ETV Bharat / entertainment

ಅಕ್ಷಯ್​ ಕುಮಾರ್ ಬರ್ತ್​ಡೇಯಂದು ಘೋಷಣೆಯಾಗುವುದೇ ವೆಲ್ಕಮ್​ 3, ಹೇರಾ ಫೇರಿ 3? - welcome 3

Akshay Kumar upcoming movies: ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾಗಳು ನಾಳೆ ಘೋಷಣೆಯಾಗುವ ಸಾಧ್ಯತೆಗಳಿವೆ.

Akshay Kumar
ಅಕ್ಷಯ್​ ಕುಮಾರ್
author img

By ETV Bharat Karnataka Team

Published : Sep 8, 2023, 1:34 PM IST

ಬಾಲಿವುಡ್​ ಬಹುಬೇಡಿಕೆಯ ನಟ ಅಕ್ಷಯ್​ ಕುಮಾರ್​​ ಅಭಿಮಾನಿಗಳಿಗೆ ಬಿಗ್​ ಸರ್​ಪ್ರೈಸ್​ ಕೊಡಲು ಸಜ್ಜಾಗಿದ್ದಾರೆ. ಈ ಮಾಹಿತಿ ಅಕ್ಕಿ ಆಪ್ತ ಮೂಲಗಳಿಂದಲೇ ಕೇಳಿ ಬಂದಿದೆ. ಬಾಲಿವುಡ್​ ಕಿಲಾಡಿ ತಮ್ಮ ಜನ್ಮದಿನದಂದು ಅಭಿಮಾನಿಗಳನ್ನು ಅಚ್ಚರಿಗೊಳಿಸಲಿದ್ದಾರೆ. ಫ್ಯಾನ್ಸ್​ ವಲಯದಲ್ಲಿ ಕುತೂಹಲ, ಉತ್ಸಾಹ ಮೂಡಿದೆ. ನಿಮ್ಮ ಗಮನಕ್ಕೆ, ನಾಳೆ ಅಕ್ಷಯ್​ ಕುಮಾರ್ ಬರ್ತ್​ಡೇ!.

ಅಕ್ಷಯ್​ ಕೈಯಲ್ಲಿ ಮೂರು ಸಿನಿಮಾಗಳು: ವರದಿಗಳ ಪ್ರಕಾರ, ನಟ ಅಕ್ಷಯ್​​ ಕುಮಾರ್​ ಅವರು ನಿರ್ಮಾಪಕ ಫಿರೋಜ್​ ನಾಡಿಯಾಡ್ವಾಲಾ ಜೊತೆ ಕೈ ಜೋಡಿಸಲಿದ್ದಾರೆ. ಹೌದು, ಇವರಿಬ್ಬರ ಕಾಂಬಿನೇಶನ್​ನಲ್ಲಿ ಸರಣಿ ಸಿನಿಮಾಗಳು ಮೂಡಿ ಬರಲಿವೆ. ಬಹುನಿರೀಕ್ಷಿತ 'ಹೇರಾ ಫೇರಿ 3', 'ವೆಲ್ಕಮ್​ 3', 'ಆವಾರಾ ಪಾಗಲ್​ ದೀವಾನ 2' ಚಿತ್ರಗಳನ್ನು ಮಾಡಲಿದ್ದಾರೆ. ಫಿರೋಜ್​ ನಾಡಿಯಾಡ್ವಾಲಾ ಅವರು ಜಿಯೋ ಸ್ಟುಡಿಯೋಸ್​ ಜೊತೆ ಒಪ್ಪಂದವನ್ನು ಫೈನಲ್​ ಮಾಡಿದ್ದಾರೆ. ಈ ಮೊದಲು ಸಿನಿಮಾಗಳ ಕುರಿತು ಚರ್ಚೆ ನಡೆಯುತ್ತಿತ್ತು. ಇದೀಗ ಮಾತುಕತೆ ಅಂತಿಮಗೊಂಡಿದೆಯಂತೆ.

ಎಲ್ಲವೂ ಸೀಕ್ವೆಲ್​ ಸಿನಿಮಾಗಳೇ...: ಜಿಯೋ ಸ್ಟುಡಿಯೋಸ್​ ಜೊತೆ ಒಪ್ಪಂದ ಅಂತಿಮಗೊಳಿಸಲಾಗಿದೆ. ಹೇರಾ ಫೇರಿಯ ರಾಜು, ಬಾಬುರಾವ್​​, ಶ್ಯಾಮ್​​ ಮತ್ತು ವೆಲ್ಕಮ್​ನ ಉದಯ್​, ಮಜ್ನು ಅವರಂತಹ ಅಪ್ರತಿಮ ಪಾತ್ರಗಳೊಂದಿಗೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆಂದು ನಿರ್ಮಾಪಕರು ತಿಳಿಸಿದ್ದಾರೆ. ಚಿತ್ರ ನಿರ್ಮಾಪಕರು ಈ ಹಿಂದಿನ ಪಾತ್ರಗಳೊಂದಿಗೆ ಮುಂದುವರಿಯಲು ಸಿದ್ಧರಿದ್ದಾರೆ. ಇನ್ನು, ಅಕ್ಷಯ್​ ಕುಮಾರ್​ ಅವರೇ ಒಂದು ಹೆಜ್ಜೆ ಮುಂದೆ ಇಟ್ಟು ಫಿರೋಜ್​ ನಾಡಿಯಾಡ್ವಾಲಾ ಮತ್ತು ಜಿಯೋ ಸ್ಟುಡಿಯೋಸ್ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆಂದೂ ಸಹ ಹೇಳಲಾಗುತ್ತಿದೆ. ಆದ್ರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.

ಇದನ್ನೂ ಓದಿ: ರಶ್ಮಿಕಾ, ಶ್ರೀಲೀಲಾ ಬಳಿಕ ಆಶಿಕಾ ರಂಗನಾಥ್.. ಟಾಲಿವುಡ್​ ಸೂಪರ್​​ಸ್ಟಾರ್​ ಜೊತೆ ನಟಿಸುವ ಆಫರ್

ಅಕ್ಷಯ್​ ಕುಮಾರ್​​ ಜನ್ಮದಿನ: ಬಾಲಿವುಡ್​ ಕಿಲಾಡಿ ಖ್ಯಾತಿಯ ನಟ ಅಕ್ಷಯ್​ ಕುಮಾರ್​​ 1967ರ ಸೆಪ್ಟೆಂಬರ್​​​​ 9ರಂದು ಅಮೃತ್​​ಸರದಲ್ಲಿ ಜನಿಸಿದರು. ನಾಳೆ ನಟ 56ನೇ ವಸಂತಕ್ಕೆ ಕಾಲಿಡಲಿದ್ದಾರೆ. ಈ ಹಿನ್ನೆಲೆ ನಟನ ಮುಂದಿನ ಸಿನಿಮಾಗಳು ಅನೌನ್ಸ್ ಆಗಲಿದೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದಾರೆ. ಆಪ್ತ ಮೂಲಗಳೂ ಸಹ ಇದನ್ನೇ ಹೇಳಿವೆ.

ಇದನ್ನೂ ಓದಿ: 'ಬಜಾರ್' ಹುಡುಗನ ಹುಟ್ದಬ್ಬ: ಧನ್ವೀರ್ ಗೌಡ ನಟನೆಯ ಹೊಸ ಸಿನಿಮಾ ಘೋಷಣೆ

ಓ ಮೈ ಗಾಡ್​​ 2 ನಟನ ಕೊನೆಯ ಸಿನಿಮಾ. ಪಂಕಜ್​ ತ್ರಿಪಾಠಿ ಮತ್ತು ಯಾಮಿ ಗೌತಮ್​​ ಪ್ರಮುಖ ಪಾತ್ರ ವಹಿಸಿರುವ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿ ಆಗಿದೆ. ಕೆಲ ಸಮಯದಿಂದ ಸೋಲಿನ ರುಚಿ ಕಂಡಿದ್ದ ಅಕ್ಷಯ್​ ಅವರಿಗೆ ಓಎಂಜಿ ಸೀಕ್ವೆಲ್​ ಗೆಲುವಿನ ಸಿಹಿ ಕೊಟ್ಟಿದ್ದು, ಮುಂದಿನ ಸಿನಿಮಾಗಳ ಮೇಲೆ ನಟ ಗಮನ ಹರಿಸಿದ್ದಾರೆ. ಯಶಸ್ವಿ ಪಯಣ ಮುಂದುವರಿಯಲಿ ಎಂದು ಅಭಿಮಾನಿಗಳು ಆಶಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.