ಬಾಲಿವುಡ್ ನಟ ಅಜಯ್ ದೇವಗನ್ ಅವರ ಬಹುನಿರೀಕ್ಷಿತ 'ಭೋಲಾ' ಸಿನಿಮಾದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಈ ಬಗ್ಗೆ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಾಕಿಕೊಂಡಿರುವ ನಟ ಅಜಯ್, "ಯುದ್ಧಗಳನ್ನು ಆತ್ಮಬಲದಿಂದ ಗೆಲ್ಲಬೇಕೇ ಹೊರತು ಶಸ್ತ್ರಾಸ್ತ್ರ ಮತ್ತು ಪಡೆಗಳಿಂದಲ್ಲ" ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ಗೆ ಅಜಯ್ ಅವರ ಅಭಿಮಾನಿಗಳು ಟ್ರೇಲರ್ ಬಗ್ಗೆ ತಮ್ಮ ಉತ್ಸಾಹವನ್ನು ಕಾಮೆಂಟ್ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. "ಮೂರು ರಾಷ್ಟ್ರೀಯ ಪ್ರಶಸ್ತಿ ವಿಜೇತ ಸೂಪರ್‌ಸ್ಟಾರ್ ಅಜಯ್ ದೇವಗನ್ ಅವರ ಮತ್ತೊಂದು ಬ್ಲಾಕ್‌ಬಸ್ಟರ್ ಸಿನಿಮಾ" ಎಂಬುದಾಗಿ ನೆಟ್ಟಿಗರೊಬ್ಬರು ಹೇಳಿದ್ದಾರೆ. ಇನ್ನು ಕೆಲವರು "ಪ್ರತಿ ಫ್ರೇಮ್ ಕೂಡ ಅದ್ಭುತವಾಗಿದೆ! ಬ್ಲಾಕ್ ಬಸ್ಟರ್" ಎಂದು ಬರೆದಿದ್ದಾರೆ. ಈ ಮಧ್ಯೆ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಕೂಡ ಕಮೆಂಟ್ ಮಾಡಿದ್ದು, ಫೈರ್ ಎಮೋಜಿಯನ್ನು ಕಳುಹಿಸಿದ್ದಾರೆ.
ಇದನ್ನೂ ಓದಿ: ಮಸಾಲೆ ವ್ಯಾಪಾರದ ಕಡೆ ಇದ್ದ ಗಮನ.. ಹೀರೋ ಆಗುವ ಕನಸು ಕಂಡಿರಲಿಲ್ಲವಂತೆ ಟಾಲಿವುಡ್ ಸ್ಟಾರ್ ವೆಂಕಟೇಶ್
ಜೈಲಿನಿಂದ ಬಿಡುಗಡೆ ಆಗಿರುವ ಕೈದಿ ಮತ್ತು ಅನಾಥ ಹುಡುಗಿಯ ಕಥೆ ಹೇಳಲಿದೆ ಭೋಲಾ ಸಿನಿಮಾ. ಒಟ್ಟಿನಲ್ಲಿ ಅಜಯ್ ದೇವಗನ್, ಟಬು ಮತ್ತು ದಕ್ಷಿಣ ನಟಿ ಅಮಲಾ ಪೌಲ್ ಅಭಿನಯದ ಈ ಚಿತ್ರದ ಬಗ್ಗೆ ಅಭಿಮಾನಿಗಳು ಕುತೂಹಲ ಭರಿತರಾಗಿದ್ದಾರೆ. ಜೊತೆಗೆ ಸಂಜಯ್ ಮಿಶ್ರಾ, ದೀಪಕ್ ದೊಬ್ರಿಯಾಲ್ ರಾಯ್ ಅವರ ನಟನೆ ಕೂಡ ಇರಲಿದೆ. ಇತ್ತೀಚೆಗಷ್ಟೇ ಸಿನಿಮಾದ "ನಾಜರ್ ಲಗ್ ಜಾಯೇಗಿ" ರೊಮ್ಯಾಂಟಿಕ್ ಹಾಡನ್ನು ಬಿಡುಗಡೆಗೊಳಿಸಲಾಗಿತ್ತು.
ಅಲ್ಲದೇ 'ಭೋಲಾ' ಲೋಕೇಶ್ ಕನಕರಾಜ್ ನಿರ್ದೇಶನದ 2019 ರ ತಮಿಳು ಬ್ಲಾಕ್‌ಬಸ್ಟರ್ ಚಿತ್ರ 'ಕೈತಿ'ನ ಅಧಿಕೃತ ರಿಮೇಕ್. ಹಿಂದಿ ರಿಮೇಕ್ ಅನ್ನು ಅಜಯ್ ದೇವಗನ್ ಸ್ವತಃ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಅಜಯ್ ಜೊತೆ ಟಬು ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ದಕ್ಷಿಣ ನಟಿ ಅಮಲಾ ಪೌಲ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2008 ರಲ್ಲಿ 'ಯು, ಮಿ ಔರ್ ಹಮ್', 2016 ರಲ್ಲಿ 'ಶಿವಾಯ್' 2022 ರಲ್ಲಿ 'ರಣ್ವಾವ್ 34' ಮತ್ತು 'ಭೋಲಾ' ಅಜಯ್ ನಿರ್ದೇಶನದ ನಾಲ್ಕನೇ ಚಿತ್ರವಾಗಿದೆ.
ಇದನ್ನೂ ಓದಿ: ಟಾಲಿವುಡ್ಗೆ ಕಾಲಿಟ್ಟ ಬಿಟೌನ್ ಬೆಡಗಿ; ಎನ್ಟಿಆರ್ ಸಿನಿಮಾಗೆ ಜಾನ್ವಿ ಕಪೂರ್ ನಾಯಕಿ
ಲಕ್ಷ್ಮಿ ಮತ್ತು ಮಾರ್ಕಂಡಾ ದೇಶಾಪಾಂಡೆ ಕೂಡ ಚಿತ್ರದ ಪ್ರಮುಖ ಪಾತ್ರದಲ್ಲಿರಲಿದ್ದಾರೆ. ಚಿತ್ರ ಇದೇ ಮಾರ್ಚ್ 30 ರಂದು ಥಿಯೇಟರ್ನಲ್ಲಿ ಬಿಡುಗಡೆಯಾಗುತ್ತಿದೆ. 200 ಕೋಟಿ ಬಜೆಟ್ನಲ್ಲಿ ಈ ಚಿತ್ರ ನಿರ್ಮಾಣ ಮಾಡಲಾಗುತ್ತಿದೆ. ಇದರ ಹೊರತಾಗಿ ನಟ ಅಜಯ್ ದೇವಗನ್ ಅವರು ನಿರ್ಮಾಪಕ ಬೋನಿ ಕಪೂರ್ ಅವರ ಕ್ರೀಡಾಧಾರಿತ ಚಿತ್ರ 'ಮೈದಾನ್'ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ರೋಹಿತ್ ಶೆಟ್ಟಿಯ 'ಸಿಂಗಂ ಎಗೈನ್'ನಲ್ಲಿ ದೀಪಿಕಾ ಪಡುಕೋಣೆಗೆ ಜೋಡಿಯಾಗಲಿದ್ದಾರೆ.
ಇದನ್ನೂ ಓದಿ: ಆನಂದ ಸಾಗರದಲ್ಲಿ ನವ ದಂಪತಿ.. ಪತ್ನಿ ಕಿಯಾರಾ ಚೆಲುವಿಗೆ ಸಿದ್ಧಾರ್ಥ್ ಮೆಚ್ಚುಗೆಯ ಮಾತು