ETV Bharat / entertainment

Houseful 5 ಘೋಷಣೆ ಬೆನ್ನಲ್ಲೇ ಫ್ಯಾಮಿಲಿ ಟ್ರಿಪ್​ ಹೊರಟ ಬಾಲಿವುಡ್​ ಕಿಲಾಡಿ ಅಕ್ಷಯ್ ಕುಮಾರ್ - ಅಕ್ಷಯ್ ಕುಮಾರ್ ಮಗಳು ನಿತಾರಾ

ಹೌಸ್‌ಫುಲ್ 5 ಸಿನಿಮಾ ಘೋಷಣೆ ಬೆನ್ನಲ್ಲೇ ಬಾಲಿವುಡ್ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ಕುಟುಂಬಸ್ಥರೊಂದಿಗೆ ಪ್ರವಾಸಕ್ಕೆ ತೆರಳಿದ್ದಾರೆ.

Akshay Kumar family
ಅಕ್ಷಯ್ ಕುಮಾರ್ ಫ್ಯಾಮಿಲಿ
author img

By

Published : Jul 1, 2023, 3:17 PM IST

ಬಾಲಿವುಡ್ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ನಿನ್ನೆಯಷ್ಟೇ ತಮ್ಮ ಅಭಿಮಾನಿಗಳೊಂದಿಗೆ ಸಂತಸದ ಸುದ್ದಿ ಹಂಚಿಕೊಂಡಿದ್ದರು. ತಮ್ಮ ಬ್ಲಾಕ್​ಬಸ್ಟರ್ ಕಾಮಿಡಿ ಸಿನಿಮಾ 'ಹೌಸ್‌ಫುಲ್'ನ ಐದನೇ ಭಾಗ ನಿರ್ಮಾಣ ಮಾಡಲಾಗುತ್ತಿದೆ ಎಂಬುದನ್ನು ಬಹಿರಂಗಪಡಿಸಿದರು. ಹೌಸ್‌ಫುಲ್ 5 ಸಿನಿಮಾ ಘೋಷಣೆ ಮಾತ್ರವಲ್ಲದೇ ಬಿಡುಗಡೆ ದಿನಾಂಕವನ್ನೂ ತಿಳಿಸಿದರು. ಈ ವಿಷಯ ತಿಳಿದ ಅಭಿಮಾನಿ ಬಳಗದಲ್ಲಿ ಸಂತಸದ ಅಲೆ ಎದ್ದಿದೆ.

ಶುಕ್ರವಾರದಂದು ಬಾಲಿವುಡ್​ ಕಿಲಾಡಿ ಅಕ್ಷಯ್ ಕುಮಾರ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹೌಸ್‌ಫುಲ್ 5 ಸಿನಿಮಾ 2024ರ ದೀಪಾವಳಿ ಸಂದರ್ಭ ಥಿಯೇಟರ್‌ಗಳಲ್ಲಿ ತೆರೆಕಾಣಲಿದೆ ಎಂದು ಘೋಷಿಸಿದರು. ಈ ಗುಡ್​ ನ್ಯೂಸ್​ ಹಂಚಿಕೊಂಡ ಬೆನ್ನಲ್ಲೇ, ನಟ ತಮ್ಮ ಕುಟುಂಬಸ್ಥರೊಂದಿಗೆ ಉತ್ತಮ ಸಮಯ ಕಳೆಯಲು ಪ್ರವಾಸಕ್ಕೆ ತೆರಳಿದರು. ನಟನ ಕುಟುಂಬ ಎಲ್ಲಿಗೆ ತೆರಳಿದ್ದಾರೆ ಎಂಬುದನ್ನು ತಿಳಿಸಿಲ್ಲ.

ಶುಕ್ರವಾರ ರಾತ್ರಿ ಮುಂಬೈನ ವಿಮಾನ ನಿಲ್ದಾಣದಲ್ಲಿ ಅಕ್ಷಯ್ ತಮ್ಮ ಪತ್ನಿ ಟ್ವಿಂಕಲ್ ಖನ್ನಾ ಮತ್ತು ಮಗಳು ನಿತಾರಾ ಅವರೊಂದಿಗೆ ಕಾಣಿಸಿಕೊಂಡರು. ಇನ್​ಸ್ಟಾಗ್ರಾಮ್​ನಲ್ಲಿ ಜನಪ್ರಿಯ ಪಾಪರಾಜಿ ಖಾತೆಯಿಂದ ಶೇರ್ ಮಾಡಲಾಗಿರುವ ವಿಡಿಯೋದಲ್ಲಿ, ಅಕ್ಷಯ್ ಬ್ಲ್ಯಾಕ್​ ಕ್ಯಾಶುಯಲ್ ಡ್ರೆಸ್​ನಲ್ಲಿ ಕಾಣಿಸಿಕೊಂಡರು. ಆನ್​ಲೈನ್​ನಲ್ಲಿ ವೈರಲ್​ ಆಗುತ್ತಿರುವ ವಿಡಿಯೋದಲ್ಲಿ ಹೇರಾ ಫೇರಿ ನಟ ಹೆಂಡತಿ ಮತ್ತು ಮಗಳ ಜೊತೆಯಲ್ಲಿ ತನ್ನ ಕಾರಿನಿಂದ ಇಳಿಯುವುದನ್ನು ನೋಡಬಹುದು.

ಅಕ್ಷಯ್​​ ಕುಮಾರ್ ಮತ್ತು ಅವರ ಕುಟುಂಬದ ಉಪಸ್ಥಿತಿಯು ವಿಮಾನ ನಿಲ್ದಾಣದಲ್ಲಿ ಸದ್ದು ಮಾಡಿತು. ಮಗಳ ಮೇಲಿನ ಕಾಳಜಿ ಹೆಚ್ಚಿನವರ ಗಮನ ಸೆಳೆಯಿತು. ಮಗಳು ನಿತಾರಾ ಕಾರಿನಿಂದ ಇಳಿದ ಕ್ಷಣದಿಂದ, ಕ್ಯಾಮರಾಗಳಿಗೆ ಪೋಸ್ ಕೊಟ್ಟು ವಿಮಾನ ನಿಲ್ದಾಣದೊಳಗೆ ಪ್ರವೇಶಿಸುವವರೆಗೂ, ಅಕ್ಷಯ್ ಮಗಳ ಕೈ ಹಿಡಿದಿದ್ದರು. ನಟನ ಈ ಗುಣ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗುತ್ತಿರುವ ವಿಡಿಯೋಗೆ ಪ್ರತಿಕ್ರಿಯಿಸಿದ ಬಳಕೆದಾರರೋರ್ವರು "ಫ್ಯಾಮಿಲಿ ಮ್ಯಾನ್​" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ಅವರು ಗ್ರೇಟ್​ ಫಾದರ್" ಎಂದು ಹೇಳಿದ್ದಾರೆ.

ಇದನ್ನೂ ಓದಿ: Housefull 5: ನಕ್ಕುನಗಿಸಲು ಬರ್ತಿದೆ ಹೌಸ್‌ಫುಲ್ 5 ಸಿನಿಮಾ - ಬಿಡುಗಡೆಗೆ ಅಭಿಮಾನಿಗಳ ಕಾತರ

ನಟ ಅಕ್ಷಯ್ ಕುಮಾರ್ ಅವರ ಸಿನಿಮಾಗಳನ್ನು ಗಮನಿಸುವುದಾದರೆ, ನಿನ್ನೆಯಷ್ಟೇ ತಮ್ಮ ಮುಂದಿನ ಹೌಸ್‌ಫುಲ್ 5 ಸಿನಿಮಾ ಘೋಷಣೆ ಮಾಡಿದ್ದಾರೆ. ಪರಿಣಿತಿ ಚೋಪ್ರಾ ಅವರೊಂದಿಗೆ ನಟಿಸಿರುವ ದಿ ಗ್ರೇಟ್ ಇಂಡಿಯನ್ ರೆಸ್ಕ್ಯೂ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಈ ಸಿನಿಮಾ ಅಕ್ಟೋಬರ್ 5 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆ ಆಗಲಿದೆ. ಇದಲ್ಲದೇ ಮತ್ತೊಂದು ಬಹುನಿರೀಕ್ಷಿತ ಸಿನಿಮಾ OMG 2 ನಲ್ಲಿ ಯಾಮಿ ಗೌತಮ್ ಮತ್ತು ಪಂಕಜ್ ತ್ರಿಪಾಠಿ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. ಆಗಸ್ಟ್ 11 ರಂದು ಥಿಯೇಟರ್​ಗಳಲ್ಲಿ ಈ ಓ ಮೈ ಗಾಡ್ 2 (Oh My God 2) ಸಿನಿಮಾ ತೆರೆ ಕಾಣಲಿದೆ.

ಇದನ್ನೂ ಓದಿ: ಗೋಲ್ಡನ್ ಸ್ಟಾರ್ ಗಣೇಶ್ ಬರ್ತ್ ಡೇಗೆ ಸ್ಪೆಷಲ್ ಗಿಫ್ಟ್: ಕೃಷ್ಣಂ ಪ್ರಣಯ ಸಖಿ ಫಸ್ಟ್ ಲುಕ್ ಅನಾವರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.