'ಪ್ರಾಜೆಕ್ಟ್ ಕೆ' ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಚಿತ್ರತಂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗುತ್ತಿದೆ. ಜುಲೈ 19 (ನಾಳೆ) ಪ್ರತಿಷ್ಠಿತ ಸ್ಯಾನ್ ಡಿಯಾಗೋ ಕಾಮಿಕ್- ಕಾನ್ ಈವೆಂಟ್ನಲ್ಲಿ (San Diego Comic-Con event) ಸಿನಿಮಾದ ಫಸ್ಟ್ ಗ್ಲಿಂಪ್ಸ್ ಅನಾವರಣಗೊಳ್ಳಲಿದೆ. ತಂಡವು ಇದು ಪ್ರಾಜೆಕ್ಟ್ ಕೆ: ಭಾರತದ ಮೈಥೋ-ಸೈನ್ಸ್-ಫಿಕ್ಷನ್ ಎಪಿಕ್‌ನ ಮೊದಲ ನೋಟ' ಎಂಬ ಶೀರ್ಷಿಕೆಯ ಕಾರ್ಯಕ್ರಮ ಆಯೋಜಿಸಲಿದೆ. ಚಿತ್ರದ ಪೂರ್ಣ ಶೀರ್ಷಿಕೆ, ಟೀಸರ್ ಮತ್ತು ಬಿಡುಗಡೆ ದಿನಾಂಕವನ್ನು ಈ ಗ್ರ್ಯಾಂಡ್ ಈವೆಂಟ್ನಲ್ಲಿ ಅಧಿಕೃತವಾಗಿ ಘೋಷಿಸಲಾಗುತ್ತದೆ.
ಅದಕ್ಕೂ ಮೊದಲು ಯುನೈಟೆಡ್ ಸ್ಟೇಟ್ಸ್‌ನ ಮಿಸ್ಸೌರಿಯ ಸೇಂಟ್ ಲೂಯಿಸ್‌ನಿಂದ ಸೂಪರ್‌ಸ್ಟಾರ್ ಪ್ರಭಾಸ್ ಅವರ ಅಭಿಮಾನಿಗಳು ಪ್ರಾಜೆಕ್ಟ್ ಕೆಗಾಗಿ ಕಾರ್ ರ್ಯಾಲಿಯನ್ನು ಆಯೋಜಿಸಲು ಒಗ್ಗೂಡಿದ್ದಾರೆ. ಈ ವಿಚಾರವು ಪ್ರಪಂಚದಾದ್ಯಂತ ಪ್ರಭಾಸ್ ಅವರ ಆಗಾಧ ಜನಪ್ರಿಯತೆಯನ್ನು ತೋರಿಸಿಕೊಟ್ಟಿದೆ. ಜೊತೆಗೆ ಅಭಿಮಾನಿಗಳು ಪ್ಯಾನ್ ಇಂಡಿಯಾ ಸ್ಟಾರ್ ಸಿನಿಮಾಗೆ ಈ ರೀತಿಯ ಉತ್ಸಾಹ ತೋರುತ್ತಿರುವುದು ಕಂಡುಬಂದಿದೆ.
-
In her eyes she carries the hope of a new world 🌍 @deepikapadukone from #ProjectK pic.twitter.com/RUt9T1MAyZ
— Vyjayanthi Movies (@VyjayanthiFilms) July 18, 2023 " class="align-text-top noRightClick twitterSection" data="
">In her eyes she carries the hope of a new world 🌍 @deepikapadukone from #ProjectK pic.twitter.com/RUt9T1MAyZ
— Vyjayanthi Movies (@VyjayanthiFilms) July 18, 2023In her eyes she carries the hope of a new world 🌍 @deepikapadukone from #ProjectK pic.twitter.com/RUt9T1MAyZ
— Vyjayanthi Movies (@VyjayanthiFilms) July 18, 2023
ಮಂಗಳವಾರ, ಸಿನಿಮಾ ಪ್ರೊಡಕ್ಷನ್ ಹೌಸ್ ವೈಜಯಂತಿ ಮೂವೀಸ್ ಪ್ರಭಾಸ್ ಅವರ ಅಭಿಮಾನಿಗಳು ಆಯೋಜಿಸಿದ್ದ ಕಾರ್ ರ್ಯಾಲಿಯ ವಿಡಿಯೋವನ್ನು ಹಂಚಿಕೊಳ್ಳಲು ಯೂಟ್ಯೂಬ್ ವೇದಿಕೆಯನ್ನು ಬಳಸಿಕೊಂಡರು. ಪ್ರಭಾಸ್ ಅವರ ಅಭಿಮಾನಿಗಳ ಪ್ರಯತ್ನವನ್ನು ಶ್ಲಾಘಿಸಿ, "#ProjectK ಕಾರ್ ರ್ಯಾಲಿಯನ್ನು ಆಯೋಜಿಸಿದ್ದಕ್ಕಾಗಿ ರೆಬೆಲ್ ಸ್ಟಾರ್ ಪ್ರಭಾಸ್ ಅಭಿಮಾನಿಗಳಿಗೆ ಒಂದು ದೊಡ್ಡ ಅಭಿನಂದನೆ. ಮೊದಲ ಗ್ಲಿಂಪ್ಸ್ ಜುಲೈ 20(ಯುಎಸ್ಎ) ಮತ್ತು ಜುಲೈ 21 (ಭಾರತ)" ತಯಾರಕರು ಕ್ಯಾಪ್ಶನ್ ಬರೆದಿದ್ದಾರೆ.
ಇದನ್ನೂ ಓದಿ: ಫಿಟ್ನೆಸ್ ಕಾಪಾಡಿಕೊಳ್ಳುವುದರಲ್ಲಿ ಮಹೇಶ್ ಬಾಬು ಪರ್ಫೆಕ್ಟ್: ಅವರ ಬ್ರೇಕ್ಫಾಸ್ಟ್ನಲ್ಲಿ ಏನಿರುತ್ತೆ ಗೊತ್ತಾ?
ಪ್ರಾಜೆಕ್ಟ್ ಕೆ - ದೀಪಿಕಾ ಪಡುಕೋಣೆ ಫಸ್ಟ್ ಲುಕ್: ಮಹಾನಟಿ ಖ್ಯಾತಿಯ ನಿರ್ದೇಶಕ ನಾಗ್ ಅಶ್ವಿನ್ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಲ್ಲದೇ ಬಿಗ್ ಬಿ ಅಮಿತಾಭ್ ಬಚ್ಚನ್, ಕಾಲಿವುಡ್ ಸೂಪರ್ ಸ್ಟಾರ್ ಕಮಲ್ ಹಾಸನ್, ಬಾಲಿವುಡ್ ಬಹುಬೇಡಿಕೆ ನಟಿ ದೀಪಿಕಾ ಪಡುಕೋಣೆ, ಫಿಟ್ನೆಸ್ ಐಕಾನ್ ದಿಶಾ ಪಟಾನಿ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಬಿಗ್ ಸ್ಟಾರ್ಸ್ ಸಿನಿಮಾದ ಮೇಲೆ ಭಾರೀ ನಿರೀಕ್ಷೆ ಇದೆ. ಇಂದು ದೀಪಿಕಾ ಪಡುಕೋಣೆ ಅವರ ಫಸ್ಟ್ ಲುಕ್ ಅನ್ನು ಚಿತ್ರತಂಡ ರಿವೀಲ್ ಮಾಡಿದೆ.
- " class="align-text-top noRightClick twitterSection" data="">
'ಪ್ರಾಜೆಕ್ಟ್ ಕೆ' ಸಿನಿಮಾವು ಇಂಗ್ಲಿಷ್ ಚಿತ್ರಗಳಿಗೂ ಪೈಪೋಟಿ ನೀಡುವ ರೀತಿಯಲ್ಲೇ ಸಜ್ಜಾದಂತೆ ಕಾಣುತ್ತಿದೆ. ಇನ್ನು ಈ ಸಿನಿಮಾವನ್ನು 2024ರ ಜನವರಿ 12 ರಂದು ಬಿಡುಗಡೆಗೊಳಿಸಲು ಚಿಂತಿಸಲಾಗಿದೆ. ದೀಪಿಕಾ ಪಡುಕೋಣೆ ಮತ್ತು ಸ್ಟಾರ್ ನಟ ಪ್ರಭಾಸ್ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡುತ್ತಿದ್ದು, ಸೂಪರ್‌ಸ್ಟಾರ್ ತಾರಾ ಬಳಗವೇ ಇರುವ ಈ ಚಿತ್ರದ ಮೇಲೆ ಪ್ರೇಕ್ಷಕರ ನಿರೀಕ್ಷೆ ಮುಗಿಲೆತ್ತರದಲ್ಲಿದೆ.
ಇದನ್ನೂ ಓದಿ: Project K: ಲಕೋಟೆಯಲ್ಲಿದೆ 'ಪ್ರಾಜೆಕ್ಟ್ ಕೆ' ಹೆಸರು: ಶೀರ್ಷಿಕೆ ಇದಾಗಿರಬಹುದೆಂದು ಊಹಿಸಿದ ಸಿನಿಪ್ರೇಮಿಗಳು