೋಷಣೆಗೂ ಮುನ್ನವೇ ರಣ್ಬೀರ್, ಆಲಿಯಾ ಮತ್ತು ಯಶ್ಗೆ ಪ್ರಮುಖ ಪಾತ್ರಗಳಿಗೆ ಆಫರ್ ನೀಡಿದ್ದರು. ಆದರೆ ಕೆಜಿಎಫ್ ಸ್ಟಾರ್ ಈ ಅವಕಾಶವನ್ನು ನಿರಾಕರಿಸಿದ್ದರು. ಇದೀಗ ಆಲಿಯಾ ಭಟ್ ಕೂಡ ಸೀತೆಯ ಪಾತ್ರಕ್ಕೆ ನೋ ಎಂದಿದ್ದಾರೆ.
ಇದನ್ನೂ ಓದಿ: Yash: 'ರಾವಣ'ನ ಆಫರ್ ತಿರಸ್ಕರಿಸಿದ ರಾಕಿಂಗ್ ಸ್ಟಾರ್ ಯಶ್.. ಕಾರಣ ಏನ್ ಗೊತ್ತಾ?
ಸಿನಿಮಾ ಡೇಟ್ ಸಮಸ್ಯೆಗಳಿಂದಾಗಿ ನಟಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಬೇರೆ ಪ್ರಾಜೆಕ್ಟ್ಗಳನ್ನು ಈಗಾಗಲೇ ಆಲಿಯಾ ಒಪ್ಪಿಕೊಂಡಿದ್ದು, ಹೀಗಾಗಿ ಶೂಟಿಂಗ್ಗೆ ತೊಂದರೆಯಾಗುವ ದೃಷ್ಟಿಯಿಂದ ಚಿತ್ರದಿಂದ ಹಿಂದೆ ಸರಿದಿದ್ದಾರೆ ಎಂದು ಹೇಳಲಾಗಿದೆ. ಆದರೆ ಕೆಲವು ಮಾಹಿತಿಯ ಪ್ರಕಾರ ಯಶ್ ಅವರು ಇನ್ನೂ ಈ ಚಿತ್ರದ ಭಾಗವಾಗಿದ್ದಾರೆ. ರಾವಣನ ಪಾತ್ರಕ್ಕಾಗಿ ಲುಕ್ ಟೆಸ್ಟ್ ಕೊಡಲು ರೆಡಿಯಾಗಿದ್ದಾರೆ ಎಂಬ ಸುದ್ದಿಯೂ ಇದೆ. ಈ ಲುಕ್ ಟೆಸ್ಟ್ನಲ್ಲಿ ನಟನ ನೋಟ ತೃಪ್ತಿಕರವಾಗಿ ಕಂಡರೆ, ಈ ಬಿಗ್ ಬಜೆಟ್ ಪ್ರಾಜೆಕ್ಟ್ಗೆ ಯಶ್ ಆಸಕ್ತಿ ತೋರಿಸಲಿದ್ದಾರೆ ಎಂಬ ಮಾಹಿತಿ ಇದೆ.
ರಾಮಾಯಣ-ಬಿಗ್ ಬಜೆಟ್ ಸಿನಿಮಾ: ಬಿಗ್ ಬಜೆಟ್ ಸಿನಿಮಾವನ್ನು ಖ್ಯಾತ ನಿರ್ಮಾಪಕರಾದ ಅಲ್ಲು ಅರವಿಂದ್, ನಮಿತ್ ಮಲ್ಹೋತ್ರಾ ಮತ್ತು ಮಧು ಮಾಂಟೆನಾ ನಿರ್ಮಿಸಲಿದ್ದಾರೆ. ಸುಮಾರು 1,500 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಲಿದೆ. ನಿತೇಶ್ ತಿವಾರಿ ನಿರ್ದೇಶಿಸಲಿದ್ದಾರೆ. ಈ ವರ್ಷದ ಡಿಸೆಂಬರ್ನಲ್ಲಿ ರಾಮಾಯಣ ಸೆಟ್ಟೇರಲಿದೆ ಎಂದು ನಿರ್ಮಾಪಕರು ಹೇಳಿದ್ದಾರೆ. ಆದರೆ ಈ ದಿನಾಂಕದಲ್ಲಿ ಬದಲಾವಣೆ ಆದಂತಿದೆ. ಮೂಲಗಳ ಪ್ರಕಾರ, ಚಿತ್ರ ಇನ್ನೂ ಪ್ರಿ-ಪ್ರೊಡಕ್ಷನ್ಸ್ ಹಂತದಲ್ಲಿದೆ. ಹೀಗಾಗಿ ಈ ವರ್ಷದ ಕೊನೆಯಲ್ಲಿ ಶೂಟಿಂಗ್ ಪ್ರಾರಂಭಗೊಳ್ಳುವುದು ಅನುಮಾನ ಎನಿಸುತ್ತಿದೆ.
ಇದನ್ನೂ ಓದಿ: ಮನಸ್ಸು ಬದಲಾಯಿಸಿದ್ರಾ ಯಶ್.. ರಾವಣನ ಪಾತ್ರಕ್ಕೆ ಲುಕ್ ಟೆಸ್ಟ್ ಕೊಡಲಿದ್ದಾರಾ ರಾಕಿಂಗ್ ಸ್ಟಾರ್?