ETV Bharat / entertainment

ಆರಾಧ್ಯ ಜೊತೆ ಐಶ್ವರ್ಯಾ ರೈ: ಅಮ್ಮ ಮಗಳ ಮುದ್ದಾದ ವಿಡಿಯೋ ವೈರಲ್​​

author img

By ETV Bharat Karnataka Team

Published : Sep 30, 2023, 6:08 PM IST

Aishwarya Rai airport look: ಮುಂಬೈ ವಿಮಾನ ನಿಲ್ದಾಣದಲ್ಲಿ ಐಶ್ವರ್ಯಾ ರೈ ತಮ್ಮ ಮಗಳೊಂದಿಗೆ ಕಾಣಿಸಿಕೊಂಡಿದ್ದು, ಆ ವಿಡಿಯೋ ಈಗ ವೈರಲ್​ ಆಗಿದೆ.

Aishwarya Rai with Aaradhya
ಆರಾಧ್ಯ ಜೊತೆ ಐಶ್ವರ್ಯಾ ರೈ

ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಕೊನೆಯದಾಗಿ ಪೊನ್ನಿಯಿನ್​ ಸೆಲ್ವನ್​ 2 ನಲ್ಲಿ ಕಾಣಿಸಿಕೊಂಡರು. ಇತ್ತೀಚಿನ ವರ್ಷಗಳಲ್ಲಿ ಕುಟುಂಬಕ್ಕೆ ಸಮಯ ಮೀಸಲಿಟ್ಟಿರುವ ಚೆಲುವೆ, ಆಗಾಗ್ಗೆ ಒಂದರಂತೆ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಪ್ರಾಜೆಕ್ಟ್‌ಗಳ ಆಯ್ಕೆ ವಿಚಾರದಲ್ಲಿ ಬಹಳ ಗಮನ ಹರಿಸುತ್ತಾರೆ.

ಬಾಲಿವುಡ್​ ಬಹುಬೇಡಿಕೆ ನಟಿ ತಮ್ಮ ಹೆಚ್ಚಿನ ಸಮಯವನ್ನು ಕುಟುಂಬಸ್ಥರೊಂದಿಗೆ ಕಳೆಯುತ್ತಿದ್ದಾರೆ. ಶುಕ್ರವಾರ ರಾತ್ರಿ, ಮಾಜಿ ವಿಶ್ವ ಸುಂದರಿ ತಮ್ಮ ಮುದ್ದು ಮಗಳು ಆರಾಧ್ಯ ಜೊತೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಎಲ್ಲಿಗೆ ಪ್ರಯಾಣ ಬೆಳೆಸಿದ್ದಾರೆಂಬ ಬಗ್ಗೆ ನಟಿ ಮಾಹಿತಿ ಕೊಡಲಿಲ್ಲ. ಆದರೆ ತಾಯಿ ಮಗಳು ವಿಮಾನ ನಿಲ್ದಾಣ ಪ್ರವೇಶಿಸುತ್ತಿದ್ದಂತೆ ಪಾಪರಾಜಿಗಳು ಅವರನ್ನು ಸುತ್ತುವರಿದರು. ಮುಗುಳ್ನಗುತ್ತಾ ಮುಂದೆ ಸಾಗಿದ್ದು, ಅಮ್ಮ ಮಗಳ ಮುದ್ದಾದ ವಿಡಿಯೋ ವೈರಲ್​​ ಆಗುತ್ತಿದೆ. ಅಭಿಮಾನಿಗಳು ಮೆಚ್ಚಿನ ನಟಿಗೆ ಪ್ರೀತಿಯ ಧಾರೆಯೆರೆಯುತ್ತಿದ್ದಾರೆ. ಮಗಳು ಆರಾಧ್ಯ ಕೂಡ ಸೋಷಿಯಲ್​ ಮೀಡಿಯಾದಲ್ಲಿ ಜನಪ್ರಿಯರಾಗಿದ್ದು, ಸಖತ್​ ಕ್ಯೂಟ್​ ಅಂತಾ ಅಭಿಮಾನಿಗಳು ತಿಳಿಸುತ್ತಿದ್ದಾರೆ.

ಪಾಪರಾಜಿಗಳು ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಶೇರ್ ಮಾಡಿದ್ದಾರೆ. ಐಶ್ವರ್ಯಾ ರೈ ಬಚ್ಚನ್​​ ಮತ್ತು ಮಗಳು ಆರಾಧ್ಯ ವಿಮಾನ ನಿಲ್ದಾಣಕ್ಕೆ ಸಖತ್​ ಸ್ಟೈಲಿಶ್​ ಆಗಿ ಆಗಮಿಸುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಐಶ್ವರ್ಯಾ ಅವರು ಪ್ರಯಾಣಕ್ಕೆ ಕಂಪ್ಲೀಟ್​ ಬ್ಲ್ಯಾಕ್ ಡ್ರೆಸ್​ ಧರಿಸಿದ್ದರು. ಎಂದಿನಂತೆ ನಟಿಯ ಮೊಗ ನಗುವಿನಲ್ಲೇ ಕಂಗೊಳಿಸುತ್ತಿತ್ತು. ಏರ್​ಪೋರ್ಟ್​ಗೆ ಆಗಮಿಸುವ ವೇಳೆ ಐಶ್ವರ್ಯಾ ಫುಲ್​ ಸ್ಲೀವ್ಸ್​, ಫ್ರೀ ಡ್ರೆಸ್​ ಆರಿಸಿಕೊಳ್ಳುತ್ತಾರೆ. ಅದರಂತೆ ನಿನ್ನೆ ಕೂಡ ಸಖತ್​ ಅಟ್ರ್ಯಾಕ್ಟಿವ್ ಆಗಿ ಕಾಣಿಸಿಕೊಂಡರು. ಜೊತೆಗೆ ಐಶಾರಾಮಿ ಬ್ಯಾಗ್​ ಹಿಡಿದಿದ್ದರು. ​

ಇದನ್ನೂ ಓದಿ: 'ಯುವ' ಬಿಡುಗಡೆಯಾಗಬೇಕಿದ್ದ ದಿನ 'ಸಲಾರ್​' ರಿಲೀಸ್..​. ಹೊಂಬಾಳೆ ಫಿಲ್ಮ್ಸ್ ವಿರುದ್ಧ ಬೇಸರಿಸಿಕೊಂಡರಾ ಸಿನಿಪ್ರಿಯರು?!

ಮಗಳು ಆರಾಧ್ಯ ಬ್ಲ್ಯಾಕ್​ ಪ್ಯಾಂಟ್​, ಬ್ಲ್ಯೂ ಸ್ವೆಟ್‌ಶರ್ಟ್ ಧರಿಸಿದ್ದರು. ಸ್ಟಾರ್ ಕಿಡ್ ತನ್ನ ಸಿಗ್ನೇಚರ್ ಹೇರ್ ಸ್ಟೈಲ್​ನಲ್ಲಿ ಕಾಣಿಸಿಕೊಂಡರು. ಜೊತೆಗೆ ಒಂದು ಬ್ಯಾಗ್​ ಹಿಡಿದಿದ್ದರು. ಆರಾಧ್ಯ ಮತ್ತು ಐಶ್ವರ್ಯಾ ಪರಸ್ಪರ ಕೈ ಹಿಡಿದು ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಪಾಪರಾಜಿಗಳನ್ನು ಕಂಡು ಮುದ್ದಾದ ನಗು ಬೀರಿದರು.

ಇದನ್ನೂ ಓದಿ: ಕನ್ನಡದ ಕೀರ್ತಿ 'ಕಾಂತಾರ'ಕ್ಕೆ ಒಂದು ವರ್ಷ: ಬರಲಿದೆ ವರಾಹ ರೂಪಂ ವಿಡಿಯೋ ಸಾಂಗ್

ಐಶ್ವರ್ಯಾ ರೈ ಬಚ್ಚನ್ ಅವರ ಸಿನಿಮಾಗಳನ್ನು ಗಮನಿಸಿದರೆ, ಕೊನೆಯದಾಗಿ ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ 2ನಲ್ಲಿ ಕಾಣಿಸಿಕೊಂಡಿದ್ದರು. ಪೊನ್ನಿಯಿನ್ ಸೆಲ್ವನ್ ಆ್ಯಕ್ಷನ್​ ಸಿನಿಮಾ ಎರಡು ಭಾಗಗಳಲ್ಲಿ ಬಂದಿದ್ದು, ಎರಡೂ ಚಿತ್ರಗಳು ಯಶಸ್ವಿ ಆಗಿದೆ. ಚಿತ್ರದಲ್ಲಿ ಐಶ್ವರ್ಯಾ ಜೊತೆಗೆ ವಿಕ್ರಮ್, ಕಾರ್ತಿ, ಜಯಂ ರವಿ, ತ್ರಿಶಾ, ಐಶ್ವರ್ಯಾ ಲಕ್ಷ್ಮಿ, ಶೋಭಿತಾ ಧೂಳಿಪಾಲ ಮತ್ತು ಪ್ರಕಾಶ್ ರಾಜ್ ಸೇರಿದಂತೆ ಹಲವರು ನಟಿಸಿದ್ದಾರೆ. ಅಪರೂಪಕ್ಕೆ ಒಂದರಂತೆ ಕೆಲವೇ ಕೆಲ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಐಶ್ವರ್ಯಾ ರೈ ಮತ್ತಷ್ಟು ಸಿನಿಮಾಗಳನ್ನು ಮಾಡಲಿ ಅನ್ನೋದು ಅಭಿಮಾನಿಗಳ ಆಸೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.