ETV Bharat / entertainment

ಪತ್ನಿ ಕತ್ರಿನಾ ಕೈಫ್​ ಎದುರು ಆಲಿಯಾ ಭಟ್​ ಆಲಂಗಿಸಿದ ವಿಕ್ಕಿ ಕೌಶಲ್​: ವಿಡಿಯೋ ವೈರಲ್​ - ಈಟಿವಿ ಭಾರತ ಕನ್ನಡ

ಮುಂಬೈ ಏರ್​ಪೋರ್ಟ್​ನಲ್ಲಿ ಬಾಲಿವುಡ್ ಜೋಡಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಹಾಗೂ ಆಲಿಯಾ ಭಟ್​ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

Alia Bhatt
ಆಲಿಯಾ ಭಟ್​ ಆಲಂಗಿಸಿದ ವಿಕ್ಕಿ ಕೌಶಲ್
author img

By

Published : Jun 16, 2023, 6:05 PM IST

ಬಾಲಿವುಡ್ ಜೋಡಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್, ಮುಂಬೈನ ಏರ್‌ಪೋರ್ಟ್ ಲೌಂಜ್‌ನಲ್ಲಿ ಆಲಿಯಾ ಭಟ್ ಜೊತೆ ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆಲಿಯಾ ಲೌಂಜ್‌ಗೆ ಪ್ರವೇಶಿಸುತ್ತಿದ್ದಂತೆ ವಿಕ್ಕಿಯನ್ನು ತಬ್ಬಿಕೊಂಡಿರುವ ದೃಶ್ಯ ವೈರಲ್​ ವಿಡಿಯೋದಲ್ಲಿದೆ. ನಂತರ, ಆಲಿಯಾ, ಕತ್ರಿನಾ ಮತ್ತು ವಿಕ್ಕಿ ಟೇಬಲ್​ ಸುತ್ತಲೂ ಕುಳಿತು ಪರಸ್ಪರ ಹರಟೆ ಹೊಡೆಯುತ್ತಿರುವುದನ್ನು ಕಾಣಬಹುದು.

ಇನ್‌ಸ್ಟಾಗ್ರಾಮ್‌ನಲ್ಲಿ ಪಾಪರಾಜಿಗಳು ಹಂಚಿಕೊಂಡ ಈ ವೀಡಿಯೊದಲ್ಲಿ, ಬಾಲಿವುಡ್ ದಂಪತಿ ವಿಕ್ಕಿ ಮತ್ತು ಕತ್ರಿನಾ ಬ್ಲ್ಯಾಕ್​ ಡ್ರೆಸ್​ನಲ್ಲಿ ಕಂಡಿದ್ದಾರೆ. ಆಲಿಯಾ ವರ್ಣರಂಜಿತ ಕ್ರೋಚೆಟ್ ಟಾಪ್‌ನಲ್ಲಿ ಕಂಗೊಳಿಸಿದ್ದಾರೆ. ವೀಡಿಯೊಗೆ ಪ್ರತಿಕ್ರಿಯಿಸಿದ ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು, "ಮೂವರು ಕುಳಿತುಕೊಂಡು ರಣಬೀರ್​ ಕಪೂರ್​ ಬಗ್ಗೆ ಚರ್ಚಿಸುತ್ತಿದ್ದಾರೆ" ಎಂದು ಹೇಳಿದ್ದಾರೆ. ಮತ್ತೊಬ್ಬರು, "ಆಲಿಯಾ ಅವರೇ ರಣಬೀರ್​ ಹೇಗಿದ್ದಾರೆ ಹೇಳಿ" ಎಂದು ಕೇಳಿದ್ದಾರೆ.

ಗುರುವಾರದಂದು ಆಲಿಯಾ ಭಟ್​, ಸಾಹೊ ಪೌಲೊದಲ್ಲಿ ನಡೆಯುತ್ತಿರುವ ನೆಟ್​ಫ್ಲಿಕ್ಸ್​​ ಟುಡುಮ್​ 2023ರಲ್ಲಿ ಭಾಗಿಯಾಗಲು ಬ್ರೆಜಿಲ್‌ಗೆ ತೆರಳಿದರು. ಇದೇ ವೇಳೆ ಮುಂಬೈ ಏರ್​ಪೋರ್ಟ್​ನಲ್ಲಿ ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ ಕಾಣಿಸಿಕೊಂಡರು. ‘ಜರಾ ಹಟ್ಕೆ ಜರಾ ಬಚ್ಕೆ’ಯ ಯಶಸ್ಸಿನ ಪ್ರಚಾರ ಮತ್ತು ಸಂಭ್ರಮಾಚರಣೆಯಲ್ಲಿ ನಿರತರಾಗಿರುವ ವಿಕ್ಕಿ, ಪತ್ನಿ ಕತ್ರಿನಾ ಜೊತೆ ನಿನ್ನೆ ಬಹಿರಂಗಪಡಿಸದ ಸ್ಥಳಕ್ಕೆ ತೆರಳಿದ್ದಾರೆ.

ಇದನ್ನೂ ಓದಿ: Al Pacino: 29ರ ಹರೆಯದ ಗೆಳತಿ ಜೊತೆ ಡೇಟಿಂಗ್​.. 83ರ ವಯಸ್ಸಿಗೆ ತಂದೆಯಾದ ಹಾಲಿವುಡ್​ ನಟ ಅಲ್ ಪಚಿನೋ

ಆಲಿಯಾ ಭಟ್​ ಇದೀಗ ಮೊದಲ ಬಾರಿಗೆ ಹಾಲಿವುಡ್​ ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಹಾರ್ಟ್​​ ಆಫ್​ ಸ್ಟೋನ್​ನಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಇವರ ಜೊತೆಗೆ ಗಾಲ್​ ಗಡೊಟ್​ ಮತ್ತು ಜಿಮಿ ಡೊರ್ನನ್​ ಕೂಡ ನಟಿಸುತ್ತಿದ್ದಾರೆ. ಅವರು ಕೂಡ ನೆಟ್​ಫ್ಲಿಕ್ಸ್​​ ಟುಡುಮ್​ನಲ್ಲಿ ಭಾಗಿಯಾಗಲಿದ್ದಾರೆ. ಅವರಲ್ಲದೆ, ನಟ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್, ನಿರ್ಮಾಪಕ ಬೋನಿ ಕಪೂರ್ ಪುತ್ರಿ ಖುಷಿ ಕಪೂರ್ ಮತ್ತು ಅಮಿತಾಭ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಕೂಡ ಅದ್ಧೂರಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ವಿಕ್ಕಿ ಕೌಶಲ್​ ರೊಮ್ಯಾಂಟಿಕ್ ಹಾಸ್ಯ ಚಿತ್ರ 'ಜರಾ ಹಟ್ಕೆ ಜರಾ ಬಚ್ಕೆ'ಯಲ್ಲಿ ನಟಿ ಸಾರಾ ಅಲಿ ಖಾನ್ ಎದುರು ಕಾಣಿಸಿಕೊಂಡರು. ಲಕ್ಷ್ಮಣ್ ಉಟೇಕರ್ ನಿರ್ದೇಶನದ ಈ ಚಿತ್ರಕ್ಕೆ ಅಭಿಮಾನಿಗಳಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮತ್ತೊಂದೆಡೆ, ಕತ್ರಿನಾ ಕೈಫ್​ ಮುಂದಿನ ಆಕ್ಷನ್ ಥ್ರಿಲ್ಲರ್ ಚಿತ್ರ ಟೈಗರ್ 3 ನಲ್ಲಿ ಸಲ್ಮಾನ್ ಖಾನ್ ಎದುರು ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ 2023ರ ದೀಪಾವಳಿಯ ಸಂದರ್ಭದಲ್ಲಿ ಥಿಯೇಟರ್‌ಗಳಿಗೆ ಬರಲು ಸಿದ್ಧವಾಗಿದೆ.

ಇದಲ್ಲದೆ ಕತ್ರಿನಾ, ಫರ್ಹಾನ್ ಅಖ್ತರ್ ನಿರ್ದೇಶನದ ಜೀ ಲೆ ಜರಾದಲ್ಲಿ ಆಲಿಯಾ ಭಟ್ ಮತ್ತು ಪ್ರಿಯಾಂಕಾ ಚೋಪ್ರಾ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಆಲಿಯಾ ಭಟ್​ ನಿರ್ದೇಶಕ ಕರಣ್ ಜೋಹರ್ ಅವರ ಮುಂದಿನ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಮತ್ತು ಜೀ ಲೇ ಜರಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: Adipurushಗೆ ಮಿಶ್ರ ಪ್ರತಿಕ್ರಿಯೆ: ರಾಮಾಯಣ ಆಧಾರಿತ ಸಿನಿಮಾ ಟೀಕಿಸಿದ ವ್ಯಕ್ತಿಗೆ ಹೈದರಾಬಾದ್‌ನಲ್ಲಿ ಥಳಿತ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.