ETV Bharat / entertainment

ಬಾಲಿವುಡ್​ ಪವರ್​​ಫುಲ್​ ಕಪಲ್​ ಭೇಟಿಯಾದ ಅಫ್ಘನ್​ ಕ್ರಿಕೆಟಿಗ: ರಾಲಿಯಾ ಜೊತೆ ರಶೀದ್​ ಖಾನ್​ ಫೋಟೋ - ಆಲಿಯಾ ರಣ್​ಬೀರ್​ ನ್ಯೂಯಾರ್ಕ್​​ ಪ್ರವಾಸ

Alia Ranbir Couple with cricketer Rashid Khan: ಆಲಿಯಾ ಭಟ್​ ಹಾಗೂ ರಣ್​ಬೀರ್​ ಕಪೂರ್​ ಜೋಡಿ ಅಫ್ಘನ್​ ಕ್ರಿಕೆಟಿಗ ರಶೀದ್​ ಖಾನ್​ ಅವರನ್ನು ಭೇಟಿಯಾಗಿದ್ದಾರೆ.

Alia Ranbir Couple with cricketer Rashid Khan
ರಾಲಿಯಾ ಭೇಟಿಯಾದ ಅಫ್ಘನ್​ ಕ್ರಿಕೆಟಿಗ ರಶೀದ್​ ಖಾನ್
author img

By ETV Bharat Karnataka Team

Published : Sep 15, 2023, 12:29 PM IST

ಆಲಿಯಾ ಭಟ್​ ಹಾಗೂ ರಣ್​ಬೀರ್​ ಕಪೂರ್​ ಬಾಲಿವುಡ್​ನ ಪವರ್​ಫುಲ್​ ಕಪಲ್​ಗಳಲ್ಲೊಬ್ಬರು​. ಅಪಾರ ಸಂಖ್ಯೆಯ ಅಭಿಮಾನಿಗಳ ಮೆಚ್ಚಿನ ಜೋಡಿಗಳಲ್ಲೊಂದು. ನಟಿ ಆಲಿಯಾ ಭಟ್,​​ 'ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ' ಮತ್ತು 'ಹಾರ್ಟ್ ಆಫ್​ ಸ್ಟೋನ್​​'ನ ಯಶಸ್ಸಿನಲೆಯಲ್ಲಿ ತೇಲುತ್ತಿದ್ದಾರೆ. ಇತ್ತ ನಟ ರಣ್​ಬೀರ್​ ಕಪೂರ್​ ತಮ್ಮ ಮುಂದಿನ ಬಹುನಿರೀಕ್ಷಿತ ಚಿತ್ರ 'ಅನಿಮಲ್'​ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಸದ್ಯ, ಅಫ್ಘನ್​ ಕ್ರಿಕೆಟಿಗ ರಶೀದ್​ ಖಾನ್​ ಜೊತೆ ರಾಲಿಯಾ ಜೋಡಿ ಕ್ಲಿಕ್ಕಿಸಿಕೊಂಡಿರುವ ಫೋಟೋ ಸಖತ್​ ಸದ್ದು ಮಾಡುತ್ತಿದೆ.

ಕೊನೆ ಸಿನಿಮಾಗಳ ಯಶಸ್ಸಿನ ಖುಷಿಯಲ್ಲಿರುವ ಆಲಿಯಾ ಭಟ್​, ಪತಿ ರಣ್​ಬೀರ್ ಮತ್ತು ಮುದ್ದು ಮಗಳು ರಾಹಾ​ ಜೊತೆ ನ್ಯೂಯಾರ್ಕ್ ಪ್ರವಾಸ ಕೈಗೊಂಡಿದ್ದಾರೆ. ಗಂಗೂಬಾಯಿ ಕಥಿಯಾವಾಡಿ ನಟಿ ಹಂಚಿಕೊಂಡಿರುವ ಫೋಟೋಗಳ ಪ್ರಕಾರ, ಈ ಫೇಮಸ್​ ಕಪಲ್​ ನ್ಯೂಯಾರ್ಕ್​ನಲ್ಲಿ ಉತ್ತಮ ಸಮಯ ಕಳೆಯುತ್ತಿರುವಂತೆ ತೋರುತ್ತಿದೆ. ನ್ಯೂಯಾರ್ಕ್​ ಪ್ರವಾಸ ಆನಂದಿಸುತ್ತಿರುವ ರಾಲಿಯಾ ಗಣ್ಯರನ್ನೂ ಸಹ ಭೇಟಿ ಆಗಿದ್ದಾರೆ. ಅಲ್ಲದೇ, ಅವರೊಂದಿಗೆ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಇತ್ತೀಚೆಗೆ ರಶೀದ್​ ಖಾನ್ ಅವರನ್ನೂ ಭೇಟಿ ಆಗಿದ್ದು, ಅಫ್ಘಾನಿಸ್ತಾನ​​ ಕ್ರಿಕೆಟಿಗ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಗುರುವಾರ ರಾತ್ರಿ ಅಂತಾರಾಷ್ಟ್ರೀಯ ಕ್ರಿಕೆಟಿಗ ರಶೀದ್​ ಖಾನ್ ಅವರು ತಮ್ಮ ಅಧಿಕೃತ ಇನ್​​​ಸ್ಟಾಗ್ರಾಮ್​ ಅಕೌಂಟ್​ನಲ್ಲಿ ಆಲಿಯಾ ಭಟ್​ ಹಾಗೂ ರಣ್​ಬೀರ್​ ಕಪೂರ್ ಜೊತೆಗಿನ ಫೋಟೋವನ್ನು ಶೇರ್ ಮಾಡಿದ್ದಾರೆ. ಫೋಟೋ ಹಂಚಿಕೊಂಡ ಕ್ರಿಕೆಟಿಗ, ''ಬಾಲಿವುಡ್​ನ ಗಣ್ಯರೊಂದಿಗೆ, ರಣ್​ಬೀರ್​ ಮತ್ತು ಆಲಿಯಾ ನಿಮ್ಮನ್ನು ಭೇಟಿಯಾಗಿದ್ದು ಸಂತೋಷವಾಯಿತು'' ಎಂದು ಬರೆದುಕೊಂಡಿದ್ದಾರೆ. ರಶೀದ್​ ಖಾನ್ ಅವರು ರಾಲಿಯಾ ಕಪಲ್​ ಜೊತೆ ನಿಂತು ನಗು ನಗುತ್ತಾ ಕ್ಯಾಮರಾಗೆ ಪೋಸ್​ ಕೊಟ್ಟಿದ್ದಾರೆ. ಆಲಿಯಾ ಮತ್ತು ರಶೀದ್​ ಬ್ಲ್ಯಾಕ್​ ಡ್ರೆಸ್​ನಲ್ಲಿ ಕಾಣಿಸಿಕೊಂಡರೆ, ರಣ್​ಬೀರ್​ ಗ್ರೇ ಕಲರ್​ ಟೀ ಶರ್ಟ್ ಧರಿಸಿದ್ದರು.

ಇದನ್ನೂ ಓದಿ: 'ಭೀಮ'ನಾಗಿ ಗಮನ ಸೆಳೆಯುತ್ತಿರುವ ದುನಿಯಾ ವಿಜಯ್​ 'ಬ್ಯಾಡ್ ಬಾಯ್ಸ್' ಜೊತೆ ಯಾವಾಗ ಬರ್ತಾರೆ?

ಇದಕ್ಕೂ ಮುನ್ನ ಆಲಿಯಾ ಭಟ್​​ ತಮ್ಮ ರಜಾ ದಿನದ ನೋಟ ಹಂಚಿಕೊಂಡಿದ್ದರು. ತಾವು ತಂಗಿರುವ ಹೋಟೆಲ್​ನಲ್ಲಿ ಕ್ಲಿಕ್ಕಿಸಿಕೊಂಡಿರುವ ಫೋಟೋ ಶೇರ್ ಮಾಡಿದ್ದರು. ಸ್ವಿಮ್ಮಿಂಗ್​ ಪೂಲ್​ನಲ್ಲಿ ವಾಟರ್​ ಬೇಬಿ ಆಗಿ ಬಾಲಿವುಡ್​​ ಬೆಡಗಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ರಿಲಾಕ್ಸ್​ ಮೂಡ್​ನಲ್ಲಿ ನಟಿ ಆಲಿಯಾ ಭಟ್​: ವಾಟರ್​ ಬೇಬಿ ಫೋಟೋಗೆ ಅರ್ಜುನ್​ ಕಪೂರ್​ ಕಮೆಂಟ್​​

ಇತ್ತೀಚೆಗೆ ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ ಚಿತ್ರದಲ್ಲಿ ಆಲಿಯಾ ನಟಿಸಿದ್ದರು. ಬಾಲಿವುಡ್​ನ ಖ್ಯಾತ ಚಲನಚಿತ್ರ ನಿರ್ಮಾಪಕ ಕರಣ್​ ಜೋಹರ್​​ ಈ ಚಿತ್ರವನ್ನು ನಿರ್ದೇಶಿಸಿ ನಿರ್ಮಾಣವನ್ನೂ ಮಾಡಿದ್ದರು. ರಣ್​​ವೀರ್​ ಸಿಂಗ್​ ಜೊತೆಗಿನ ಈ ಸಿನಿಮಾ ಸೂಪರ್​ ಹಿಟ್​​ ಆಗಿದೆ. ಇನ್ನೂ ರಣ್​ಬೀರ್​ ಕಪೂರ್​ ಅವರ ಅನಿಮಲ್ ಸಿನಿಮಾ ರಿಲೀಸ್​ಗೆ ರೆಡಿ ಆಗುತ್ತಿದೆ. ಮೊದಲ ಬಾರಿಗೆ ಕನ್ನಡತಿ ರಶ್ಮಿಕಾ ಮಂದಣ್ಣ ಅವರು ರಣ್​ಬೀರ್​ ಕಪೂರ್​ ಜೊತೆ ಸ್ಕ್ರೀನ್​ ಶೇರ್ ಮಾಡಿದ್ದಾರೆ. ಬಹುನಿರೀಕ್ಷಿತ ಸಿನಿಮಾ ಡಿಸೆಂಬರ್​ 1 ರಂದು ತೆರೆಕಾಣಲು ಸಜ್ಜಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.