ETV Bharat / entertainment

ಅಕ್ಷಯ್ ಕುಮಾರ್ ಸಿನಿ ಪಯಣದ 100 ಕೋಟಿ ಮೀರಿದ ಸಿನಿಮಾಗಳ ಪಟ್ಟಿ ಬಿಡುಗಡೆ - 100 ಕೋಟಿ ದಾಟಿದ ಸಿನಿಮಾಗಳ ಪಟ್ಟಿ ಬಿಡುಗಡೆ

ಅಕ್ಷಯ್​ ಕುಮಾರ್​ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ನಾಳೆ (ಶುಕ್ರವಾರ) 55ನೇ ವಸಂತಕ್ಕೆ ಕಾಲಿಡುತ್ತಿರುವ ಅವರಿಗೆ ಈಗಿನಿಂದಲೇ ಶುಭಾಶಯಗಳ ಸುರಿಮಳೆ ಹರಿಸಲಾಗುತ್ತಿದೆ. ಇನ್ನು ಬಾಲಿವುಡ್​​ ಬಣ್ಣದ ಕ್ಷೇತ್ರಕ್ಕೆ ಕಾಲಿಟ್ಟ ಅಕ್ಷಯ್​ ಕುಮಾರ್ ಈವರೆಗೆ​ ಎಷ್ಟು ಹಿಟ್​ ಸಿನಿಮಾಗಳನ್ನು ಕೊಟ್ಟಿದ್ದಾರೆ ಅನ್ನೋದನ್ನು ನೋಡುವುದಾದರೆ...

Akshay Kumar 100 crore Box Office Collection Movies List
ಅಕ್ಷಯ್ ಕುಮಾರ್ ಸಿನಿ ಪಯಣ
author img

By

Published : Sep 8, 2022, 8:05 PM IST

ಹೊಸದಿಲ್ಲಿ: ಬಾಲಿವುಡ್​ನ ಖಿಲಾಡಿ ಅಕ್ಷಯ್​ ಕುಮಾರ್​ ನಟನೆಯ ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆದ ಸಿನಿಮಾಗಳ ಪಟ್ಟಿಯನ್ನು ಬಿಡುಗಡೆಯಾಗಿದೆ. 100 ಕೋಟಿ ದಾಟಿದ ಸಿನಿಮಾಗಳ ಪಟ್ಟಿ ಇದಾಗಿದ್ದು, ಡಜನ್‌ಗಿಂತಲೂ ಹೆಚ್ಚು ಚಿತ್ರಗಳು ಹಲವು ಬ್ರೇಕ್​ಗಳನ್ನು ಮಾಡಿವೆ.

Akshay Kumar 100 crore Box Office Collection Movies List
ಅಕ್ಷಯ್ ಕುಮಾರ್ ಸಿನಿ ಪಯಣ

ಫಿಲ್ಮ್ ವೆಬ್‌ಸೈಟ್​ವೊಂದು ಅಕ್ಷಯ್ ಕುಮಾರ್ ಅವರ ಟಾಪ್​ ಚಿತ್ರಗಳಿಗೆ ಸಂಬಂಧಿಸಿದ ಅಂಕಿ - ಅಂಶಗಳನ್ನು ಬಿಡುಗಡೆ ಮಾಡಿದೆ. ಅದರಲ್ಲಿ 100 ಕೋಟಿ ಕ್ಲಬ್‌ ಸೇರಿದ ಅವರ ನಟನೆಯ 13 ಚಿತ್ರಗಳು ಕಾಣಸಿಗುತ್ತವೆ. ಅದು 2012 ಮತ್ತು 2019ರ ನಡುವೆ 100 ಕೋಟಿ ಗಡಿ ದಾಟಿದ ಸಿನಿಮಾಗಳೇ ಹೆಚ್ಚು ಎಂದು ಹೇಳುತ್ತದೆ.

ಈಗ ಅವರು ತಮ್ಮ ಮುಂದಿನ ಸೂಪರ್ ಹಿಟ್ ಚಿತ್ರಕ್ಕಾಗಿ ಕಾಯುತ್ತಿದ್ದು, ಅದು ಕೂಡ 100 ಕೋಟಿಗಳ ಸಂಖ್ಯೆಯನ್ನು ತಲುಪಲಿದೆ ಎನ್ನಲಾಗುತ್ತಿದೆ. ಇತ್ತೀಚೆಗೆ ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​ನಲ್ಲಿ ಒಟಿಟಿಯಲ್ಲಿ ಅವರ ನಟನೆಯ 'ಕಟ್‌ಪುಟ್ಲಿ' ಬಿಡುಗಡೆಗೊಂಡಿದ್ದು, ಇದು ಕೂಡ 100 ಕೋಟಿಗಳ ಪಟ್ಟಿಯಲ್ಲಿ ಸೇರಲಿದೆ. ಇನ್ನು 'ಕಟ್‌ಪುಟ್ಲಿ ಚಿತ್ರ ಮೂಲಗಳ ಪ್ರಕಾರ 125 ಕೋಟಿ ರೂ.ಗೆ ಸಿನಿಮಾ ಸೇಲ್​ ಆಗಿದೆ ಎಂಬ ಮಾಹಿತಿ ಕೂಡ ಇದೆ.

ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ ಸಿನಿಮಾಗಳ ಪಟ್ಟಿ

100 ಕೋಟಿ ಗಡಿ ದಾಟಿದ ಸಿನಿಮಾ: ಅಕ್ಷಯ್ ಕುಮಾರ್ ನಟನೆಯ 13 ಹೆಚ್ಚು ಚಿತ್ರಗಳು 100 ಕೋಟಿಗೂ ಅಧಿಕ ಕಲೆಕ್ಷನ್​ ಮಾಡಿವೆಯಂತೆ. ಗುಡ್ ನ್ಯೂಜ್, ಹೌಸ್‌ಫುಲ್-4, ಮಿಷನ್ ಮಂಗಲ್, 2.0, ಗೋಲ್ಡ್, ಟಾಯ್ಲೆಟ್ - ಏಕ್ ಪ್ರೇಮ್ ಕಥಾ, ಜಾಲಿ ಎಲ್‌ಎಲ್‌ಬಿ-2, ರುಸ್ತಮ್, ಹೌಸ್‌ಫುಲ್-3, ಏರ್‌ಲಿಫ್ಟ್, ಹಾಲಿಡೇಸ್, ರೌಡಿ ರಾಥೋರ್ ಮತ್ತು ಹೌಸ್‌ಫುಲ್-2 ಚಿತ್ರ 100 ಕೋಟಿಗೂ ಅಧಿಕ ಕಲೆಕ್ಷನ್​ ಮಾಡಿವೆಯಂತೆ.

ಕಟ್​ಪುಟ್ಲಿ ಚಿತ್ರದ ಪೋಸ್ಟರ್​

ಅವರ ನಟನೆಯ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರ 'ಕಟ್​ಪುಟ್ಲಿ' ಕೂಡ ಈ ಪಟ್ಟಿಗೆ ಸೇರಲಿದೆ. ಸೆಪ್ಟೆಂಬರ್ 2 ರಂದು ಒಟಿಟಿಯಲ್ಲಿ ಬಿಡುಗಡೆಯಾಗಿರುವ ಈ ಚಿತ್ರವನ್ನು ಜನ ಮೆಚ್ಚುತ್ತಿದ್ದಾರೆ. ಈ ಚಿತ್ರದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ಅಕ್ಷಯ್​ ಕುಮಾರ್, ನಾನು ಯಾವಾಗಲೂ ನನ್ನನ್ನು ಮರು ಆವಿಷ್ಕರಿಸುವುದರಲ್ಲಿ ಇರುತ್ತೇನೆ. ಅಲ್ಲದೇ ಈಗ ಇರುವುದಕ್ಕಿಂತ ಮತ್ತಷ್ಟು ಬೆಳೆಯಲು ಬಯಸುತ್ತೇನೆ ಎಂದಿದ್ದಾರೆ.

'ಕಟ್​ಪುಟ್ಲಿ' ಸಿನಿಮಾದಲ್ಲಿ ಅಕ್ಷಯ್​ ಕುಮಾರ್​ ಅವರು ಪೊಲೀಸ್​ ಪಾತ್ರದಲ್ಲಿ ನಟಿಸಿದ್ದು, ಅವರಿಗೆ ರಾಕುಲ್​ ಪ್ರೀತ್​ ಸಿಂಗ್​ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರಂಜಿತ್​ ಎಂ. ತಿವಾರಿ ನಿರ್ದೇಶನ ಮಾಡಿದ್ದು, ‘ಪೂಜಾ ಎಂಟರ್​ಟೇನ್ಮೆಂಟ್’​ ಬ್ಯಾನರ್​ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಒಂದಕ್ಕಿಂತ ಒಂದು ವಿಭಿನ್ನ ಪಾತ್ರಗಳ ಮೂಲಕ ಅಕ್ಷಯ್​ ಕುಮಾರ್ ಸಿದ್ಧ ಹಸ್ತರು ಅನ್ನೋದಕ್ಕೆ ಇದೊಂದು ಕಾರಣ.

ಇನ್ನು ಇತ್ತೀಚೆಗೆ ಅವರಿಗೆ ಹ್ಯಾಟ್ರಿಕ್ ಸೋಲು ಉಂಟಾಗಿದ್ದು ತಳ್ಳುವಂತಿಲ್ಲ. ಮಾರ್ಚ್​ 18ರಂದು ಬಿಡುಗಡೆಯಾದ ಬಚ್ಚನ್​ ಪಾಂಡೆ, ಆ ನಂತರ ಬಂದ ‘ಸಾಮ್ರಾಟ್​ ಪೃಥ್ವಿರಾಜ್​’, ಆಗಸ್ಟ್​ 11ರಂದು ಬಿಡುಗಡೆಯಾದ ‘ರಕ್ಷಾ ಬಂಧನ್​’ ಸಿನಿಮಾಗಳು ಕಲೆಕ್ಷನ್​ ವಿಚಾರದಲ್ಲಿ ಅಷ್ಟು ಹೆಸರು ಮಾಡಲಿಲ್ಲ. ಹಲವು ವಿವಾದಗಳ ನಡುವೆ ಅಕ್ಟೋಬರ್ 24ರಂದು ‘ರಾಮ್ ಸೇತು ಸಿನಿಮಾ ಕೂಡ ರಿಲೀಸ್ ಆಗಲು ರೆಡಿ ಇದೆ.

ಇದನ್ನೂ ಓದಿ: ಲೇಡಿ ಬಾಕ್ಸರ್​ ಆಗಿ ಕಾಣಿಸಿಕೊಳ್ಳುತ್ತಿರುವ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾಗೆ ಇವರೇ ಸ್ಫೂರ್ತಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.