ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಡೆಸಿಕೊಡುವ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಒಟಿಟಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಸದ್ಯ ಸೆಲೆಬ್ರಿಟಿಗಳ ಮನೆಯಲ್ಲಿ ಫ್ಯಾಮಿಲಿ ವೀಕ್ ನಡೆಯುತ್ತಿದ್ದು, ಸ್ಪರ್ಧಿಗಳಿಗೆ ತಮ್ಮ ಕುಟುಂಬ ಸದಸ್ಯರನ್ನು ಭೇಟಿಯಾಗುವ ಅವಕಾಶ ಸಿಗುತ್ತಿದೆ.
ಮನೀಶಾ ರಾಣಿ, ಅವಿನಾಶ್ ಸಚ್‌ದೇವ್, ಅಭಿಷೇಕ್ ಮಲ್ಹಾನ್ ಮತ್ತು ಝೈದ್ ಹದಿದ್ ಅವರು ತಮ್ಮ ಮನೆಯವರನ್ನು ಭೇಟಿಯಾಗಿದ್ದಾರೆ. ಇದೀಗ ನಟಿ ಪೂಜಾ ಭಟ್ ಅವರಿಗೆ ಬಿಗ್ ಸರ್ಪ್ರೈಸ್ ಅನ್ನು ಬಿಗ್ ಬಾಸ್ ತಂಡ ನೀಡಿದೆ. ಬಾಲಿವುಡ್ನ ಹಿರಿಯ, ಪ್ರಸಿದ್ಧ ಚಿತ್ರ ನಿರ್ಮಾಪಕ, ನಿರ್ದೇಶಕ ಮಹೇಶ್ ಭಟ್ ತಮ್ಮ ಪುತ್ರಿ ಪೂಜಾ ಭಟ್ ಅವರನ್ನು ಭೇಟಿ ಮಾಡಲು ಬಿಗ್ ಬಾಸ್ ಮನೆಗೆ ಆಗಮಿಸಿದ್ದಾರೆ.
ಮನೆಯ ವಾತಾವರಣ ಸಂಪೂರ್ಣ ಭಾವುಕವಾಗಿದ್ದು, ಮಹೇಶ್ ಅವರನ್ನು ಕಂಡು ಪೂಜಾ ಭಾವುಕರಾಗಿದ್ದಾರೆ. ಇತ್ತ ಪೂಜಾ ಭಟ್ ಅವರ ತಂಗಿ ಮತ್ತು ಬಾಲಿವುಡ್ ಸ್ಟಾರ್ ನಟಿ ಆಲಿಯಾ ಭಟ್ ಕೂಡ ತಮ್ಮ ಸಹೋದರಿಯನ್ನು ಭೇಟಿಯಾಗಲು ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.
44 ದಿನಗಳ ನಂತರ ನಟಿ ಪೂಜಾ ಭಟ್ ತಮ್ಮ ತಂದೆಯನ್ನು ಭೇಟಿಯಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನಿರ್ದೇಶಕ ಮಹೇಶ್ ಭಟ್ ಕಂಪ್ಲೀಟ್ ಬ್ಲ್ಯಾಕ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಕಪ್ಪು ಪ್ಯಾಂಟ್, ಪೂರ್ಣ ತೋಳಿನ ಕಪ್ಪು ಶರ್ಟ್ ಧರಿಸಿ ಬಿಗ್ ಬಾಸ್ಗೆ ಆಗಮಿಸಿದ್ದಾರೆ. ಪುತ್ರಿ ಪೂಜಾ ಅವರನ್ನು ಭೇಟಿಯಾದ ಮಹೇಶ್ ಭಟ್ ಬಹಳ ಸಂತಸ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ತಮ್ಮ ತಂದೆಯನ್ನು ಬಹಳ ದಿನಗಳ ನಂತರ ಕಂಡ ಪುತ್ರಿ ಪೂಜಾ ಅವರಿಗೆ ಕಣ್ಣೀರನ್ನು ತಡೆಯಲಾಗಲಿಲ್ಲ.
ಇದನ್ನೂ ಓದಿ: RARKPK: ನಾಲ್ಕೇ ದಿನದಲ್ಲಿ ₹50 ಕೋಟಿ ಬಾಚಿದ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ'
ಪುತ್ರಿಯೊಂದಿಗೆ ಮಾತನಾಡಿದ ಮಹೇಶ್ ಭಟ್ ಇತರೆ ಸ್ಪರ್ಧಿಗಳನ್ನೂ ಭೇಟಿಯಾದರು. ಪೂಜಾ ಮತ್ತು ಮಹೇಶ್ ಭೇಟಿಯ ಫೋಟೋಗಳನ್ನು ಬಿಗ್ ಬಾಸ್ ನಿರ್ಮಾಪಕರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾ ಯಶಸ್ಸಿನಲ್ಲಿರುವ ಆಲಿಯಾ ಭಟ್ ಕೂಡ ಲುಕ್ ಶೋಗೆ 'ರಾಣಿ'ಯಾಗಿ ಪ್ರವೇಶಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Taapsee Pannu Birthday: ಜನ್ಮದಿನದ ಸಂಭ್ರಮದಲ್ಲಿರುವ ಬಹುಭಾಷಾ ನಟಿ ತಾಪ್ಸಿ ಪನ್ನುಗೆ ಶುಭಾಶಯಗಳ ಮಹಾಪೂರ
ಸಹೋದರಿ ಭೇಟಿ ಜೊತೆ ಸಿನಿಮಾ ಪ್ರಚಾರ ಮಾಡಲಿದ್ದಾರೆ ಎಂಬ ಮಾಹಿತಿ ಇದೆ. ಇನ್ನು ಕರಣ್ ಜೋಹರ್ ನಿರ್ದೇಶಿಸಿ, ನಿರ್ಮಾಣ ಮಾಡಿರುವ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾ ತೆರೆಕಂಡ ನಾಲ್ಕೇ ದಿನಗಳಲ್ಲಿ 53.40 ಕೋಟಿ ರೂ. ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಗಿದೆ. ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ. ಗಲ್ಲಿ ಬಾಯ್ ಬಳಿಕ ರಣ್ವೀರ್ ಸಿಂಗ್ ಜೊತೆ ಆಲಿಯಾ ಭಟ್ ನಟಿಸಿದ ಎರಡನೇ ಚಿತ್ರವಿದು.