ಅಕ್ಷಯ್ ಕುಮಾರ್ ಭಾರತೀಯ ಸಿನಿಮಾ ರಂಗದ ಅತ್ಯಂತ ಪ್ರಸಿದ್ಧ ನಟರಲ್ಲಿ ಓರ್ವರು. ಹಲವು ವರ್ಷಗಳಿಂದ ಬಾಲಿವುಡ್ನಲ್ಲಿ ಗುರುತಿಸಿಕೊಂಡಿರುವ ಕಿಲಾಡಿ ನಟ ದೇಶಭಕ್ತಿ ಮತ್ತು ಭಾರತೀಯ ಸೇನೆಯನ್ನು ಬೆಂಬಲಿಸುವ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಟನನ್ನು ಗುಣಗಾನ ಮಾಡಲು ಹಲವು ಕಾರಣಗಳಿದ್ದರೆ, ಟ್ರೋಲ್ ಮಾಡಲು ಪೌರತ್ವದ ವಿಷಯವಿತ್ತು. ಹೌದು, ಟ್ರೋಲರ್ಗಳು ನಟನನ್ನು ಕೆನಡಿಯನ್ ಕುಮಾರ್ ಎಂದೇ ಗುರುತಿಸಿದ್ದರು.
ಶುಭ ಸುದ್ದಿ ಹಂಚಿಕೊಂಡ ಸೂಪರ್ಸ್ಟಾರ್: ಆದ್ರೆ ಸ್ವಾತಂತ್ರ್ಯ ದಿನಾಚರಣೆಯಂದು ನಟ ತಾವೀಗ ಅಧಿಕೃತವಾಗಿ ಭಾರತೀಯನಾಗಿದ್ದೇನೆಂದು ತಿಳಿಸಿದ್ದಾರೆ. ಬಾಲಿವುಡ್ ಕಿಲಾಡಿ ಆಗಸ್ಟ್ 15ರಂದು ಅಧಿಕೃತವಾಗಿ ಭಾರತೀಯ ಪೌರತ್ವ ಪಡೆದಿದ್ದಾರೆ. ಈ ಶುಭ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಅವರು ತಿಳಿಸಿದ್ದಾರೆ.
-
Dil aur citizenship, dono Hindustani.
— Akshay Kumar (@akshaykumar) August 15, 2023 " class="align-text-top noRightClick twitterSection" data="
Happy Independence Day!
Jai Hind! 🇮🇳 pic.twitter.com/DLH0DtbGxk
">Dil aur citizenship, dono Hindustani.
— Akshay Kumar (@akshaykumar) August 15, 2023
Happy Independence Day!
Jai Hind! 🇮🇳 pic.twitter.com/DLH0DtbGxkDil aur citizenship, dono Hindustani.
— Akshay Kumar (@akshaykumar) August 15, 2023
Happy Independence Day!
Jai Hind! 🇮🇳 pic.twitter.com/DLH0DtbGxk
ಅಕ್ಷಯ್ ಕುಮಾರ್ ಪೋಸ್ಟ್: ಪೌರತ್ವ ಪಡೆದಿರುವ ದಾಖಲೆಯ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಟ ಅಕ್ಷಯ್ ಕುಮಾರ್, ಮನಸ್ಸು ಮತ್ತು ಪೌರತ್ವ ಎರಡೂ ಹಿಂದೂಸ್ತಾನಿ, ಸ್ವಾತಂತ್ರ್ಯ ದಿನದ ಶುಭಾಶಯಗಳು, ಜೈ ಹಿಂದ್ ಎಂದು ಬರೆದುಕೊಂಡಿದ್ದಾರೆ.
ಕೆಲ ವರ್ಷಗಳ ಹಿಂದೆ ವೈಯಕ್ತಿಕ ಪರಿಸ್ಥಿತಿ ನಟನನ್ನು ಕೆನಡಾ ಪೌರತ್ವ ಆಯ್ದುಕೊಳ್ಳುವಂತೆ ಪ್ರೇರೇಪಿಸಿತು. ಕೆನಡಿಯನ್ ಇಂಡಿಯನ್ ಸ್ಟಾರ್ ಎಂದು ಗುರುತಿಸಿಕೊಂಡರು. ಅದಾಗ್ಯೂ, ಕಳೆದೊಂದು ದಶಕದಲ್ಲಿ ಭಾರತದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿ ಮಾಡಿದವರ ಪೈಕಿ ನಟ ಅಕ್ಷಯ್ ಕುಮಾರ್ ಅಗ್ರ ಕ್ರಮಾಂಕದಲ್ಲಿದ್ದಾರೆ. ಕೆನಡಾ ಪೌರತ್ವ ಹೊಂದಿದ್ದ ವಿಷಯ ನಟನನ್ನು ಟೀಕೆಗೊಳಗಾಗುವಂತೆ ಮಾಡಿತ್ತು. ಕೆನಡಿಯನ್ ಕುಮಾರ್ ಎಂದು ನಟನನ್ನು ಟ್ರೋಲ್ ಮಾಡಲಾಗಿತ್ತು. ಅಂತಿಮವಾಗಿ ನಟ ಭಾರತೀಯ ಪ್ರಜೆಯಾಗಿದ್ದಾರೆ.
ಓಎಂಜಿ 2 ಯಶಸ್ಸು: ಇನ್ನು ಅಕ್ಷಯ್ ಕುಮಾರ್ ಸಿನಿಮಾ ವಿಚಾರ ಗಮನಿಸುವುದಾದರೆ ಸದ್ಯ ಓ ಮೈ ಗಾಡ್ 2 ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಸತತ ಹಿನ್ನೆಡೆ ಕಂಡಿದ್ದ ಬಾಲಿವುಡ್ ಬಹುಬೇಡಿಕೆ ನಟನಿಗೆ ಈ ಗೆಲುವಿನ ಅವಶ್ಯಕತೆ ಇತ್ತು. ನಿರೀಕ್ಷೆಯಂತೆ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುವಲ್ಲಿ ಸಿನಿಮಾ ಯಶಸ್ವಿ ಆಗಿದೆ.
ಇದನ್ನೂ ಓದಿ: OMG 2 box office collection: ₹50 ಕೋಟಿ ದಾಟಿದ ಬಾಲಿವುಡ್ ಕಿಲಾಡಿಯ 'ಓಎಂಜಿ 2' ಕಲೆಕ್ಷನ್
ಓ ಮೈ ಗಾಡ್ 2 ಕಲೆಕ್ಷನ್: ಅಕ್ಷಯ್ ಕುಮಾರ್, ಪಂಕಜ್ ತ್ರಿಪಾಠಿ, ಯಾಮಿ ಗೌತಮ್ ನಟನೆಯ ಓಎಂಜಿ 2 ಸಿನಿಮಾ 54.61 ಕೋಟಿ ರೂ. ಕಲೆಕ್ಷನ್ ಮಾಡುವಲ್ಲಿ ಯಶಸ್ವಿ ಆಗಿದೆ. ಆಗಸ್ಟ್ 11 ರಂದು ಬಾಲಿವುಡ್ ಬಹುನಿರೀಕ್ಷಿತ ಸಿನಿಮಾಗಳಾದ ಓ ಮೈ ಗಾಡ್ 2 ಮತ್ತು ಗದರ್ 2 ತೆರೆಕಂಡವು. ಬಿಡುಗಡೆಗೂ ಮುನ್ನ ಅಕ್ಷಯ್ ಕುಮಾರ್ ಸಿನಿಮಾ ಹಿನ್ನೆಡೆ ಕಾಣುವ ಸಾಧ್ಯತೆ ಇದೆ ಎಂದೇ ಅಂದಾಜಿಸಲಾಗಿತ್ತು. ನಿರೀಕ್ಷೆಯಂತೆ ಗದರ್ 2 ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದ್ದು, ನಾಲ್ಕೇ ದಿನಗಳಲ್ಲಿ 174 ಕೋಟಿ ರೂ. ಸಂಪಾದಿಸಿದೆ. ಇತ್ತ ಅಕ್ಷಯ್ ನಟನೆಯ ಓಎಂಜಿ 2 ಕೂಡ ಉತ್ತಮ ಪ್ರದರ್ಶನ ಮುಂದುವರಿಸಿದ್ದು, ಈವರೆಗೆ 54.61 ಕೋಟಿ ರೂ. ಸಂಪಾದನೆ ಮಾಡಿದೆ.
ಇದನ್ನೂ ಓದಿ: ರಾಷ್ಟ್ರಗೀತೆಗೆ ಸ್ಪೆಷಲ್ ಟ್ಯೂನ್ ಟಚ್ ಕೊಟ್ಟ ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್: ಶ್ಲಾಘಿಸಿದ ಪ್ರಧಾನಿ ಮೋದಿ